Home
Apps

ವಾಟ್ಸ್‌ಆಪ್‌ ಬದಲಾಗುತ್ತಿದೆ..! ಕಾರಣಗಳು ಏನು ಗೊತ್ತಾ..?

ವಾಟ್ಸ್ ಆಪ್ ನಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ಸೇರಿಸುವುದಕ್ಕೆ ಹಲವು ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಇದು ಬಳಕೆದಾರರಿಗೆ ಇನ್ನಷ್ಟು ಪ್ರಯೋಜನಗಳನ್ನು ಮಾಡಿಕೊಡಲಿದೆ. ಚಾಟ್ ನ್ನು ಆಕ್ಸಿಸ್ ಮಾಡಲು ಮತ್ತಷ್ಟು ಸುಲಭದ ಮಾರ್ಗಗಳನ್ನು ಇದರಲ್ಲಿ ಅಳವಡಿಸಲಾಗುತ್ತದೆ. ಸದ್ಯ ಇಡೀ ವಿಶ್ವದಾದ್ಯಂತ ಅತೀ ಹೆಚ್ಚು ಬಳಕೆ ಮಾಡುವ ಮೆಸೇಜಿಂಗ್ ಆಪ್ ಎಂದು ಗುರುತಿಸಿಕೊಂಡಿರುವ ವಾಟ್ಸ್ ಆಪ್ ಹಲವು ವೈಶಿಷ್ಟ್ಯತೆಗಳನ್ನು ಪರೀಕ್ಷೆ ಮಾಡುತ್ತಿದೆ.

ವಾಟ್ಸ್‌ಆಪ್‌ ಬದಲಾಗುತ್ತಿದೆ..! ಕಾರಣಗಳು ಏನು ಗೊತ್ತಾ..?

ಅಂತಿಮ ವರ್ಷನ್ ಇನ್ನೇನು ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ. ವಾಬೇಟಾ ಇನ್ಫೋ ಈ ಬಗ್ಗೆ ಹಲವು ಮಾಹಿತಿಗಳನ್ನು ಆಗಾಗ ವರದಿ ಮಾಡುತ್ತಲೇ ಇರುತ್ತದೆ.ಈ ಕೆಳಗೆ ನಾವು ತಿಳಿಸುತ್ತಿರುವ ಕೆಲವು ವೈಶಿಷ್ಟ್ಯತೆಗಳು ಬಳಕೆದಾರರನ್ನು ಇನ್ನು ಕೆಲವೇ ದಿನಗಳಲ್ಲಿ ತಲುಪಲಿದೆ ಎಂದು ಹೇಳಲಾಗುತ್ತಿದೆ.

ವೆಕೇಷನ್ ಅಥವಾ ಸೈಲೆಂಟ್ ಮೋಡ್: ಬಳಕೆದಾರರು ಇಚ್ಛೆ ಪಡುವಷ್ಟು ದಿನ ಆರ್ಕೈವ್ ಮಾಡಲು ಅವಕಾಶ

ವೆಕೇಷನ್ ಅಥವಾ ಸೈಲೆಂಟ್ ಮೋಡ್: ಬಳಕೆದಾರರು ಇಚ್ಛೆ ಪಡುವಷ್ಟು ದಿನ ಆರ್ಕೈವ್ ಮಾಡಲು ಅವಕಾಶ

ಈ ವೈಶಿಷ್ಟ್ಯತೆಯ ಬಗ್ಗೆ ಕೆಲಸ ಮಾಡಲಾಗುತ್ತಿದೆ.ಈಗಾಗಲೇ ಗ್ರಾಹಕರಿಗೆ ಬಿಡುಗಡೆಗೊಳಿಸಲಾಗಿರುವ ಸೈಲೆಂಟ್ ಮೋಡ್ ನ್ನು ಆಧರಿಸಿರುವ ವೈಶಿಷ್ಟ್ಯತೆ ಇದಾಗಿದೆ ಎನ್ನಲಾಗುತ್ತಿದೆ.ಬಳಕೆದಾರರು ಇಚ್ಛೆ ಪಡುವಷ್ಟು ದಿನ ಚಾಟ್ ನ್ನು ಆರ್ಕೈವ್ ಮಾಡಲು ಇದು ಅವಕಾಶ ನೀಡುತ್ತದೆ.

ಗ್ರೂಪ್ ಸದಸ್ಯರ ಪಟ್ಟಿಯನ್ನು ಹಿಗ್ಗಿಸುವ ಅವಕಾಶ: ಗ್ರೂಪ್ ಸದಸ್ಯರ ಪಟ್ಟಿಯನ್ನು ಹೈಡ್ ಮಾಡಬಹುದು

ಗ್ರೂಪ್ ಸದಸ್ಯರ ಪಟ್ಟಿಯನ್ನು ಹಿಗ್ಗಿಸುವ ಅವಕಾಶ: ಗ್ರೂಪ್ ಸದಸ್ಯರ ಪಟ್ಟಿಯನ್ನು ಹೈಡ್ ಮಾಡಬಹುದು

ಆಂಡ್ರಾಯ್ಡ್ ಬಳಕೆದಾರರಿಗೆ ಈ ವೈಶಿಷ್ಟ್ಯತೆ ಲಭ್ಯವಿದೆ. ಮೋರ್ ಟೆಕ್ಸ್ಟ್ ನ್ನು ಟ್ಯಾಪ್ ಮಾಡುವ ಬದಲಾಗಿ ಗ್ರೂಪ್ ನಲ್ಲಿರುವ ಸದಸ್ಯರ ಪಟ್ಟಿಯನ್ನು ಇದು ಹೈಡ್ ಮಾಡುತ್ತದೆ.

ನ್ಯೂ ಚಾಟ್ ಸ್ಟಿಕ್ಕರ್ಸ್

ನ್ಯೂ ಚಾಟ್ ಸ್ಟಿಕ್ಕರ್ಸ್

ಕೆಲವು ದಿನಗಳಿಂದ ವಾಟ್ಸ್ ಆಪ್ ಹೊಸ ಚಾಟ್ ಸ್ಟಿಕ್ಕರ್ಸ್ ಗಳ ಬಗ್ಗೆ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಇದೀಗ ಕೆಲವು ಸ್ಕ್ರೀನ್ ಶಾಟ್ ಗಳನ್ನು ಕೆಲವು ಬಳಕೆದಾರರು ವೆಬ್ ನಲ್ಲಿ ಹಾಕಿರುವುದನ್ನು ಗಮನಿಸಲಾಗಿದೆ ಆದರೆ ಇದಿನ್ನು ಬೆಟಾ ಮೋಡ್ ನಲ್ಲೂ ಲಭ್ಯವಿಲ್ಲ. ಇದು ಆಪ್ ನ ಒಳಗೆ ಇನ್ ಬಿಲ್ಟ್ ಎಮೋಜಿ ಸೆಕ್ಷನ್ ನ್ನು ಹೊಂದಿರಲಿದೆ.

ಲಿಂಕ್ಡ್ ಅಕೌಂಟ್ಸ್:ಲಿಂಕ್ಡ್ ಅಕೌಂಟ್ ಗಳ ಪಾಸ್ ವರ್ಡ್ ಗಳನ್ನು ರಿಕವರ್ ಮಾಡಲು ಅವಕಾಶ

ಲಿಂಕ್ಡ್ ಅಕೌಂಟ್ಸ್:ಲಿಂಕ್ಡ್ ಅಕೌಂಟ್ ಗಳ ಪಾಸ್ ವರ್ಡ್ ಗಳನ್ನು ರಿಕವರ್ ಮಾಡಲು ಅವಕಾಶ

ವಾಟ್ಸ್ ಆಪ್ ಈಗಾಗಲೇ ಲಿಂಕ್ಡ್ ಅಕೌಂಟ್ಸ್ ವೈಶಿಷ್ಟ್ಯತೆಯ ಬಗ್ಗೆ ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯತೆಯ ಉದ್ದೇಶ ಏನು ಎಂಬ ಬಗ್ಗೆ ಇನ್ನೂ ಎಲ್ಲೂ ಪ್ರಕಟಿಸಲಾಗಿಲ್ಲ ಆದರೆ ಪಾಸ್ ವರ್ಡ್ ರಿಕವರಿಯನ್ನು ಲಿಂಕ್ಡ್ ಅಕೌಂಟ್ ನಲ್ಲಿ ಮಾಡಲು ಇದು ಅವಕಾಶ ನೀಡುತ್ತದೆ ಎಂದು ಊಹಿಸಲಾಗಿದೆ.

ಸ್ವೈಪ್ ಟು ರಿಪ್ಲೈ(ಆಂಡ್ರಾಯ್ಡ್):ರಿಪ್ಲೈ ಟೈಪ್ ಮಾಡಲು ಕೇವಲ ಸ್ಪೈಪ್ ಮಾಡಿದರೆ ಸಾಕು

ಸ್ವೈಪ್ ಟು ರಿಪ್ಲೈ(ಆಂಡ್ರಾಯ್ಡ್):ರಿಪ್ಲೈ ಟೈಪ್ ಮಾಡಲು ಕೇವಲ ಸ್ಪೈಪ್ ಮಾಡಿದರೆ ಸಾಕು

ಐಓಎಸ್ ಡಿವೈಸ್ ಗಳಲ್ಲಿ ಈಗಾಗಲೇ ಲಭ್ಯವಿರುವ ಸ್ವೈಪ್ ಟು ರಿಪ್ಲೈ ಇದೀಗ ಆಂಡ್ರಾಯ್ಡ್ ನಲ್ಲೂ ಲಭ್ಯ ಮತ್ತು ಸದ್ಯ ಆಂಡ್ರಾಯ್ಡ್ ಬೆಟಾ ವರ್ಷನ್ ನಲ್ಲಿ ಲಭ್ಯವಿದೆ. ಯಾವುದೇ ವಾಟ್ಸ್ ಆಪ್ ಮೆಸೇಜಿನ ರಿಪ್ಲೈ ಗಾಗಿ ನೀವು ಕೇವಲ ಸ್ವೈಪ್ ಮಾಡಿದರೆ ಸಾಕು.

ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಜಾಹೀರಾತುಗಳು

ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಜಾಹೀರಾತುಗಳು

ಸ್ಟೇಟಸ್ ಅಪ್ ಡೇಟ್ ನ ಹೆಸರಿನಲ್ಲಿ ಜಾಹೀರಾತುಗಳನ್ನು ವಾಟ್ಸ್ ಆಪ್ ತರಲಿದೆ ಎಂಬ ಬಗ್ಗೆ ಕೆಲವು ವರದಿಗಳು ಬಂದಿದೆ. ವಾಟ್ಸ್ ಆಪ್ ಫೇಸ್ ಬುಕ್ ಪಡೆದುಕೊಳ್ಳುವ ಮುನ್ನವೇ ಈ ಒಂದು ಆಲೋಚನೆಯನ್ನು ಕಂಪೆನಿ ಮಾಡಿತ್ತು ಎಂದು ಒಂದು ವರದಿ ಹೇಳುತ್ತದೆ.

ವೀಡಿಯೋಗಳಿಗೆ PiP ಮೋಡ್ (ಆಂಡ್ರಾಯ್ಡ್): ಚಾಟ್ ಮಾಡುತ್ತಲೇ ವೀಡಿಯೋ ನೋಡಬಹುದು

ವೀಡಿಯೋಗಳಿಗೆ PiP ಮೋಡ್ (ಆಂಡ್ರಾಯ್ಡ್): ಚಾಟ್ ಮಾಡುತ್ತಲೇ ವೀಡಿಯೋ ನೋಡಬಹುದು

ಪಿಕ್ಚರ್ ಇನ್-ಪಿಕ್ಚರ್ ಮೋಡ್ ವೈಶಿಷ್ಟ್ಯತೆಯು ಆಂಡ್ರಾಯ್ಡ್ ನ ವಾಟ್ಸ್ ಆಪ್ ಬೆಟಾ ವರ್ಷನ್ ನಲ್ಲಿ ಕೆಲವು ದಿನಗಳಿಂದ ಲಭ್ಯವಿದೆ.ಐಓಎಸ್ ಫ್ಲಾಟ್ ಫಾರ್ಮ್ ನಲ್ಲಿ ಹಲವು ದಿನಗಳಿಂದ ಇದು ಲಭ್ಯವಿದೆ. ಚಾಟ್ ನ್ನು ಸ್ಕ್ರೋಲ್ ಮಾಡುವಾಗಲೂ ಕೂಡ ವೀಡಿಯೋಗಳನ್ನು ನೋಡಲು ಇದು ಅವಕಾಶ ಮಾಡಿಕೊಡುವ ವೈಶಿಷ್ಟ್ಯತೆ ಆಗಿದೆ.

ಡಾರ್ಕ್ ಮೋಡ್ ಸಾಧ್ಯತೆ

ಡಾರ್ಕ್ ಮೋಡ್ ಸಾಧ್ಯತೆ

ಕಳೆದ ತಿಂಗಳು ವಾಬೇಟಾ ಇನ್ಫೋ ಮಾಹಿತಿ ನೀಡಿರುವಂತೆ ವಾಟ್ಸ್ ಆಪ್ ಈಗಾಗಲೇ ಡಾರ್ಕ್ ಮೋಡ್ ವೈಶಿಷ್ಟ್ಯತೆಯ ಬಗ್ಗೆ ಕೆಲಸ ಮಾಡುತ್ತಿದೆ.ಕೆಲವು ಇಮೇಜ್ ಗಳನ್ನು ಕೂಡ ಈ ಬಗ್ಗೆ ಹಂಚಿಕೊಳ್ಳಲಾಗಿತ್ತು. ಆದರೆ ಯಾವುದೇ ಅಧಿಕೃತ ಮಾಹಿತಿ ನಂತರದ ದಿನಗಳಲ್ಲಿ ಹೊರಬೀಳಲಿಲ್ಲ.ಡಾರ್ಕ್ ಮೋಡ್ ವೈಶಿಷ್ಟ್ಯತೆ ಬೇಟಾ ವರ್ಷನ್ ನಲ್ಲೂ ಕೂಡ ಲಭ್ಯವಿಲ್ಲ. ಸಮಯ ಮಾತ್ರವೇ ಈ ಬದಲಾವಣೆಯನ್ನು ವಾಟ್ಸ್ ಆಪ್ ನಲ್ಲಿ ಯಾವಾಗ ಬರುತ್ತದೆ ಎಂಬುದನ್ನು ಹೇಳಬಹುದು.

ಮೆಸೇಜ್ ರಿಕಾಲ್ ಮೋಡ್

ಮೆಸೇಜ್ ರಿಕಾಲ್ ಮೋಡ್

13 ಘಂಟೆಗಳ ನಂತರ ಮೆಸೇಜ್ ನ್ನು ರಿಕಾಲ್ ಮಾಡಲು ಅವಕಾಶವಿರುವುದಿಲ್ಲ, ರಿಸಿಪಿಯಂಟ್ ರಿಸೀವ್ ಮಾಡದೇ ಇದ್ದಲ್ಲಿ 8 ನಿಮಿಷಗಳು. ಈಗಾಗಲೇ ನೀವು ಕಳಿಸಿರುವ ಮೆಸೇಜ್ ನ್ನು ಒಂದು ಘಂಟೆಯೊಳಗೆ ಡಿಲೀಟ್ ಮಾಡುವುದಕ್ಕೆ ಅವಕಾಶವಿದೆ.ಇನ್ನು ಮುಂದೆ 13 ಘಂಟೆಗಳ ಅವಧಿಯಲ್ಲೂ ಕೂಡ ಡಿಲೀಟ್ ಮಾಡಲು ಅವಕಾಶ ನೀಡುತ್ತದೆ. ಆದರೆ ಇದೀಗ ಇನ್ನು ಟೆಸ್ಟಿಂಗ್ ಹಂತದಲ್ಲಿದೆ.

Best Mobiles in India

English summary
9 ways WhatsApp is set to change. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+