ಸ್ಕೈಪ್ ಲೈಟ್ ನಲ್ಲಿದೆ ಆಧಾರ್ ವೆರಿಫಿಕೇಷನ್: ಏನೀದರ ಉಪಯೋಗ..?

Written By: Lekhaka

ಮೈಕ್ರೋ ಸಾಫ್ಟ್ ಲಾಂಚ್ ಮಾಡಿದ್ದ ಸ್ಕೈಪ್ ಲೈಟ್ ಆಪ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿತ್ತು. ಅಲ್ಲದೇ ವೇಗವಾಗಿ ಕಾರ್ಯನಿರ್ವಹಿಸುವ ಅತೀ ಸಣ್ಣ ಗಾತ್ರದ ಆಪ್ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿತ್ತು. ಅಲ್ಲದೇ ಈ ಬಾರಿ ಮತ್ತೊಂದು ಹೊಸ ಆಯ್ಕೆಯೊಂದಿಗೆ ಬಂದಿದ್ದು, ಆಧಾರ್ ವೈರಿಫಿಕೇಷನ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಿದೆಯಂತೆ.

ಸ್ಕೈಪ್ ಲೈಟ್ ನಲ್ಲಿದೆ ಆಧಾರ್ ವೆರಿಫಿಕೇಷನ್: ಏನೀದರ ಉಪಯೋಗ..?

ಇದು ಭಾರತೀಯ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಜುಲೈ5 ರಂದು ಬಿಡುಗಡೆಯಾದ ಆಪ್ ಡೇಟ್ ನಲ್ಲಿ ಈ ಆಯ್ಕೆಯೂ ಲಭ್ಯವಿರಲಿದೆ. ಇದು ಸ್ಕೈಪ್ ಲೈಟ್ ಬಳಕೆ ಮಾಡಿಕೊಳ್ಳಲು ಪ್ರಮುಖ ಆಕರ್ಷಣೆಯಾಗಲಿದೆ ಎನ್ನಲಾಗಿದೆ.

ಆಧಾರ್ ವಿಶ್ವದ ಅತೀ ದೊಡ್ಡ ರಾಷ್ಟ್ರಿಯ ಗುರುತೀನ ಸಂಖ್ಯೆಯಾಗಿದ್ದು, ಭಾರತೀಯರೆಲ್ಲರೂ ಈ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗಿದ್ದು, ಸರಕಾರದ ಸೇವೆಗಳನ್ನು ಹಾಗೂ ಎಲ್ಲೇಡೆ ಗುರುತಿನ ಚೀಟಿಗಾಗಿ ಆಧಾರ್ ಅನ್ನು ನೀಡಲೆಬೇಕಾಗಿದೆ.

ಆಧಾರ್ 12 ಅಂಕಿಗಳ ಸಂಖ್ಯೆಯಾಗಿದ್ದು, ಇದರಲ್ಲಿ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿ, ವಿಳಾಸ ಮುಂತಾದವುಗಳು ಇರಲಿದೆ. ಇದನ್ನು ಬಳಸಿಕೊಂಡು ನೀವು ಸ್ಕೈಪ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಸ್ಕೈಪ್ ಲೈಟ್ ನಲ್ಲಿದೆ ಆಧಾರ್ ವೆರಿಫಿಕೇಷನ್: ಏನೀದರ ಉಪಯೋಗ..?

ನೀವು ಸ್ಕೈಪ್ ಲೈಟ್ ಮೂಲಕ ನಿಮ್ಮ ಕ್ಲೈಂಟ್ ಇಲ್ಲವೇ ಸರಕಾರಿ ಅಧಿಕಾರಿಗಳೊಡನೆ ಮಾತನಾಡಬೇಕು ಎನ್ನುವ ಸಂದರ್ಭದಲ್ಲಿ ಸುರಕ್ಷತೆಗಾಗಿ ಕರೆ ಮಾಡಿದವರು ಮತ್ತು ಕರೆ ಸ್ವೀಕರಿಸಿದವರು ಆಧಾರ್ ವೈರಿಫಿಕೇಷನ್ ಕೇಳಬಹುದಾಗಿದೆ.

ಸ್ಕೈಪ್ ಲೈಟ್ ನಲ್ಲಿದೆ ಆಧಾರ್ ವೆರಿಫಿಕೇಷನ್: ಏನೀದರ ಉಪಯೋಗ..?

ನೀವು ಕರೆ ಮಾಡಬೇಕಾದರೆ ಆಧಾರ್ ನಂ. ಎಂಟ್ರಿ ಮಾಡಬೇಕು ಅದೇ ಮಾದರಿಯಲ್ಲಿ ಕರೆ ಸ್ವೀಕರಿಸಿದವರು ಅವರ ಆಧಾರ್ ನಂ ನೀಡಿದ ನಂತರದಲ್ಲಿ ಕರೆ ಸ್ವೀಕರಿಸಲು ಸಾಧ್ಯವಾಗಲಿದೆ.

ನೀವು ನೀಡುವ ಆಧಾರ್ ಮಾಹಿತಿಗಳು ಸೆಕ್ಯೂರ್ ಆಗಲಿದೆ. ಸ್ಕೈಪ್ ನಿಮ್ಮ ಸುರಕ್ಷತೆಗಾಗಿ ಆಧಾರ್ ಮಾಹಿತಿಯನ್ನು ಸ್ಟೋರ್ ಮಾಡಿಕೊಳ್ಳುವುದಿಲ್ಲ ಎನ್ನಲಾಗಿದೆ.

Read more about:
English summary
Skype Lite is the fastest and smallest app to date built for the Indian market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot