Home
Apps

ವಾಟ್ಸ್ ಆಪ್ ನಲ್ಲಿ ಫೇಕ್ ಸುದ್ಧಿ ಹಬ್ಬಿಸಿದರೆ ಎಚ್ಚರ!

By Gizbot Bureau

ಜಮ್ಮು & ಕಾಶ್ಮೀರದ ಕುಪ್ವಾರ ಜಿಲ್ಲೆ ವಾಟ್ಸ್ ಆಪ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುವ ಸುಳ್ಳು ಸುದ್ದಿಗಳು ಮತ್ತು ವದಂತಿಗಳಿಗೆ ಕಡಿವಾಣ ಹಾಕುವುದಕ್ಕೆ ಆದೇಶಿಸಿದೆ. ಚುನಾವಣಾ ಸಮಯ ಹತ್ತಿರ ಬರುತ್ತಿರುವುದರಿಂದಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಅಡ್ಮಿನ್ ವಿರುದ್ಧ ಕ್ರಮ:

ಅಡ್ಮಿನ್ ವಿರುದ್ಧ ಕ್ರಮ:

ಯಾವುದೇ ಪರಿಶೀಲಿಸದ ಮಾಹಿತಿಯನ್ನು ಗುಂಪಿನಲ್ಲಿ ಹಂಚಿಕೊಂಡರೆ ವಾಟ್ಸ್ ಆಪ್ ಗುಂಪಿನ ಅಡ್ಮಿನ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಮತ್ತು ಅವರು ತಕ್ಷಣವೇ ಇಂತಹ ಸುದ್ದಿಗಳು ತಿಳಿದುಬಂದಲ್ಲಿ ಜಾರಿ ಸಂಸ್ಥೆಗಳಿಗೆ ತಿಳಿಸಬೇಕಾಗಿ ಹೇಳಲಾಗಿದೆ.

ಇಟಿಯಿಂದ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಗೆ ಕೇಳಲಾಗಿರುವ ಪ್ರಶ್ನೆಗಳಿಗೆ ಇದುವರೆಗೂ ಪ್ರತ್ಯುತ್ತರವಿಲ್ಲ:

ಇಟಿಯಿಂದ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಗೆ ಕೇಳಲಾಗಿರುವ ಪ್ರಶ್ನೆಗಳಿಗೆ ಇದುವರೆಗೂ ಪ್ರತ್ಯುತ್ತರವಿಲ್ಲ:

ಕಾನೂನು ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುವ ಸುಳ್ಳುಸುದ್ದಿ ಮತ್ತು ವದಂತಿಗಳು ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಟ್ಸ್ ಆಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ಟ್ವೀಟರ್ ಸೇರಿದಂತೆ ಹಲವು ಸಾಮಾಜಿಕ ತಾಣಗಳಲ್ಲಿ ಇದಕ್ಕೆ ಕಡಿವಾಣ ಹಾಕುವ ಅಗತ್ಯತೆ ಅಧಿಕವಾಗಿದೆ.

ಪೋಲೀಸ್ ಠಾಣೆಯಲ್ಲಿ ವಾಟ್ಸ್ ಆಪ್ ಗುಂಪಿನ ರಿಜಿಸ್ಟ್ರೇಷನ್:

ಈಗ ಸದ್ಯ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನೀಡಲಾಗಿರುವ ಆರ್ಡರ್ ನ ಅನ್ವಯ ಮಾರ್ಚ್ 15 ರ ಒಳಗೆ ಕುಪ್ವಾರ ಜಿಲ್ಲೆಯಲ್ಲಿರುವ ಎಲ್ಲಾ ವಾಟ್ಸ್ ಆಪ್ ಗುಂಪಿನ ಮುಖ್ಯಸ್ಥರು ಮತ್ತು ಆ ಗುಂಪಿನಲ್ಲಿರುವ ಎಲ್ಲಾ ಸದಸ್ಯರು ಹತ್ತಿರದ ಪೋಲೀಸ್ ಠಾಣೆಯಲ್ಲಿ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.

ಕೆಲವೇ ಕೆಲವು ಗುಂಪಿಗೆ ಅವಕಾಶ:

ಕೆಲವೇ ಕೆಲವು ಗುಂಪಿಗೆ ಅವಕಾಶ:

ವಯಕ್ತಿಕ, ಕೌಟುಂಬಿಕ ಮತ್ತು ಅಫೀಶಿಯಲ್ ಸಂವಹನಕ್ಕೆ ಗುಂಪಿನಲ್ಲಿ ಅವಕಾಶವಿರುತ್ತದೆ. ಅಡ್ಮಿನ್ ಕೇವಲ ತಮಗೆ ಖುದ್ದು ಪರಿಚಯವಿರುವ ಸದಸ್ಯರನ್ನು ಮಾತ್ರವೇ ಗುಂಪಿಗೆ ಸೇರಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

`ಪೋಲೀಸರಿಗೆ ಮಾಹಿತಿ ನೀಡಿ:

`ಪೋಲೀಸರಿಗೆ ಮಾಹಿತಿ ನೀಡಿ:

ಒಂದು ವೇಳೆ ಗುಂಪಿನ ಯಾವುದೇ ವ್ಯಕ್ತಿ ಸುಳ್ಳಾಗಿ ಮತ್ತು ಆಧಾರ ರಹಿತ ಹೇಳಿಕೆ ಮಾಡಿದರೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಮೆಸೇಜ್ ಮಾಡಿದರೆ ಗುಂಪಿನ ಅಡ್ಮಿನ ಅದರ ಸ್ಕ್ರೀನ್ ಶಾಟ್ ತೆಗೆಯಬೇಕು ಮತ್ತು ಆ ಮೆಸೇಜ್ ನ್ನು ಡಿಲೀಟ್ ಮಾಡಿ ಕೂಡಲೇ ಆ ವ್ಯಕ್ತಿಯನ್ನು ಗುಂಪಿನಿಂದ ಹೊರಹಾಕಬೇಕು. ಹತ್ತಿರದ ಪೋಲೀಸ್ ಠಾಣೆಯ ಈ ವಿಚಾರವನ್ನು ತಿಳಿಸಿ ಕಾನೂನಾತ್ಮಕವಾಗಿ ಆ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆರ್ಡರ್ ನಲ್ಲಿ ತಿಳಿಸಲಾಗಿದೆ.

ಅಡ್ಮಿನ್ ವಿರುದ್ಧ ಕ್ರಮ:

ಅಡ್ಮಿನ್ ವಿರುದ್ಧ ಕ್ರಮ:

ಒಂದು ವೇಳೆ ಯಾವುದೇ ಅಡ್ಮಿನ್ ಮಾಹಿತಿಯನ್ನು ನೀಡದೆ ಫೇಕ್ ಸುದ್ದಿಗಳನ್ನು ತಮ್ಮ ಗುಂಪಿನಲ್ಲಿ ಪಸರಿಸುತ್ತಿದ್ದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸೆಕ್ಷನ್ 144 ಪ್ರಕಾರ ಆತನ ವಿರುದ್ಧ ಕ್ರಮ ಜರುಗುತ್ತದೆ. ಕಾನೂನಾತ್ಮಕವಾಗಿ ಅವರಿಗೆ ಶಿಕ್ಷೆ ಲಭಿಸುತ್ತದೆ.

ಕಮಿಟಿ ರಚನೆ:

ಚುಣಾವಣೆ ಉತ್ತಮ ರೀತಿಯಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಮೀಡಿಯಾ ಸರ್ಟಿಫಿಕೇಷನ್ ಮತ್ತು ಮಾನಿಟರಿಂಗ್ ಕಮಿಟಿಯನ್ನು ಕೂಡ ನಿರ್ಮಿಸಲಾಗಿದ್ದು, ಇದು ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತದೆ.

Best Mobiles in India

English summary
Ahead of elections, Kupwara WhatsApp admins on watch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+