ಹೊಸ ಆಧಾರ್ ಆಪ್ ನಲ್ಲಿರುವ ಪ್ರಮುಖ ಫೀಚರ್ ಗಳನ್ನು ನೀವು ತಿಳಿದುಕೊಳ್ಳಲೇಬೇಕು!

By Gizbot Bureau
|

ಹೊಸದಾಗಿ ಎಂಆಧಾರ್ ಆಪ್ ನ್ನು ಐಓಎಸ್ ಮತ್ತು ಆಂಡ್ರಾಯ್ಡ್ ಫೋನ್ ಗಳಿಗಾಗಿ ಪ್ರಕಟಿಸಲಾಗಿದೆ. ಇದರಲ್ಲಿರುವ ಐದು ಪ್ರಮುಖ ಫೀಚರ್ ಗಳು ಎಂಆಧಾರ್ ಆಪ್ ನ ಬಳಕೆಯನ್ನು ಮತ್ತಷ್ಟು ಸರಳಗೊಳಿಸಿದೆ.

ಆಂಡ್ರಾಯ್ಡ್ ಆಪ್

ವಿಶಿಷ್ಟ ಗುರುತಿನ ಪ್ರಾಧಿಕಾರ ಹೊಸದಾಗಿ ಐಓಎಸ್ ಮತ್ತು ಆಂಡ್ರಾಯ್ಡ್ ಆಪ್ ವರ್ಷನ್ ಗಾಗಿ ಎಂಆಧಾರ್ ಆಪ್ ನ್ನು ಬಿಡುಗಡೆಗೊಳಿಸಿದೆ. ಸದ್ಯ ಈ ಹಿಂದಿನ ಎಲ್ಲಾ ಆಪ್ ವರ್ಷನ್ ಗಳನ್ನು ಡಿಲೀಟ್ ಮಾಡುವುದಕ್ಕೆ ಸೂಚನೆ ನೀಡಿದೆ. ಯಾಕೆಂದರೆ ಅವುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ ಮತ್ತು ಯಾವುದೇ ರೀತಿಯಿಂದಲೂ ಕೂಡ ಆಧಾರ್ ಸಂಸ್ಥೆಯಿಂದ ಅವುಗಳನ್ನು ಬೆಂಬಲಿಸಲಾಗುವುದಿಲ್ಲ ಎಂದು ತಿಳಿಸಿದೆ.

ಈ ಆಪ್ ನಿಮ್ಮ ಆಧಾರ್ ನಂಬರ್, ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಮತ್ತು ಫೋಟೋಪ್ರತಿಯನ್ನು ಹೊತ್ತೊಯ್ಯುವುದಕ್ಕೆ ಅನುಕೂಲಕರವಾಗಿರುತ್ತದೆ. ನಾವಿಲ್ಲಿ ನಿಮಗೆ ಐದು ಪ್ರಮುಖ ಫೀಚರ್ ಗಳ ಬಗ್ಗೆ ತಿಳಿಸುತ್ತಿದ್ದು ಇವುಗಳು ಎಂಆಧಾರ್ ಆಪ್ ನ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಿದೆ.

ಎಂಆಧಾರ್ ಆಪ್ ನ ಸೆಟ್ಟಿಂಗ್ಸ್ :

ಎಂಆಧಾರ್ ಆಪ್ ನ ಸೆಟ್ಟಿಂಗ್ಸ್ :

ಈ ಆಪ್ ನ್ನು ಬಳಸಬೇಕು ಎಂದರೆ ಮೊದಲು ನೀವು ಈ ಆಪ್ ಗೆ ಲಾಗ್ ಇನ್ ಆಗಬೇಕು ಮತ್ತು ನಿಮ್ಮ ಮೊಬೈಲ್ ನಂಬರಿನ ವೆರಿಫಿಕೇಷನ್ ಆಗಬೇಕು.ಇದನ್ನು ಮಾಡುವುದಕ್ಕಾಗಿ ನೀವು ಮೇಲ್ಬಾಗದ ಬ್ಯಾನರ್ ನಲ್ಲಿರುವ "Register your Aadaar."ನ್ನು ಕ್ಲಿಕ್ಕಿಸಿ. ಇದನ್ನು ಕ್ಲಿಕ್ಕಿಸುವುದರಿಂದಾಗಿ ನಿಮ್ಮನ್ನು ಹೊಸ ಪೇಜಿಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಬು ಮತ್ತು ಓಟಿಪಿಗಾಗಿ ಕಾಯಬೇಕು. ನೀವು ಆಧಾರ್ ಕಾರ್ಡ್ ನಲ್ಲಿ ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಓಟಿಪಿ ಬಂದ ನಂತರ, ಅದನ್ನು ಆಪ್ ನಲ್ಲಿ ಎಂಟರ್ ಮಾಡಿ.ಈ ಪ್ರೊಸೆಸ್ ನಂತರ ಆಧಾರ್ ಕಾರ್ಡ್ ನ್ನು ನೀವು ಆಪ್ ನಲ್ಲಿ ಲಿಂಕ್ ಮಾಡುವ ಕೆಲಸ ಮುಗಿದಂತೆ. ಇದೀಗ ನಿಮ್ಮ ಸ್ಮಾರ್ಟ್ ಫೋನಿನಲ್ಲಿಯೇ ಆಧಾರ್ ಕಾರ್ಡಿನ ಅಧಿಕೃತ ಕಾಪಿಯೊಂದು ಲಭ್ಯವಿರುತ್ತದೆ.

ಹೊಸದಾಗಿ ಪ್ರಿಂಟ್ ತೆಗೆಯುವುದಕ್ಕೆ ಮನವಿ :

ಹೊಸದಾಗಿ ಪ್ರಿಂಟ್ ತೆಗೆಯುವುದಕ್ಕೆ ಮನವಿ :

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನ್ನು ನೀವು ಎಲ್ಲೋ ಕಳೆದುಕೊಂಡಿದ್ದೀರಿ ಅಥವಾ ಕೈತಪ್ಪಿ ಎಲ್ಲೋ ಇಟ್ಟುಕೊಂಡು ಬಿಟ್ಟಿದ್ದೀರಿ ಎಂದುಕೊಳ್ಳೋಣ. ಆಗ ಹೊಸ ಎಂಆಧಾರ್ ಆಪ್ ನಲ್ಲಿ ಹೊಸ ಆಧಾರ್ ಕಾರ್ಡ್ ನ ಪ್ರಿಂಟ್ ಮಾಡಿರುವ ಕಾಪಿಗಾಗಿ ಮನವಿ ಮಾಡಬಹುದು.

ಆಪ್ ನ ಮೊದಲ ಪೇಜಿನಲ್ಲಿಯೇ ‘Order Aadhaar Reprint' ಆಯ್ಕೆ ಇರುತ್ತದೆ. ಹೊಸ ಆಧಾರ್ ಕಾರ್ಡ್ ಪ್ರಿಂಟ್ ಮಾಡಿಸಿಕೊಳ್ಳುವುದಕ್ಕಾಗಿ ನೀವಿದನ್ನು ಕ್ಲಿಕ್ಕಿಸಬಹುದು. ಆಪ್ ನ ಒಳಗೆ ನಿಮ್ಮ ಬಳಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಇದಿಯಾ ಅಥವಾ ಇಲ್ಲವಾ ಎಂದು ಕೇಳಲಾಗುತ್ತದೆ. ಆಪ್ ನ್ನು ಸೆಲೆಕ್ಟ್ ಮಾಡಿದ ನಂತರ ಹೊಸ ಪೇಜ್ ನಲ್ಲಿ ನಿಮ್ಮ ಆಧಾರ್ ವಿವರವನ್ನು ಎಂಟರ್ ಮಾಡುವುದಕ್ಕೆ ಹೇಳಲಾಗುತ್ತದೆ. ಇದಾದ ನಂತರ ನೀವು ಉಳಿದೆಲ್ಲಾ ವಿವರವನ್ನು ಎಂಟರ್ ಮಾಡಬೇಕು ಮತ್ತು ಪಾವತಿಯನ್ನು ಮಾಡಬೇಕು. ನಿಮ್ಮ ಕಾರ್ಡ್ ಬರುವುದಕ್ಕಾಗಿ ನಂತರ ಕಾಯಬೇಕು.

ಈ ಸೇವೆಯಲ್ಲಿ ಪಾವತಿ ಇರುತ್ತದೆ. ನಿಮಗೆ ಉಚಿತವಾಗಿ ಪ್ರಿಂಟ್ ಮಾಡಿರುವ ಹೊಸ ಕಾಪಿಯನ್ನು ನೀಡಲಾಗುವುದಿಲ್ಲ. 50 ರುಪಾಯಿ ಇದಕ್ಕಾಗಿ ನೀವು ಪಾವತಿ ಮಾಡಬೇಕು. ಇದರಲ್ಲಿ ಸ್ಪೀಡ್ ಪೋಸ್ಟ್ ಚಾರ್ಜ್ ಮತ್ತು ಜಿಎಸ್ ಟಿ ಸೇರಿರುತ್ತದೆ. UIDAI ಪ್ರಿಂಟ್ ಆಗಿರುವ ಕಾಪಿಯನ್ನು ನಿಮಗೆ ಪ್ರಿಂಟ್ ಮಾಡಿ ಸ್ಪೀಡ್ ಪೋಸ್ಟ್ ಮಾಡಿ ಕಳುಹಿಸುವುದಕ್ಕೆ ಐದು ದಿನದ ಕಾಲಾವಕಾಶ ತೆಗೆದುಕೊಳ್ಳುತ್ತದೆ.

ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಅವಕಾಶ:

ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಅವಕಾಶ:

ಕೆಲವು ಪ್ರದೇಶಗಳಲ್ಲಿ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಬೇಕಾಗಿರುವ ಅನಿವಾರ್ಯತೆ ಎದುರಾಗುತ್ತದೆ. ಕೆಲವು ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯು ಅನಗತ್ಯವಾಗಿರುವ ವ್ಯಕ್ತಿಗಳ ಕೈಗೆ ಹೋಗಬಾರದು ಎಂದು ಬಹಳ ಜಾಗರೂಕರಾಗಿರುತ್ತಾರೆ. ಆ ಜಾಗರೂಕತೆಯ ಅಗತ್ಯವೂ ಇದೆ. ಅವರು ತಮ್ಮ ಆಧಾರ್ ಸಂಖ್ಯೆಯನ್ನು ಸುಖಾಸುಮ್ಮನೆ ಯಾರೊಂದಿಗೋ ಹಂಚಿಕೊಳ್ಳುವುದಕ್ಕೆ ಬಯಸುವುದಿಲ್ಲ. ಹಾಗಾಗಿ ಆಪ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಸುರಕ್ಷಿತವಾಗಿ ಹಂಚಿಕೊಳ್ಳುವುದಕ್ಕೆ ಅವಕಾಶವಿದೆ. ಕ್ಯೂಆರ್ ಕೋಡ್ ಅಥವಾ ವರ್ಚುವಲ್ ಐಡಿ ಜನರೇಷನ್ ಮೂಲಕ ನೀವಿದನ್ನು ಸಾಧಿಸಬಹುದು.

ಮೈಆಧಾರ್ ಆಪ್ ನ ಕೆಳಗಿನ ಬಾರ್ ನಲ್ಲಿ ಲಭ್ಯವಿರುವಂತ ಆಯ್ಕೆ ಇದರಲ್ಲಿದೆ ಅಂದುಕೊಳ್ಳಬೇಡಿ. ಇಲ್ಲಿರುವ ಆಯ್ಕೆಯು ಮೈ ಆಧಾರ್ ಆಯ್ಕೆಯಲ್ಲಿ ಇರುವಂತೆ ಅಲ್ಲ. ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಆಪ್ ನಲ್ಲಿ ನಿಮ್ಮ ಪಾಸ್ ವರ್ಡ್ ಹಾಕುವುದಕ್ಕೆ ಹೇಳಲಾಗುತ್ತದೆ. ಅದನ್ನು ಕ್ಲಿಕ್ಕಿಸಿದ ನಂತರ ಆಧಾರ್ ವಿವರದ ಪೇಜಿಗೆ ನಿಮ್ಮನ್ನು ಕರೆದುಕೊಂಡು ಹೋಗಲಾಗುತ್ತದೆ.ಅಲ್ಲಿ ನೀವು ಎರಡು ಆಯ್ಕೆಗಳನ್ನು ನೋಡಬಹುದು ‘Show QR Code' ಅಥವಾ ‘Generate VID'.

ಆಪ್ ಮೂಲಕ ಆಧಾರ್ ಓಟಿಪಿ ಪಡೆಯುವುದಕ್ಕೆ ಅವಕಾಶ:

ಆಪ್ ಮೂಲಕ ಆಧಾರ್ ಓಟಿಪಿ ಪಡೆಯುವುದಕ್ಕೆ ಅವಕಾಶ:

ಕೆಲವೊಮ್ಮೆ ಓಟಿಪಿ ಮೆಸೇಜ್ ಸೇವೆಯು ಸರಳವಾಗಿ ಕೆಲಸ ಮಾಡುವುದಿಲ್ಲ ಅಥವಾ ಅವಧಿ ಮುಗಿದ ನಂತರ ನಿಮ್ಮ ಮೊಬೈಲ್ ಗೆ ಓಟಿಪಿ ಬರುವ ಸಾಧ್ಯತೆ ಇರುತ್ತದೆ.ಒಂದು ವೇಳೆ ನೀವೂ ಕೂಡ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಲ್ಲಿ ಆಧಾರ್ ಮೂಲಕ ನೀವು ವೆರಿಫೈ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಸಮಸ್ಯೆ ಪರಿಹರಿಸಿಕೊಳ್ಳಲು ನಿಮಗೆ ತಾತ್ಕಾಲಿಕ ಓಟಿಪಿಯ ಆಯ್ಕೆ ಇರುತ್ತದೆ. ಇದು ಕೆಲವೇ ಸೆಕೆಂಡ್ ಗಳ ವರೆಗೆ ಮಾತ್ರವೇ ಲಭ್ಯವಿರುತ್ತದೆ.

ಈ ಫೀಚರ್ ಗಾಗಿ ನಿಮಗೆ ಆಪ್ ನ ಕೆಳಗಿನ ಬಾರ್ ನಲ್ಲಿ ಮೈ ಆಧಾರ್ ಆಯ್ಕೆ ಇರುತ್ತದೆ. ಇದನ್ನು ಕ್ಲಿಕ್ ಮಾಡಿದ ನಂತರ ಆಪ್ ನಿಮಗೆ ಪಾಸ್ ವರ್ಡ್ ಇನ್ ಪುಟ್ ಮಾಡುವಂತೆ ಹೇಳುತ್ತದೆ ಮತ್ತು ನಿಮ್ಮ ಆಧಾರ್ ವಿವರದ ಪೇಜಿಗೆ ಕೊಂಡೊಯ್ಯುತ್ತದೆ. ನೀವಿಲ್ಲಿ ಟಿಓಟಿಪಿಯನ್ನು ಗಮನಿಸಬಹುದು.

ಲಾಕ್/ಅನ್ ಲಾಕ್ ಬಯೋಮೆಟ್ರಿಕ್ :

ಲಾಕ್/ಅನ್ ಲಾಕ್ ಬಯೋಮೆಟ್ರಿಕ್ :

ನೀವು ನಿಮ್ಮ ಪ್ರೈವೆಸಿಯ ಬಗ್ಗೆ ಚಿಂತಿತರಾಗಿದ್ದಲ್ಲಿ ಮತ್ತು ಬಯೋಮೆಟ್ರಿಕ್ಸ್ ಸಹಾಯದಿಂದ ಯಾರಿಗೂ ನಿಮ್ಮ ಆಧಾರ್ ವಿವರವನ್ನು ನೀಡಲು ಬಯಸದೇ ಇದ್ದಲ್ಲಿ ನೀವು ಸರಳವಾಗಿ ಆಪ್ ನ ಮೈ ಆಧಾರ್ ವಿಭಾಗದಲ್ಲಿ ನಿಮ್ಮ ಆಧಾರ್ ವಿವರವನ್ನು ತಾತ್ಕಾಲಿಕವಾಗಿ ಲಾಕ್ ಮತ್ತು ಅನ್ ಲಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಬಯೋಮೆಟ್ರಿಕ್ ಮೂಲಕ ನೀವು ನಿಮ್ಮ ಆಧಾರ್ ನ್ನು ವೆರಿಫೈ ಮಾಡಬೇಕಿದ್ದಲ್ಲಿ ಅನ್ ಲಾಕ್ ಮಾಡಿಕೊಳ್ಳುವುದನ್ನು ಮರೆಯುವಂತಿಲ್ಲ.

ದೃಢೀಕರಣ ಇತಿಹಾಸ:

ದೃಢೀಕರಣ ಇತಿಹಾಸ:

ಒಂದು ವೇಳೆ ನಿಮ್ಮ ಆಧಾರ್ ವಿವರವು ಕಾನೂನುಬಾಹಿರವಾಗಿ ಆಕ್ಸಿಸ್ ಆಗಿದೆ ಎಂದು ನಿಮಗೆ ಅನ್ನಿಸಿದ್ದಲ್ಲಿ ನೀವು ಎಂಆಧಾರ್ ಆಪ್ ತೆರಳಿ ಮತ್ತು ಮೈ ಆಧಾರ್ ವಿಭಾಗವನ್ನು ತೆರೆಯಿರಿ. ನೀವಲ್ಲಿ ‘Authentication History' ಎಂಬ ಆಯ್ಕೆಯನ್ನು ಆಕ್ಸಿಸ್ ಮಾಡಬಹುದು. ಇದನ್ನು ಟ್ಯಾಪ್ ಮಾಡಿದಾಗ ಹೊಸ ವೆರಿಫಿಕೇಷನ್ ಸ್ಕ್ರೀನ್ ಲಭ್ಯವಾಗುತ್ತದೆ. ನಿಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಓಟಿಪಿ ಲಭ್ಯವಾಗುತ್ತದೆ. ಇಲ್ಲಿ ನೀವು ಯಾವೆಲ್ಲಾ ದಿನಾಂಕದಂದು ನಿಮ್ಮ ಆಧಾರ್ ವಿವರದ ವಿಚಾರಣೆಗಳು ನಡೆದಿದೆ ಎಂಬ ಎಲ್ಲಾ ವಿವರಗಳನ್ನು ಪಡೆಯಬಹುದು.

Most Read Articles
Best Mobiles in India

English summary
Aadhaar App Gets New Update With Revamped UI

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X