ಟಾಪ್ 5 ಟೆಕ್ಸಟಿಂಗ್ ಆಪ್ ಗಳು ಇಲ್ಲಿದೆ
ಇಂದು ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಗಳು ಇದ್ದರು ಸಹ ಕೆಲವರು ಸಿಮ್ ಮೆಸೇಜ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತವರಿಗೆ ಸಹಾಯ ಮಾಡುವ ಆಪ್ ಗಳು ಇವಾಗಿವೆ.
ಇಂದಿನ ದಿನದಲ್ಲಿ ಸಂವಹನ ನಡೆಸಲು ಟೆಕ್ಸಟ್ ಮಾಡುವುದು ಅತ್ಯಂತ ಜನಪ್ರಿಯವಾಗಿದೆ. ಈ ಹಿನ್ನಲೆಯಲ್ಲಿ ಆಪ್ ಸ್ಟೋರ್ ಗಳಲ್ಲಿ ನೂರಾರು ಮೇಸೆಂಜಿಗ್ ಆಪ್ ಗಳು ಲಭ್ಯವಿದ್ದು, ಅವುಗಳಲ್ಲಿ ಬೆಸ್ಟ್ ಆಂಡ್ರಾಯ್ಡ್ ಟೆಕ್ಸಟಿಂಗ್ ಆಪ್ ಗಳು ಎಂದುದನ್ನು ತಿಳಿಸಿಕೊಡಲಿದ್ದೇವೆ.

ಇಂದು ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಗಳು ಇದ್ದರು ಸಹ ಕೆಲವರು ಸಿಮ್ ಮೆಸೇಜ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತವರಿಗೆ ಸಹಾಯ ಮಾಡುವ ಆಪ್ ಗಳು ಇವಾಗಿವೆ.

ಬೆಸ್ಟ್ ಥಿಮ್ಸ್: ಗೋ SMS ಫ್ರೋ
ಇದು ಟೆಕ್ಸಟಿಂಗ್ ಮಾಡಲು ಅತ್ಯಂತ ಜನಪ್ರಿಯ ಆಪ್ ಆಗಿದೆ. ಅಲ್ಲದೇ ಇದರಲ್ಲಿ ಉತ್ತಮ ಥಿಮ್ಸ್ ಮತ್ತು ಸ್ಟಿಕರ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ಇದರಲ್ಲಿ ನಿಧಾನಕ್ಕೆ ಮೆಸೇಜ್ ಕಳುಹಿಸುವ ಮತ್ತು ಕಳುಹಿಸಿದನ್ನು ಡಿಲೀಟ್ ಮಾಡುವ ಅವಕಾಶವು ಇದೆ.

ಹ್ಯಾಂಡ್ ಸೆಂಟ್ ನೆಕ್ಸಟ್ SMS :
ಇಂದೊಂದು ಉತ್ತಮ ಟೆಕ್ಸಟಿಂಗ್ ಆಪ್ ಆಗಿದ್ದು, ಬಳಕೆದಾರರಿಗೆ ಉತ್ತಮ ಅನುಭವನ್ನು ನೀಡಲಿದೆ. ಇದರಲ್ಲಿ ಹುಟ್ಟುಹಬ್ಬದ ಸಂದೇಶ, ಫೆಸ್ಟಿವಲ್ ವಿಷಸ್ ಸೇರಿದಂತೆ ಹಲವು ಇನ್ಸಟೆಂಟ್ ಟೆಕ್ಸಟ್ ಗಳು ಲಭ್ಯವಿದೆ. ಇದರಲ್ಲಿಯೂ ಉತ್ತಮ ಥಿಮ್ ಗಳಿದೆ.

ಮೈ SMS:
ಇದು ಉತ್ತಮ ಬಳಕೆಯ ಇಂಟರ್ ಫೇಸ್ ಹೊಂದಿದೆ ಎನ್ನಲಾಗಿದೆ. ಇದನ್ನು ಕಂಪ್ಯೂಟರ್, ಟ್ಯಾಬ್ಲೆಟ್ ನಲ್ಲಿಯೂ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ ಗ್ರೂಪ್ ಮೆಸೇಜ್ ಮಾಡುವ ಅವಕಾಶವನ್ನು ನೀಡಲಾಗಿದೆ. ಗೂಗಲ್ ಡೈವ್ ಅನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಬಹುದು.

ಸಿಗ್ನಲ್ ಪ್ರೈವೆಟ್ ಮೆಸೆಂಜರ್:
ಇದೊಂದು ಪ್ರೈವೆಟ್ ಟೆಕ್ಸಟಿಂಗ್ ಆಪ್ ಆಗಿದೆ. ಇದರಲ್ಲಿ ಕಳುಹಿಸು ಮೆಸೇಜ್ ಗಳು ಎನ್ಸಕ್ರಿಪ್ಟ್ ಆಗಿರಲಿದೆ. ಇದರಲ್ಲಿ ಸಾಮಾನ್ಯ ಎಸ್ ಎಂಎಸ್ ಸೇರಿದಂತೆ ಸೋಶಿಯಲ್ ಮೆಸೆಂಜರ್ ಮಾದರಿಯಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಚಾಂಪ್ ಎಸ್ ಎಂಎಸ್:
ಇದರಲ್ಲಿ ಪಾಸ್ ವರ್ಡ್ ಲಾಕ್ ಸೇರಿದಂತೆ ಹಲವಾರು ಆಯ್ಕೆಗಳು ಇದೆ. ಇದರಲ್ಲಿ ಮೆಸೇಜ್ ಲಾಕ್ ಸಹ ಇದೆ. ಎಮೋಜಿಗಳನ್ನು ಬಳಕೆ ಮಾಡುವ ಅವಕಾಶವು ಇದೆ. ನೋಡಲು ಸೋಶಿಯಲ್ ಮೇಸೆಂಜಿಗ್ ಆಪ್ ಮಾದರಿಯಲ್ಲಿಯೇ ಇದೆ.


Click it and Unblock the Notifications








