ನಿಮ್ಮ ದೈನಂದಿನ ಚಟುವಟಿಕೆ ನಿಭಾಯಿಸಲು ಈ ಆಪ್‌ಗಳು ಸಹಕರಿಸುತ್ತವೆ
ನಿಮ್ಮ ಹಿಂದೆ ಮಾಡಿರುವ, ಮುಂದೆ ಮಾಡಬೇಕಾಗಿರು ಎಲ್ಲಾ ಚಟುವಟಿಕೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು ಅಂದರೆ ಪೆನ್ನು, ಪೇಪರ್ ಒಳ್ಳೆ ಕ್ರಮವೇ..ಆದರೆ ಅದನ್ನು ಹಿಡಿದು ಸುತ್ತಾಡೋಕೆ ಆಗಲ್ಲ ಅಲ್ವಾ? ಕಾಲ ಬದಲಾಗಿರುವಾಗ ನಾವೂ ಬದಲಾಗದೇ ಇದ್ರೆ ಹೇಗೆ ಹೇಳಿ.. ಈಗಿನ ಜಮಾನ ಹೇಗೆ ಅಂದರೆ ಎಲ್ಲಾ ಮೊಬೈಲ್ ನಲ್ಲೇ ಆಗಬೇಕು, ಹೌದು ನೀವು ಖರೀದಿಸಬೇಕಾಗಿರುವಸಾಮಾನಿನ ಪಟ್ಟಿಯೇ ಇರಬಹುದು, ಅಥವಾ ನಿಮ್ಮ ದೈನಿಂದಿನ ಕಾರ್ಯಚಟುವಟಿಕೆಗಳ ಪಟ್ಟಿಯೇ ಇರಬಹುದು ಅದನ್ನು ಮೈಂಟೇನ್ ಮಾಡಲು ನಿಮ್ಮ ಕೈಯಲ್ಲಿನ ಸ್ಮಾರ್ಟ್ ಫೋನೇ ಸಾಕಾಗುತ್ತದೆ.

ಪ್ಲೇ ಸ್ಟೋರ್ ನಲ್ಲಿ ನಿಮ್ಮ ಈ ಕಾರ್ಯಕ್ಕಾಗಿ ಅದೆಷ್ಟೋ ಸಾವಿರ ಆಪ್ ಗಳಿರಬಹುದು. ನಿಮ್ಮ ಬೆರಳ ತುದಿಯಲ್ಲೇ ಈ ಕೆಲಸ ಮಾಡುವ ಸುಲಭದ ಆಪ್ ಗಳವು. ಪಟ್ಟಿ ತಯಾರಿಸುವಿಕೆಯಲ್ಲಿ ನೀವು ಪರದಾಡುವ ಪರಿಸ್ಥಿತಿಯನ್ನು ಸುಲಭದಲ್ಲೇ ನಿವಾರಿಸುವ ತಂತ್ರಗಾರಿಕೆ ಇರುವ ಆಪ್ ಗಳಿವು. ಹಾಗಂತ ಸ್ಟೋರ್ ನಲ್ಲಿರುವ ಆಪ್ ಗಳೆಲ್ಲವೂ ಅಧ್ಬುತಗಳಲ್ಲ. ನಿಮ್ಮ ಈ ಕಾರ್ಯಕ್ಕೆ ಯಾವುದು ಬೆಸ್ಟ್ ಎಂಬ ಪಟ್ಟಿಯನ್ನು ನಾವು ನಿಮಗೆ ಮೊದಲು ಕೊಡುತ್ತದೆ. ಈ ಪಟ್ಟಿ ನೋಡಿ , ನಂತರ ನಿಮಗೆ ಯಾವುದು ಸೂಕ್ವೆನಿಸುತ್ತದೆಯೋ ಆ ಆಪ್ ಬಳಸಿ ನಿಮ್ಮ ಪಟ್ಟಿ ತಯಾರಿಸಿಕೊಳ್ಳಿ.

ಗೂಗಲ್ ಅಸಿಸ್ಟೆಂಟ್
ಗುಗಲ್ ಅಸಿಸ್ಟೆಂಟ್ ಮುಖಾಂತರ ನೀವು ನಿಮ್ಮ ಮನೆಯ ಹಲವು ಕೆಲಸಗಳನ್ನು ಮಾಡಬಹುದು, ಉದಾಹರಣೆಗೆ ಶಾಪಿಂಗ್ ಲಿಸ್ಟ್ ತಯಾರಿಸುವುದು ಮತ್ತು ಇತ್ಯಾದಿ ಕೆಲಸಗಳು.
ನೀವು ನಿಮ್ಮ ವಿಚಾರಗಳನ್ನು ನಿಮ್ಮ to-do ಪಟ್ಟಿದೆ ಸೇರಿಸಬಹುದು.ಗೂಗಲ್ ಅಸಿಸ್ಟೆಂಟ್ ನಲ್ಲಿ ಪಟ್ಟಿ ತಯಾರಿಸಲು ಆಯ್ಕೆಗಳಿದ್ದು ,ವಾಯ್ಸ್ ಕಮಾಂಡ್ ಬಳಸಿ ಕೂಡ ಪಟ್ಟಿಯನ್ನು ತಯಾರಿಸಬಹುದು.ನೀವು ಸರಿಯಾದ IFTTT ಆಪ್ಲೆಟ್ ನ್ನು ಸೆಟ್ ಮಾಡಿಕೊಂಡರೆ, ಪ್ರತಿದಿನ ನಿಮ್ಮ ಎಲ್ಲಾ ಟಾಸ್ಕ್ ನ ಪಟ್ಟಿಯನ್ನು ಒಳಗೊಂಡ ಈ-ಮೇಲ್ ಕೂಡ ಪ್ರತಿದಿನದ ಕೊನೆಯಲ್ಲಿ ನಿಮಗೆ ಅಟೋಮ್ಯಾಟಿಕ್ ಆಗಿ ಬರುವ ಆಯ್ಕೆಯೂ ಇದರಲ್ಲಿದೆ.

ಟೋಡೋಯಿಸ್ಟ್ (Todoist)
ಈ ಆಪ್ ಫ್ಲ್ಯಾಟ್, ಬಿಳಿ ಮತ್ತು ಹೆಚ್ಚಾಗಿ ಬೇರ್ ಇರುವ ದೊಡ್ಡ ಇಂಟರ್ ಫೇಸ್ ನ್ನು ಹೊಂದಿದೆ. ಇದರಲ್ಲಿ ಉಚಿತ ವರ್ಷನ್ ಕೂಡ ಇದೆ ಮತ್ತು ಪ್ರೋ ಆವೃತ್ತಿ ಕೂಡ ಲಭ್ಯವಿದೆ. ಉಚಿತ ಆವೃತ್ತಿಯು ನಿಮಗೆ ಪ್ರೊಜೆಕ್ಟಿನ ಟಾಕ್ಸ್ ಗಳನ್ನು ಆರ್ಗನೈಸ್ ಮಾಡಲು ಅನುವು ಮಾಡುತ್ತದೆ. ಸಬ್ ಟಾಕ್ಸ್ ಗಳನ್ನು ಸೃಷ್ಟಿಸಲು, ನೋಟ್ಸ್ ಗಳನ್ನು ಬರೆಯಲು ಮತ್ತು ಪ್ರಾಮುಖ್ಯತೆಯ ಮಟ್ಟವನ್ನು ಬದಲಿಸಲು ಅವಕಾಶ ನೀಡುತ್ತದೆ. ಲೇಬಲ್ ಗಳನ್ನು ಸೇರಿಸಲು, ಫಿಲ್ಮರ್ಸ್, ಅಟೋಮ್ಯಾಟಿಕ್ ಬ್ಯಾಕ್ ಅಪ್, ರಿಮೈಂಡರ್ಸ್, ಪ್ರೊಡಕ್ಟಿವಿಟಿಯನ್ನು ಟ್ರ್ಯಾಕ್ ಮಾಡುವ ಟೂಲ್ ಗಳು, ಐಕಾಲ್ ಸಿಂಕ್ ಮಾಡುವಿಕೆ ಮತ್ತು ಫೈಲ್ ಗಳನ್ನು ಅಟ್ಯಾಚ್ ಮಾಡಬಹುದಾದ ಅವಕಾಶಗಳು ಈ ಆಪ್ ನಲ್ಲಿದೆ.

ಗೂಗಲ್ ಕೀಪ್
ಗೂಗಲ್ ಕೀಪ್ ಕಷ್ಟವಾದ ಟಿಪ್ಪಣಿಗಳನ್ನು ಡಿಜಿಟಲ್ ಮಾಡುತ್ತದೆ. ಗೂಗಲ್ ಕೀಪ್ ನಿಮಗೆ ಸಿಂಪಲ್ ವಿಚಾರಗಳ ನೋಟ್ಸ್ ತಯಾರಿಸಲು ಅವಕಾಶ ಮಾಡುತ್ತದೆ ಅಥವಾ ಪಟ್ಟಿಯನ್ನು ಪರೀಕ್ಷಿಸಲು ಕೂಡ ಅನುವು ಮಾಡುತ್ತದೆ. ನಿಮ್ಮ ಆಯ್ಕೆಯ ಸಂದರ್ಬದಲ್ಲಿ ನೋಟಿಫಿಕೇಷನ್ ಬರುವಂತೆಯೂ ಕೂಡ ಈ ಆಪ್ ನಲ್ಲಿ ಸೆಟ್ಟಿಂಗ್ಸ್ ಮಾಡಿಕೊಳ್ಳಬಹುದು.

ಎವರಿಡೇ (EveryDay)
ಎವರಿ ಡೇ ಒಂದು ಸರಳ ಆಪ್ ಆಗಿದ್ದು ಇದು ನಿಮಗೆ ಪಟ್ಟಿಯನ್ನು ತಯಾರಿಸಲು, ಸಬ್-ಟಾಸ್ಕ್, ರಿಮೈಂಡರ್ ಗಳನ್ನು ಸೆಟ್ ಮಾಡಲು, ಟಾಸ್ಕ್ ಗಳಿಗೆ ನೋಟ್ಸ್ ಗಳನ್ನು ಸೇರಿಸಲು, ಟೂಲ್ಸ್ ಗಳ ಜೊತೆ ಆಟವಾಡಿ ಎಲ್ಲವೂ ಆರ್ಗನೈಸ್ ಮಾಡಲು ಅವಕಾಶ ನೀಡುತ್ತದೆ.
ಆನ್ ಲೈನ್ ಗೆ ಟಾಸ್ಕ್ ಗಳ ಬ್ಯಾಕ್ ಅಪ್ ಪಡೆಯಲು ನೀವು ಒಂದು ಅಕೌಂಟನ್ನು ತೆರೆಯುವ ಅವಕಾಶವೂ ಇರುತ್ತದೆ. ನೀವು ಎಲ್ಲಾ ಆಪ್ ಗಳ ಫಂಕ್ಷನಾಲಿಟಿಗಳನ್ನು ಯಾವುದೇ ಅಕೌಂಟ್ ತೆರೆಯದೆಯೂ ಕೂಡ ಬಳಸಿಕೊಳ್ಳಬಹುದು.

ಇನ್ ಬಾಕ್ಸ್ ಬೈ ಜಿಮೇಲ್ (Inbox by Gmail)
ಈ ಆಪ್ ಪ್ರತಿ ಮೆಸೇಜ್ ನ್ನು ಟಾಸ್ಕ್ ಆಗಿಸುತ್ತದೆ. ನೀವು ಟಾಸ್ಕ್ ಮುಗಿದ ನಂತರ, ನೀವದನ್ನು "ರೀಡ್" ಎಂದು ಮಾರ್ಕ್ ಮಾಡಬೇಕು. ನೀವು ಅದನ್ನು ಚೆಕ್ ಮಾಡಿ "ಡನ್" ಎಂದು ಆಫ್ ಕೂಡ ಮಾಡಬಹುದು. ನೀವು ಮರೆಯಬಾರದು ಎಂಬ ಕಾರಣಕ್ಕೆ ಅದನ್ನು ಮತ್ತೆ ಮೆಸೇಜ್ ಬರುವಂತೆ ಕೂಡ ಮಾಡಿಕೊಳ್ಳಬಹುದು.

ಟಿಕ್ ಟಿಕ್ (TickTick)
ಸ್ಮಾರ್ಟ್ ಲಿಸ್ಟ್ ಆಯ್ಕೆಯ ಮುಖಾಂತರ ನೀವು ಕೆಲಸವನ್ನು ಇಚ್ಛೆಗೆ ಅನುಸಾರ ಆಯ್ಕೆ ಮಾಡಿಕೊಳ್ಳಬಹುದು, ಈ ಆಪ್ ನ ವೈಶಿಷ್ಟ್ಯತೆಗಳಲ್ಲಿ ಪ್ರಮುಕವಾದುದೆಂದರೆ, ನೀವು ನೋಟ್ಸ್ ಗಳನ್ನು ಮತ್ತು ಕಮೆಂಟ್ ವಿಭಾಗಗಳನ್ನು ಪ್ರತ್ಯೇಕಿಸಿಕೊಳ್ಳಬಹುದು, ಕ್ಯಾಲೆಂಡರ್ ನೋಟ, ರಿಮೈಂಡರ್ ಗಳನ್ನು ಪುನರಾವರ್ತಿಸಿಕೊಳ್ಳುವುದು ಮತ್ತು ಇದು ಅಟ್ಯಾಚ್ ಮೆಂಟ್ ಗಳಿಗೆ ಬೆಂಬಲ ನೀಡುತ್ತದೆ.
28 ಡಾಲರ್ ಗೆ ಪ್ರೋ ಪ್ಲಾನ್ ರಿವಿಷನ್ ಹಿಸ್ಟರಿ, ಸಬ್-ಟಾಸ್ಕ್ ರಿಮೈಂಡರ್ಸ್ ಮತ್ತು ಕ್ಯಾಲೆಂಡರ್ ಇಂಟಿಗ್ರೇಷನ್ ಕೂಡ ಇದರಲ್ಲಿ ಲಭ್ಯವಿರುತ್ತದೆ.

ರಿಮೆಂಬರ್ ದಿ ಮಿಲ್ಕ್ (Remember the Milk)
ಈ ಆಪ್ ಜೀಮೇಲ್, ಗೂಗಲ್ ಕ್ಯಾಲೆಂಡರ್, ಟ್ವೀಟರ್, ಎವರ್ ನೋಟ್ ಮತ್ತು ಇನ್ನು ಹಲವು ವೈಶಿಷ್ಟ್ಯಗಳನ್ನು ಸೇರಿಸಿಕೊಂಡು ಅಂದರೆ ಲೇಬಲ್ಸ್ ಮತ್ತು ಫೋಲ್ಡರ್ ಆಧಾರಿತ ಶ್ರೇಣಿವ್ಯವಸ್ಥೆಗಳನ್ನು ಹೊಂದಿ ಸಂಯೋಜಿಸ್ಪಟ್ಟಿರುವ ಒಂದು ಆಪ್ ಆಗಿದೆ.

ಟು-ಡು ಲಿಸ್ಟ್ (To-Do List)
ಈ ಆಪ್ ಯಾವುದೇ ಪ್ರೋ ವಿಷನ್ ನ್ನೂ ಹೊಂದಿಲ್ಲ ಮತ್ತು ನೇರವಾದ ಒಂದು ಸರಳ ಇಂಟರ್ ಫೇಸ್ ಆಗಿದ್ದು, ನಿಮಗೆ ಏಕಮಾತ್ರ ಟು-ಡು- ಪಟ್ಟಿ, ಹೋಮ್ ಸ್ಕ್ರೀನ್ ವಿಜೆಟ್ ಗೆ ಅವಕಾಶ ಮತ್ತು ಕೆಲಸಗಳನ್ನು ಪ್ರಾಮುಖ್ಯತೆ ಆಧರಿಸಿ ಹೊಂದಿಕೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ ಅಷ್ಟೇ.


Click it and Unblock the Notifications








