ವಾಟ್ಸ್ ಆಪ್ ನಲ್ಲಿ ಮತ್ತೇಳು ಹೊಸ ಫೀಚರ್ ಗಳು

|

ಕಳೆದ ಕೆಲವು ವರ್ಷಗಳಲ್ಲಿ ನಾವು ಸಂವಹನ ನಡೆಸುವ ರೀತಿಯನ್ನೇ ಬದಲಾಯಿಸಿ ಬಿಟ್ಟಿದೆ ವಾಟ್ಸ್ ಆಪ್. ಆರಂಭಿಕವಾಗಿ ಕೇವಲ ಒಬ್ಬರಿಂದ ಒಬ್ಬರಿಂದ ಮೆಸೇಜ್ ಕಳಿಸಿಕೊಳ್ಳುವುದಕ್ಕೆ ಸೀಮಿತವಾಗಿದ್ದ ವಾಟ್ಸ್ ಆಪ್ ನಲ್ಲಿ ದಿನಗಳು ಉರುಳಿದಂತೆ ಹೊಸ ಹೊಸ ಫೀಚರ್ ಗಳು ಸೇರಿಕೊಂಡು ಪ್ರಸಿದ್ಧ ಕಮ್ಯುನಿಕೇಷನ್ ಆಪ್ ಆಗಿ ವಾಟ್ಸ್ ಆಪ್ ಇದೀಗ ಬೆಳೆದು ನಿಂತಿದೆ.

ವಾಟ್ಸ್ ಆಪ್ ನಲ್ಲಿ ಮತ್ತೇಳು ಹೊಸ ಫೀಚರ್ ಗಳು

ಖಂಡಿತ ಇದರ ಎಲ್ಲಾ ಕ್ರೆಡಿಟ್ ಗಳು ಸೇರಬೇಕಾಗಿರುವು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಆಗಾಗ ಸೇರಿದ ಬಳಕೆದಾರ ಫೀಚರ್ ಗಳಿಗೆ. ವಾಟ್ಸ್ ಆಪ್ ನ ಬಗ್ಗೆ ಮಾಹಿತಿಗಳನ್ನು ಕಲೆಹಾಕುವ ವಾಬೇಟಾ ಇನ್ಫೋ ನೀಡುತ್ತಿರುವ ಮಾಹಿತಿಯ ಪ್ರಕಾರ ಕಳೆದ ಕೆಲವು ವಾರಗಳಿಂದ ವಾಟ್ಸ್ ಆಪ್ ನ ಬೇಟಾ ವರ್ಷನ್ ನಲ್ಲಿ ಕೆಲವು ಹೊಸ ಫೀಚರ್ ಗಳು ಸೇರಿಕೊಂಡಿವೆ ಮತ್ತು ಸದ್ಯದಲ್ಲೇ ಅದು ಎಲ್ಲರಿಗೂ ವಾಟ್ಸ್ ಆಪ್ ನಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ಆ ಫೀಚರ್ ಗಳು ಯಾವುದು ಎಂಬ ಪಟ್ಟಿ ಇಲ್ಲಿದೆ ನೋಡಿ.

ಡಾರ್ಕ್ ಮೋಡ್ (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ)

ಡಾರ್ಕ್ ಮೋಡ್ (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ)

ಕಳೆದ ಕೆಲವು ದಿನಗಳಿಂದ ವಾಟ್ಸ್ ಆಪ್ ನಲ್ಲಿ ಡಾರ್ಕ್ ಮೋಡ್ ವೈಶಿಷ್ಟ್ಯತೆಯು ಕೆಲಸ ಮಾಡುತ್ತಿದೆ. ಇದು ವಾಟ್ಸ್ ಆಪ್ ಚಾಟ್ ನ ಬ್ಯಾಕ್ ಗ್ರೌಂಡ್ ನ್ನು ಡಾರ್ಕ್ ಮಾಡುತ್ತದೆ. ಯುಟ್ಯೂಬ್, ಟ್ವೀಟರ್, ಗೂಗಲ್ ಮ್ಯಾಪ್ ಮತ್ತು ಇತರೆ ಪ್ರಸಿದ್ಧ ಆಪ್ ಗಳಲ್ಲಿ ಕಾಣುವ ಸೇಮ್ ಡಾರ್ಕ್ ಮೋಡ್ ಫೀಚರ್ ಇನ್ನು ಮುಂದೆ ವಾಟ್ಸ್ ಆಪ್ ನಲ್ಲೂ ಇರಲಿದೆ.ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ವರ್ಷನ್ ನಲ್ಲೂ ಕೂಡ ಈ ಫೀಚರ್ ಬರಲಿದೆ.

ಕ್ಯೂಆರ್ ಮೂಲಕ ಕಾಂಟ್ಯಾಕ್ಟ್ ಮಾಹಿತಿ ಹಂಚಿಕೊಳ್ಳುವಿಕೆ(ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ)

ಕ್ಯೂಆರ್ ಮೂಲಕ ಕಾಂಟ್ಯಾಕ್ಟ್ ಮಾಹಿತಿ ಹಂಚಿಕೊಳ್ಳುವಿಕೆ(ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ)

ಇದು ವಾಟ್ಸ್ ಆಪ್ ನಲ್ಲಿ ಬಳಕೆದಾರರಿಗೆ ತಮ್ಮ ಕಾಂಟ್ಯಾಕ್ಟ್ ಮಾಹಿತಿಯನ್ನು ಸುಲಭದಲ್ಲಿ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಇದು ಬಳಕೆದಾರರಿಗೆ ಕ್ಯೂಆರ್ ಕೋಡ್ ಜನರೇಟ್ ಮಾಡುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಅದರಲ್ಲಿ ಕಾಂಟ್ಯಾಕ್ಟ್ ಮಾಹಿತಿಗಳು ಒಳಗೊಂಡಿರುತ್ತದೆ. ಒಮ್ಮೆ ಈ ಕ್ಯೂಆರ್ ಕೋಡ್ ನ್ನು ಹಂಚಿಕೊಂಡರೆ ವಾಟ್ಸ್ ಆಪ್ ಸ್ವಯಂಚಾಲಿತವಾಗಿ ಎಲ್ಲಾ ಫೀಲ್ಡ್ ಗಳನ್ನು ತುಂಬುತ್ತದೆ ಮತ್ತು ಬಳಕೆದಾರರ ಅಡ್ರೆಸ್ ಬುಕ್ ನಲ್ಲಿ ಸೇರಿಕೊಳ್ಳುತ್ತದೆ. ಇನ್ಸ್ಟಾಗ್ರಾಂ ನಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ನೇಮ್ ಟ್ಯಾಗ್ ಫೀಚರ್ ನಂತೆಯೇ ಇದು ಕೆಲಸ ಮಾಡುತ್ತದೆ.

ಗ್ರೂಪ್ ಕಾಲಿಂಗ್ ಶಾರ್ಟ್ ಕಟ್ (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯ)

ಗ್ರೂಪ್ ಕಾಲಿಂಗ್ ಶಾರ್ಟ್ ಕಟ್ (ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯ)

ಇದು ಈಗಾಗಲೇ ಐಓಎಸ್ ಬಳಕೆದಾರರಿಗೆ ಬಿಡುಗಡೆಯಾಗಿದ್ದು ಆಂಡ್ರಾಯ್ಡ್ ಬೇಟಾ ವರ್ಷನ್ ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದೆ. ಇದು ಗ್ರೂಪ್ ಚಾಟ್ ನ ಮೇಲ್ಬಾಗದ ಬಲಗಡೆ ಹೊಸ ಐಕಾನ್ ವೊಂದನ್ನು ನೀಡುತ್ತದೆ.ಆ ಐಕಾನ್ ನ್ನು ಟ್ಯಾಪ್ ಮಾಡಿದಾಗ ನಿಮ್ಮ ಕಾಂಟ್ಯಾಕ್ಟ್ ನಲ್ಲಿ ಸೇವ್ ಆಗಿರುವ ಗ್ರೂಪಿನಲ್ಲಿರುವ ಎಲ್ಲಾ ಸದಸ್ಯರ ಪಟ್ಟಿ ನಿಮಗೆ ಸಿಗುತ್ತದೆ. ನೀವು ಗರಿಷ್ಟ ಮೂರು ಸದಸ್ಯರನ್ನು ಆಯ್ಕೆ ಮಾಡಿ ಕಾನ್ಫರೆನ್ಸ್ ಕಾಲ್ ಮಾಡಬಹುದು.

ಮಲ್ಟಿ-ಶೇರ್ ಫೈಲ್ಸ್ (ಆಂಡ್ರಾಯ್ಡ್ ನಲ್ಲಿ ಲಭ್ಯ)

ಮಲ್ಟಿ-ಶೇರ್ ಫೈಲ್ಸ್ (ಆಂಡ್ರಾಯ್ಡ್ ನಲ್ಲಿ ಲಭ್ಯ)

ಈ ಫೀಚರ್ ವಾಟ್ಸ್ ಆಪ್ ಬಳಕೆದಾರರಿಗೆ ಫೈಲ್ ಗಳನ್ನು(ಪಿಡಿಎಫ್,ಆಡಿಯೋ ಫೈಲ್) ಎರಡು ಅಥವಾ ಅದಕ್ಕಿಂತ ಹೆಚ್ಚು ಕಾಂಟ್ಯಾಕ್ಟ್ ಗಳಿಗೆ ಹಂಚಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇದು ಮೆಸೇಜ್ ಕಳುಹಿಸುವುದಕ್ಕಿಂತ ಮುಂಚೆ ಅದರ ಪ್ರಿವ್ಯೂ ನೋಡುವುದಕ್ಕೆ ಅವಕಾಶ ನೀಡುತ್ತದೆ.

ಫುಶ್ ನೋಟಿಫಿಕೇಷನ್ ನಲ್ಲೇ ನೇರವಾಗಿ ವೀಡಿಯೋಗಳನ್ನು ನೋಡಿ(ಐಓಎಸ್ ನಲ್ಲಿ ಲಭ್ಯ)

ಫುಶ್ ನೋಟಿಫಿಕೇಷನ್ ನಲ್ಲೇ ನೇರವಾಗಿ ವೀಡಿಯೋಗಳನ್ನು ನೋಡಿ(ಐಓಎಸ್ ನಲ್ಲಿ ಲಭ್ಯ)

ಐಓಎಸ್ ನಲ್ಲಿ ವಾಟ್ಸ್ ಆಪ್ ಬಳಕೆದಾರರು ವೀಡಿಯೋಗಳನ್ನು ಫುಶ್ ನೋಟಿಫಿಕೇಷನ್ ನಲ್ಲೇ ನೋಡಲು ಅವಕಾಶವಿದ್ದು, ಆಪ್ ನ್ನು ತೆರೆಯುವ ಅಗತ್ಯವಿರುವುದಿಲ್ಲ.

ಕಾಂಟ್ಯಾಕ್ಟ್ ಗೆ ರ್ಯಾಂಕ್ (ಐಓಎಸ್ ನಲ್ಲಿ ಲಭ್ಯ)

ಕಾಂಟ್ಯಾಕ್ಟ್ ಗೆ ರ್ಯಾಂಕ್ (ಐಓಎಸ್ ನಲ್ಲಿ ಲಭ್ಯ)

ಹೆಸರೇ ಸೂಚಿಸುವಂತೆ ಈ ಫೀಚರ್ ನಿಮ್ಮ ಕಾಂಟ್ಯಾಕ್ಟ್ ಗಳಿಗೆ ನೀವು ಅವರ ಜೊತೆಗೆ ವಾಟ್ಸ್ ಆಪ್ ಮೂಲಕ ಸಂವಹನ ನಡೆಸುವ ಆಧಾರದಲ್ಲಿ ರ್ಯಾಂಕ್ ನೀಡುವುದಕ್ಕೆ ಅವಕಾಶ ನೀಡುತ್ತದೆ. ವಾಬೇಟಾಇನ್ಫೋ ಪ್ರಕಾರ ಒಂದು ವೇಳೆ ಟೆಕ್ಸ್ಟ್ ಮೆಸೇಜ್ ಮತ್ತು ಮೀಡಿಯಾ ಫೈಲ್ ಗಳ ಹಂಚಿಕೊಳ್ಳುವಿಕೆ ನಡೆದರೆ ಅದು ಉತ್ತಮ ರ್ಯಾಂಕಿಂಗ್, ನೀವು ಮೆಸೇಜ್ ನ್ನು ಇಗ್ನೋರ್ ಮಾಡಿದಲ್ಲಿ ಅದು ಕೆಟ್ಟ ರ್ಯಾಂಕಿಂಗ್ ಆಗಿರುತ್ತದೆ.

ವಾಟ್ಸ್ ಆಪ್ ಒಳಗೆ ಕಾಂಟ್ಯಾಕ್ಟ್ ಸೇರಿಸುವಿಕೆ (ಐಓಎಸ್ ನಲ್ಲಿ ಲಭ್ಯ)

ವಾಟ್ಸ್ ಆಪ್ ಒಳಗೆ ಕಾಂಟ್ಯಾಕ್ಟ್ ಸೇರಿಸುವಿಕೆ (ಐಓಎಸ್ ನಲ್ಲಿ ಲಭ್ಯ)

ಈ ಫೀಚರ್ ವಾಟ್ಸ್ ಆಪ್ ನ ಒಳಗೆ ಕಾಂಟ್ಯಾಕ್ಟ್ ನ್ನು ಆಡ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಒಮ್ಮೆ ಫೀಚರ್ ಬಿಡುಗಡೆಯಾದರೆ ದೇಶದಾದ್ಯಂತ ಕಾಂಟ್ಯಾಕ್ಟ್ ನ್ನು ವಾಟ್ಸ್ ಆಪ್ ನಲ್ಲಿ ಸೇರಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ ಮತ್ತು ವಾಟ್ಸ್ ಆಪ್ ದೇಶದ ಕೋಡ್ ನಂಬರ್ ನ್ನು ಸ್ವಯಂಚಾಲಿತವಾಗಿ ಇನ್ಸರ್ಟ್ ಮಾಡುತ್ತದೆ ಅದು ನೀವು ಯಾವುದೇ ದೇಶದ ವ್ಯಕ್ತಿಯ ಫೋನ್ ನಂಬರ್ ಸೇವ್ ಮಾಡಿದರೂ ಕೂಡ ನಡೆಯುತ್ತದೆ.

Best Mobiles in India

English summary
7 features coming to WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X