Just In
- 7 min ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 27 min ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
- 42 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- 2 hrs ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
Don't Miss
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Movies
'ಕಿರಿಕ್ ಪಾರ್ಟಿ 2'ನಲ್ಲಿ ರಕ್ಷಿತ್ ಶೆಟ್ಟಿ ಇರ್ತಾರಾ ಇಲ್ವಾ? ಸಿಂಪಲ್ ಸ್ಟಾರ್ ಬಿಚ್ಚಿಟ್ಟ ಗುಟ್ಟೇನು?
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಟ್ಸ್ ಆಪ್ ನಿಂದಾಗಿ ಈ ಏಳು ಅಂಶಗಳು ಈಗ ಇಲ್ಲವೇ ಇಲ್ಲ..!
ವಾಟ್ಸ್ ಆಪ್ ಅದೆಷ್ಟು ಪ್ರಸಿದ್ಧಿಯಾಗಿದೆ ಅಂದರೆ ಸ್ಮಾರ್ಟ್ ಫೋನ್ ಕೈಯಲ್ಲಿ ಇರುವವರಿಗೆ ಒಂದು ಕ್ಷಣವೂ ವಾಟ್ಸ್ ಆಪ್ ನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ವಾಟ್ಸ್ ಆಪ್ ಗೆ ಜನ ಅಂಟಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಹಲವು ಇತರೆ ಆಪ್ ಗಳು ಈಗ ಜನರ ಮನಸ್ಸಿನ್ನಿಂದ ಶಾಶ್ವತವಾಗಿ ದೂರಸರಿದು ಬಿಟ್ಟಿದೆ. ವಾಟ್ಸ್ ಆಪ್ ನ ಅತಿಯಾದ ಬಳಕೆಯು ಟೆಲೆಕಾಂ ಆಪರೇಟರ್ ಗಳಿಗೆ ಒಬ್ಬ ಬಳಕೆದಾರನಿಂದ ಲಭ್ಯವಾಗುವ ಸರಾಸರಿ ಆದಾಯದ ಮೇಲೆ ಪರಿಣಾಮ ಉಂಟು ಮಾಡಿದೆ.

ಸಾಮಾಜಿಕ ಜಾಲತಾಣದ ದೈತ್ಯ ಎಂದೇ ಕರೆಸಿಕೊಳ್ಳುವ ಫೇಸ್ ಬುಕ್ ಮೂಲಕ ವಾಟ್ಸ್ ಆಪ್ ನ್ನು ಸ್ವಾಧೀನಪಡಿಸಿಕೊಂಡ ನಂತರ, ಸ್ಮಾರ್ಟ್ ಫೋನ್ ನ ಎಲ್ಲಾ ವಿಧಧ ಸಂವಹನ ಮಾಧ್ಯಮಗಳಿಗೂ ಕೂಡ ಈ ವಾಟ್ಸ್ ಆಪ್ ಸ್ಪರ್ಧೆಯೊಡ್ಡುತ್ತಿದೆ.
ತಂದೆಗೆ ಸ್ಪರ್ದಿಯಾದ ಮಗ ಅನ್ನೋ ಹಾಗೆ ವಾಟ್ಸ್ ಆಪ್ ಸ್ವತಃ ಫೇಸ್ ಬುಕ್ ನ ಮೆಸೆಂಬರ್ ಗೂ ಕೂಡ ಸ್ಪರ್ಧೆಯೊಡ್ಡುತ್ತಿದೆ. ಸದ್ಯ ವಾಟ್ಸ್ ಆಪ್ ಪೇಮೆಂಟ್ ಕೂಡ ಭಾರತದಲ್ಲಿ ಆರಂಭವಾಗುವ ಲಕ್ಷಣಗಳು ಕಾಣುತ್ತಿದೆ. ಇದು ಕೆಲವು ಪೇಮೆಂಟ್ ಆಪ್ ಗಳಿಗೆ ನಡುಕ ಹುಟ್ಟಿಸಿರುವುದಂತೂ ಗ್ಯಾರೆಂಟಿ. ಪೇಟಿಎಂ, ಮೊಬಿಕ್ವಿಕ್ ಮತ್ತು ಗೂಗಲ್ ತೇಝ್ ಕೂಡ ಇದರಿಂದ ಮೂಲೆ ಸರಿಯುವ ಸಾಧ್ಯತೆ ಇದೆ.
ತಂತ್ರಜ್ಞಾನದ ವಿಚಾರವಾಗಿ ವಾಟ್ಸ್ ಆಪ್ ಮೊಬೈಲ್ ಜಗತ್ತನ್ನು ಸಾಂಪ್ರದಾಯಿಕವಾಗಿಯೂ ಆಳಲು ಶುರು ಮಾಡಿದೆ ಮತ್ತು ಹಲವು ಹಳೆಯ ತಂತ್ರಜ್ಞಾನವನ್ನು ಮೂಲೆಗುಂಪು ಮಾಡಿದೆ. ಅವುಗಳು ಯಾವುದು ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.
ಎಸ್ಎಂಎಸ್:
ಹೌದು ವಾಟ್ಸ್ ಆಪ್ ಎಸ್ಎಂಎಸ್ ಸೇವೆಗಳನ್ನು ಕೊಂದೇ ಬಿಟ್ಟಿದೆ ಅಂದರೆ ಆಶ್ಚರ್ಯವಿಲ್ಲ. ವಾಟ್ಸ್ ಆಪ್ ಇಲ್ಲದ ಕಾಲದಲ್ಲಿ ಎಸ್ಎಂಎಸ್ ಗಳು ಜನರ ಹಣವನ್ನು ಲೂಟಿ ಮಾಡುತ್ತಿದ್ದವು ಎಂದರೆ ತಪ್ಪಿಲ್ಲ. ಅಷ್ಟೋ ಇಷ್ಟೋ ಉಚಿತ ಎಸ್ಎಂಎಸ್ ಸೇವೆಗಳಿಗೆ ಒಂದು ಕಾಲದಲ್ಲಿ ಜನ ಪರದಾಡುತ್ತಿದ್ದದ್ದು ಉಂಟು. ಮೊಬೈಲ್ ಇಂಟರ್ನೆಟ್ ಕನೆಕ್ಷನ್ ಇಲ್ಲದ ಸಂದರ್ಬದಲ್ಲಿ ಜನರ ಎರಡನೇ ಅತೀ ದೊಡ್ಡ ಸಂಪರ್ಕ ವ್ಯವಸ್ಥೆಯಾಗಿರುತ್ತಿದ್ದದ್ದೇ ಎಸ್ಎಂಎಸ್ ಗಳು. ಆದರೆ ಈಗ ಎಸ್ಎಂಎಸ್ ಗಳು ಕೇವಲ ಜನರಿಗೆ ಓಟಿಪಿ ಮತ್ತು ಇತರೆ ಸೇವಾ ಮೆಸೇಜ್ ಗಳಿಗೆ ಹೊರತುಪಡಿಸಿದರೆ ಅದರ ಅಗತ್ಯವೇ ಇಲ್ಲ. ಎಲ್ಲರೂ ವಾಟ್ಸ್ ಆಪ್ ಬಳಕೆ ಮಾಡುವವರೇ ಆಗಿದ್ದಾರೆ.
ಎಂಎಂಎಸ್: ಮಲ್ಟಿಮೀಡಿಯಾ ಮೆಸೇಜ್ ಗಳು ಭಾರತದಲ್ಲಿ ಈಗ ಸಂಚರಿಸುತ್ತಲೇ ಇಲ್ಲ ಮತ್ತು ವಾಟ್ಸ್ ಆಪ್ ನಲ್ಲೇ ಮಲ್ಟಿಮೀಡಿಯಾ ಮೆಸೇಜ್ ಗಳನ್ನು ಸುಲಭದಲ್ಲಿ ಕಳಿಸಿಕೊಳ್ಳುವ ಅವಕಾಶವಿರುವಾಗ ಗ್ರಾಹಕರು ಯಾರೂ ಕೂಡ ಎಂಎಂಎಸ್ ಗಳ ಮೊರೆ ಹೋಗುವುದೇ ಇಲ್ಲ. ಹಾಗಾಗಿ ಎಂಎಂಎಸ್ ನೋ ಮೋರ್ ಅಂತಲೇ ಹೇಳಬಹುದು.
ಬಿಬಿಎಮ್: ಒಂದು ಕಾಲ ಇತ್ತು. ಬ್ಲಾಕ್ ಬೆರ್ರಿ ಫೋನ್ ಗಳು ಈ ದುನಿಯಾವನ್ನು ಆಳಿದ್ದೇ ಬ್ಲಾಕ್ ಬೆರ್ರಿ ಮೆಸೆಂಜರ್ ಗಳಿಂದಾಗಿ ಆಗಿತ್ತು. ಆದರೆ ವಾಟ್ಸ್ ಆಪ್ ನಿಂದಾಗಿ ನಿಜಕ್ಕೂ ಬಿಬಿಎಂ ಗಳು ಮೂಲೆಗೆ ಸರಿದು ಬ್ಲಾಕ್ ಬೆರ್ರಿ ಫೋನ್ ಗಳಿಗೆ ಬೆಲೆ ಇಲ್ಲದಂತಾಗಿ ಬಿಟ್ಟಿತು.
ಯಾಹೂ ಮೆಸೆಂಜರ್: 1990 ನೇ ಇಸವಿಯ ಮಕ್ಕಳು ಖಂಡಿತ ಯಾಹೂ ಮೆಸೆಂಜರ್ ಗಳನ್ನು ನೆನಪಿನಲ್ಲಿ ಇಟ್ಟುಕೊಂಡಿರಬಹುದು.ಯಾಹೂ ಮೂಲೆಗೆ ಸರಿಯಲು ಹಲವಾರು ಇತರೆ ಕಾರಣಗಳಿದ್ದರೂ ಕೂಡ , ಅವುಗಳಲ್ಲಿ ಒಂದು ಪ್ರಮುಖ ಕಾರಣ ವಾಟ್ಸ್ ಆಪ್ ಕೂಡ ಹೌದು ಎಂದರೆ ಅತಿಶಯೋಕ್ತಿ ಇಲ್ಲ.
ವೈಬರ್: ವೈಬರ್ ಅನ್ನುವುದು ಮತ್ತೊಂದು ಪ್ರಸಿದ್ಧ ಆಪ್ ಆಗಿ ಭಾರತದಲ್ಲಿ ಗುರುತಿಸಿಕೊಂಡಿತ್ತು. ವಾಟ್ಸ್ ಆಪ್ ಪ್ರಸಿದ್ಧಿ ಪಡೆಯುವುದಕ್ಕೂ ಮುನ್ನ ವೈಬರ್ ಆಪ್ ನ್ನು ಹೆಚ್ಚಿನವರು ಬಳಕೆ ಮಾಡುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ವಾಟ್ಸ್ ನಲ್ಲಿ ನಡೆದ ಕ್ರಾಂತಿಯು ಖಂಡಿತ ವೈಬರ್ ಕೂಡ ಮೂಲೆಗೆ ಸರಿಯುವಂತೆ ಮಾಡಿ ಬಿಟ್ಟಿದೆ.
ವಿಚಾಟ್ : ಹೌದು, ವಿಚಾಟ್ ಈಗಲೂ ಕೂಡ ಚೀನಾದಲ್ಲಿ ಪ್ರಸಿದ್ಧಿಯಾಗೇ ಇದೆ ಆದರೆ ಭಾರತದಲ್ಲಿ ಅದರ ಹೆಜ್ಜೆಗುರುತುಗಳು ಮಾಸಲು ಪ್ರಾರಂಭಿಸಿದ್ದು, ವಿಚಾಟ್ ಜನರ ಮನಸ್ಸಿನಿಂದ ದೂರವೇ ಆಗುತ್ತಿದೆ. ಅದಕ್ಕೆ ಕಾರಣ ಖಂಡಿತವಾಗಲೂ ವಾಟ್ಸ್ ಆಪ್ ಆಗಿದೆ.
ವೀಡಿಯೋ ಕಾಲಿಂಗ್ ಆಪ್ಸ್ ಮತ್ತು ಫ್ಲಾಟ್ ಫಾರ್ಮ್: ವಾಟ್ಸ್ ಆಪ್ ದಿನದಿಂದ ದಿನಕ್ಕೆ ಹೆಚ್ಚು ಜನರ ಜೊತೆ ವೀಡಿಯೋ ಕಾಲಿಂಗ್ ಮಾಡಲು ಅವಕಾಶ ಕೊಡುತ್ತಿದೆ. ವೀಡಿಯೋ ಕಾಲಿಂಗ್ ಆಯ್ಕೆಗೆ ವಾಟ್ಸ್ ಆಪ್ ನಲ್ಲಿ ಇರಲಿಲ್ಲ. ಒಬ್ಬ ವ್ಯಕ್ತಿಯ ಜೊತೆಗೆ ವೀಡಿಯೋ ಕಾಲಿಂಗ್ ಗೆ ವಾಟ್ಸ್ ಆಪ್ ಅವಕಾಶ ನೀಡಿತು. ಇತ್ತೀಚೆಗೆ ಅಪ್ ಡೇಟ್ ಆದ ವಾಟ್ಸ್ ಆಪ್ 4 ಜನರ ಜೊತೆಗೂ ಅಂದರೆ ಗ್ರೂಪ್ ವೀಡಿಯೋ ಕಾಲಿಂಗ್ ಗೆ ಅವಕಾಶ ನೀಡುತ್ತಿದೆ. ಆ ಮೂಲಕ ಹಳೆಯ ವೀಡಿಯೋ ಕಾಲಿಂಗ್ ಆಪ್ ಗಳು ಮೂಲೆಗೆ ಸೇರುತ್ತಿದೆ. ಉದಾಹರಣೆಗೆ ಗೂಗಲ್ ಡುಯೋ ಮತ್ತು ಸ್ಕೈಪ್ ಗಳು ಕೂಡ ವಾಟ್ಸ್ ಆಪ್ ವೀಡಿಯೋ ಕಾಲಿಂಗ್ ನ ಪ್ರಭಾವಕ್ಕೆ ಒಳಪಟ್ಟು ಜನರ ಆಕರ್ಷಣೆಯನ್ನು ಕುಂದಿಸಿಕೊಳ್ಳುತ್ತಿದೆ.
ವಾಯ್ಸ್ ಕಾಲ್ಸ್ (ಕಡಿಮೆಯಾಗಿದೆ): ವಾಯ್ಸ್ ಕಾಲ್ ಗಳು ಖಂಡಿತವಾಗಲೂ ನಿಂತುಹೋಗಿಲ್ಲ. ಆದರೆ ಮೊದಲಿಗಿಂತಲೂ ಈಗ ವಾಯ್ಸ್ ಕಾಲ್ ಮಾಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಜನರು ಈಗ ಕಾಲ್ ಮಾಡುವುದು ಕಡಿಮೆಯಾಗಿದೆ. ತೀರಾ ಅಗತ್ಯವಿದ್ದಾಗ ಕರೆ ಮಾಡುತ್ತಾರೆ. ಇಲ್ಲದೇ ಇದ್ದರೆ ವಾಟ್ಸ್ ಆಪ್ ನಲ್ಲೇ ಹೆಚ್ಚಿನ ವಿಚಾರವನ್ನು ಹಂಚಿಕೊಂಡು ಬಿಡುತ್ತಾರೆ. ಅದರಲ್ಲೂ ಪ್ರಮುಖವಾಗಿ ಅಂತರಾಷ್ಟ್ರೀಯ ಕರೆಗಳ ಸಂಖ್ಯೆ ಬಹಳವಾಗಿ ಇಳಿಮುಖವಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470