ವಾಟ್ಸ್ಆಪ್ ಮುಂದೆ ಮಂಕಾಗಿರುವ ಬೆಸ್ಟ್ 5 ಮೆಸೇಜಿಂಗ್ ಆಪ್‌ಗಳು!
ವಿಶ್ವದಾದ್ಯಂತ ಬಳಕೆದಾರರ ನಡುವೆ ಸಂದೇಶಗಳ ವಿನಿಮಯ ಮಾಡುವ ತಂತ್ರಾಂಶಗಳಲ್ಲಿ ವಾಟ್ಸ್ಆಪ್ ಅತ್ಯಂತ ಜನಪ್ರಿಯ ತಂತ್ರಾಂಶ ಎನ್ನಬಹುದು. ಅದರಲ್ಲೂ ಭಾರತದಲ್ಲಿ ವಾಟ್ಸ್ಆಪ್ ಬಳಕೆ ಹೆಚ್ಚಾಗಿರುವುದನ್ನು ನಾವು ನೋಡಬಹುದು. ಆದರೆ, ನಿಮಗೆ ಗೊತ್ತಾ?, ವಾಟ್ಸ್ಆಪ್‌ಗಿಂತಲೂ ಹೆಚ್ಚು ಸೇವೆಗಳನ್ನು ನೀಡುತ್ತಿರುವ ಇನ್ನಿತರ ಮೆಸೇಜಿಂಗ್ ಆಪ್‌ಗಳು ಸಹ ಲಭ್ಯವಿವೆ.

ಹೌದು, ಆಡಿಯೋ ಮತ್ತು ವೀಡಿಯೊ ಫೈಲ್ಗಳನ್ನು, ವರದಿ ವಿನಿಮಯ ಗುಂಪು ಸಂವಹನ, ಇತ್ಯಾದಿ ಸೇವೆಗಳನ್ನು ನೀಡುತ್ತಿರುವ ಇತರೆ ಮೆಸೆಂಜರ್ ಆಪ್‌ಗಳು ಸಹ ನಮಗೆ ಲಭ್ಯವಿವೆ. ಈ ಆಪ್‌ಗಳು ವಾಟ್ಸ್ಆಪ್‌ಗಿಂತಲೂ ಹೆಚ್ಚು ಸೇವೆ ನೀಡುತ್ತಿದ್ದರೂ ಸಹ, ವಾಟ್ಸ್ಆಪ್ ಜನಪ್ರಿಯತೆ ಮುಂದೆ ಈ ಮೆಸೇಜಿಂಗ್ ಆಪ್‌ಗಳು ಬಹುತೇಕರಿಗೆ ಪರಿಚಯವಿಲ್ಲ ಎಂದು ಹೇಳಬಹುದು.
ಹಾಗಾಗಿ, ಇಂದಿನ ಲೇಖನದಲ್ಲಿ ಜನಪ್ರಿಯ ವಾಟ್ಸ್ಆಪ್‌ಗೆ ಪರ್ಯಾಯವಾಗಿ ಲಭ್ಯವಿರುವ ಇನ್ನಿತರ ಜನಪ್ರಿಯ ಮೆಸೇಜಿಂಗ್ ಆಪ್‌ಗಳ ಪರಿಚಯವನ್ನು ನಾವು ಮಾಡಿಕೊಡುತ್ತಿದ್ದೇವೆ. ವಾಟ್ಸ್ಆಪ್‌ನಿಂದ ಹೊರಬರುವ ಚಿಂತನೆ ನಡೆಸುತ್ತಿರುವವರಿಗಾಗಿ ಈ ಐದು ಆಪ್‌ಗಳು ಬೆಸ್ಟ್. ಏಕೆಂದರೆ, ಎಲ್ಲರಿಗೂ ಒಂದೇ ರೀತಿಯ ಸೇವೆ ರುಚಿಸುವುದಿಲ್ಲ ಎಂಬುದು ಸಾಮಾನ್ಯ ಸಂಗತಿ.

ಟೆಲಿಗ್ರಾಂ
ವಾಟ್ಸ್‌ಆಪ್‌ನಲ್ಲಿರುವ ಬಹುತೇಕ ಸವಲತ್ತುಗಳನ್ನು ಹೊಂದಿರುವ ಈ ಟೆಲಿಗ್ರಾಂ ಆಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್‌ಗಳಲ್ಲಿ ಒಂದಾಗಿದೆ. ಈ ಮೆಸೆಂಜಿಂಗ್ ಆಪ್‌ನಲ್ಲಿ ಪಾಸ್ ಕೋಡ್ ಲಾಕ್ ತನ್ನಿಂದ ತಾನೇ ಡಿಲೀಟ್ ಆಗುವ ಸೇವೆಯಯನ್ನು ಒದಗಿಸುತ್ತೆ. ಇದರಿಂದಾಗಿ ಈ ಆ್ಪ್ ಸುರಕ್ಷಿತವಾಗಿದೆ ಎಂಬುದು ಹೆಚ್ಚು ಮೆಸೆಂಜಿಂಗ್ ಬಳಕೆದಾರರ ಅಭಿಪ್ರಾಯ.

ವಯರ್
ಉದ್ಯೋಗ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿರುವ ಸ್ಕೈಪ್ ಸಾಫ್ಟ್ವೇರ್ ಬಗ್ಗೆ ನಿಮಗೆ ತಿಳಿದಿರಬಹುದು. ಅದರ ಸ್ಥಾಪಕ ಸದಸ್ಯ ಜಾನಸ್ ಅವರು ಅಭಿವೃದ್ಧಿ ಪಡಿಸಿದ ಮೆಸೇಜಿಂಗ್ ಆಪ್ ಈ 'ವಯರ್'. ಸರಳವಾದ ಸ್ಕ್ರೀನ್, ಇಂಟರ್‌ಫೇಸ್ ಇದರ ಹೆಗ್ಗಳಿಕೆ. ಸಂದೇಶ ಕಳಿಸಿದ ಬಳಿಕ ನಿರ್ದಿಷ್ಟ ಅವಧಿಯ ನಂತರ ಸಂದೇಶ ಡಿಲೀಟ್ ಆಗುವಂತೆ ಮಾಡುವ ಸವಲತ್ತು ಇದರಲ್ಲಿದೆ.

ಸಿಗ್ನಲ್
ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಹ್ಯಾಕ್ ಆಗದಂತೆ ಜವಾಬ್ದಾರಿ ಹೊತ್ತಿರುವ ಸಂಸ್ಥೆ "ಓಪನ್ ಸೋರ್ಸ್ ಸಿಸ್ಟಮ್ಸ್'' ತನ್ನದೇ ಸ್ವಂತ ಮೆಸೇಜಿಂಗ್ ಆನ್ನು ಹೊಂದಿರುವುದು ಬಹುತೇಕರಿಗೆ ತಿಳಿದಿಲ್ಲ. ಸ್ಕ್ರೀನ್‌ಶಾಟ್ ತೆಗೆಯಲಾಗದಂತೆ ಮಾಡುವ ಆಯ್ಕೆ. ಕಾಲ್, ಸಂದೇಶ, ಬ್ಯಾಕ್‌ಅಪ್ ಇವೆಲ್ಲಾ ಚಟುವಟಿಕೆಗಳಿಗೂ ಸುರಕ್ಷತೆ ಒದಗಿಸಲಾಗಿರುವ ಮೆಸೇಂಜಿಗ್ ಆಪ್ ಇದಾಗಿದೆ.

ವಿಕರ್ ಮಿ ( Wickr me)
ಬಳಕೆದಾರರ ಮೊಬೈಲಿನಲ್ಲಿರುವ ಕಾಂಟ್ಯಾಕ್ಟ್ ಅನ್ನು ತನ್ನ ಸರ್ವರ್‌ನಲ್ಲಿ ಸಂಗ್ರಹಿಸಿಡದ ಮೆಸೇಂಜಿಗ್ ಆಪ್ ಇದಾಗದೆ. ಸುರಕ್ಷತೆ ಮತ್ತು ಖಾಸಗಿತನವನ್ನು ಬಯಸುವವರ ಅಚ್ಚುಮೆಚ್ಚಿನ ಆಪ್ ಇದು ಎನ್ನಬಹುದು. ಆದರೆ, ಸವಲತ್ತುಗಳು ಕಡಿಮೆ.ಈ ಮೆಸೇಜಿಂಗ್ ಆಪ್‌ನ್ನು ಬಳಸುತ್ತಿರುವವರಲ್ಲಿ ಪತ್ರಕರ್ತರು, ಜಾಗತಿಕ ನಾಯಕರು, ಉದ್ಯಮಿಗಳು ಮತ್ತು ಸೆಲಬ್ರಿಟಿಗಳೂ ಹೆಚ್ಚು.

ಲೈನ್
ಸರ್ವರ್‌ನಿಂದಲೇ ಬಳಕೆದಾರರು ತಮ್ಮ ಸಂದೇಶಗಳನ್ನು ಅಳಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿರುವ ಈ ಮೆಸೇಂಜಿಂಗ್ ಆಪ್ ಅನ್ನು ಜಪಾನೀಸ್ ತಂತ್ರಜ್ಞರು ಅಬಿವೃದ್ದಿ ಪಡಿಸಿದ್ದಾರೆ. ಕಾನ್ಫರೆನ್ಸ್ ಕಾಲ್, ಸಾವಿರಾರು ಸ್ಟಿಕ್ಕರ್‌ಗಳು, ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಈ ಆಪ್ ನೀಡಿದೆ. ಅಲ್ಲದೆ ಬಳಕೆದಾರರ ಸಂದೇಶಗಳು ಲೈನ್‌ನ ಸರ್ವರ್‌ಗಳಲ್ಲಿ ಸಂಗ್ರಹಗೊಳ್ಳುತ್ತವೆ.


Click it and Unblock the Notifications








