ಗೂಗಲ್ ಮ್ಯಾಪ್‌ನಲ್ಲಿ ಮಾಡಬಹುದಾಗಿರುವ ಈ 14 ಕೆಲಸಗಳು ನಿಮಗೆ ತಿಳಿದೇ ಇಲ್ಲ!!
ಒಂದು ವೇಳೆ ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಬಳಕೆ ಮಾಡುವ ಆಪ್ ಎಂದು ಕರೆಯುವುದಾದರೆ ಖಂಡಿತ ಅದರಲ್ಲಿ ಒಂದು ಗೂಗಲ್ ಮ್ಯಾಪ್ ಆಗಿದೆ. ಗೂಗಲ್ ಮ್ಯಾಪ್ ಜನರ ಪ್ರಯಾಣದ ಮಾದರಿಯನ್ನೇ ಬದಲಾಯಿಸಿದೆ ಎಂದು ಹೇಳಿದರೆ ಖಂಡಿತ ಅತಿಶಯೋಕ್ತಿ ಆಗಲಾರದು.

ಕೇವಲ ನೇವಿಗೇಷನ್ ಮತ್ತು ನೀವು ತಲುಪಬೇಕಾಗಿರುವ ಸ್ಥಳಕ್ಕೆ ದಾರಿ ತೋರಿಸುವ ಕೆಲಸವನ್ನು ಮಾತ್ರವೇ ಗೂಗಲ್ ಮ್ಯಾಪ್ ಮಾಡುತ್ತದೆ ಎಂದು ಭಾವಿಸಬೇಡಿ. ಇದನ್ನು ಹೊರತು ಪಡಿಸಿ 14 ಕೆಲಸಗಳನ್ನು ಗೂಗಲ್ ಮ್ಯಾಪ್ ಮಾಡುತ್ತದೆ. ಬಹುಶ್ಯಃ ನಿಮಗೆ ಆ ವಿಚಾರಗಳು ತಿಳಿದಿರುವ ಸಾಧ್ಯತೆ ಬಹಳ ಕಡಿಮೆ. ಹಾಗಾಗಿಯೇ ಈ ಲೇಖನ ನಿಮಗೆ ಅದನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಿದೆ.

ನಿಮ್ಮ ಕಾರನ್ನು ನೀವೆಲ್ಲಿ ನಿಲ್ಲಿಸಿದ್ದೀರಿ ಎಂದು ತಿಳಿಸುತ್ತದೆ( ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ತಿಳಿಯುತ್ತದೆ.)
ಪಾರ್ಕಿಂಗ್ ಲೊಕೇಷನ್ ಅನ್ನು ಸೇವ್ ಮಾಡಿಕೊಳ್ಳುವುದಕ್ಕೆ ಗೂಗಲ್ ಮ್ಯಾಪ್ ಅವಕಾಶ ನೀಡುತ್ತದೆ. ಇದಕ್ಕಾಗಿ ಬಳಕೆದಾರರು ನೀಲಿ ಡಾಟ್ ನ್ನು ಟ್ಯಾಪ್ ಮಾಡಬೇಕು ಮತ್ತು ಆಂಡ್ರಾಯ್ಡ್ ನಲ್ಲಿ ಸೇವ್ ಯುವರ್ ಪಾರ್ಕಿಂಗ್ ನ್ನು ಟ್ಯಾಪ್ ಮಾಡಬೇಕು.ಐಓಎಸ್ ನಲ್ಲಾದರೆ ಸೆಟ್ ಆಸ್ ಎ ಪಾರ್ಕಿಂಗ್ ಲೊಕೇಷನ್ ಎಂಬುದನ್ನು ಟ್ಯಾಪ್ ಮಾಡಿ. ಇದರ ಜೊತೆಗೆ ಹೆಚ್ಚುವರಿ ಕೆಲವು ವಿವರಗಳನ್ನು ಆಡ್ ಮಾಡಬಹುದು ಮತ್ತು ನಿಮ್ಮ ಪಾರ್ಕಿಂಗ್ ಜಾಗವನ್ನು ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಕೂಡ ಮಾಡಬಹುದು.

ನಿಮ್ಮ ರಿಯಲ್ ಟೈಮ್ ಲೊಕೇಷನ್ ಅನ್ನು ಇತರರೊಂದಿಗೆ ಶೇರ್ ಮಾಡಿ
ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವವರ ಜೊತೆಗೆ ರಿಯಲ್ ಟೈಮ್ ಲೊಕೇಷನ್ ನ್ನು ಹಂಚಿಕೊಳ್ಳುವುದಕ್ಕೆ ಗೂಗಲ್ ಮ್ಯಾಪ್ ಆಪ್ ಅವಕಾಶ ನೀಡುತ್ತದೆ. ಅದನ್ನು ಮಾಡುವುದಕ್ಕಾಗಿ ನೀವು ಸೈಡ್ ಮೆನುವನ್ನು ಟ್ಯಾಪ್ ಮಾಡಿ ಅಥವಾ ನೀವೆಲ್ಲಿದ್ದೀರಾ ಎಂಬ ಬಗ್ಗೆ ಸೂಚಿಸುವ ನೀಲಿ ವರ್ಣದ ಡಾಟ್ ನ್ನು ಕ್ಲಿಕ್ಕಿಸಿ ಮತ್ತು ಶೇರ್ ಲೊಕೇಷನ್ ನ್ನು ಟ್ಯಾಪ್ ಮಾಡಿ. ನಂತರ ಯಾರಿಗೆ ಕಳಿಸಬೇಕು ಎಂಬುದನ್ನು ಆಯ್ಕೆ ಮಾಡಿ. ಎಷ್ಟೊತ್ತು ಈ ಮಾಹಿತಿ ಶೇರ್ ಆಗಬೇಕು ಎಂಬುದನ್ನು ಕೂಡ ಸೆಟ್ ಮಾಡಬಹುದು. ಅಂದರೆ ಎಷ್ಟು ತಾಸುಗಳ ವರೆಗೆ ನೀವಿರುವ ಲೊಕೇಷನ್ ನ್ನು ನೀವು ಸೆಂಡ್ ಮಾಡಿದ ವ್ಯಕ್ತಿ ನೋಡಬಹುದು ಎಂಬುದನ್ನು ಸೆಟ್ ಮಾಡಿ ಸೆಂಡ್ ಮಾಡಬಹುದು.

ಪೆಟ್ರೋಲ್ ಪಂಪ್, ರೆಸ್ಟೋರೆಂಟ್, ಎಟಿಎಂ ಇತ್ಯಾದಿ
ಹತ್ತಿರದ ಸ್ಥಳಗಳ ಹುಡುಕಾಟ ಎಟಿಎಂ ನಿಂದ ಪೆಟ್ರೋಲ್ ಪಂಪ್ ನವರೆಗೆ, ಬಾರ್ ನಿಂದ ರೆಸ್ಟೋರೆಂಟ್ ನ ವರೆಗೆ ಗಲ್ಲಿಗಲ್ಲಿಯ ಮಾಹಿತಿಯನ್ನೂ ಕೂಡ ಗೂಗಲ್ ಮ್ಯಾಪ್ ನೀಡುತ್ತದೆ. ನೀವಿರುವ ಸ್ಥಳದಿಂದ ಹತ್ತಿರದ ಯಾವುದೇ ಮಾಹಿತಿಯ ವಿವರ ನಿಮಗೆ ಬೇಕಿದ್ದಲ್ಲಿ ಅದನ್ನು ಗೂಗಲ್ ಮ್ಯಾಪ್ ನೀಡುತ್ತದೆ. ಬ್ಯುಸಿನೆಸ್ ಫೋನ್ ನಂಬರ್, ಎಷ್ಟು ತಾಸು ಓಪನ್ ಇರುತ್ತದೆ, ರೇಟಿಂಗ್ ಅಂದರೆ ಇತರರು ನೀವು ಹುಡುಕುತ್ತಿರುವ ಸ್ಥಳದ ಯಾವ ಅಭಿಪ್ರಾಯ ಹೇಳುತ್ತಿದ್ದಾರೆ ಇತ್ಯಾದಿ ಹಲವು ಅಂಶಗಳನ್ನು ನಿಮ್ಮ ಹತ್ತಿರದ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಮ್ಯಾಪ್ ನಲ್ಲಿ ಅವಕಾಶವಿರುತ್ತದೆ.

ಊಬರ್, ಓಲಾ ಇತ್ಯಾದಿ ಕ್ಯಾಬ್ ಸೇವೆಗಳ ಬೆಲೆಯನ್ನು ಹೋಲಿಕೆ
ಮುಂದಿನ ಬಾರಿ ನೀವೇನಾದರೂ ಕ್ಯಾಬ್ ಪಡೆಯಬೇಕಾಗಿದ್ದಲ್ಲಿ ಗೂಗಲ್ ಮ್ಯಾಪ್ ನಲ್ಲಿ ಟ್ರಾಫಿಕ್ ಅಪ್ ಡೇಟ್ ಪಡೆದುಕೊಳ್ಳಿ. ನಂತರ ಓಲಾ ಅಥವಾ ಊಬರ್ ನ್ನು ಆಯ್ಕೆ ಮಾಡಿ. ಬೇರೆಬೇರೆ ಕ್ಯಾಬ್ ಸೇವೆಗಳು ನಿಮ್ಮ ನಿರ್ಧಿಷ್ಟ ಸ್ಥಳಕ್ಕೆ ಎಷ್ಟು ಬೆಲೆಯನ್ನು ಕೇಳುತ್ತಾರೆ ಎಂಬುದನ್ನು ಕೂಡ ಗೂಗಲ್ ಮ್ಯಾಪ್ ತಿಳಿಸುತ್ತದೆ.

ನಿಮ್ಮ ವೆಹಿಕಲ್ ಐಕಾನ್ ಅನ್ನು ನೀವು ಇಚ್ಛಿಸಿದ ರೀತಿಯಲ್ಲಿ ಕಸ್ಟಮೈಜ್ ಮಾಡಬಹುದು ಉದಾಹರಣೆಗೆ ಎಸ್ ಯುವಿ (ಐಓಎಸ್ ನಲ್ಲಿ ಮಾತ್ರವೇ ಲಭ್ಯ)
ಗೂಗಲ್ ಮ್ಯಾಪ್ ಬಳಸುವಾಗ ಬ್ಲೂ ನೇವಿಗೇಷನ್ ಬಾಣದ ಐಕಾನ್ ನ್ನು ನಿಮ್ಮ ಕಾರ್ ಆಗಿಯೋ, ಪಿಕ್ ಅಪ್ ಟ್ರಕ್ ಆಗಿಯೋ ಅಥವಾ ಎಸ್ ಯುವಿ ಆಗಿ ಬದಲಾಯಿಸುವ ಅವಕಾಶವು ಐಫೋನ್ ನಲ್ಲಿ ಲಭ್ಯವಿದೆ.ಇದನ್ನು ಮಾಡುವುದಕ್ಕಾಗಿ,ಬಾಣದ ಗುರುತನ್ನು ನೇವಿಗೇಷನ್ ಮೋಡ್ ನಲ್ಲಿದ್ದಾಗ ಟ್ಯಾಪ್ ಮಾಡಿ. ಇದು ಕೆಳಗಡೆ ಒಂದು ಪಾಪ್ ಅಪ್ ನ್ನು ನೀಡುತ್ತದೆ ಜೊತೆಗೆ ನಿಮಗೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಹಲವು ವೆಹಿಕಲ್ ಗಳಿರುತ್ತದೆ.

ಬ್ಯುಸಿನೆಸ್ ಮೆಸೇಜ್ ಗಳು (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯ )
ಇದು ಖಂಡಿತವಾಗಲೂ ಬಹಳ ಅಧ್ಬುತ ಫೀಚರ್, ಒಂದು ವೇಳೆ ನೀವು ಕೇಕ್ ಆರ್ಡರ್ ಮಾಡಬೇಕು ನಿಮ್ಮ ಹತ್ತಿರದ ಸ್ಥಳದಲ್ಲಿ ಎಲ್ಲಿ ಕೇಳಬೇಕು ಎಂದು ತಿಳಿಯದೇ ಇದ್ದಲ್ಲಿ ಗೂಗಲ್ ಮ್ಯಾಪ್ ನ್ನು ಕೇಳಿ . ಖಂಡಿತ ಉತ್ತರ ಸಿಗುತ್ತದೆ. ಬ್ಯುಸಿನೆಸ್ ಮೆಸೇಜ್ ಗಳ ಮೂಲಕ ನೀವು ಯಾವ ಕೇಕ್ ನ್ನು ಆರ್ಡರ್ ಮಾಡಲು ಇಚ್ಛಿಸುತ್ತೀರಿ. ಯಾವ ರೆಸ್ಟೋರೆಂಟ್ ನಿಂದ ಮತ್ತು ಆ ರೆಸ್ಟೋರೆಂಟ್ ನಲ್ಲಿ ಅದು ಲಭ್ಯವಿದೆಯೇ ಎಂಬುದನ್ನು ಹತ್ತಿರದ ರೆಸ್ಟೋರೆಂಟ್ ಗೆ ಮೆಸೇಜ್ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಇದು ಬ್ಯುಸಿನೆಸ್ ನ ಕಾರಣದಿಂದಾಗಿ ನೀಡಲಾಗಿರುವ ಬೆಸ್ಟ್ ಫೀಚರ್ ಆಗಿದೆ.

ಬಿಲ್ಡಿಂಗ್ ನ ಇಂಡೋರ್ ಮ್ಯಾಪ್ ಕೂಡ ನೋಡಬಹುದು (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯ)
ಗೂಗಲ್ ಮ್ಯಾಪ್ ಬಳಸಿ ನಿಮ್ಮ ಹತ್ತಿರದ ಸ್ಟೋರ್, ಏರ್ ಫೋರ್ಟ್ ಅಥವಾ ಹೊಟೆಲ್ ಗಳು ಹೇಗೆ ಕಾಣುತ್ತದೆ ಎಂಬುದನ್ನು ಮ್ಯಾಪ್ ಮೂಲಕವೇ ತಿಳಿದು ನಂತರ ಇಷ್ಟವಾದಲ್ಲಿ ವಿಸಿಟ್ ಮಾಡಬಹುದು.ಒಮ್ಮೆ ನೀವು ನಿರ್ಧಿಷ್ಟ ಪ್ಲೇಸ್ ನ್ನು ಸರ್ಚ್ ಮಾಡಿದಾಗ ಕೆಳಗಡೆ ಸ್ಥಳದ ಹೆಸರು ಮತ್ತು ವಿಳಾಸ ಬರುತ್ತದೆ. ಫೋಟೋಸ್ ನೋಡುವವರೆಗೆ ಸ್ಕ್ರೀನ್ ನ್ನು ಸ್ಕ್ರೋಲ್ ಮಾಡಿ. ಸ್ಟ್ರೀಟ್ ವ್ಯೂ ಸಿಂಬಲ್ ಬರುತ್ತದೆ ಮತ್ತು ಆ ಸ್ಥಳದ ಫೋಟೋಗಳು ಕೂಡ ಲಭ್ಯವಾಗುತ್ತದೆ. ನಿಮಗೆ ಇಷ್ಟವಾರದಲ್ಲಿ ಅಲ್ಲಿಗೆ ವಿಸಿಟ್ ಮಾಡಬಹುದು.

ನಿಮ್ಮ ಫೋನ್ ಅನ್ನು ಅನ್ ಲಾಕ್ ಮಾಡದೆಯೇ ನಿಮ್ಮ ಸ್ಥಳದ ಡೈರೆಕ್ಷನ್ ಪಡೆಯುವುದು (ಐಓಎಸ್ ನಲ್ಲಿ ಮಾತ್ರವೇ ಲಭ್ಯ)
ಇದೊಂದು ಬೆಸ್ಟ್ ಫೀಚರ್. ಐಫೋನ್ ಬಳಕೆದಾರರು ಫೋನ್ ನ್ನು ಅನ್ ಲಾಕ್ ಮಾಡದೆಯೇ ಗೂಗಲ್ ಮ್ಯಾಪ್ ಫೀಚರ್ ನ್ನು ಬಳಕೆ ಮಾಡಬಹುದು. ಆಪ್ ತೆರೆಯದೆಯೇ ಮಾಡದೆಯೇ ಡೈರೆಕ್ಷನ್ ಅನ್ನು ಆಕ್ಸಿಸ್ ಮಾಡಲು ಆಪ್ ಅವಕಾಶ ನೀಡುತ್ತದೆ.

ರಿಮೈಂಡರ್ ಗಳನ್ನು ಸೆಟ್ ಮಾಡಿಕೊಳ್ಳುವುದು (ಐಓಎಸ್ ನಲ್ಲಿ ಮಾತ್ರವೇ ಲಭ್ಯ)
ಯಾರು ಯಾವಾಗಲೂ ಅವರ ಮೀಟಿಂಗ್ ಗಳಿಗೆ ಲೇಟ್ ಆಗಿ ಹೋಗುತ್ತಾರೋ ಖಂಡಿತ ಅವರು ಈ ಫೀಚರ್ ನ್ನು ಸೆಟ್ ಮಾಡಿಕೊಳ್ಳಬಹುದು. ನೀವು ತಲುಪಬೇಕಾಗಿರುವ ಸ್ಥಳವನ್ನು ಟ್ಯಾಪ್ ಮಾಡಿ ಮತ್ತು ಯಾವ ಮೋಡ್ ನಲ್ಲಿ ನೀವು ಸಂಚರಿಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ. ನಂತರ ಮೇಲ್ಬಾಗದಲ್ಲಿ ಮೋರ್ ಎಂಬ ಆಯ್ಕೆ ಇದೆ ಅದರಲ್ಲಿ ಸೆಟ್ ರಿಮೈಂಡರ್ ಟು ಲೀವ್ ಆಯ್ಕೆಯನ್ನು ಪ್ರೆಸ್ ಮಾಡಿ. ಟ್ರಾಫಿಕ್ ಮತ್ತು ಇತರೆ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಗೂಗಲ್ ನೀವು ಮನೆಯಿಂದ ಅಲ್ಲಿಗೆ ತಲುಪಲು ಎಷ್ಟೊತ್ತಿಗೆ ಹೊರಡಬೇಕು ಎಂಬುದನ್ನು ರಿಮೈಂಡ್ ಮಾಡುತ್ತದೆ.

ರಿಯಲ್ ಟೈಮ್ ರೈಲ್ವೇ ಮತ್ತು ಬಸ್ ವೇಳಾಪಟ್ಟಿ ತಿಳಿಯುವುದು (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯ)
ಇತರರು ಈ ಸಮಯಕ್ಕೆ ತಲುಪಬಹುದು ಎಂಬ ಊಹೆಯ ಉತ್ತರವನ್ನು ನೀಡಿದರೆ ಗೂಗಲ್ ಮ್ಯಾಪ್ ನೀವು ಇದೇ ಸಮಯಕ್ಕೆ ತಲುಪುತ್ತೀರಿ ಎಂಬ ರಿಯಲ್ ಟೈಮ್ ಸಮಯವನ್ನು ತಿಳಿಸುತ್ತದೆ. ನಿಮ್ಮ ವೆಹಿಕಲ್ ಪ್ರಯಾಣಿಸುತ್ತಿರುವ ವೇಗದ ಆಧಾರದಲ್ಲಿ ನೀವು ಯಾವ ಸಮಯದಲ್ಲಿ ನಿಗದಿತ ಸ್ಥಳವನ್ನು ತಲುಪುತ್ತೀರಿ ಎಂಬ ರಿಯಲ್ ಟೈಮ್ ಮಾಹಿತಿಯನ್ನು ಗೂಗಲ್ ಮ್ಯಾಪ್ ನಿಂದ ಪಡೆಯಬಹುದು.

ಯಾವುದೇ ಸ್ಥಳ ಅಥವಾ ಲ್ಯಾಂಡ್ ಮಾರ್ಕ್ ಬಗ್ಗೆ ಪ್ರಶ್ನೆ ಕೇಳುವುದು (ಆಂಡ್ರಾಯ್ಡ್ ನಲ್ಲಿ ಮಾತ್ರ)
ಗೂಗಲ್ ಮ್ಯಾಪ್ ನಲ್ಲಿ ಯಾವುದೇ ಸ್ಥಳದ ಅಥವಾ ಬ್ಯುಸಿನೆಸ್ ಬಗೆಗಿನ ಪ್ರಶ್ನೆಯನ್ನು ಕೇಳಬಹುದು. ಬ್ಯೂಸಿನೆಸ್ ಮಾಲೀಕರು ಮತ್ತು ಇತರರು ಅದರ ಬಗ್ಗೆ ನೇರವಾಗಿ ಉತ್ತರವನ್ನು ನೀಡಬಹುದು. ಉದಾಹರಣೆಗೆ ನೀವು ಹುಡುಕಾಡಿದ ಸ್ಥಳದ ಬಗ್ಗೆ ನಿಮಗೇನೋ ಪ್ರಶ್ನೆ ಉದ್ಭವವಾಯಿತು ಎಂದಿಟ್ಟುಕೊಳ್ಳಿ. ಆಗ ಕೆಳಗಡೆ ಪ್ಲೇಸ್ ನೇಮ್ ನ್ನು ಟ್ಯಾಪ್ ಮಾಡಿ. ನೀವು ಪ್ರಶ್ನೆ ಕೇಳುವುದಕ್ಕಿಂತ ಮುಂಚೆ ನಿಮಗೆ ಉದ್ಭುವವಾಗಿರುವ ಪ್ರಶ್ನೆಯನ್ನು ಈಗಾಗಲೇ ಯಾರಾದರೂ ಕೇಳಿದ್ದಾರಾ ಎಂಬುದನ್ನು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ.

ಬೇರೆಬೇರೆ ಭಾಷೆಗಳಲ್ಲಿ ಗೂಗಲ್ ಮ್ಯಾಪ್ ಬಳಸುವುದು (ಆಂಡ್ರಾಯ್ಡ್ ನಲ್ಲಿ ಮಾತ್ರ)
ನೀವು ಟ್ರಾವೆಲ್ ಮಾಡುತ್ತಿರುವಾಗ ಗೂಗಲ್ ಮ್ಯಾಪ್ ವಾಯ್ಸ್ ಮತ್ತು ಭಾಷೆಯನ್ನು ಬದಲಾಯಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಾಗಿ ನೀವು ಮೆನುಗೆ ತೆರಳಿ ಮತ್ತು ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಬೇಕು. ನೇವಿಗೇಷನ್ ಸೆಟ್ಟಿಂಗ್ ಗೆ ಹೋಗಿ ವಾಯ್ಸ್ ಗೆ ತೆರಳಿ. ಇಲ್ಲಿ ನೀವು ವಾಯ್ಸ್ ಮತ್ತು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಫೋಟೋ ಮತ್ತು ವೀಡಿಯೋಗಳನ್ನು ಆಡ್, ರಿಮೂವ್ ಮತ್ತು ಶೇರ್ ಮಾಡುವುದು (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯ)
ಈ ಫೀಚರ್ ನಿಂದಾಗಿ ನೀವು ಪ್ರಯಾಣಿಸಬೇಕು ಎಂದುಕೊಂಡಿರುವ ಸ್ಥಳವು ಹೇಗೆ ಕಾಣುತ್ತದೆ ಎಂಬುದನ್ನು ತಿಳಿಯಬಹುದು. ನೀವು ಸೇರಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೋಗಳನ್ನು ನಿಮಗೆ ಯಾವಾಗ ಬೇಕು ಅನ್ನಿಸುತ್ತೋ ಆಗ ರಿಮೂವ್ ಮಾಡಲು, ಹಂಚಿಕೊಳ್ಳಲು ಕೂಡ ಅವಕಾಶವಿರುತ್ತದೆ.

ಮ್ಯಾಪ್ ನಲ್ಲಿ ತಪ್ಪಿಹೋದ ಸ್ಥಳವನ್ನು ಸೇರಿಸುವಿಕೆ (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯ)
ಕೊನೆಯದಾಗಿ, ಒಂದು ವೇಳೆ ನೀವು ಗೂಗಲ್ ಮ್ಯಾಪ್ ನಲ್ಲಿ ಯಾವುದೊ ಲೊಕೇಷನ್ ನ್ನು ಲೊಕೇಟ್ ಮಾಡಲು ಅಸಾಧ್ಯವಾದರೆ ಆಗ ನೀವು ಸಾರ್ವಜನಿಕವಾಗಿ ಅದನ್ನು ಗೂಗಲ್ ಮಯಾಪ್ ಗೆ ಸೇರಿಸಲು ಅವಕಾಶವಿರುತ್ತದೆ. ಆಂಡ್ರಾಯ್ಡ್ ಫೋನ್ ನಲ್ಲಿ ಮೆನು ಐಕಾನ್ ಗೆ ತೆರಳಿ ಮ್ತು 'Add a missing place ನ್ನು ಸೆಲೆಕ್ಟ್ ಮಾಡಿ. ಆಯ್ಕೆಯನ್ನು ಸೆಲೆಕ್ಟ್ ಮಾಡಿದ ನಂತರ ಸ್ಕ್ರೀನ್ ನಲ್ಲಿ ಬರುವ ಸೂಚನೆಗಳನ್ನು ಫಾಲೋ ಮಾಡಿ. ಐಓಎಸ್ ಬಳಕೆದಾರರಾಗಿದ್ದಲ್ಲಿ ಅಡ್ರೆಸ್ ನ್ನು ಸರ್ಚ್ ಮಾಡಿ ಮತ್ತು ಕೆಳಗಡೆ ಅಡ್ರೆಸ್ ನ್ನು ಟ್ಯಾಪ್ ಮಾಡಿ 'Add a missing place.'ನ್ನು ಕ್ಲಿಕ್ಕಿಸಿ ಮುಂದುವರಿಯಿರಿ.


Click it and Unblock the Notifications








