ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ಡಿಲೀಟ್ ಮಾಡಲೇಬೇಕಾದ ಆಪ್‌ಗಳು..
ಸ್ಮಾರ್ಟ್‌ಫೋನ್ ಬಳಸುವ ಎಲ್ಲರಿಗೂ ಒಂದೇ ಪ್ರಶ್ನೆ !! ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗಲು ಕಾರಣ ಏನು ಎಂಬುದು. ಕಾರಣ ತಿಳಿಯಲು ಹಲವು ಪ್ರಯತ್ನಗಳನ್ನು ಮಾಡಿರುತ್ತೀರಿ. ಇದು ನಿಜವು ಹೌದು. ನೆನಪಿಡಿ ನಿರೀಕ್ಷೆಗೂ ಮೀರಿ ನಿಮ್ಮ ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ ನಿಮ್ಮ ಮೊಬೈಲ್‌ನಲ್ಲಿ ಬಳಸುವ ಹಲವು ಅಪ್ಲಿಕೇಶನ್‌ಗಳು.
ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಬಳಸುವ ಅನಾವಶ್ಯಕವಾದ ಕೆಲವು ಆಪ್‌ಗಳಿಂದ ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗುವುದಲ್ಲದೇ ಫೋನ್ ಮಂದಗತಿಯಲ್ಲಿ ಕೆಲಸ ಮಾಡಲು ಸಹ ಕಾರಣವಾಗಿವೆ. ಅಲ್ಲದೇ ಸ್ಟೋರೇಜ್ ಸಾಮರ್ಥ್ಯವನ್ನು ಸಹ ಕಡಿಮೆಗೊಳಿಸಿವೆ. ಈಗ ನೀವು ಇಂತಹ ಸಮಸ್ಯೆಗಳಿಂದ ಪಾರಾಗುವುದು ಅತಿ ಸುಲಭದ ಕೆಲಸ. ಗಿಜ್‌ಬಾಟ್, ಬ್ಯಾಟರಿ ಶೀಘ್ರವಾಗಿ ಖಾಲಿಯಾಗುವ ಮತ್ತು ಮಂದಗತಿಯಲ್ಲಿ ಕೆಲಸ ಮಾಡುವ ಸಮಸ್ಯೆಗಳಿಂದ ಪಾರಾಗಲು ನಿಮ್ಮ ಮೊಬೈಲ್‌ನಿಂದ ತೆಗೆಯಬೇಕಾದ ಆಪ್‌ಗಳು ಯಾವುವು ಎಂದು ತಿಳಿಸುತ್ತಿದೆ. ಅಲ್ಲದೇ ಆ ಆಪ್‌ಗಳು ಹೇಗೆ ಬ್ಯಾಟರಿ ಬಹುಬೇಗ ಖಾಲಿಯಾಗಲು ಕಾರಣವಾಗುತ್ತವೆ ಎಂಬುದನ್ನು ಸಹ ತಿಳಿಸುತ್ತಿದೆ.

ಅಪ್ಲಿಕೇಶನ್ 1 :
ಸ್ಮಾರ್ಟ್‌ಫೋನ್‌ಗಳಲ್ಲಿರುವ ಫೇಸ್‌ಬುಕ್ ಆಪ್ ನಿಮ್ಮನ್ನು ಹೊರಜಗತ್ತಿನ ಎಲ್ಲರೊಂದಿಗೆ ಸಂಪರ್ಕ ಕಲ್ಪಿಸಬಹುದು. ಆದರೆ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಬ್ಯಾಟರಿ ಖಾಲಿಯಾಗಲು ಫೇಸ್‌ಬುಕ್ ಆಪ್ ಕಾರಣವಾಗಿದೆ. ನಿಮ್ಮ ಫೋನ್ ನಿಧಾನವಾಗಿ ಕಾರ್ಯ ನಿರ್ವಹಿಸಲಿಕ್ಕೂ ಸಹ ಫೇಸ್‌ಬುಕ್ ಆಪ್ ಕಾರಣವಾಗಿದೆ. ಆಪ್ ಬದಲಾಗಿ ನೀವು ನೇರವಾಗಿ ಬ್ರೌಸರ್ ಮೂಲಕ ಫೇಸ್‌ಬುಕ್ ಅನ್ನು ಬಳಸಿದರೆ ಉತ್ತಮ ಹಾಗೂ ಬ್ಯಾಟರಿಯು ಅಧಿಕವಾಗಿ ಬಾಳಿಕೆ ಬರುತ್ತದೆ. ಆದ್ದರಿಂದ ಫೇಸ್‌ಬುಕ್ ಆಪ್ ಅನ್ನು ಸ್ಮಾರ್ಟ್‌ಫೋನ್‌ನಿಂದ ಡಿಲೀಟ್ ಮಾಡಿದರೆ ಫೋನ್ ಸಹ ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಅಪ್ಲಿಕೇಶನ್ 2 :
ವೆದರ್ ಆಪ್ ಬಹುಬೇಗ ಎಲ್ಲರಿಗೂ ಸಹ ವಾತಾವರಣದ ಮುನ್ಸೂಚನೆ ನೀಡುವಲ್ಲಿ ಸಂಶಯವಿಲ್ಲ. ಆದರೆ ನೆನಪಿರಲಿ ಬ್ಯಾಟರಿ ಶಕ್ತಿಯನ್ನು ಬಹುಬೇಗ ಖಾಲಿಮಾಡುತ್ತದೆ. ಆದ್ದರಿಂದ ಈ ಆಪ್ ಹೊಂದುವ ಬದಲಾಗಿ "ಗೂಗಲ್" ನಿಂದ ನೇರವಾಗಿ ವಾತಾವರಣ ಮುನ್ಸೂಚನೆ ತಿಳಿಯ ಬಳಸಬಹುದು.

ಅಪ್ಲಿಕೇಶನ್ 3:
ನಿಮ್ಮ ಮೊಬೈಲ್ ವೈರಸ್‌ಗಳಿಗೆ ತುತ್ತಾಗಿ ಹದಗೆಡುವ ಭಯವಿದೆಯೇ ? ಆಧುನಿಕ ಸ್ಮಾರ್ಟ್‌ಫೋನ್‌ಗಳು ಉತ್ತಮ ಮಾರ್ಗಗಳನ್ನು ಹೊಂದಿದ್ದು, ವೈರಸ್‌ಗಳಿಂದ ಸುರಕ್ಷಿತವಾಗಿರುವ ಹಲವು ಮಾರ್ಗಗಳನ್ನು ಹೊಂದಿವೆ. ಆಂಡ್ರಾಯ್ಡ್ ಫೋನ್‌ಗಳು ಹೆಚ್ಚು ಸುರಕ್ಷಿತ ಮಾರ್ಗಗಳನ್ನು ಹೊಂದಿವೆ. ಆದರೆ ನೀವು ಡೌನ್‌ಲೋಡ್ ಮಾಡುವ ವೇಳೆ ಮಾತ್ರ ಎಚ್ಚರವಹಿಸಿದರೆ ಸಾಕು. ಆಂಟಿವೈರಸ್‌ಗಳ ಅವಶ್ಯಕತೆ ಇರುವುದಿಲ್ಲಾ.

ಅಪ್ಲಿಕೇಶನ್ 4:
ಕ್ಲೀನಿಂಗ್ ಆಪ್ ಕ್ಯಾಶೆ ಡಾಟಾವನ್ನು ಕ್ಲಿಯರ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಅನ್ನು ವೇಗಗೊಳಿಸುತ್ತದೆ. ಆದರೆ ಕೆಲವೊಮ್ಮೆ ಡಿಲೀಟ್ ಮಾಡಿದ ಆಪ್‌ಗಳ ಕ್ಯಾಶೆ ಡಾಟಾ ಫೋನ್‌ನಲ್ಲಿ ಉಳಿದಿರುತ್ತದೆ. ನೀವು ಈ ಆಪ್ ಅನ್ನು ಡೌನ್‌ಲೋಡ್ ಮಾಡುವ ಬದಲು ಕ್ಯಾಶೆ ಡಾಟಾ ಕ್ಲಿಯರ್ ಮಾಡಲು ಫೊನ್‌ನಲ್ಲಿ ಸೆಟ್ಟಿಂಗ್ಸ್>>ಸ್ಟೋರೇಜ್ >> ಕ್ಲಿಯರ್ ಕ್ಯಾಶೆ ಡಾಟಾ ಕ್ಲಿಕ್ ಮಾಡಿ.
ಪ್ರತಿ ಆಪ್ ಅನ್ನು ವಯಕ್ತಿಕವಾಗಿ ಸಹ ಕ್ಯಾಶೆ ಡಾಟಾ ಕ್ಲಿಯರ್ ಮಾಡಬಹುದಾಗಿದೆ. ಸೆಟ್ಟಿಂಗ್ಸ್>>ಆಪ್ಸ್>> ಡೌನ್‌ಲೋಡೆಡ್ ಆಪ್‌ಗಳ ಮೇಲೆ ಕ್ಲಿಕ್ ಮಾಡಿ ಕ್ಲಿಯರ್ ಕ್ಯಾಶೆ ಅನ್ನು ಸೆಲೆಕ್ಟ್ ಮಾಡಿ.

ಅಪ್ಲಿಕೇಶನ್ 5 :
ಬ್ಯಾಟರಿ ಉಳಿತಾಯಕ್ಕೆ ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿನ, ನಿಮಗೆ ಇಷ್ಟವಾಗದ ಬ್ರೌಸರ್‌ಗಳನ್ನು ಡಿಫಾಲ್ಟ್ ಬ್ರೌಸರ್‌ಗಳಾಗಿ ಮಾಡುವುದು ಉತ್ತಮ ಕೆಲಸ. ನಂತರದಲ್ಲಿ ನಿಮಗೆ ಇಷ್ಟವಾದ ಬ್ರೌಸರ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ.

ಗಿಜ್‌ಬಾಟ್



Click it and Unblock the Notifications








