ಪೇಟಿಎಂ, ತೇಜ್‌ನಂತಹ ವಾಲೆಟ್ ಆಪ್‌ಗಳಿಂದ ಭಾರಿ ಅಪಾಯ!..ಸೈಬರ್ ಪೊಲೀಸ್ ತಿಳಿಸಿದ ನಗ್ನಸತ್ಯ!!

ಇತ್ತೀಚಿಗೆ ಸೈಬರ್ ಪೊಲೀಸರು ನಡೆಸುತ್ತಿರುವ ಹಲವು ಪ್ರಕರಣಗಳು ಮೊಬೈಲ್ ವಾಲೆಟ್‌ಗಳಿಂದ ಮೋಸ ಹೋಗಿರುವ ಪ್ರಕರಣಗಳೆ ಆಗಿವೆ.!!

|

ತಂತ್ರಜ್ಞಾನದ ಸಹಾಯದಿಂದ ಮೊಬೈಲ್ ವಾಲೆಟ್‌ಗಳು ರೂಪುಗೊಂಡು ಹಣದ ವ್ಯವಹಾರಗಳನ್ನು ಸರಳಗೊಳಿಸಿವೆ. ಹಾಗೆಯೇ ಗ್ರಾಹಕರಲ್ಲಿ ಭಯವನ್ನು ಮೂಡಿಸಿವೆ.! ಹೌದು, ಇತ್ತೀಚಿಗೆ ಸೈಬರ್ ಪೊಲೀಸರು ನಡೆಸುತ್ತಿರುವ ಹಲವು ಪ್ರಕರಣಗಳು ಮೊಬೈಲ್ ವಾಲೆಟ್‌ಗಳಿಂದ ಮೋಸ ಹೋಗಿರುವ ಪ್ರಕರಣಗಳೆ ಆಗಿವೆ.!!

ಹಾಗಾಗಿ, ಬಳಕೆದಾರರ ಹಿತದೃಷ್ಟಿಯಿಂದ ವಾಲೆಟ್‌ಗಳಲ್ಲಿ ಕೆಲ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಕಾರಿಗಳಿಗೆ ಪತ್ರ ಬರೆಯಲಿದ್ದೇವೆ ಎಂದು ಸಿಐಡಿ ಸೈಬರ್ ವಿಭಾಗದ ಪೊಲೀಸರು ತಿಳಿಸಿದ್ದು, ಹಾಗಾದರೆ, ಏನಿದು ಮೊಬೈಲ್ ವಾಲೆಟ್ ಭಯ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇದು ಆಫ್ ಕೆವೈಸಿ ಕಂಟಕ!!

ಇದು ಆಫ್ ಕೆವೈಸಿ ಕಂಟಕ!!

ಪೇಟಿಎಂ, ಮೊಬಿಕ್ವಿಕ್, ತೇಜ್, ಅಮೆಜಾನ್ ಪೇ, ಫೋನ್ ಪೇ ಮತ್ತು ಹೆಚ್‌.ಡಿ.ಎಫ್‌.ಸಿ ಚಿಲ್ಲರ್ ನಂತಹ ಹಲವು ಮೊಬೈಲ್‌ ಬ್ಯಾಂಕಿಂಗ್‌ ವಾಲೆಟ್ ಆಪ್‌ಗಳು ಜನಪ್ರಿಯವಾಗಿ ಬಳಕೆಯಾಗುತ್ತಿವೆ. ಈ ಆಪ್‌ಗಳಲ್ಲಿನ ವ್ಯವಸ್ಥೆಯಲ್ಲಿ ಲೋಪಗಳಿದ್ದು, ಅದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಹಣ ಸಂಪಾದನೆಗೆ ದಾರಿ ಮಾಡಿಕೊಂಡಿದ್ದಾರೆ.!!

ಆಪ್‌ ವ್ಯವಸ್ಥೆಯಲ್ಲಿಯೇ ಲೋಪವಿದೆ.!!

ಆಪ್‌ ವ್ಯವಸ್ಥೆಯಲ್ಲಿಯೇ ಲೋಪವಿದೆ.!!

ಯಾವುದೇ ದಾಖಲೆ ಹಾಗೂ ಮೊಬೈಲ್‌ ನಂಬರ್‌ ಇದ್ದರೆ, ಯಾರು ಬೇಕಾದರೂ ಈ ಆಪ್‌ಗಳಲ್ಲಿ ಬಹುಬೇಗ ಖಾತೆ ತೆರೆಯಬಹುದು. ಕೆಲ ದಾಖಲೆಗಳ ವಿವರ ನಮೂದಿಸಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಫೋಟೊ ಸಹ ಅವಶ್ಯಕತೆ ಇರುವುದಿಲ್ಲ.ನಂತರ ಬ್ಯಾಂಕ್‌ ಶಾಖೆಗೆ ಹೋಗಿ ದಾಖಲೆಗಳನ್ನು ಹಾಜರುಪಡಿಸಿದರೆ ಶಾಶ್ವತ ಖಾತೆಯ ಬಳಕೆಗೆ ಅವಕಾಶ ದೊರೆಯುತ್ತದೆ. ಎಂಬ ಆಪ್‌ ವ್ಯವಸ್ಥೆಯ ಲೋಪವನ್ನು ಸೈಬರ್ ವಿಭಾಗದ ಪೊಲೀಸರು ಹೇಳಿದ್ದಾರೆ.!!

ಒಂದು ಉದಾಹರಣೆ ಹೀಗಿದೆ.!!

ಒಂದು ಉದಾಹರಣೆ ಹೀಗಿದೆ.!!

ಬ್ಯಾಂಕ್‌ ಅಧಿಕಾರಿ ಎಂದು ಹೇಳಿ ವ್ಯಕ್ತಿಯೋರ್ವರ ವೈಯಕ್ತಿಕ ಹಾಗೂ ಬ್ಯಾಂಕ್‌ ಖಾತೆ ಮಾಹಿತಿ ಪಡೆದಿದ್ದ ವಂಚಕನೋರ್ವ ಕೆಲ ನಿಮಿಷಗಳಲ್ಲೇ 20,000 ಡ್ರಾ ಮಾಡಿಕೊಂಡಿದ್ದ. ಈ ಬಗ್ಗೆ ಬಂದಿದ್ದ ದೂರಿನನ್ವಯ ಪೊಲೀಸರು ವಿಚಾರಣೆ ನಡೆಸಿದ್ದು, ಡ್ರಾ ಆಗಿದ್ದ ಹಣವು ಮಡಿವಾಳದ ಯುವಕನೊಬ್ಬನ ವಾಲೆಟ್ ಆಪ್‌ಗೆ ವರ್ಗಾವಣೆಯಾಗಿತ್ತು.! ಆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನಿಗೆ ಏನೂ ಗೊತ್ತಿರಲಿಲ್ಲ. ಬದಲಾಗಿ, ಉದ್ಯೋಗಕ್ಕಾಗಿ ಆತ ಜಾಲತಾಣವೊಂದರಲ್ಲಿ ರೆಸ್ಯುಮ್ ಅಪ್‌ಲೋಡ್‌ ಮಾಡಿದ್ದ. ಆ ಮಾಹಿತಿ ಕದ್ದಿದ್ದ ವಂಚಕರು, ಮೊಬೈಲ್‌ ವಾಲೆಟ್‌ನಲ್ಲಿ ನಕಲಿ ಖಾತೆ ತೆರೆದಿದ್ದರು.!!

ಹಣ ಬಿಟ್‌ಕಾಯಿನ್‌ಗೆ ಪರಿವರ್ತನೆ!!

ಹಣ ಬಿಟ್‌ಕಾಯಿನ್‌ಗೆ ಪರಿವರ್ತನೆ!!

ಇನ್ನ ಈ ವಾಲೆಟ್ ಆಪ್‌ನಲ್ಲಿ ಜಮೆಯಾಗುವ ಹಣವನ್ನು ವಂಚಕರು ಆನ್‌ಲೈನ್ ವರ್ಚುವಲ್ ಹಣ ಬಿಟ್‌ ಕಾಯಿನ್‌ಗೆ ‍ಪರಿವರ್ತಿಸುತ್ತಿದ್ದಾರೆ. ಬಿಟ್‌ಕಾಯನ್ ಮೂಲವನ್ನು ಪತ್ತೆ ಹಚ್ಚುವುದು ಕಷ್ಟವಾಗಿರುವುದರಿಂದ ಮೋಸ ಮಾಡಿದ ಆರೋಪಿಗಳ ನಿಖರ ಮಾಹಿತಿ ಸಿಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.!!

10 ಸಾವಿರ ರೆಸ್ಯುಮ್ ಕಳವು

10 ಸಾವಿರ ರೆಸ್ಯುಮ್ ಕಳವು

ಈ ಪ್ರಕರಣದ ಬೆನ್ನುಬಿದ್ದ ಪೊಲೀಸರು ರಾಜ್ಯದ 10 ಸಾವಿರಕ್ಕೂ ಹೆಚ್ಚು ಯುವಕರ ರೆಸ್ಯುಮೆಗಳನ್ನು ಜಾಲತಾಣಗಳಿಂದ ವಂಚಕರು ಕದ್ದಿದ್ದು, 5 ಸಾವಿರಕ್ಕೂ ಹೆಚ್ಚು ನಕಲಿ ವಾಲೆಟ್ ಖಾತೆಗಳನ್ನು ವಂಚಕರು ಈಗಾಗಲೇ ತೆರೆದಿದ್ದಾರೆ. ಈಗಾಗಲೇ 2 ಸಾವಿರ ಖಾತೆಗಳನ್ನು ನಿಷ್ಕ್ರಿಯ ಮಾಡಿಸಿದ್ದು, ಉಳಿದ ಖಾತೆಗಳ ನಿಷ್ಕ್ರಿಯಕ್ಕಾಗಿ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.!!

</a></strong><a class=ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಒಮ್ಮೆಲೆ ವಿಡಿಯೊ ಲೈವ್ ಮಾಡುವುದು ಹೇಗೆ?" title="ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಒಮ್ಮೆಲೆ ವಿಡಿಯೊ ಲೈವ್ ಮಾಡುವುದು ಹೇಗೆ?" loading="lazy" width="100" height="56" />ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಒಮ್ಮೆಲೆ ವಿಡಿಯೊ ಲೈವ್ ಮಾಡುವುದು ಹೇಗೆ?

Best Mobiles in India

English summary
While the government is busy patting itself on high enrolment for Aadhaar identities. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X