ಟ್ರೂ ಕಾಲರ್ ಆಪ್‌ನಲ್ಲಿ ಅಡಗಿರುವ 7 ಆಚ್ಚರಿಯ ವಿಷಯಗಳು..!
ಇಂದಿನ ದಿನದಲ್ಲಿ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಟ್ರೂ ಕಾಲರ್ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬೇಡವಾದ ಕರೆಗಳನ್ನು ನಿರ್ಭಂದಿಸಲು, ಗುರುತು ಪತ್ತೆ ಇಲ್ಲದ ನಂಬರ್ ಗಳನ್ನು ಹುಡುಕಲು ಸೇರಿದಂತೆ ವಿವಿಧ ಕಾರ್ಯಗಳಿಗೆ ಟ್ರೂಕಾಲರ್ ಅನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಟ್ರೂ ಕಾಲರ್ ಆಪ್ ನಲ್ಲಿ ಅಡಗಿರುವ ಆಯ್ಕೆಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನವು ಇದಾಗಿದೆ.

ನೀವು ನಿತ್ಯವೂ ಬಳಕೆ ಮಾಡುತ್ತಿರವ ಟ್ರೂ ಕಾಲರ್ ತನ್ನ ಒಡಲಾಳದಲ್ಲಿ ಹಲವು ಆಯ್ಕೆಗಳನ್ನು ಹೊಂದಿದ್ದು, ಈ ಕುರಿತು ಮಾಹಿತಿಯೂ ಇಲ್ಲಿದೆ. ಕೇವಲ ತಿಳಿಯದ ನಂಬರ್ ಗಳ ಬಗ್ಗೆ ಮಾಹಿತಿಯನ್ನು ಮಾತ್ರವೇ ಪಡೆಯುವುದಲ್ಲದೇ, ಬದಲಿಗೆ ಇನ್ನು ಅನೇಕ ಕಾರ್ಯಗಳಿಗೆ ಇದು ಸಹಾಯಕಾರಿಯಾಗಿದೆ.
ಓದಿರಿ: ಮತ್ತೊಮ್ಮೆ ಇತಿಹಾಸ ನಿರ್ಮಿಸಲು ಶಿಯೋಮಿ ಪ್ಲಾನ್: ಅತೀ ಕಡಿಮೆ ಬೆಲೆಯ ಸರ್ಪೈಸ್ ಸ್ಮಾರ್ಟ್‌ಫೋನ್..!

ಬ್ಲಾಕ್ ಕಾಲ್:
ಟ್ರೂ ಕಾಲರ್ ತನ್ನ ಬಳಕೆದಾರರಿಗೆ ಬೇಡದಿರುವ ಕರೆಗಳನ್ನು ಬ್ಲಾಕ್ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಒಮ್ಮೆ ಇದರಲ್ಲಿ ಬ್ಲಾಕ್ ಮಾಡಿದರೆ, ಮತ್ತೇ ಇನ್ನೆಂದು ಆ ನಂಬರ್ ನಿಂದ ನೀವು ಕರೆಯನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

ಇಂಟರ್ನೆಟ್ ಇಲ್ಲದೇ ಕಾರ್ಯ:
ಟ್ರೂ ಕಾಲರ್ ಇಂಟರ್ನೆಟ್ ಇಲ್ಲದೆಯೂ ಕಾರ್ಯನಿರ್ವಹಿಸಲು ಶಕ್ತವಾಗಿದೆ. ನಿಮಗೆ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಇಂಟರ್ನೆಟ್ ಸೇವೆ ಇಲ್ಲವಾದರೂ ತಿಳಿಯಬಹುದಾಗಿದೆ.

ಸುರಕ್ಷತೆ:
ನಿಮ್ಮ ಸ್ಪಾಮ್ ನಿಂದ ಟ್ರೂ ಕಾಲರ್ ರಕ್ಷಿಸಲಿದೆ. ನೀವು ಒಮ್ಮೆ ಆಪ್ ಹಾಕಿಕೊಂಡ ಸಂದರ್ಭದಲ್ಲಿ ನಿಮ್ಮನ್ನು ಸ್ಪಾಮ್ ಗಳಿಂದ ರಕ್ಷಿಸುವುದೇ ಪ್ರಥಮ ಆದ್ಯತೆಯಾಗಲಿದೆ. ಇದರಿಂದ ನಿಮಗೆ ಹೆಚ್ಚಿನ ಸುರಕ್ಷತೆಯೂ ದೊರೆಯಲಿದೆ.

ಡಿಫಾಲ್ಟ್ ಡೈಲರ್:
ಇದಲ್ಲದೇ ನೀವು ಟ್ರೂ ಕಾಲರ್ ಅನ್ನು ಡಿಫಾಲ್ಟ್ ಡಯಲರ್ ಆಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್ ಫೋನಿನ ಡಯಲರ್ ಗಿಂತಲೂ ಇದು ಉತ್ತಮವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ನಂಬರ್ ನಲ್ಲೇ ಫುಲ್ ಜಾತಕ:
ನೀವು ಟ್ರೂ ಕಾಲರ್ ನಲ್ಲಿ ನೀಡಿರುವ ಸರ್ಚ್ ಬಾರಿನಲ್ಲಿ ಒಮ್ಮೆ ನಂಬರ್ ಅನ್ನು ಎಂಟ್ರಿ ಮಾಡಿದರೆ ಸಾಕು. ಅದರಲ್ಲಿ ನಂಬರ್ ಕುರಿತ ಸಂಪೂರ್ಣ ಜಾತಕವು ದೊರೆಯಲಿದೆ. ಕೆಲವೊಮ್ಮೆ ವಿಶಾಸವು ದೊರೆಯಲಿದೆ ಎನ್ನಲಾಗಿದೆ.

ನಿಮ್ಮದೇ ಪ್ರೋಫೈಲ್:
ಇದಲ್ಲದೇ ನಿಮ್ಮ ಪ್ರೋಫೈಲ್ ಕ್ರಿಯೇಟ್ ಮಾಡಿಕೊಳ್ಳಬಹುದಾಗಿದ್ದು, ನೀವು ಯಾರಿಗೆ ಕರೆ ಮಾಡಿದರೂ ಸಹ ನಿಮ್ಮ ಸಂಫೂರ್ಣ ವಿವರ ಅವರಿಗೆ ದೊರೆಯುವಂತೆ ಮಾಡಲಿದೆ.


ನಿಮ್ಮ ನಂಬರ್ ಅನ್ನು ತೆಗೆಯಬಹುದು:
ಇದಲ್ಲದೇ ನಿಮ್ಮ ನಂಬರ್ ಅನ್ನು ಮತ್ತು ಮಾಹಿತಿಯನ್ನು ಟ್ರೂಕಾಲರ್ ಡೇಟಾ ಬೇಸ್ ನಿಂದ ತೆಗೆದು ಹಾಕುವ ಅವಕಾಶವನ್ನು ಸಹ ಟ್ರೂ ಕಾಲರ್ ಮಾಡಿಕೊಟ್ಟಿದೆ. ಅಲ್ಲದೇ ನಿಮ್ಮ ಹೆಸರು ತಪ್ಪಾಗಿ ಬಂದರೆ ಅದನ್ನು ಸರಿ ಪಡಿಸಲು ಅವಕಾಶವನ್ನು ಮಾಡಿಕೊಟ್ಟಿದೆ.


Click it and Unblock the Notifications





