ಐನ್ ಸ್ಟೈನ್ ಅವರ ಜೀವನಗಾಥೆಯೇ ಕುತೂಹಲಕಾರಿ ಎನಿಸುವ 9 ವಿಷಯಗಳಿವು!

By Gizbot Bureau
|

ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ, ಪ್ರೀತಿಸುವ ಒಬ್ಬ ವಿಜ್ಞಾನಿ ಎಂದರೆ ಅದು ಖಂಡಿತ ಅಲ್ಬರ್ಟ್ ಐನ್ ಸ್ಟೈನ್. ಇವರ ಜೀವನಗಾಥೆ ಒಂದು ಕುತೂಹಲಕಾರಿಯಾದ ವಿಷಯ. ಈ ಕುತೂಹಲಕ್ಕೆ ಕಾರಣ ಅಲ್ಬರ್ಟ್ ಅವರ ಕುತೂಹಲವೆಂದರೆ ಅತಿಶಯೋಕ್ತಿ ಅಲ್ಲ. ಅವರ ಕುತೂಹಲಗಳಿಂದಲೇ ಸಾಕಷ್ಟು ಅನ್ವೇಷಣೆಗಳು ವಿಜ್ಞಾನದಲ್ಲಿ ಅವರು ಮಾಡುವುದಕ್ಕೆ ಸಾಧ್ಯವಾಗಿದೆ. ಆ ವಿಜ್ಞಾನದ ಅನ್ವೇಷಣೆಗಳು ಇಂದು ಜನರ ಜೀವನಶೈಲಿಯನ್ನೇ ಬದಲಿಸುವುದಕ್ಕೆ ಕಾರಣವಾಗಿದೆ. ಅಲ್ಬರ್ಟ್ ಐನ್ ಸ್ಟೈಲ್ ಅವರ ಜೀವನದ ಪ್ರಮುಖ ಅಂಶಗಳು ಹೀಗಿವೆ

ಐನ್ ಸ್ಟೈನ್ ಅವರ ಜೀವನಗಾಥೆಯೇ ಕುತೂಹಲಕಾರಿ ಎನಿಸುವ 9 ವಿಷಯಗಳಿವು!

1. ಜೀವನದ ಆರಂಭ:

1. ಜೀವನದ ಆರಂಭ:

ಅಲ್ಬರ್ಟ್ ಅವರು 5 ವರ್ಷದವರಿದ್ದಾಗ ಅವರ ತಂದೆಯಿಂದ ಪಾಕೆಟ್ ಕಂಪಾಸ್ ನ್ನು ಅವರು ನೋಡಿದರು. ಇದು ಅವರ ಕುತೂಹಲ ಗರಿಗೆದರಿಸಿದ ಮೊದಲ ಅಂಶ. ವಿಜ್ಞಾನದೆಡೆಗೆ ಅವರ ಕುತೂಹಲಕ್ಕೆ ಕಾರಣವಾಗಿರುವ ಮೊದಲ ಅಂಶ ಇದು ಎಂದು ಅಲ್ಬರ್ಟ್ ಐನ್ ಸ್ಟೈನ್ ಹೇಳಿಕೊಂಡಿದ್ದಾರೆ.

2. ಸಾಕ್ಸ್

2. ಸಾಕ್ಸ್

ಐನ್ ಸ್ಟೈಲ್ ಅವರ ವಿಚಿತ್ರ ಡೆಸ್ಸಿಂಗ್ ಅವರ ಹೈಲೆಟ್ ಆಗಿತ್ತು. ಆದರೆ ಅವರ ಕೆದರಿದ ಕೂಡಲೂ ಕೂಡ ಜನರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲ ಅವರು ಎಂದೂ ಕೂಡ ಶೂ ಧರಿಸುವಾಗ ಸಾಕ್ಸ್ ಹಾಕುತ್ತಿರಲಿಲ್ಲವಂತೆ.. ಅದೂ ಕೂಡ ಹೆಚ್ಚಿನವರನ್ನು ಆಕರ್ಷಿಸಿದೆ. ವಿಜ್ಞಾನಿ ಐನ್ ಸ್ಟೈನ್ ಅವರಿಗೆ ಸಾಕ್ಸ್ ಎಂದರೆ ಕಿರಿಕಿರಿ ಮಾಡುವ ಮತ್ತು ನೋವುಂಟು ಮಾಡುವ ವಸ್ತುವಾಗಿತ್ತಂತೆ.

3. ಮಾತುಗಾರಿಕೆ

3. ಮಾತುಗಾರಿಕೆ

ಐನ್ ಸ್ಟೈನ್ ಮೊದಲ ಬಾರಿಗೆ ಅವರ ಮೊದಲ ನುಡಿಯಾಡಿದ್ದು 3 ವರ್ಷವಾದ ಮೇಲೆ ಅಂದರೆ ಅವರು ಬಹಳ ನಿಧಾನವಾಗಿ ಮಾತು ಕಲಿತಿದ್ದಾರೆ. ಸ್ಟ್ಯಾಂಡರ್ಡ್ ಯುನಿವರ್ಸಿಟಿಯ ಥಾಮಸ್ ಸೋವೆಲ್ ಅವರು ಚುರುಕಿಗಿರುವ ವ್ಯಕ್ತಿಗಳು ನಿಧಾನವಾಗಿ ಮಾತು ಕಲಿಯುವುದನ್ನು ಐನ್ ಸ್ಟೈಲ್ ಸಿಂಡ್ರೋಮ್ ಎಂದೇ ಹೆಸರಿಸಿದ್ದಾರೆ.

4. ಮ್ಯೂಸಿಕ್

4. ಮ್ಯೂಸಿಕ್

ಐನ್ ಸ್ಟೈನ್ ಅವರ ತಾಯಿ ಪೈಂಟಿಸ್ಟ್. ಆಕೆ ತನ್ನ ಮಗ ಮ್ಯೂಸಿಕ್ ನ್ನು ಇಷ್ಟಪಡಬೇಕು ಮತ್ತು ಕಲಿಯಬೇಕು ಎಂದು ಬಯಸಿದ್ದರು.ಅಲ್ಬರ್ಟ್ ಐನ್ ಸ್ಟೈನ್ ಚಿಕ್ಕವರಿದ್ದಾಗ ವಾಯಲಿನ್ ಕಲಿಯುವುದನ್ನು ಇಷ್ಟಪಡಲೇ ಇಲ್ಲ. ಆದರೆ ಟೀನೇಜ್ ಗೆ ಕಾಲಿಟ್ಟ ಮೇಲೆ ಅವರು ವಯಲಿನ್ ಕಲಿತದ್ದು ಮಾತ್ರವಲ್ಲ ಹಾಡುವುದೂ ಕೂಡ ತಿಳಿದಿತ್ತು. ಮ್ಯೂಸಿಕ್ ನ್ನು ಬಹಳವಾಗಿ ಇಷ್ಟಪಟ್ಟರು.

5. ಏಯ್ ಏಯ್ ಐನ್ ಸ್ಟೈನ್ !

5. ಏಯ್ ಏಯ್ ಐನ್ ಸ್ಟೈನ್ !

ನೌಕಾಯಾನ ಅಂದರೆ ಐನ್ ಸ್ಟೈನ್ ಅವರಿಗೆ ಇಷ್ಟವಾಗುತ್ತಿತ್ತು. ಹಾಗಂತ ಅವರು ಅಷ್ಟೇನು ಉತ್ತಮ ನಾವಿಕರಾಗಿರಲಿಲ್ಲ. ದೋಣಿ ಹಾಳಾದರೆ ಅಕ್ಕಪಕ್ಕದವರು ಅದನ್ನು ಸರಿಪಡಿಸಿಕೊಡಬೇಕಿತ್ತು. ಅಷ್ಟೇ ಅಲ್ಲ ಅವರು ತಮ್ಮ ಜೀವನದುದ್ದಕ್ಕೂ ಈಜುವುದನ್ನು ಕಲಿಯಲೇ ಇಲ್ಲವಂತೆ. ಹಾಗಂತ ಅವರು ನೌಕಾಯಾನ ಕೈಗೊಳ್ಳುವುದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ.

6. Pipe Smoker

6. Pipe Smoker

ಐನ್ ಸ್ಟೈನ್ ಪೈಪ್ ನಲ್ಲಿ ಧೂಮಪಾನ ಮಾಡುವುದನ್ನು ಇಷ್ಟಪಡುತ್ತಿದ್ದರು. ಮಾನ್ಟ್ರೈಯಲ್ ಪೈಪ್ ಸ್ಮೋಕರ್ ಕ್ಲಬ್ ಹೆಸರಿನ ಕ್ಲಬ್ ವೊಂದಕ್ಕೆ ಅವರು ಜೀವನಪರ್ಯಂತದ ಸದಸ್ಯತ್ವವನ್ನು ಪಡೆದು ಅವರು ಸೇರಿಕೊಂಡಿದ್ದರು ಮತ್ತು ಅವರು ಪೈಪ್ ಸ್ಮೋಕಿಂಗ್ ಎಲ್ಲಾ ರೀತಿಯ ಮಾನವ ವ್ಯವಹಾರಗಳಲ್ಲಿ ಸ್ವಲ್ಪ ಶಾಂತ ಮತ್ತು ವಸ್ತುನಿಷ್ಟ ತೀರ್ಪನ್ನು ನೀಡುತ್ತದೆ ಎಂದು ನಂಬಿಕೊಂಡಿದ್ದರು.

7.ಆವಿಷ್ಕಾರಗಳು:

7.ಆವಿಷ್ಕಾರಗಳು:

ಐನ್ ಸ್ಟೈನ್ ಅವರು ಅವರ ಸೀನಿಯರ್ ಆಗಿದ್ದ ಲಿಯೋ ಸಿಜಾರ್ಡ್ ಅವರ ಜೊತೆಗೆ ರೆಫ್ರಿಜರೇಟರ್ ನ್ನು ಕೂಡ ಸಂಶೋಧನೆ ಮಾಡಿದ್ದರು. ಎರಡು ದಶಕಗಳ ನಂತರ ಅವರ ಥಿಯರಿಯನ್ನು ಅವರು ಪ್ರಕಟಿಸಿದರು. 1930 ರಲ್ಲಿ ಈ ರೆಪ್ರಿಜರೇಟರ್ ನ್ನು ಪೇಟೆಂಟ್ ಪಡೆಯಲಾಯಿತು ಮತ್ತು ಕೂಡಲೇ ಅದರ ಅಪ್ ಡೇಟ್ ಆಗಿರುವ ವರ್ಷನ್ ಕೂಡ ಬಂತು. ಹೊಸ ವರ್ಷನ್ ತುಂಬಾ ಉತ್ತಮವಾಗಿತ್ತು ಆದರೆ ಅಷ್ಟೇ ಪರಿಸರಕ್ಕೆ ಅಪಾಯಕಾರಿಯಾಗಿತ್ತು.

8. ಅಧ್ಯಕ್ಷರು

8. ಅಧ್ಯಕ್ಷರು

ಇಸ್ರೆಲ್ ನ ಮೊದಲ ಅಧ್ಯಕ್ಷ ಚೈಮ್ ವಿಜ್ಮನ್ ಅವರು 1952, ನವೆಂಬರ್ 9 ರಂದು ಮೃತಪಟ್ಟ ನಂತರ ಇಸ್ರೆಲ್ ನ ಎರಡನೇ ಅಧ್ಯಕ್ಷರಾಗುವಂತೆ ಅಲ್ಬರ್ಟ್ ಐನ್ ಸ್ಟೈನ್ ಅವರಿಗೆ ಆಫರ್ ಬಂದಿತ್ತು. ಆದರೆ 73 ವರ್ಷದವರಾಗಿದ್ದ ಐನ್ ಸ್ಟೈನ್ ನಾಜೂಕಿನಿಂದಲೇ ಅವರಿಗೆ ಬಂದ ಆಫರ್ ನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವನ್ನು ಕೇಳಿದಾಗ ಅವರು " ನೈಸರ್ಗಿಕ ಯೋಗ್ಯತೆಯ ಕೊರತೆ ಮತ್ತು ಜನರನ್ನು ಸರಿಯಾಗಿ ನಿಭಾಯಿಸುವ ತಾಕತ್ತು ಇಲ್ಲದೇ ಇರುವುದು" ಎಂದು ತಿಳಿಸಿದ್ದರು. ಅಂದರೆ ನನಗೆ ವಯಸ್ಸಾಗಿದೆ ನಾನು ಅಧ್ಯಕ್ಷನಾಗುವುದು ಸೂಕ್ತವಲ್ಲ ಎಂದು ಹೇಳಿದ್ದರು.

9. ಅವರ ಹೆಸರನ್ನು ರೀಅರೆಂಜ್ ಮಾಡುವುದು?

9. ಅವರ ಹೆಸರನ್ನು ರೀಅರೆಂಜ್ ಮಾಡುವುದು?

ಇದು ಖಂಡಿತ ಬಹಳ ಮುಖ್ಯವಾದ ಅಂಶ. ಇಂತಹ ವಿಚಾರಗಳೇ ನಮಗೆ ವಿಭಿನ್ನವಾದ ಯೋಗ್ಯತೆಯನ್ನು ಸೃಷ್ಟಿ ಮಾಡಬಹುದು. ಕೆಲವೊಮ್ಮೆ ಹೆಸರೂ ಕೂಡ ವ್ಯಕ್ತಿಯ ಯೋಗ್ಯತೆಯನ್ನು ವಿವರಿಸುತ್ತದೆ. ನಿಮಗೆ ನಂಬಿಕೆ ಬರುತ್ತಿಲ್ಲ ಅನ್ನಿಸುತ್ತೆ ನಾವ್ಯಾಕೆ ಹೀಗೆ ಹೇಳುತ್ತಿದ್ದೇವೆ ಎಂದು. ಐನ್ ಸ್ಟೈನ್ ಅವರ ಹೆಸರನ್ನೇ ತೆಗೆದುಕೊಳ್ಳಿ. ಇಂಗ್ಲೀಷ್ ನಲ್ಲಿ ಅವರ ಹೆಸರಿನ "Albert Einstein" ನಲ್ಲಿರುವ ಅಕ್ಷರಗಳನ್ನು ಆಚೀಚೆ ಮಾಡಿ ಪುನಃ ಜೋಡಿಸಿದರೆ ‘Ten elite brains' ಎಂದು ಕೂಡ ಮಾಡಬಹು.ಇದರರ್ಥ 10 ಶ್ರೇಷ್ಟ ಮೆದುಳುಗಳು ಎಂದಾಗುತ್ತದೆ. ಇದೆಷ್ಟು ಸಮಂಜಸವಾಗಿಲ್ಲವೇ ಐನ್ ಸ್ಟೈಲ್ ಅವರಿಗೆ ನೀವೇ ಹೇಳಿ!

Best Mobiles in India

English summary
Did you know the German genius hated wearing socks? Or he could be the President? Find out more about astonishing Albert Einstein facts.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X