ಮೆಸೆಜ್‌ಗಳ ಸುರಕ್ಷತೆಗೆ ಈ 5 ಅಪ್ಲಿಕೇಶನ್‌ಗಳು ಅತ್ಯುತ್ತಮ!

|

ಸದ್ಯ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅವಶ್ಯ ಸಾಧನವಾಗಿದೆ. ಅದರೊಂದಿಗೆ ಸ್ಮಾರ್ಟ್‌ಫೋನಿನಲ್ಲಿನ ಮಾಹಿತಿಗಳನ್ನು ಸುರಕ್ಷಿತವಾಗಿ ಇಡುವುದು ಇಷ್ಟೆ ಮುಖ್ಯ ವಾಗಿದೆ. ಈ ನಿಟ್ಟಿನಲ್ಲಿ ಮಾಹಿತಿ ಸುರಕ್ಷತೆಗಾಗಿ ಬಳಕೆದಾರರು ಹಲವು ಸೆಕ್ಯುರಿಟಿ ಆಪ್ಸ್‌ಗಳನ್ನು ಇನ್‌ಸ್ಟಾಲ್ ಮಾಡಲು ಮುಂದಾಗುತ್ತಾರೆ. ಅದೇ ರೀತಿ ನಾರ್ಮಲ್ ಎಸ್‌ಎಮ್‌ಎಸ್‌ ಬಗ್ಗೆಯು ಗಮನ ನೀಡುವುದು ಅಗತ್ಯ ಎನಿಸಿದೆ. ಮೆಸೆಜ್‌ಗಳ ಸುರಕ್ಷತೆಗೂ ಹಲವು ಉತ್ತಮ ಆಪ್‌ಗಳು ಇವೆ.

ಬ್ಯಾಂಕ್‌

ಹೌದು, ಫೋನಿಗೆ ಬರುವ ಸಾಮಾನ್ಯ ಎಸ್‌ಎಮ್‌ಎಸ್‌ಗಳಿಗೂ ಪ್ರಸ್ತುತ ಸುರಕ್ಷತೆ ಒದಗಿಸುವ ಅಗತ್ಯ ಎನಿಸಿದೆ. ಬ್ಯಾಂಕ್‌ ವ್ಯವಹಾರಗಳ ಮಾಹಿತಿ, ವಿಧಧ ಓಟಿಪಿ-OTP ಮಾಹಿತಿ, ಶಾಪಿಂಗ್ ಮಾಹಿತಿ, ಪಿಎಫ್‌ ಮಾಹಿತಿ, ಇನ್ಸೂರೆನ್ಸ್‌ಮಾಹಿತಿ, ಬಿಲ್ ಪೇಮೆಂಟ್ ಮಾಹಿತಿ ಸೇರಿದಂತೆ ಅನೇಕ ವ್ಯವಹಾರಗಳ ಮಾಹಿತಿಗಳು ಎಸ್‌ಎಮ್‌ಎಸ್‌ಗಳಲ್ಲಿಯೇ ಇನ್‌ಬಾಕ್ಸ್‌ ಬರುತ್ತವೆ. ಹೀಗಾಗಿ ಎಸ್‌ಎಮ್‌ಎಸ್‌ಗಳಿಗೂ ಸುರಕ್ಷತೆಯ ಅವಶ್ಯವಿದೆ. ಹಾಗಾದರೇ ಮೆಸೆಜ್‌ಗಳ ಸುರಕ್ಷತೆಗೆ ಲಭ್ಯ ಇರುವ ಈ 5 ಅಪ್ಲಿಕೇಶನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೆಸೆಜ್ ಲಾಕರ್

ಮೆಸೆಜ್ ಲಾಕರ್

ಮೆಸೆಜ್ ಲಾಕರ್ ಆಪ್‌ ಸಹ ಎಸ್‌ಎಮ್‌ಎಸ್‌ಗಳನ್ನು ಭದ್ರವಾಗಿಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ. ಕೇವಲ ಎಸ್ಎಂಎಸ್ ಗಳನ್ನು ಪಾತ್ರವೇ ಅಲ್ಲ ಬದಲಾಗಿ ಪಾಸ್ ವರ್ಡ್ ಗಳನ್ನು ಕೂಡ ಇವು ಪ್ರೊಟೆಕ್ಟ್ ಮಾಡುತ್ತವೆ. ವಾಟ್ಸ್ ಆಪ್, ಜಿಮೇಲ್, ಟೆಲಿಗ್ರಾಂ, ಫೇಸ್ ಬುಕ್ ಮೆಸೇಂಜರ್, ಸ್ಕೈಪ್ ಇತ್ಯಾದಿಗಳ ಮೆಸೇಜ್ ಗಳನ್ನು ನೀವಿಲ್ಲಿ ಸೇವ್ ಮಾಡಿ ಇಡಬಹುದು.ಇದಿಷ್ಟೇ ಅಲ್ಲದೆ ಇದೊಂದು ಸಿಂಪಲ್ ಇಂಟರ್ ಫೇಸ್ ಆಗಿದೆ. ಅದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಮೆಸೇಜ್ ಲಾಕರ್ ಹೆಚ್ಚು ಪ್ರಸಿದ್ಧಿಯಾಗುತ್ತಿದೆ.

ಎಸ್‌ಎಮ್‌ಎಸ್‌ ಲಾಕ್

ಎಸ್‌ಎಮ್‌ಎಸ್‌ ಲಾಕ್

ಆಂಡ್ರಾಯ್ ಸ್ಮಾರ್ಟ್ ಫೋನ್ ಗಳಲ್ಲಿ ಎಸ್ಎಂಎಸ್ ಗಳನ್ನು ಸಿಂಪಲ್ ಆಗಿ ಲಾಕ್ ಮಾಡಿ ಇಟ್ಟುಕೊಳ್ಳುವುದಕ್ಕಾಗಿ ಆಂಡ್ರಾಯ್ಡ್ ಆಪ್ ನ್ನು ಹುಡುಕಾಡುತ್ತಿದ್ದರೆ ಎಸ್ಎಂಎಸ್ ಲಾಕ್ ಬೆಸ್ಟ್ ಆಪ್ ಆಗಿದೆ. ಎಸ್ಎಂಎಸ್ ಲಾಕ್ ಹೆಚ್ಚಿನ ಎಲ್ಲಾ ಮೆಸೇಜಿಂಗ್ ಆಪ್ ಗಳಾಗಿರುವ ಮೆಸೆಂಜರ್, ಹ್ಯಾಂಗ್ಸ್ ಔಟ್, ವಿಚಾಟ್ , ಟೆಲಿಗ್ರಾಂ ಇತ್ಯಾದಿಗಳ ಪಾಸ್ ವರ್ಡ್ ಗಳನ್ನು ಸೇವ್ ಮಾಡುತ್ತದೆ. ಮತ್ತು ಸುಲಭದಲ್ಲಿ ಬಳಕೆ ಮಾಡಬಹುದಾದ ಇಂಟರ್ಫೇಸ್ ಇದಾಗಿದೆ.

ಗೋ ಎಸ್‌ಎಮ್‌ಎಸ್‌ ಅಪ್ಲಿಕೇಶನ್

ಗೋ ಎಸ್‌ಎಮ್‌ಎಸ್‌ ಅಪ್ಲಿಕೇಶನ್

ಗೋ ಎಸ್ಎಂಎಸ್ ಪ್ರೊ ಆಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅತೀ ಹೆಚ್ಚು ರೇಟಿಂಗ್ ಪಡೆದಿರುವ ಆಂಡ್ರಾಯ್ಡ್ ಆಪ್ ಇದಾಗಿದೆ. ಈ ಆಪ್‌ನಲ್ಲಿ ನಿಮಗೆ ಪ್ರೈವೇಟ್ ಮೆಸೇಜಿಂಗ್ ವಾಲ್ಟ್ ಆಯ್ಕೆ ಇರುತ್ತದೆ. ಅಲ್ಲಿ ನೀವು ನಿಮ್ಮ ಕಾಂಟ್ಯಾಕ್ಟ್ ಗಳನ್ನು ಸೇರಿಸಿಕೊಳ್ಳಬಹುದು. ನಂತರ ನೀವು ಅದಕ್ಕೆ ಪಾಸ್ ವರ್ಡ್ ಪ್ರೊಟೆಕ್ಷನ್ ಕೂಡ ನೀಡಬಹುದು. ಹಾಗಾಗಿ ಈ ಆಪ್‌ ಮೆಸೇಜ್ ಗಳನ್ನು ಹೈಡ್ ಮಾಡುವುದಕ್ಕೆ ಉತ್ತಮ ಆಪ್ ಆಗಿದೆ.

ವೋಲ್ಟ್‌ ಅಪ್ಲಿಕೇಶನ್

ವೋಲ್ಟ್‌ ಅಪ್ಲಿಕೇಶನ್

ವಾಲ್ಟ್ ಹಲವು ಕಾರಣಗಳಿಗೆ ಉಪಯೋಗವಾಗುವ ಆಂಡ್ರಾಯ್ಡ್ ಆಪ್ ಆಗಿದ್ದು ಇದರಲ್ಲಿ ಫೋಟೋಗಳು, ವೀಡಿಯೋಗಳು, ಕಾಲ್ ಲಾಗ್ ಗಳು ಮತ್ತು ಎಸ್ಎಂಎಸ್ ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಹೈಡ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನ ಕಾಲ್ ಮತ್ತು ಎಸ್ಎಂಎಸ್ ಗಳನ್ನು ಸಪರೇಟ್ ಪೆನಲ್ ನಲ್ಲಿ ಹೈಡ್ ಮಾಡುವುದಕ್ಕೆ ಇದರಲ್ಲಿ ಅವಕಾಶವಿರುತ್ತದೆ.

ಪ್ರೈವೇಟ್ ಮೆಸೆಜ್ ಬಾಕ್ಸ್ ಅಪ್ಲಿಕೇಶನ್

ಪ್ರೈವೇಟ್ ಮೆಸೆಜ್ ಬಾಕ್ಸ್ ಅಪ್ಲಿಕೇಶನ್

ಪ್ರೈವೇಟ್ ಮೆಸೇಜ್ ಆಪ್ ಮತ್ತೊಂದು ಆಂಡ್ರಾಯ್ಡ್ ಟೆಕ್ಸ್ಟ್ ಮೆಸೇಜ್ ಲಾಕರ್ ಆಗಿದ್ದು ಎಸ್ಎಂಎಸ್ ಇನ್ ಬಾಕ್ಸ್ ಜೊತೆಗೆ ಪಿನ್ ಅಥವಾ ಪಾಸ್ ವರ್ಡ್ ಗಳನ್ನು ಕೂಡ ಇದು ಹೈಡ್ ಮಾಡಿ ಇಡುತ್ತದೆ. ಇದರಲ್ಲಿ ಬಳಕೆದಾರರು ಕಾಂಟ್ಯಾಕ್ಟ್ ಆಡ್ ಮಾಡಿದ ಕೂಡಲೇ ಆ ಕಾಂಟ್ಯಾಕ್ಟ್ ನ ಎಲ್ಲಾ ಮೆಸೇಜ್ ಗಳು ಅಂದರೆ ಇನ್ ಕಮ್ಮಿಂಗ್, ಔಟ್ ಗೋಯಿಂಗ್ ಮೆಸೇಜ್ ಗಳು ಹೈ ಸ್ವಯಂಚಾಲಿತವಾಗಿ ಹೈಡ್ ಆಗುತ್ತದೆ.

Best Mobiles in India

English summary
5 Best Application To Secure SMS On Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X