ಗೂಗಲ್ ಅಸಿಸ್ಟೆಂಟ್ ಅನ್ನು ಈ 8 ವಿಚಾರಗಳಿಗಾಗಿ ನೀವು ಬಳಸಬಹುದು!
ಗೂಗಲ್ ಡಿವೈಸ್ ಗಳಾದ ಗೂಗಲ್ ಹೋಮ್ ಮತ್ತು ಪಿಕ್ಸಲ್ ಫೋನ್ ಗಳಲ್ಲಿ ಈಗ ಗುಗಲ್ ಅಸಿಸ್ಟೆಂಟ್ ಸಾಮಾನ್ಯವಾಗಿ ಇದ್ದೇ ಇರುತ್ತೆ. ಓಕೆ ಗುಗಲ್ ಇಲ್ಲವೇ ಹೋಮ್ ಬಟನ್ ನ್ನು ಹೆಚ್ಚು ಸಮಯ ಒತ್ತಿ ಹಿಡಿಯುವುದರಿಂದಾಗಿ ಗುಗಲ್ ಅಸಿಸ್ಟೆಂಟ್ ನ್ನು ಬಳಸಬಹುದು ಮತ್ತು ಕೆಲವು ಬೇಸಿಕ್ ವಿಚಾರಗಳನ್ನು ಅಲ್ಲಿ ಮಾಡಬಹುದು. ಉದಾಹರಣೆಗೆ ಫೋನ್ ಕಾಲ್ ಮಾಡುವುದು, ಮೇಸೆಜ್ ಕಳಿಸುವುದು, ಅಲರಾಂ ಸೆಟ್ ಮಾಡುವುದು ಇತ್ಯಾದಿ..
ಇದರ ಜೊತೆಗೆ ಗೂಗಲ್ ಅಸಿಸ್ಟೆಂಟ್ ಇನ್ನು ಹಲವು ಕೆಲಸಗಳನ್ನು ಮಾಡಬಹುದು. ಕೆಲವು ಪ್ರಮುಖ ಕೆಲಸಗಳನ್ನು ಗೂಗಲ್ ಅಸಿಸ್ಟೆಂಟ್ ಮಾಡುವುದನ್ನು ವಿವರಿಸಬೇಕಾಗಿಲ್ಲ. ಆದರೂ ಇಲ್ಲಿ 8 ಪ್ರಮುಖ ಕೆಲಸಗಳ ಬಗ್ಗೆ ವಿವರಣೆ ನೀಡಲಾಗಿದೆ.

1 . ಸುದ್ದಿಗಳನ್ನು ಓದುವುದಕ್ಕೆ ಬಳಕೆ ಮಾಡಬಹುದು
ಗುಗಲ್ ಅಸಿಸ್ಟೆಂಟ್ ಗೆ ನೀವು “ಪ್ಲೇ ದಿ ನ್ಯೂಸ್ “ ಎಂದು ಹೇಳಿದರೆ ಸಾಕು, ಅದು ಕೂಡಲೇ ಸುದ್ದಿಗಳನ್ನು ನಿಮಗಾಗಿ ಓದಲು ಪ್ರಾರಂಭಿಸಿಬಿಡುತ್ತೆ. ಇದು ಕೇವಲ ಕಾಟಾಚಾರಕ್ಕೆ ಓದಿದಂತೆ ಇರುವುದಿಲ್ಲ ಬದಲಾಗಿ ಎಲ್ಲಾ ಸುದ್ಧಿಗಳನ್ನು ಕೇಳಿ ನೀವು ಅರ್ಥೈಸಿಕೊಳ್ಳುವಂತೆ ಓದುತ್ತದೆ. ಒಂದು ಸುದ್ದಿಯಿಂದ ಮತ್ತೊಂದು ಸುದ್ದಿಗೆ ಹೋಗಲು, ಇಲ್ಲವೇ ಓದುತ್ತಿರುವ ಸುದ್ದಿಯನ್ನು ನಿಲ್ಲಿಸಲು, “ನೆಕ್ಸ್ಟ್”, “ಪಾಝ್”, “ಸ್ಟಾಪ್ “ ಎಂಬ ಪದಗಳನ್ನು ಬಳಕೆ ಮಾಡಬಹುದು. ಅಷ್ಟೇ ಅಲ್ಲ ಇಂತದ್ದೇ ಪೇಪರ್ ನ ಇಲ್ಲವೇ ನ್ಯೂಸ್ ವೆಬ್ ಸೈಟ್ ನ ಸುದ್ದಿಗಳನ್ನು ಓದುವಂತೆಯೂ ನೀವು ಗೂಗಲ್ ಅಸಿಸ್ಟೆಂಟ್ ಗೆ ಆರ್ಡರ್ ಮಾಡಬಹುದು.
ಅದಕ್ಕಾಗಿ ನೀವು ಗೂಗಲ್ ಅಸಿಸ್ಟೆಂಟ್ ಓಪನ್ ಮಾಡಿ,ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ ಅಲ್ಲಿ ನ್ಯೂಸ್ ನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಸುದ್ದಿಯ ಮಾಧ್ಯಮಗಳಾದ ಎನ್ ಡಿಟಿವಿ,ಟೈಮ್ಸ್ ಆಫ್ ಇಂಡಿಯಾ, ಇಂಡಿಯಾ ಟುಡೇ ಇತ್ಯಾದಿಗಳು ಅಲ್ಲಿರುತ್ತವೆ. ಅದನ್ನು ಸೆಲೆಕ್ಟ್ ಮಾಡಿಕೊಂಡರೆ, ನೀವು ಆ ಚಾನಲ್ ನಲ್ಲಿ ಎಲ್ಲಾ ಸುದ್ದಿಗಳನ್ನು ಗೂಗಲ್ ಅಸಿಸ್ಟೆಂಟ್ ಮೂಲಕ ಓದಿಸಿಕೊಳ್ಳಬಹುದು ಮತ್ತು ನೀವು ಆರಾಮಾಗಿ ಕುಳಿತು ಕೇಳಬಹುದು.
2. ನಿಮ್ಮ ಕೆಲಸದ ಇಲ್ಲವೇ ಯಾವುದೇ ವಿಚಾರವನ್ನು ನಿಮಗೆ ನೆನಪಿಸಲು
ಅಲಾರಾಂಗಳನ್ನು ಸೆಟ್ ಮಾಡಲು, ಯಾರದ್ದಾದ್ರೂ ಹುಟ್ಟಿದ ದಿನ, ಮದುವೆ ದಿನ ಇತ್ಯಾದಿಗಳ ಬಗ್ಗೆ ರಿಮೈಂಡರ್ ಸೆಟ್ ಮಾಡಲು ಗುಗಲ್ ಅಸಿಸ್ಟೆಂಟ್ ನೆರವಾಗುತ್ತೆ. ಅಷ್ಟೇ ಅಲ್ಲ ನೀವಿರುವ ಸ್ಥಳದ ಆಧಾರದ ಮೇಲೂ ಕೆಲವು ರಿಮೈಂಡರ್ ಗಳನ್ನು ಅಳವಡಿಸಿಡಬಹುದು. ಉದಾಹರಣೆಗೆ ನೀವಿರುವ ಸ್ಥಳದ AC ಸ್ವಿಚ್ ಆಫರ್ ಮಾಡಲು ನೆನಪು ಮಾಡುವಂತೆ ನಿಮ್ಮ ಗೂಗಲ್ ಅಸಿಸ್ಟೆಂಟ್ ಗೆ ತಿಳಿಸಬಹುದು..
3. ವಿಚಾರಗಳನ್ನು ನಿಮ್ಮ ಭಾಷೆಗೆ ವರ್ಗಾಯಿಸಲು
ಗೂಗಲ್ ಅಸಿಸ್ಟೆಂಟ್ ಮೂಲಕ ನೀವು ಯಾವುದೇ ಪದವನ್ನು ಮಾತ್ರವಲ್ಲ ಬದಲಾಗಿ ಒಂದು ಪೂರ್ಣ ವಾಕ್ಯವನ್ನೇ ನಿಮ್ಮ ಭಾಷೆಗೆ ವರ್ಗಾಯಿಸಿಕೊಳ್ಳಲು ಸಹಾಯ ಮಾಡುತ್ತೆ. ವರ್ಗಾವಣೆಯಾದ ಪದ ಇಲ್ಲ ವಾಕ್ಯವು ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ ಅದನ್ನು ನೀವು ಓದಬಹುದು ಇಲ್ಲವೇ ಗೂಗಲ್ ಅಸಿಸ್ಟೆಂಟ್ ಬಳಿ ಓದಲು ಹೇಳಬಹುದು.
4. ಪರಿವರ್ತಕವಾಗಿ ಬಳಕೆ ಮಾಡಬಹುದು
ಯಾವುದೇ ಮಾಪನವನ್ನು ಮತ್ತು ಕರೆನ್ಸಿಯನ್ನು ಪರಿವರ್ತಕವಾಗಿ ಬಳಸಲು ಗೂಗಲ್ ಅಸಿಸ್ಟೆಂಟ್ ನಿಮಗೆ ನೆರವಾಗಲಿದೆ. ಕೇವಲ ಕೆಲವೇ ಸೆಕೆಂಡ್ ನಲ್ಲಿ ಒಂದು ಪ್ರದೇಶದ ಕರೆನ್ಸಿಯನ್ನು ಇನ್ನೊಂದು ಪ್ರದೇಶದ ಕರೆನ್ಸಿಯಾಗಿ ಕನ್ವರ್ಟ್ ಮಾಡಿದಾಗ ಎಷ್ಟಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಬಹುದು. ಅಷ್ಟೇ ಅಲ್ಲ ಯಾವುದೇ ಪ್ರದೇಶದ ಸಮಯವನ್ನೂ ಕೂಡ ತಕ್ಷಣಕ್ಕೇ ತಿಳಿಯುವ ಅವಕಾಶವನ್ನು ಇದು ನೀಡುತ್ತೆ.
5. ಮಾರ್ಗದರ್ಶಕ ಮತ್ತು ಸಂಚಾರ ದಟ್ಟಣೆಯ ವಿವರ ತಿಳಿಯಲು
ಸಂಚಾರ ದಟ್ಟಣೆಯಿಂದ ನಿಮ್ಮನ್ನು ಕಾಪಾಡಲು ಇದು ನೆರವಾಗುತ್ತೆ. ನೀವು ಸಂಚರಿಸುತ್ತಿರುವ ಪ್ರದೇಶದಲ್ಲಿ ವಾಹನ ದಟ್ಟಣೆ ಹೇಗಿದೆ , ಬೇರೆ ಯಾವ ರಸ್ತಿಯಲ್ಲಿ ಸಂಚರಿಸಿದರೆ ನೀವು ಸೇರಬೇಕಾದ ಸ್ಥಳವನ್ನು ಬೇಗನೆ ಸೇರಲು ಸಾಧ್ಯ ಅನ್ನುವ ರಿಯಲ್ ಟೈಮ್ ಮಾಹಿತಿಯನ್ನು ಗೂಗಲ್ ಅಸಿಸ್ಟೆಂಟ್ ನಿಮಗೆ ನೀಡಲಿದೆ. ಅಷ್ಟೇ ಅಲ್ಲ ನೀವು ಸೇರಬೇಕಾದ ಸ್ಥಳವನ್ನು ತಲುಪಲು ಇನ್ನೆಷ್ಟು ಸಮಯ ಬೇಕು ಅನ್ನುವು ಕ್ಷಣಕ್ಷಣ ಮಾಹಿತಿ ನಿಮಗೆ ಆ ಮೂಲಕ ತಿಳಿಸುವ ವ್ಯವಸ್ಥೆಯನ್ನು ಇದು ಮಾಡಲಿದೆ.
6. ಹಾಡು ಮತ್ತು ವೀಡಿಯೋಗಳನ್ನು ನೋಡಲು
ಹಾಡುಗಳನ್ನು ಗೂಗಲ್ ಪ್ಲೇ ಮ್ಯೂಸಿಕ್ ಅಥವಾ ಯು ಟ್ಯೂಬ್ ಬಳಸಿ ಕೇಳುವ ಅವಕಾಶವು ಈ ಗೂಗಲ್ ಅಸಿಸ್ಟೆಂಟ್ ಮೂಲಕ ಕೇಳಬಹುದು. ಅಷ್ಟೇ ಗಾನ, ಸ್ವಾನ್ ಇತ್ಯಾದಿಗಳಿಂದಲೂ ಕೂಡ ಹಾಡುಗಳನ್ನು ಕೇಳಬಹುದು. ಅಷ್ಟೇ ಅಲ್ಲ ವೀಡಿಯೋಗಳನ್ನು ಹೀಗೆ ನೋಡಬಹುದು ಮತ್ತು ಜಸ್ಟ್ ಬಾಯಲ್ಲಿ ಕೇಳುವ ಮೂಲಕ ಹಾಡಿನ ವಾಲ್ಯೂಮ್ ಹೆಚ್ಚಿಸುವುದು, ಸ್ಟಾಪ್ ಮಾಡುವುದು, ಮತ್ತೊಂದು ಹಾಡನ್ನು ಹಾಕಿಕೊಳ್ಳುವುದು ಇತ್ಯಾದಿಗಳನ್ನು ಮಾಡಲೂ ಕೂಡ ಅವಕಾಶವಿದೆ..
7. ಸ್ಥಳದ ಹುಡುಕಾಟಕ್ಕೆ ಬಳಕೆ ಮಾಡಬಹುದು
“ಫೈಂಡ್ ನಿಯರ್ ಬೈ ರೆಸ್ಟೋರೆಂಟ್”, “ ಫೈಂಡ್ ನಿಯರ್ ಬೈ ಸ್ಟೋರ್ಸ್” ಎಂದು ಹೇಳಿದರೆ, ನೀವು ನಿಮ್ಮ ಹತ್ತಿರದ ಹೋಟೆಲ್ ಅಥವಾ ಶಾಪಿಂಗ್ ಮಾಡಲು ಬೇಕಾಗಿರುವ ಉತ್ತಮ ಅಂಗಡಿಯನ್ನು ಆರಿಸಿಕೊಳ್ಳಬಹುದು.
8. ಖರೀದಿಸಬೇಕಾಗಿರುವ ಸಾಮಾನಿನ ಪಟ್ಟಿ ತಯಾರಿಸಲು
ನೀವು ಯಾವುದಾದರೂ ವಸ್ತುವನ್ನು ಬೇಕಿದ್ದರೆ ನಿಮ್ಮ ಶಾಪಿಂಗ್ ಲಿಸ್ಟ್ ಗೆ ಸೇರಿಸಿಕೊಳ್ಳುವ ಅವಕಾಶವನ್ನು ಗೂಗಲ್ ಅಸಿಸ್ಟೆಂಟ್ ನೀಡಲಿದೆ. “ಗೂಗಲ್ ಆಡ್ (ಖರೀದಿಸಬೇಕಾದ ವಸ್ತುವಿನ ಹೆಸರು) ಟು ಯುವರ್ ಶಾಪಿಂಗ್ ಲಿಸ್ಟ್ “ ಎಂದು ಹೇಳಿದರೆ, ಗುಗಲ್ ಕೀಪ್ ಅಥವಾ ಆನ್ ಲೈನ್ ಗೂಗಲ್ ಶಾಪಿಂಗ್ ಲಿಸ್ಟ್ ಗೆ ನೀವು ಖರೀದಿಸಬೇಕಾಗಿರುವ ವಸ್ತುವನ್ನು ಸೇರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಇದನ್ನು ನೀವು ಮತ್ತೆ ನೋಡಲು ಬಹುದು ಜಸ್ಟ್ “ ವಾಟ್ಸ್ ಆನ್ ಮೈ ಶಾಪಿಂಗ್ ಲಿಸ್ಟ್ “ ಎಂದು ಹೇಳಿದರೆ ಸಾಕು, ನೀವು ಮಾಡಿದ ಪಟ್ಟಿ ನಿಮ್ಮ ಮುಂದೆ ಇರುತ್ತೆ.


Click it and Unblock the Notifications








