'ಫೇಸ್ಆಪ್' ಬಳಸದಿರಲು ಟಾಪ್ 5 ಶಾಕಿಂಗ್ ಕಾರಣಗಳು!

|

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಪ್ರಸ್ತುತ ಜನರು ವಯಸ್ಸಾದಾಗ ಹೇಗೆ ಕಾಣುತ್ತಾರೆ ಎಂಬುದರ ಬಗ್ಗೆ ನೋಟವನ್ನು ಕೊಡುವ 'ಫೇಸ್‌ಆಪ್' ಬಗ್ಗೆ ನಿಮಗೆಲ್ಲಾ ತಿಳಿದಿದೆ ಎಂದು ಹೇಳಬಹುದು. ಜನಸಾಮಾನ್ಯರಿಂದ ಸೆಲೆಬ್ರಿಟಿಗಳ ತನಕ ಅತ್ಯಂತ ಜನಪ್ರಿಯತೆ ಗಳಿಸಿರುವ 'ಫೇಸ್ ಆಪ್' (FaceApp) ಅನ್ನು ಲಕ್ಷಾಂತರ ಜನರು ಬಳಸುತ್ತಿದ್ದಾರೆ. ಆದರೆ,ನೀವು ಈ ಕ್ಷಣದಿಂದಲೇ ಫೇಸ್‌ಆಪ್ (FaceApp) ಬಳಸುವುದನ್ನು ನಿಲ್ಲಿಸಲು ನೀವೇ ಅರಿಯದ ಕೆಲವು ಅತಿದೊಡ್ಡ ಕಾರಣಗಳಿವೆ.

'ಫೇಸ್ಆಪ್' ಬಳಸದಿರಲು ಟಾಪ್ 5 ಶಾಕಿಂಗ್ ಕಾರಣಗಳು!

ಹೌದು, ಫೇಸ್‌ಆಪ್ ಅಪ್ಲಿಕೇಷನ್ ಬಳಸಿ ಭಾವಚಿತ್ರವೊಂದರಲ್ಲಿ ಕಾಣುವ ಮುಖವನ್ನು ವೃದ್ಧಾಪ್ಯದಲ್ಲಿ ಹೇಗೆ ಕಾಣಿಸಬಹುದು, ಬಾಲ್ಯಾವಸ್ಥೆಯಲ್ಲಿ, ಗಡ್ಡಧಾರಿಯಾಗಿ, ಹಸನ್ಮುಖಿಯಾಗಿ, ಲಿಂಗ ಬದಲಾವಣೆ ಮಾಡಿ, ಕೂದಲಿನ ಬಣ್ಣ ಬದಲಾಯಿ, ಹೊಸ ಕೇಶ ರಾಶಿಯಲ್ಲಿ, ಹಿನ್ನಲೆ ಫೋಟೋ ಬದಲಾಯಿಸಿ, ಫೋಟೊ ಎಡಿಟ್ ಮಾಡಿ ಫಲಿತಾಂಶವನ್ನು ಪಡೆಯಬಹುದು. ಹಾಗೆಯೇ, ನಿಮ್ಮ ಡೇಟಾವನ್ನು ಸಹ ನಿಮಗೆ ತಿಳಿಯದಂತೆ ತಿರುಚಬಹುದು ಕೂಡ.!

ಹಾಗಾಗಿ, ಫೆಸ್‌ಆಪ್ ಬಳಕೆದಾರರಿಗೆ ಸೈಬರ್ ಲೋಕದ ತಜ್ಞರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದಕ್ಕಾಗಿ ಪ್ರಮುಖ ಐದು ಕಾರಣಗಳನ್ನು ಸಹ ತಜ್ಞರು ಪಟ್ಟಿ ಮಾಡಿದ್ದಾರೆ. ಈಗಾಗಲೇ ಅಮೆರಿಕ ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಂಡಿದೆ. ಇತ್ತೀಚೆಗೆ ಡೆಮಾಕ್ರಟಿಕ್ ಪಕ್ಷದ ಮುಖಂಡರು ಅದನ್ನು ತಕ್ಷಣ ತಮ್ಮ ಮೊಬೈಲ್‌ನಿಂದ ತೆಗೆದುಹಾಕಿ FBI ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಹಾಗಾದರೆ, ಫೇಸ್ಆಪ್ ಬಳಸದಿರಲು ಟಾಪ್ ಐದು ಕಾರಣಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಫೋಟೋಗಳನ್ನು ಮತ್ತೆ ಮತ್ತೆ ಬಳಸಬಹುದು

ಫೋಟೋಗಳನ್ನು ಮತ್ತೆ ಮತ್ತೆ ಬಳಸಬಹುದು

ಫೇಸ್‌ಆಪ್‌ನ ಪ್ರಮುಖ ಭದ್ರತಾ ಕಾಳಜಿ ಎಂದರೆ ಈ ಅಪ್ಲಿಕೇಶನ್ ರಷ್ಯಾದಲ್ಲಿ ಅಭಿವೃದ್ಧಿಗೊಂಡಿರುವುದು ಎನ್ನುತ್ತಾರೆ ತಜ್ಞರು. ಈ ಅಪ್ಲಿಕೇಶನ್‌ನ ಬಳಕೆದಾರ ಎಲ್ಲ ವಿಷಯ ಒಪ್ಪಂದಕ್ಕಾಗಿ ನೀವು ಇದನ್ನು ಮೊದಲ ಬಾರಿಗೆ ಚಲಿಸುವಾಗ ಅದರ ಒಪ್ಪಂದಕ್ಕೆ 'ಸರಿ' ಎಂದು ಒಪ್ಪುತೀರ. ಅಂದ್ರೆ ಫೇಸ್‌ಅಪ್‌ನ ಫಿಲ್ಟರ್‌ಗಳನ್ನು ಬಳಸುವ ಮೊದಲು ಒಪ್ಪಂದದ ನಿಯಮಗಳ ಪ್ರಕಾರ ಅಪ್ಲಿಕೇಶನ್‌ನ ಡೆವಲಪರ್‌ಗಳು ಸೆರೆಹಿಡಿದ ಮತ್ತು ಅಪ್ಲಿಕೇಶನ್‌ಗೆ ಅಪ್ಲೋಡ್ ಮಾಡಿದ ಯಾವುದೇ ಚಿತ್ರವನ್ನು ಇರಿಸಿಕೊಳ್ಳಬಹುದು ಅಥವಾ ಮತ್ತೆ ಅವನ್ನು ಬಳಸಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ.

ಕ್ಯಾಮೆರಾಕ್ಕೆ ಸಂಬಧಿಸಿದ ಎಲ್ಲವನ್ನೂ ನೋಡುತ್ತದೆ

ಕ್ಯಾಮೆರಾಕ್ಕೆ ಸಂಬಧಿಸಿದ ಎಲ್ಲವನ್ನೂ ನೋಡುತ್ತದೆ

ಇದು ಸಾಬೀತಾಗಿಲ್ಲವಾದರೂ ನಿಮ್ಮ ಗ್ಯಾಲರಿಯಲ್ಲಿ ಉಳಿಸಲಾದ ಆಗಿರುವ ಪ್ರತಿಯೊಂದು ಫೋಟೋವನ್ನೂ ಈ ಫೇಸ್‌ಆಪ್ ನೋಡುವ ಸಾಧ್ಯತೆಯಿದೆ. ನೀವು ಅಪ್ಲೋಡ್ ಮಾಡುವ ಚಿತ್ರಗಳನ್ನು ಅಪ್ಲಿಕೇಶನ್‌ ಸರ್ವರ್‌ಗಳಲ್ಲಿ ಸಂಗ್ರಹಿಸಲು ಗ್ಯಾಲರಿಯನ್ನು ಪ್ರವೇಶಿಸಲು ಅನುಮತಿ ನೀಡಿದಾಗ ನಿಮ್ಮ ಕ್ಯಾಮೆರಾಕ್ಕೆ ಚಿತ್ರಗಳಿಗೆ ಪ್ರವೇಶ ನೀಡಬವುದು. ನಿಮ್ಮ ಗ್ಯಾಲರಿಯಲ್ಲಿರುವ ಫೋಟೊ ಆಯ್ಕೆ ಮಾಡುವಾಗ ಅಂದ್ರೆ ಇಲ್ಲಿಂದ ಅಪ್ಲಿಕೇಶನ್ ಬೇರೆ ಫೋಟೋ ಅಥವಾ ವಿಡಿಯೋಗಳನ್ನು ಈ ಮೂಲಕ ಸುಲಭವಾಗಿ ನೋಡುತ್ತದೆ.

ಫೋಟೋಗಳನ್ನು ತನ್ನಿಷ್ಟದಂತೆ ತೋರಿಸಬಹುದು

ಫೋಟೋಗಳನ್ನು ತನ್ನಿಷ್ಟದಂತೆ ತೋರಿಸಬಹುದು

ನೀವು ಅಪ್ಲೋಡ್ ಮಾಡಿದ ಫೋಟೋಗಳನ್ನು ತನ್ನಲ್ಲಿ ಇರಿಸುವುದು ಮತ್ತು ಬೇರೆ ಮೀಡಿಯಾ ವಲಯದಲ್ಲಿ ಬಳಸುವುದು ಒಂದು ಎಚ್ಚರಿಕೆ ವಿಷಯವಾಗಿದೆ. ಆದರೆ ಇಂಟರ್ನೆಟ್ (ಅಶ್ಲೀಲ ಪ್ರಪಂಚ) ಮತ್ತು ಪ್ರಪಂಚದಾದ್ಯಂತ ನಿಮ್ಮ ಚಿತ್ರಗಳನ್ನು ಮತ್ತು ನಿಮ್ಮ ಹೆಸರನ್ನು ತೋರಿ ಅಥವಾ ನಿಮ್ಮ ಫೋಟೋ ಅಥವಾ ವಿಡಿಯೋ ಬಳಕೆದಾರ ಹೆಸರು ಅಥವಾ ಹೋಲಿಕೆಯನ್ನು ಎಲ್ಲಾ ಮಾಧ್ಯಮ ಸ್ವರೂಪಗಳು ಮತ್ತು ಚಾನಲ್‌ಗಳಲ್ಲಿ ಈಗ ನಿಮಗೆ ತಿಳಿಯದ ಅಥವಾ ನಂತರ ಅಭಿವೃದ್ಧಿಪಡಿಸಲಾದ ಸೈಟ್ಗಳಲ್ಲಿ ಬಳಸಬವುದು.

ಈ ಅಪ್ಲಿಕೇಶನ್ ಮಾಹಿತಿಯನ್ನು ಹಂಚಿಕೊಳ್ಳುತ್ತದೆ

ಈ ಅಪ್ಲಿಕೇಶನ್ ಮಾಹಿತಿಯನ್ನು ಹಂಚಿಕೊಳ್ಳುತ್ತದೆ

ನಿಮ್ಮ ಒಪ್ಪಿಗೆಯನ್ನು ಕೋರದೆ ಫೇಸ್‌ಬುಕ್‌ಗೆ ಮಾಹಿತಿಯನ್ನು ಕಳುಹಿಸಲು ಕಂಡುಬಂದ ಆ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಫೇಸ್‌ಆಪ್ ಅನ್ನು ಕೂಡ ಸೇರಿಸಲಾಗಿದೆ. ಫೇಸ್‌ಬುಕ್‌ನ ಇತ್ತೀಚಿನ ಗೌಪ್ಯತೆ ಹಗರಣಗಳು ಮತ್ತು ಡೇಟಾ ಉಲ್ಲಂಘನೆಗಳ ಮೂಲಕ ನಿರ್ಣಯಿಸುವುದು ನಿಮ್ಮ ಫೋನ್‌ನ ಮಾಹಿತಿಯನ್ನು ಫೇಸ್‌ಬುಕ್‌ ಸೇರಿದಂತೆ ಇತರೆ ತಾಣಗಳಿಗೆಗೆ ಕಳುಹಿಸಲು ಫೇಸ್‌ಆಪ್ ಅನ್ನು ನೀವು ಅನುಮತಿಸುತ್ತೀರಾ?. ಈ ಬಗ್ಗೆ ನೀವೇ ಯೋಚಿಸಿ ನೋಡಬೇಕಿದೆ.

ಸರ್ವರ್‌ಗಳಲ್ಲಿ ಫೋಟೋವನ್ನು ಸೇರಿಸಲಾಗುತ್ತದೆ

ಸರ್ವರ್‌ಗಳಲ್ಲಿ ಫೋಟೋವನ್ನು ಸೇರಿಸಲಾಗುತ್ತದೆ

ಫೇಸ್‌ಆಪ್‌ಗೆ ಸಂಬಂಧಿಸಿದ ಕಾಳಜಿಗಳಲ್ಲೇ ಬಹುಶಃ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ಅದು ನಿಮ್ಮ ಗ್ಯಾಲರಿಯಿಂದ ಸೆರೆಹಿಡಿಯಲಾದ ಅಥವಾ ಅಪ್‌ಲೋಡ್ ಮಾಡಿದ ಫೋಟೋಗಳನ್ನು ನಿಮ್ಮಿಂದ ಸಾವಿರಾರು ಮೈಲುಗಳ ದೂರದಲ್ಲಿರುವ ಇವರ ಸರ್ವರ್‌ಗೆ ಈ ಫೇಸ್‌ಆಪ್ ಕಳುಹಿಸುತ್ತದೆ. ನೀವು ಅಪ್ಲೋಡ್ ನಂತರ ನಿಮ್ಮ ಸುಕ್ಕುಗಟ್ಟಿದ ಮುಖದೊಂದಿಗೆ ನಿಮ್ಮ ಅಸಲಿ ಮುಖ ಮತ್ತು ಕೂದಲಿನ ಆವೃತ್ತಿಯನ್ನು ತನ್ನಲಿ ಈ ಡೇಟಾವನ್ನಾಗಿಸಿ ಪ್ರಕ್ರಿಯೆಗೊಳಿಸುತ್ತದೆ. ಇದನ್ನು ಆ ಕಂಪೆನಿ ಹೇಗಾದರೂ ಬಳಸಿಕೊಳ್ಳಬಹುದಾಗಿದೆ.

Best Mobiles in India

Read more about:
English summary
If You Installed FaceApp, You Should Be Aware Of Its Privacy Policy. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X