Home
Apps

ಈ ಆಪ್ ಇದ್ದರೆ ಬೆಂಗಳೂರಿನ ಎಲ್ಲೆಡೆ ಉಚಿತ 'ವೈಫೈ' ಬಳಸಬಹುದು!!

By Bhaskar N J

ಒಂದು ನಗರಕ್ಕೆ ಸಂಪೂರ್ಣ ವೈಫೈ ಸೌಲಭ್ಯ ನೀಡಲು ಮತ್ತು ಬಳಕೆದಾರರಿಗೆ ಇಂಟರ್‍ನೆಟ್ ಉಚಿತವಾಗಿ ಲಭ್ಯವಾಗುವಂತೆ ಮಾಡುವ ದೇಶದಲ್ಲಿನ ಮೊದಲ ಪ್ರಯತ್ನವಾಗಿರುವ ಸೇವೆ ಇದೀಗ ಬೆಂಗಳೂರಿನಲ್ಲಿ ಬಳಕೆಗೆ ಬಂದಿದೆ. ಉಚಿತ ವೈಫೈ ಸಂಪರ್ಕ ಮತ್ತು ಇಂಟರ್‍ನೆಟ್ ಹಂಚಿಕೆ ಆಪ್ 'ಲಿಂಕ್' (Linq) ಈಗ ನಗರದಲ್ಲಿ ಲಭ್ಯವಿದೆ.

ಈ ಆಪ್ ಇದ್ದರೆ ಬೆಂಗಳೂರಿನ ಎಲ್ಲೆಡೆ ಉಚಿತ 'ವೈಫೈ' ಬಳಸಬಹುದು!!

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ 'ಟ್ರಾಯ್' ನಿಯಮಗಳಿಗೆ ಅನುಗುಣವಾಗಿ ವೈಫೈ ಸಂಪರ್ಕವನ್ನು ನೀಡುತ್ತಿರುವ ಲಿಂಕ್ ಆಪ್ ಮೂಲಕ ಬಳಕೆದಾರರು ತಾವು ಇರುವ 500 ಮೀಟರ್‌ಗಳ ವ್ಯಾಪ್ತಿ ಪ್ರದೇಶದಲ್ಲಿ ಉಚಿತ ವೈಫೈ ಹಾಟ್‍ಸ್ಪಾಟ್ ಕಂಡುಕೊಳ್ಳಬಹುದಾಗಿದೆ. ಹಾಗಾದರೆ, ಏನಿದು ಲಿಂಕ್ ಆಪ್? ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.

ಏನಿದು ಲಿಂಕ್ ಆಪ್?

ಏನಿದು ಲಿಂಕ್ ಆಪ್?

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ‘ಟ್ರಾಯ್' ನಿಯಮಗಳಿಗೆ ಅನುಗುಣವಾಗಿ ವೈಫೈ ಸಂಪರ್ಕವನ್ನು ನೀಡುತ್ತಿರುವ ಆಪ್ ಇದಾಗಿದೆ. ದೆಹಲಿಯ ಶೇ.60ಕ್ಕೂ ಹೆಚ್ಚಿನ ಜನರು ಈಗಾಗಲೇ ಈ ವೈಫೈ ಸೌಲಭ್ಯ ಪಡೆಯುತ್ತಿದ್ದಾರೆ. ಬಳಕೆದಾರರು ತಾವು ಇರುವ ಸ್ಥಳದಲ್ಲಿ 500 ಮೀಟರ್‍ಗಳ ಒಳಗೆ ವೈಫೈ ಹಾಟ್‌ಸ್ಪಾಟ್‌ಗಳನ್ನು ಕಂಡುಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ಉಚಿತ ವೈಫೈ

ಬೆಂಗಳೂರಿನಲ್ಲಿ ಉಚಿತ ವೈಫೈ

ಬೆಂಗಳೂರು ನಗದಲ್ಲಿಯೂ ಉಚಿತ ವೈಫೈ ಸೌಲಭ್ಯ ಒದಗಿಸಲಾಗುದ್ದು, ಕೋರಮಂಗಲ, ಇಂದಿರಾನಗರ ಮತ್ತು ವೈಟ್‌ಫಿಲ್ಡ್ ಮುಂತಾದ ಪ್ರದೇಶಗಳು ಇದರಲ್ಲಿ ಸೇರಿವೆ ಎಂದು ಲಿಂಕ್ ಆಪ್ ಅಧಿಕಾರಿಗಳು ತಿಳಿಸಿದ್ದಾರೆ. ಸಣ್ಣ ನಗರಗಳನ್ನೂ ಸಂಪೂರ್ಣ ವೈಫೈ ವಲಯಗಳನ್ನಾಗಿ ಮಾಡಲು ಲಿಂಕ್ ಸಂಸ್ಥೆ ಉದ್ದೇಶಿಸಿರುವುದಾಗಿ ತಿಳಿಸಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
10,000 ಉಚಿತ ಹಾಟ್‌ಸ್ಪಾಟ್!!

10,000 ಉಚಿತ ಹಾಟ್‌ಸ್ಪಾಟ್!!

ಈಗಾಗಲೇ ಸ್ಥಾಪಿಸಲಾಗಿರುವ 10,000 ಉಚಿತ ಹಾಟ್‍ಸ್ಪಾಟ್‍ಗಳೊಂದಿಗೆ ಬಳಕೆದಾರರಿಗೆ ಸೀಮಾತೀತ ಇಂಟರ್‍ನೆಟ್ ಸಂಪರ್ಕ ಹೊಂದಲು ಲಿಂಕ್ ಆಪ್ ಅವಕಾಶ ಮಾಡಿಕೊಟ್ಟಿದೆ. ಬಳಕೆದಾರರು ತಾವು ಇರುವ ಸ್ಥಳದಲ್ಲಿ 500 ಮೀಟರ್‍ಗಳ ಒಳಗೆ ವೈಫೈ ಹಾಟ್‌ಸ್ಪಾಟ್ ಅನ್ನು ಕಂಡುಕೊಳ್ಳಬಹುದಾಗಿದೆ.

ಉಚಿತ ವೈಫೈ ನೀಡುತ್ತಿರುವುದು ಹೇಗೆ?

ಉಚಿತ ವೈಫೈ ನೀಡುತ್ತಿರುವುದು ಹೇಗೆ?

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ‘ ಟ್ರಾಯ್' ನಿಯಮಗಳಿಗೆ ಅನುಗುಣವಾದ ವೈಫೈ ಸಂಪರ್ಕವನ್ನು ನೀಡಲಾಗುತ್ತಿರುವ ಲಿಂಕ್ ಸಂಸ್ಥೆ ವ್ಯಾಪಾರಿಗಳು, ಸಾಮಾನ್ಯ ಗ್ರಾಹಕರು ಲಿಂಕ್‌ನೊಂದಿಗೆ ಸಹಯೋಗ ಹೊಂದಿದ್ದಾರೆ. ಹಾಗಾಗಿ, ಉಚಿತ ವೈಫೈ ಸೌಲಭ್ಯ ನೀಡುತ್ತಿದೆ ಎಂದು ತಿಳಿದುಬಂದಿದೆ.

ಇಡೀ ದೇಶದಲ್ಲಿ ಉಚಿತ ವೈಫೈ!!

ಇಡೀ ದೇಶದಲ್ಲಿ ಉಚಿತ ವೈಫೈ!!

ಉಚಿತ ಸಾರ್ವಜನಿಕ ವೈಫೈ ಸೌಲಭ್ಯವು ಡಿಜಿಟಲ್ ಮೂಲಸೌಕರ್ಯಕ್ಕೆ ಕೊಡುಗೆ ನೀಡಲಿದೆ. ದೇಶದಲ್ಲಿ ಡಿಜಿಟಲ್ ಸಾಕ್ಷರತೆಗೆ ಇದರಿಂದ ಬೆಂಬಲ ದೊರೆಯಲಿದೆ. 2023ರ ಹೊತ್ತಿಗೆ ಇಡೀ ದೇಶದಲ್ಲಿ ಉಚಿತ ವೈಫೈ ಸೌಲಭ್ಯ ನೀಡುವ ಉದ್ದೇಶವನ್ನು ಕಂಪನಿ ಹೊಂದಿದೆ.

Best Mobiles in India

English summary
Linq, Android, app, mobile, bangalore, smartphone, ಆಪ್, ವೈಫೈ, ಬೆಂಗಳೂರು, ಮೊಬೈಲ್, ಸ್ಮಾರ್ಟ್‌ಫೋನ್, news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+