ಎಲ್ಲಾ ಬಿಲ್ಲು ಒಮ್ಮೆಲೇ ಪಾವತಿಸಿಬಿಡಿ... ಏರ್ ಟೆಲ್ ನಿಂದ ಹೊಸ ಅವಕಾಶ..!
ಅಪ್ಪಂದು, ಅಮ್ಮಂದು ಏರ್ ಟೆಲ್ ಅಕೌಂಟ್, ದೂರದಲ್ಲಿ ಓದುತ್ತಿರುವ ತಂಗಿಯದ್ದೂ ಏರ್ ಟೆಲ್ ಮೊಬೈಲ್, ಹೆಂಡತಿ ಕೂಡ ಬಳಸುತ್ತಿರುವುದು ಏರ್ ಟೆಲ್, ಮನೆಯಲ್ಲೊಂದು ಏರ್ ಟೆಲ್ ವೈಫೈ ಕನೆಕ್ಷನ್. ಆದ್ರೆ ಎಲ್ಲರ ಮೊಬೈಲಿನ ರೀಚಾರ್ಜ್ ಆಗುವುದು ಮಾತ್ರ ನಿಮ್ಮ ಜೋಬಿಂದ. ಯಾವಾಗಲೂ ಮೈ ಏರ್ ಟೆಲ್ ನೋಡುತ್ತಲೇ ಇರಬೇಕು, ಅಪ್ಪನ ರಿಚಾರ್ಜ್ ಡೇಟ್ ಯಾವಾಗ, ಅಮ್ಮಂದು ಡಾಟಾ ಪ್ಯಾಕ್ ಇದಿಯಾ ಅಥವಾ ಇಲ್ವಾ? ಹೆಂಡತಿಗೆ ಇಂಟರ್ ನೆಟ್ ಬಳಸಲು ಆಗುತ್ತಿದ್ಯಾ? ವೈಫೈ ಗೆ ರೀಚಾರ್ಜ್ ಮಾಡಬೇಕಿತ್ತು ಮರೆತೇ ಹೋಯ್ತು ಅಂತ ಪದೇ ಪದೇ ಮೈ ಏರ್ ಟೆಲ್ ನೋಡಿ ಒಬ್ಬೊಬ್ಬರಿಗೆ ಒಂದೊಂದು ಬಾರಿ ರೀಚಾರ್ಜ್ ಮಾಡುತ್ತಾ ಕುಳಿತುಕೊಳ್ಳುವ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ..

ಅದಕ್ಕಾಗಿಯೇ ಬಂದಿದೆ ಏರ್ ಟೆಲ್ ನ ಹೊಸ ವೈಶಿಷ್ಟ್ಯ. ಅದುವೇ ಏರ್ ಟೆಲ್ ಹೋಮ್... ನೀವು ಬಳಸುತ್ತಿರುವ ಎಲ್ಲಾ ಏರ್ ಟೆಲ್ ಕನೆಕ್ಷನ್ ಗಳ ಬಿಲ್ಲನ್ನೂ ಒಂದೇ ಬಾರಿ ಪಾವತಿಸುವ ಅವಕಾಶ ಕಲ್ಪಿಸುವ ಏರ್ ಟೆಲ್ ನ ಹೊಸ ಪ್ಲಾಟ್ ಫಾರ್ಮ್ ಇದು..
ಏರ್ ಟೆಲ್ ಹೋಮ್ ನ ಬೆಟಾ ವರ್ಷನ್ ಈಗಾಗಲೇ ಏರ್ ಟೆಲ್ ಹೋಮ್ ಬ್ರಾಡ್ ಬ್ಯಾಂಡ್ ಕಸ್ಟಮರ್ ಗೆ ಹೈದ್ರಾಬಾದ್ ನಲ್ಲಿ ಲಭ್ಯವಿದೆ. ಈ ಸರ್ವೀಸ್ ನ್ನು ಇತರೆಡೆಗೂ ಕಲ್ಪಿಸುವ ವ್ಯವಸ್ಥೆಯನ್ನು ಏರ್ ಟೆಲ್ ಇನ್ನೂ ಕೆಲವೇ ವಾರಗಳಲ್ಲಿ ಮಾಡಲಿದೆ.
ಬಳಕೆದಾರರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಏರ್ ಟೆಲ್ ವ್ಯವಸ್ಥೆಯನ್ನು ಮಾಡಿದ್ದು, ಏರ್ ಟೆಲ್ ಕಸ್ಟಮರ್ ಗಳಿಂದ ಬಂದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಕಂಪೆನಿ ಈ ಹೊಸ ಪ್ಲ್ಯಾಟ್ ಫಾರ್ಮ್ ನ್ನು ಪರಿಚಯಿಸಿದೆಯಂತೆ. ಬೇರೆಬೇರೆ ಪಾವತಿ ದಿನಾಂಕಗಳನ್ನು ನೆನಪಿಟ್ಟುಕೊಂಡು ಪೇಮೆಂಟ್ ಗೆ ಒದ್ದಾಡುವ ಬದಲು ಎಲ್ಲಾ ಏರ್ ಟೆಲ್ ಅಕೌಂಟ್ ಗಳನ್ನು ಒಟ್ಟಿಗೆ ರಿಚಾರ್ಜ್ ಮಾಡುವ ಅವಕಾಶವಿದ್ದಿದ್ದರೆ ಚೆನ್ನಾಗಿತ್ತು ಎಂದು ಹಲವು ಗ್ರಾಹಕರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಏರ್ ಟೆಲ್ ಹೋಮ್ ಬಿಡುಗಡೆಯಾಗುತ್ತಿದೆ ಎಂದು ಏರ್ ಟೆಲ್ ಹೋಮ್ ನ ಮುಖ್ಯಸ್ಥ ಜಾರ್ಜ್ ಮಾಥೆನ್ ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೆ, ಏರ್ ಟೆಲ್ ಹೋಮ್ ಬಳಸುವ ಬಳಕೆದಾರರಿಗೆ ಇನ್ನಷ್ಟು ಲಾಭಗಳಾಗಲಿದ್ದು, ಅವರು ತಮ್ಮ ಬಿಲ್ಲಿಂಗ್ ನಲ್ಲಿ ಹೆಚ್ಚು ಪ್ರಾಫಿಟ್ ಪಡೆಯಲು ಸಾಧ್ಯವಿದೆಯಂತೆ. ಅವರಿಗೆ ಹಲವು ಆಫರ್ ಗಳನ್ನು ನೀಡಲಾಗುತ್ತದೆಯಂತೆ. ಅಷ್ಟೇ ಅಲ್ಲ, ಇನ್ನೊಂದು ಸೋಜಿಗದ ವಿಷಯವೆಂದರೆ ಭಾರತದಲ್ಲಿ ಹೀಗೆ ಹಲವು ಅಕೌಂಟ್ ಗಳನ್ನು ಒಟ್ಟಿಗೆ ರೀಚಾರ್ಜ್ ಮಾಡುವ ಅವಕಾಶವನ್ನು ಏರ್ ಟೆಲ್ ಮಾತ್ರ ಕರುಣಿಸುತ್ತಿದ್ದು, ಬಳಕೆದಾರ ಸ್ನೇಹಿಯಾಗಿ ವರ್ತಿಸುತ್ತಿದೆ.

• ಏರ್ ಟೆಲ್ ಹೋಮ್ ಬಳಸುವುದರಿಂದಾಗುವ ಲಾಭಗಳು
- ನಿಮ್ಮ ಬಿಲ್ಲಿಂಗ್ ಪಟ್ಟಿಯಲ್ಲಿರುವ ಬೇರೆಬೇರೆ ಏರ್ ಟೆಲ್ ಕನೆಕ್ಷನ್ ಗಳಿಗೆ ಹಲವಾರು ಬಾರಿ ಹಣ ಪಾವತಿಗಳನ್ನು ಮಾಡುವುದು ತಪ್ಪುತ್ತೆ. ಒಂದೇ ಬೆಲೆಪಟ್ಟಿಯ ಮುಖಾಂತರ ನಿಮ್ಮ ಎಲ್ಲಾ ಏರ್ ಟೆಲ್ ಕನೆಕ್ಷನ್ ಗಳಿಗೂ ಒಂದೇ ಬೆಲೆಪಟ್ಟಿ ಲಭ್ಯವಾಗಲಿದ್ದು, ಹಣ ಪಾವತಿಸುವ ಪ್ರಕ್ರಿಯೆ ಸುಲಭಗೊಳ್ಳಲಿದೆ. ಅಷ್ಟೇ ಅಲ್ಲದೆ, ಬಳಕೆದಾರ ಭಾರತದಾದ್ಯಂತದ ಯಾವುದೇ ಪ್ರದೇಶದಲ್ಲಿರುವ ಕನೆಕ್ಷನ್ ನ್ನೂ ಕೂಡ ಬಿಲ್ಲಿಂಗ್ ಪಟ್ಟಿಗೆ ಸೇರಿಸಿಕೊಂಡಿರಬಹುದು.
- ನೀವು ಎಷ್ಟು ಕನೆಕ್ಷನ್ ಗಳನ್ನು ಸೇರಿಸಿಕೊಂಡಿದ್ದೀರಿ ನಿಮ್ಮ ಬಿಲ್ಲಿಂಗ್ ಪಟ್ಟಿಯಲ್ಲಿ ಎಂಬ ಆಧಾರದ ಮೇಲೆ ಏರ್ ಟೆಲ್ ನಿಮಗೆ ಕೆಲವು 10 ಶೇಕಡಾ ಡಿಸ್ಕೌಂಟ್ ನ ಆಫರ್ ನ್ನೂ ಕೂಡ ಒದಗಿಸಲಿದೆ.
- ಪ್ರೀಮಿಯಂ ಕಸ್ಟಮರ್ ಕೇರ್ ಗೆ ಏರ್ ಟೆಲ್ ಹೋಮ್ ಬಳಕೆದಾರರಿಗೆ ಆಕ್ಸಿಸ್ ಮಾಡಲು ಅವಕಾಶವಿರುತ್ತೆ.
- ಮೈ ಏರ್ ಟೆಲ್ ಆಪ್ ಡೌನ್ ಲೋಡ್ ಮಾಡಿ ಮತ್ತು ಏರ್ ಟೆಲ್ ಹೋಮ್ ಬ್ಯಾನರ್ ನ್ನು ಕ್ಲಿಕ್ಕಿಸಿ.
- ನಿಮ್ಮ ಏರ್ ಟೆಲ್ ಹೋಮ್ ಬ್ರಾಡ್ ಬ್ಯಾಂಡ್ ಕನೆಕ್ಷನ್ನು ಪ್ರೈಮರಿ ಅಕೌಂಟ್ ಆಗಿ ಸೇರಿಸಿ ಮತ್ತು ನಿಮ್ಮ ಇತರೆ ಎಲ್ಲಾ ಏರ್ ಟೆಲ್ ಕನೆಕ್ಷನ್ ಗಳನ್ನು ಉದಾಹರಣೆಗೆ ಏರ್ ಟೆಲ್ ಪೋಸ್ಟ್ ಪೈಯ್ಡ್ ಮೊಬೈಲ್, ಹೋಮ್ ಬ್ರಾಡ್ ಬ್ಯಾಂಡ್ ಮತ್ತು ಡಿಜಿಟಲ್ ಟಿವಿ ಗಳನ್ನು ಆಡ್ ಆನ್ ಅಕೌಂಟ್ ಗಳಾಗಿ ಸೇರಿಸಿಕೊಳ್ಳಿ.
- ಸೇರಿಸಿದ ಅಕೌಂಟ್ ಗಳನ್ನು ಪರೀಕ್ಷೆಗೆ ಒಳಪಡಿಸಿ, ಎಲ್ಲದನ್ನೂ ಒಟ್ಟು ಸೇರಿಸಿ ಬರುವ ಏಕಮಾತ್ರ ಬೆಲೆ ಪಟ್ಟಿಯನ್ನು ಹಣ ಪಾವತಿಸಲು ಬಳಸಿ.
- ಏರ್ ಟೆಲ್ ಹೋಮ್ ಈಗ ಸೃಷ್ಟಿಸಿಯಾಗಿದೆ. ನೀವು ನಿಮ್ಮ ಎಲ್ಲಾ ಅಕೌಂಟ್ ಗಳನ್ನು ಮೈ ಏರ್ ಟೆಲ್ ಆಪ್ ಮೂಲಕ ನಿಯಂತ್ರಿಸಿಕೊಳ್ಳಬಹುದು.
- ಇದಾದ ನಂತರ ಏರ್ ಟೆಲ್ ನಿಮಗೆ ಒಂದೇ ಬೆಲೆಪಟ್ಟಿಯನ್ನು ಕಳುಹಿಸುತ್ತೆ ಮತ್ತು ನೀವು ಆಪ್ ಮೂಲಕ ಅದನ್ನು ಮಾತ್ರ ಪಾವತಿ ಮಾಡಿದರಾಯ್ತು. ಆದರೂ ಪ್ರತಿಯೊಂದು ಕನೆಕ್ಷನ್ ನ ಸಪರೇಟ್ ಬಿಲ್ ಗಳು ಕೂಡ ನಿಮಗಿಲ್ಲಿ ಲಭ್ಯವಾಗುತ್ತೆ.


Click it and Unblock the Notifications








