ಈ 4 ಕಾರಣಗಳು ಸಾಕು ನೀವು ಈ ಮೂರು ಬಾಗಿಲಿನ ಫ್ರಿಡ್ಜ್‌ ಖರೀದಿಸಲಿಕ್ಕೆ..!

|

ಫ್ರಿಡ್ಜ್ ಇಲ್ಲದೇ ಇರೋ ಅಡುಗೆ ಮನೆ ಯಾವ ಮಹಿಳೆಯರದ್ದು ತಾನೆ ಇದೆ ಹೇಳಿ ಈಗಿನ ಕಾಲದಲ್ಲಿ. ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಇದ್ದೇ ಇರುತ್ತದೆ. ಆದರೆ ಹಳೆಯ ಫ್ರಿಡ್ಜ್ ಗಳಿಗೆ ಗುಡ್ ಬಾಯ್ ಹೇಳಿ ಹೊಸ ಪ್ರಿಡ್ಜ್ ನ್ನು ನಿಮ್ಮ ಅಡುಗೆ ಮನೆಗೆ ತರಬೇಕು ಎಂದಾದಲ್ಲಿ ಅದಕ್ಕೆ ಸೂಕ್ತವಾದ ಸಮಯ ಹಬ್ಬದ ಸೀಸನ್. ಯಾಕೆಂದರೆ ಹಬ್ಬದ ಸಮಯದಲ್ಲಿ ಈ ರೀತಿಯ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ತಯಾರಿಕಾ ಕಂಪೆನಿಗಳು ಮತ್ತು ಮಳಿಗೆಗಳು ನೀಡುತ್ತವೆ.

ಆಹಾರ ಪದಾರ್ಥಗಳನ್ನು ಹಾಳಾಗದಂತೆ ಸುರಕ್ಷಿತವಾಗಿಡಲು ಮತ್ತು ಕೆಲವು ಅಧ್ಬುತ ಆಹಾರಗಳ ತಯಾರಿಕೆಯಲ್ಲಿ ಪ್ರಿಡ್ಜ್ ನದ್ದು ಬಹಳ ಮುಖ್ಯವಾದ ಪಾತ್ರ. ಅತ್ಯುತ್ತಮ ಗುಣಮಟ್ಟದ ಫ್ರಿಡ್ಜ್ ನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಕೇವಲ ಆಹಾರ ಹಾಳಾಗದೆ ಉಳಿಯುವುದು ಮಾತ್ರವಲ್ಲ ಬದಲಾಗಿ ಶಕ್ತಿವರ್ಧಕವಾಗಿ ಇರುತ್ತದೆ. ಇದೆರಡರ ಉತ್ತಮ ಗುಣಮಟ್ಟಕ್ಕೆ ಹೇಳಿ ಮಾಡಿಸಿದ ಫ್ರಿಡ್ಜ್ ಎಂದರೆ ಅದು “ವಿಲ್ಪ್ರೂಲ್ ಪ್ರೋಟನ್”.

ಈ 4 ಕಾರಣಗಳು ಸಾಕು ನೀವು ಈ ಮೂರು ಬಾಗಿಲಿನ ಫ್ರಿಡ್ಜ್‌ ಖರೀದಿಸಲಿಕ್ಕೆ..!

ಫ್ರಿಡ್ಜ್ ನಲ್ಲಿಟ್ಟ ಹಾಲು ಮೊಸರಾಗುತ್ತಿದೆಯಾ? ನಿಮ್ಮ ಕೇಕ್ ಈರುಳ್ಳಿ ವಾಸನೆ ಆಗಿ ಬಿಡ್ತಾ? ನೀವು ಫ್ರಿಡ್ಜ್ ನಲ್ಲಿಟ್ಟ ತರಕಾರಿ ಮಾಂಸದ ವಾಸನೆ ಬರುತ್ತಿದೆಯಾ? ಎಸ್ ಇಂತಹ ಸಮಸ್ಯೆಯನ್ನು ತಂದೊಡ್ಡುವ ಫ್ರಿಡ್ಜ್ ಗಳು ಇವೆ. ಆದರೆ ಇವುಗಳನ್ನು ಫ್ರಿಡ್ಜ್ ಎಂದು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಅರ್ಥವೇ ಇಲ್ಲ. ಫ್ರಿಡ್ಜ್ ಮಾಡಬೇಕಾದ ಪ್ರಮುಖ ಕೆಲಸವನ್ನು ಇದು ಮಾಡುವುದೇ ಇಲ್ಲ. ಹಾಗಾಗಿ ಇಂತಹ ಫ್ರಿಡ್ಜ್ ಗೆ ಬಾಯ್ ಹೇಳುವುದೇ ಸೂಕ್ತ.

ಖರೀದಿಸಬೇಕಾಗಿರುವ ಫ್ರಿಡ್ಜ್ ಯಾವುದು?

ಖರೀದಿಸಬೇಕಾಗಿರುವ ಫ್ರಿಡ್ಜ್ ಯಾವುದು?

ಈ ಮೇಲಿನ ಸಮಸ್ಯೆಗಳು ಬರಬಾರದು ಎಂದಾದರೆ ನೀವು ವಿಲ್ಪ್ರೂಲ್ ಪ್ರೋಟನ್ ಫ್ರಿಡ್ಜ್ ಖರೀದಿಸುವುದು ಸೂಕ್ತ. ಇದರಲ್ಲಿ ಮೂರು ಬಾಗಿಲುಗಳಿದ್ದು, ನೂತನವಾಗಿರುವ ಮತ್ತು ಪೇಟೆಂಟ್ ಆಗಿರುವ 6th ಸೆನ್ಸ್ ಆಕ್ಟೀವ್ ಫ್ರೆಶ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಮೂರು ಬಾಗಿಲಿನ ಈ ಫ್ರಿಡ್ಜ್ ನ ಪ್ರಯೋಜನ:

ಮೂರು ಬಾಗಿಲಿನ ಈ ಫ್ರಿಡ್ಜ್ ನ ಪ್ರಯೋಜನ:

ಮೂರು ಬಾಗಿಲಿನ ಈ ಫ್ರಿಡ್ಜ್ ನಿಂದಾಗಿ ಆಗುವ ಪ್ರಮುಖ ಪ್ರಯೋಜನವೆಂದರೆ ವಾಸನೆಗಳು ಒಂದು ಆಹಾರ ಪದಾರ್ಥದಿಂದ ಮತ್ತೊಂದಕ್ಕೆ ಮಿಕ್ಸ್ ಆಗುವುದನ್ನು ತಡೆಯುತ್ತದೆ ಮತ್ತು ಆಹಾರ ತಂಪಾಗಿಸುವಿಕೆಯಲ್ಲಿ ನಡೆಯುವ ಕೆಲವು ಮೂಲಭೂತ ಸಮಸ್ಯೆಗಳನ್ನು ತಡೆಯುತ್ತದೆ.6th ಸೆನ್ಸ್ ತಂತ್ರಜ್ಞಾನವು ನಿಮ್ಮ ಹಣ್ಣು ಮತ್ತು ತರಕಾರಿಗಳಲ್ಲಿ ತೇವಾಂಶವನ್ನು 99.9* ಶೇಕಡಾದವರೆಗೆ ಕಾಪಾಡಿಕೊಂಡು ಆಹಾರವು ತಾಜಾವಾಗಿರುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ ಬ್ಯಾಕ್ಟೀರಿಯಾಗಳನ್ನು ಕೂಡ ತಡೆಯುತ್ತದೆ.

ತರಕಾರಿ ಬಾಕ್ಸ್ ಗಳನ್ನು ತಯಾರಿಸಿ ಫ್ರಿಡ್ಜ್ ನ್ನು ಯಾವಾಗಲೂ ತೆರೆದಿಟ್ಟು ವಾಸನೆ ಮುಕ್ತವಾಗಿಸಿಕೊಳ್ಳಲು ಪರದಾಡುವುದನ್ನು ಇದು ತಪ್ಪಿಸುತ್ತದೆ. 32 ಲೀಟರ್ ನಷ್ಟು ಆಹಾರವನ್ನು ಸ್ಟೋರೇ ಮಾಡಲು ಅದರಲ್ಲೂ ತರಕಾರಿ ಮತ್ತು ಹಣ್ಣುಗಳನ್ನು ಸಂರಕ್ಷಿಸಲು ಈ ಫ್ರಿಡ್ಜ್ ನಲ್ಲಿ ಬೇರೆಬೇರೆ ಕಂಪಾರ್ಟ್ ಮೆಂಟ್ ಗಳಿವೆ. ಹಾಗಾಗಿ ನೀವು ಹಣ್ಣು ತರಕಾರಿಗಳನ್ನು ತೆಗೆಯಲು ಉಳಿದ ಎರಡು ಬಾಗಿಲುಗಳನ್ನು ತರೆಯದೆಯೇ ಫ್ರಿಡ್ಜ್ ನಿಂದ ತೆಗೆಯಲು ಸಾಧ್ಯವಾಗುತ್ತದೆ. ಈ ರೀತಿಯ ಮೂರು ಬಾಗಿಲುಗಳ ತಂತ್ರಜ್ಞಾನವು ಫ್ರಿಡ್ಜ್ ನಲ್ಲಿ ಕೇವಲ ಸ್ಟೋರೇಜ್ ಗೆ ಸಪರೇಜ್ ಜಾಗ ಮಾಡಿರುವುದು ಮಾತ್ರವಲ್ಲ ಬದಲಾಗಿ ಉತ್ತಮ ಕೂಲಿಂಗ್ ಗೂ ಸಹಕಾರಿ. ಅಂದರೆ ಬೇರೆಬೇರೆ ವಸ್ತುಗಳು ಬೇಡುವ ಬೇರೆಬೇರೆ ತಾಪಮಾನವನ್ನು ಇದು ಒದಗಿಸುತ್ತದೆ.

ತೇವಾಂಶದ ಪರಿಣಾಮ :

ತೇವಾಂಶದ ಪರಿಣಾಮ :

ಕೆಲವು ತರಕಾರಿಗಳು ಮತ್ತು ಹಣ್ಣುಗಳು ಫ್ರಿಡ್ಜ್ ನಲ್ಲಿ ಡ್ರೈ ಆಗುವುದನ್ನು ನೀವು ಕೆಲವು ಫ್ರಿಡ್ಜ್ ನಲ್ಲಿ ಗಮನಿಸಿರಬಹುದು. ವಿಲ್ಪ್ರೂಲ್ ಪ್ರೊಟನ್ ನಲ್ಲಿ ತೇವಾಂಶ ಧಾರಣೆ ಮತ್ತು ಝೀಲೈಟ್ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದಾಗಿ ತರಕಾರಿಗಳು ಡ್ರೈ ಆಗುವ ಸಮಸ್ಯೆಯು ಎದುರಾಗುವುದಿಲ್ಲ. ತರಕಾರಿಗಳಿಗೆ ಇತರೆ ಫ್ರಿಡ್ಜ್ ಗಳಲ್ಲಿ ನೇರವಾಗಿ ತೇವಾಂಶವು ಕೋಲ್ಡ್ ಏರ್ ಜೊತೆ ಸಂಧಿಸುವಂತೆ ಮಾಡಲಾಗಿರುತ್ತದೆ ಆದರೆ ಪ್ರೋಟನ್ ನಲ್ಲಿ ಈ ರೀತಿ ಮಾಡದೆ ಕಂಪಾರ್ಟ್ ಮೆಂಟ್ ನಲ್ಲಿ ಸರಣಿಯಾಗಿ ಹರಿಯುವಂತೆ ಮಾಡಲಾಗಿದೆ.

ಈ ಸರಳ ತಂತ್ರಜ್ಞಾನವು ತರಕಾರಿ ಮತ್ತು ಹಣ್ಣುಗಳನ್ನು ತಾಜಾವಾಗಿರುವಂತೆ ನೋಡಿಕೊಳ್ಳುತ್ತದೆ. ಝೀಲೈನ್ ತಂತ್ರಜ್ಞಾನದಿಂದಾಗಿ ಹಣ್ಣು ಮತ್ತು ತರಕಾರಿಗಳಲ್ಲಿ ಇಥಿಲಿನ್ ಹೊರಸೂಸುವಿಕೆಯನ್ನು ಹೀರಿಕೊಳ್ಳುವಂತೆ ಮಾಡಲಾಗುತ್ತದೆ ಹಾಗಾಗಿ ಇದು 2x ಫ್ರೆಶ್ ನೆಸ್ ನ್ನು ಖಾತರಿ ಪಡಿಸುತ್ತದೆ.

ಮೈಕ್ರೋ ಬ್ಲಾಕ್ ತಂತ್ರಜ್ಞಾನ:

ಮೈಕ್ರೋ ಬ್ಲಾಕ್ ತಂತ್ರಜ್ಞಾನ:

ಆಹಾರವನ್ನು ಅಥವಾ ತರಕಾರಿಗಳನ್ನು ಫ್ರಿಡ್ಜ್ ನಲ್ಲಿ ಇಟ್ಟುಬಿಟ್ಟರೆ ಬ್ಯಾಕ್ಟೀರಿಯಾಗಳಿಂದ ಸುರಕ್ಷಿತವಾಗಿರಬಹುದು ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಇದೊಂದು ತಪ್ಪು ಕಲ್ಪನೆ. ಹೀಗೆ ಮಾಡಿದ ಕೂಡಲೇ ಆಹಾರ ಸುರಕ್ಷಿತವಾಗಿರುತ್ತದಂ ಎಂತರ್ಥವಲ್ಲ. ಆದರೆ ವಿಲ್ಪ್ರೂಲ್ ನಲ್ಲಿರುವ ಮೈಕ್ರೋ ಬ್ಲಾಕ್ ತಂತ್ರಗಾರಿಕೆಯು ಆಹಾರಗಳು ಉತ್ತಮ ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ವಿಶೇಷ ಆಂಟಿ ಮೈಕ್ರೋಬಯಲ್ ಇದ್ದು ಇದು 99.9% ದಷ್ಟು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗಾಗಿ ಆಹಾರ ವಿಷಪೂರಿತವಾಗುವುದನ್ನು ತಡೆಯುತ್ತದೆ. ಒಟ್ಟಿನಲ್ಲಿ ಈ ಮೈಕ್ರೋ ಬ್ಲಾಕ್ ತಂತ್ರಜ್ಞಾನವು ಆಹಾರವು ಫ್ರೆಶ್ ಆಗಿರುವಂತೆ ಮಾತ್ರವಲ್ಲ ಮೈಕ್ರೋ ಕೀಟಾಣುಗಳಿಂದ ಸುರಕ್ಷಿತವಾಗಿರುವಂತೆ ಮಾಡುತ್ತದೆ.

ಇಂಧನ ದಕ್ಷತೆ :

ಇಂಧನ ದಕ್ಷತೆ :

ಕೆಲವು ಫ್ರಿಡ್ಜ್ ಗಳು ಅತೀ ಹೆಚ್ಚು ಕರೆಂಟ್ ಬಿಲ್ ಬರುವಂತೆ ಮಾಡುತ್ತದೆ. ಆದರೆ ಈ ಫ್ರಿಡ್ಜ್ ಅತೀ ಕಡಿಮೆ ಎಲೆಕ್ಟ್ರಿಸಿಟಿಯನ್ನು ಬೇಡುತ್ತದೆ. 60 ವ್ಯಾಟ್ ಸಿಎಲ್ಎಫ್ ಗೂ ಕಡಿಮೆ ಇಂಧನ ಶಕ್ತಿಯು ಇದಕ್ಕೆ ಸಾಕಾಗುತ್ತದೆ. ಈ ಮೊತ್ತದ ಪವರ್ ಬಳಸಿ ಕೆಲಸ ಮಾಡುವ ರೆಫ್ರಿಜರೇಟರ್ ಗಳಲ್ಲಿ ಇದು ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಇವಿಷ್ಟನ್ನು ಹೊರತು ಪಡಿಸಿ ಡೈರಿ ಪ್ರೊಡಕ್ಟ್ ಗಳನ್ನು ಸುರಕ್ಷಿತವಾಗಿಡುವ ತಂತ್ರಜ್ಞಾನ ಸೇರಿದಂತೆ ಹಲವು ವಿಭಿನ್ನ ಆಯ್ಕೆಗಳು ಈ ಮೂರು ಬಾಗಿಲಿನ ವಿಲ್ಪ್ರೋಲ್ ಪ್ರೋಟನ್ ಫ್ರಿಡ್ಜ್ ನಲ್ಲಿದ್ದು ಮಾರುಕಟ್ಟೆಯಲ್ಲಿ ಆಯ್ಕೆ ಮಾಡಬಹುದಾದ ಬೆಸ್ಟ್ ಫ್ರಿಡ್ಜ್ ಎನ್ನಿಸಿಕೊಳ್ಳುತ್ತದೆ.

Best Mobiles in India

English summary
4 Reasons Why Your Next Fridge Should Be Whirlpool Protton 3 Door Refrigerator. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X