Home
Apps

ಮೊಬೈಲ್ ಸುರಕ್ಷತೆಗಾಗಿ ಇಲ್ಲಿವೆ ನೋಡಿ ಐದು ಫೈರ್ ವಾಲ್ ಆಪ್ಸ್

ಕೆಲವು ವೆಬ್ ಸೈಟ್ ಗಳು ಸುರಕ್ಷಿತವಾಗಿದ್ದರೂ, ಇನ್ನೂ ಅನೇಕ ವೆಬ್ ಸೈಟ್ ಗಳು ಆಂಡ್ರಾಯ್ಡ್ ಮೊಬೈಲ್ ಗೆ ವೈರಸ್ ತಂದೊಡ್ಡುವ ಅಪಾಯಗಳು ಎದುರಾಗುವ ಸಾಧ್ಯತೆಯೂ ಇರುವುದರಿಂದ ಬಳಕೆದಾರರು ಎಚ್ಚರಿಕೆವಹಿಸಬೇಕಾದ ಅಗತ್ಯವೂ ಇದೆ.

By Prathap T

ರಿಲಿಯಾನ್ಸ್ ಜಿಯೋ 4g ಅನ್ ಲಿಮಿಟೆಡ್ ಇಂಟರ್ ನೆಟ್ ಉಚಿತ ಸೇವೆ ಹಾಗೂ ಇನ್ನಿತರ ಮೊಬೈಲ್ ಕಂಪನಿಗಳು ಅಗ್ಗದ ದರದಲ್ಲಿ ಇಂಟರ್ ನೆಟ್ ಸೇವೆ ನೀಡುತ್ತಿರುವುದರಿಂದ ಎಲ್ಲರ ಕೈಯಲ್ಲೂ ಆಂಡ್ರಾಯ್ಡ್ ಫೋನ್, ಎಲ್ಲರೂ ಇಂಟರ್ ನೆಟ್ ಬಳಕೆದಾರರೇ ಆಗಿದ್ದಾರೆ. ಸಹಜವಾಗಿಯೇ ಬಹುತೇಕ ಮೊಬೈಲ್ ಬಳಕೆದಾರರು ನಾನಾ ಬಗೆಯ ವೆಬ್ ಸೈಟ್ ಗಳಲ್ಲಿ ಬ್ರೌಸಿಂಗ್ ಮಾಡುವುದರಲ್ಲಿ ಮಗ್ನರಾಗಿ ಬಿಟ್ಟಿದ್ದಾರೆ.

ಮೊಬೈಲ್ ಸುರಕ್ಷತೆಗಾಗಿ ಇಲ್ಲಿವೆ ನೋಡಿ ಐದು ಫೈರ್ ವಾಲ್ ಆಪ್ಸ್

ಕೆಲವು ವೆಬ್ ಸೈಟ್ ಗಳು ಸುರಕ್ಷಿತವಾಗಿದ್ದರೂ, ಇನ್ನೂ ಅನೇಕ ವೆಬ್ ಸೈಟ್ ಗಳು ಆಂಡ್ರಾಯ್ಡ್ ಮೊಬೈಲ್ ಗೆ ವೈರಸ್ ತಂದೊಡ್ಡುವ ಅಪಾಯಗಳು ಎದುರಾಗುವ ಸಾಧ್ಯತೆಯೂ ಇರುವುದರಿಂದ ಬಳಕೆದಾರರು ಎಚ್ಚರಿಕೆವಹಿಸಬೇಕಾದ ಅಗತ್ಯವೂ ಇದೆ. ಇಂತಹ ವೈರಸ್ ತಡೆಗಟ್ಟುವ ಸಲುವಾಗಿ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಗ್ರಾಹಕರು ಮೊರೆ ಹೋಗುವುದು ಉಂಟು. ಆದರೆ ಕೆಲವು ಆಪ್ ಗಳು ನೆಪ ಮಾತ್ರಕ್ಕೆ ಎಂಬಂತೆ ಕಾರ್ಯ ನಿರ್ವಹಿಸುತ್ತವೆ. ಮೊಬೈಲ್ ಗಳಿಗೆ ಯಾವುದೇ ರಕ್ಷಣೆ ನೀಡುವುದಿಲ್ಲ.

ಇಂತಹ ಅಪಾಯಕಾರಿ ವೈರಸ್ ತಂದೊಡ್ಡುವ ವೆಬ್ ಸೈಟ್ ಗಳಿಂದ ಮೊಬೈಲ್ ಅನ್ನು ಸುರಕ್ಷಿತವಾಗಿಡಬಲ್ಲ ಏಕೈಕ ಆಪ್ ಅಂದರೆ ಅದು ಫೈರ್ ವಾಲ್(FIREWALL). FIREWALL ಮತ್ತಷ್ಟು ಹೊಸ ಐದು ಬಗೆಯ ಆಕರ್ಷಕ ಆವಿಷ್ಕಾರದೊಂದಿಗೆ ಮತ್ತಷ್ಟು ರಕ್ಷಣಾತ್ಮಕವಾಗಿ ಕಾರ್ಯನಿರ್ಷಹಿಸಬಲ್ಲ 5 ಆಪ್ ಗಳನ್ನ ಪರಿಚಯಿಸಿದ್ದು, ಮೊಬೈಲ್ ಬಳಕೆದಾರರು ಚಿಂತಿಸಬೇಕಾದ ಅಗತ್ಯವಿಲ್ಲ.

ಈ 5 ಆಪ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿ ನೀವು ಬಳಸಬಹುದು. ಅಂದಮೇಲೆ ಈ ಆಪ್ ಗಳ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳುವ ಕಾತುರತೆ ನಿಮಗಿದೆ ಎಂಬುದು ನಮಗೆ ಗೊತ್ತು. ಮುಂದೆ ಓದಿ ಇವುಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನಾವು ನೀಡುತ್ತೇವೆ.

NOROOT FIREWALL

NOROOT FIREWALL

ನಿಮ್ಮ ಆಂಡ್ರಾಯ್ಡ್ ಮೊಬೈಲಿನಲ್ಲಿ ಇಂಟರ್ ನೆಟ್ ಪ್ರವೇಶವನ್ನು ಅತ್ಯಂತ ಸಮರ್ಥವಾಗಿ ನಿಯಂತ್ರಿಸಬಲ್ಲ ಅತ್ಯುತ್ತಮ ಅಪ್ಲಿಕೇಶನ್ ಗಳಲ್ಲಿ NOROOT FIREWALL ಕೂಡ ಒಂದಾಗಿದೆ. ಪ್ರತಿಯೊಂದು ಆಪ್ ಬ್ರೌಸ್ ಮಾಡುವುದಾಗಿ ಒಳಬರುವ ಹಾಗೂ ಹೊರಹೋಗುವ ಇಂಟರ್ ನೆಟ್ ಡೇಮಾ ಮೇಲೇ ನಿಗಾವಹಿಸುತ್ತದೆ. vpn ಮಾದರಿಯಲ್ಲಿ ದಿಕ್ಕುತಪ್ಪಿಸುವುದನ್ನು ತಡೆಯಲಿದೆ. ಜಾಗತಿಕವಾಗಿ ಹಾಗೂ ವೈಯಕ್ತಿಯವಾಗಿ ಬಳಸುವ ಅಪ್ಲಿಕೇಶನ್ ಗಳನ್ನು ಫಿಲ್ಟರ್ ಮಾಡಿ ಮೊಬೈಲ್ ರಕ್ಷಿಸುವಲ್ಲಿ ಸಹಕರಿಸುತ್ತದೆ.

NET GUARD

NET GUARD

ಇದರ ಕಾರ್ಯವೈಖರಿ ಸರಳವಾಗಿದ್ದರೂ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ಆಪ್ ಇದಾಗಿದೆ. ಬೇಡವಾದ ಹಾಗೂ ದುರುದ್ದೇಶ ಪೂರ್ವಕ ವೆಬ್ ಸೈಟ್ ಗಳ ಇಂಟರ್ ನೆಟ್ ನಿರ್ಭಂಧಿಸುವ ಸಾಮರ್ಥ್ಯ ಹೊಂದಿದ್ದು, ಆಂಡ್ರಾಯ್ಡ್ ಮೊಬೈಲ್ ರಕ್ಷಿಸುವಲ್ಲಿ ಸಹಕಾರಿಯಾಗಿದೆ.

mobiwol

mobiwol

ಇಂಟರ್ ನೆಟ್ ಬ್ರೌಸಿಂಗ್ ಮಾಡುವುದಾಗ ಡೇಟಾ ಹಾಗೂ ಬ್ಯಾಟರಿ ಉಳಿತಾಯ ಮಾಡಲು ಈ ಆಪ್ ಸಹಕಾರಿಯಾಗಲಿದೆ. ನಿರ್ಧಿಷ್ಟ ಅಪ್ಲಿಕೇಶನ್ ಬಳಸುವಾಗ ಹೊಸ ಆಪ್ ಪ್ರವೇಶಿಸುವ ಸಂದರ್ಭ ಎದುರಾದಾಗ ಅಲರ್ಟ್ ನೊಟಿಫಿಕೇಶನ್ ತೋರಿಸುತ್ತದೆ.

droid wall

droid wall

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಅತ್ಯಂತ ಹಳೆಯ NOROOT FIREWALL ಆಪ್ ಇದಾಗಿದೆ. ನಿಮ್ಮ ಮೊಬೈಲ್ ನಿಯಂತ್ರಣಕ್ಕೆ ನೀಡುವ ಕಸ್ಟಮ್ ಐಡಿ ಕೋಷ್ಟಕಗಳ ನಿಯಮಗಳನ್ನು ಕೈಯಾರೆ ವ್ಯಾಖ್ಯಾನಿಸಲು ನಿಮಗೆ ಅವಕಾ ನೀಡುತ್ತದೆ.

LostNetNoRoot Firewall

LostNetNoRoot Firewall

ಇಂಟರ್ನೆಟ್ ಸಂಪರ್ಕವನ್ನು ನಿಲ್ಲಿಸಲು ಈ ಅಪ್ಲಿಕೇಶನ್ ಪರಿಣಾಮಕಾರಿಯಾಗಿರುತ್ತದೆ. ಇದು ಪ್ರದೇಶದ ಆಧಾರದ ಮೇಲೆ ಎಲ್ಲಾ ಅಪ್ಲಿಕೇಶನ್ಗಳಿಗೆ ಇಂಟರ್ನೆಟ್ ಪ್ರವೇಶವನ್ನು ನಿಯಂತ್ರಿಸಲು ಅನುಮತಿಸುತ್ತದೆ. ಮತ್ತು ನಿಮ್ಮ ಮೊಬೈಲ್ ಅಪ್ಲಿಕೇಶನ್ ಗಳ ಎಲ್ಲಾ ಹಿನ್ನೆಲೆ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. ನಿರ್ಬಂಧ ಜಾಹೀರಾತುಗಳ ನೆಟ್ ವರ್ಕ್ ನಿಂದ ರಕ್ಷಿಸಲ್ಪಟ್ಟ ಇಂಟರ್ನೆಟ್ ಡೇಟಾವನ್ನು ನಿಯಂತ್ರಿಸುತ್ತದೆ ಮತ್ತು ನೆಟ್ ವರ್ಕ್ ಗಳಿಗೆ ಸಂಚಾರವನ್ನು ತೆಗೆದುಹಾಕುತ್ತದೆ.

Best Mobiles in India

English summary
With the inception of Reliance Jio 4G and other cheap Internet packs, we access Internet almost every day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+