Home
Apps

ಜಿಎಸ್ ಟಿ ಈ-ವೇ ಬಿಲ್ ಜನರೇಷನ್ ಗೆ ಈ-ರಾಹಿ ಎಂಬ ಹೊಸ ಆಪ್ ಬಿಡುಗಡೆಗೊಂಡಿದೆ

By Sushma Charhra

ಈ-ಗರ್ವನೆನ್ಸ್ ಸರ್ವೀಸ್ ಪ್ರೊವೈಡರ್ , ಅಲಾಂಕಿತ್ ಲಿಮಿಟೆಡ್ ನವರು ಸರಳವಾಗಿರುವ ಮತ್ತು ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಮೊಬೈಲ್ ಅಪ್ಲಿಕೇಷನ್ ಮತ್ತು ಡೆಸ್ಕ್ ಟಾಪ್ ಸಾಪ್ಟ್ ವೇರ್ “ಈ-ರಾಹಿ” ಯನ್ನು ಬಿಡುಗಡೆಗೊಳಿಸಿದ್ದು, ಈ ಮೂಲಕ ಈ-ವೇ ಬಿಲ್ ಜನರೇಷನ್ ನ್ನು ಕೇವಲ ಒಂದೇ ಒಂದು ಕ್ಲಿಕ್ ನಲ್ಲಿ ಮಾಡಬಹುದಾಗಿದೆ.

ಜಿಎಸ್ ಟಿ ಈ-ವೇ ಬಿಲ್ ಜನರೇಷನ್ ಗೆ  ಈ-ರಾಹಿ ಎಂಬ ಹೊಸ ಆಪ್ ಬಿಡುಗಡೆಗೊಂಡಿದೆ

ಈ ಅಪ್ಲಿಕೇಷನ್ ಬಳಕೆದಾರನಿಗೆ ಕ್ರೂಢೀಕರಿಸಿದ ಜಿಎಸ್ ಟಿ ಯ ಇನ್ವಾಯ್ಸ್ ವರದಿಯನ್ನು ಪಡೆಯಲು ನೆರವಾಗುತ್ತೆ, ಆ ಮೂಲಕ ಎಕ್ಸೆಲ್ ನಲ್ಲಿ ಅನೇಕ ಬಿಲ್ ಗಳನ್ನು ನಿರ್ವಹಿಸಿಡುವ ಅಗತ್ಯವಿರುವುದಿಲ್ಲ. ಇದರಲ್ಲಿ ಪ್ರಿಂಟ್ ತೆಗೆಯಲು ಅನುಕೂಲವಾಗುವಂತೆ ಕ್ರೂಢೀಕರಿಸಿ ಬಿಲ್ ನ್ನು ಪಡೆಯಬಹುದಾಗಿದೆ.

ಪರಿಚಯಾತ್ಮಕವಾಗಿ ಮೊದಲ ಹಂತದಲ್ಲಿ 1000 ಬಿಲ್ ಗಳಿಗೆ 1000 ರುಪಾಯಿಯನ್ನು ನಿಗದಿಪಡಿಸಲಾಗಿದೆ.ಮುಂದಿನ 500 ಬಿಲ್ ಗಳು ಪ್ರತಿ ಬಿಲ್ ಗೆ 0.90 ಪೈಸೆಯಂತೆ ಚಾರ್ಚ್ ಮಾಡಲಾಗುತ್ತೆ.

ಹಲವಾರು ಮೊಬೈಲ್ ಫೋನ್ ಗಳಲ್ಲಿ IMEI (The International Mobile Equipment Identity) ನಲ್ಲಿ ರಿಜಿಸ್ಟರ್ ಮಾಡುವ ಪ್ರೊಸೆಸ್ ನಲ್ಲಿ ಆಗುವ ತೊಡಕನ್ನು ನಿವಾರಿಸುತ್ತೆ. ಈ ಮೂಲಕ ಸಿಂಗಲ್ ಪಾಯಿಂಟ್ ನಲ್ಲಿ ಕೇವಲ ಬಳಕೆದಾರನ ಪರಿಚಯಪತ್ರವನ್ನು ದಾಖಲಿಸುವ ಮೂಲಕ ಪ್ರವೇಶ ಪಡೆದು ಇದರ ನೆರವನ್ನು ಪಡೆಯಬಹುದು.

ಈ-ರಾಶಿ ಯು ಬಳಕೆದಾರನಿಗೆ ಈ-ವೇ ಬಿಲ್ ಗಳನ್ನು ಜನರೇಟ್ ಮಾಡಲು, ಎಡಿಟ್ ಮಾಡಲು, ಮತ್ತು ಅದನ್ನು ಶೇರ್ ಮಾಡಲು ಎಸ್ ಎಂ ಎಸ್, ವಾಟ್ಸ್ ಆಪ್, ಮತ್ತು ಈ ಮೇಲ್ ಮೂಲಕ ಅವಕಾಶ ಕಲ್ಪಿಸಿಕೊಡಲಿದೆ.

ಇದಕ್ಕಿಂತ ಹೆಚ್ಚಾಗಿ ಇದು HSN (Harmonized System Nomenclature) ಕೋಡ್ ಗಳನ್ನು ಆಟೋ ಡಿಟೆಕ್ಟ್ ಮಾಡಲಿದೆ. ಅಷ್ಟೇ ಅಲ್ಲ, ಇದರ ಜೊತೆಗೆ ಸರಿಯಾದ HSN ಕೋಡನ್ನು ಹುಡುಕಲು ಕೂಡ ಅಪ್ಲಿಕೇಷನ್ ನ ಒಳಗೆ ಅವಕಾಶ ಕಲ್ಪಿಸಿಕೊಡಲಿದೆ.

ಸದ್ಯ ಆಂಡ್ರಾಯ್ಡ್ OS ಗೆ ಹೊಂದಿಕೆಯಾಗಲಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.

ಈ- ರಾಹಿ ಭವಿಷ್ಯದಲ್ಲಿ ಬಳಕೆದಾರನಿಗೆ ಅಗತ್ಯವಿರುವ ಇನ್ನೂ ಹೆಚ್ಚಿನ ಅಗತ್ಯತೆಯನ್ನು ಪೂರೈಸಲಿದ್ದು, ಟ್ರಾನ್ಸ್ಯಾಕ್ಷನ್ ಡೀಟೈಲ್ಸ್ ನ್ನು ಅಪ್ ಲೋಡ್ ಮಾಡಲು ಅವಕಾಶ ಕಲ್ಪಿಸಲಿದೆ. ಇದು ಸಾಧ್ಯವಾಗಬೇಕೆಂದರೆ cloud based compliance software “ಅಲಾಂಕಿತ್ ಜಿಎಸ್ ಟಿ ಮುನೀಂಜಿ” ಜೊತೆ ಇದು ಒಟ್ಟುಗೂಡಬೇಕಾಗಿದೆ.

ಈ ಬಗ್ಗೆ ಮಾತನಾಡಿರುವ ಅಲಾಂಕಿತ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಅಂಕಿತ್ ಅಗರ್ ವಾಲ್ “ ಸರಕು ಮತ್ತು ಸಾಗಣೆ ತೆರಿಗೆ ನೆಟ್ ವರ್ಕ್ ನ ಅನ್ವಯ, ಸುಮಾರು 70 ಲಕ್ಷ ಈ-ವೇ ಬಿಲ್ ಗಳನ್ನು ಪ್ರತಿದಿನ ಜನರೇಟ್ ಮಾಡುವ ತಾಕತ್ತು ಇದಕ್ಕಿದೆ. ಸದ್ಯ ಕೇವಲ ಶೇಕಡಾ 18 ರಷ್ಟು ತಾಕತ್ತನ್ನು ಮಾತ್ರ ಬಳಸಲಾಗುತ್ತಿದೆ. ಈ-ರಾಹೀ ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಇನ್ನು ಹೆಚ್ಚು ಬಳಕೆಯಾಗಲಿದೆ ಎಂಬ ವಿಶ್ವಾಸವಿದೆ,. ಡಿಜಿಟಲೀಕರಣವನ್ನು ಉತ್ತೇಜಿಸುವ ಉದ್ದೇಶವನ್ನು ಈ-ರಾಹಿ ಹೊಂದಿದ್ದು,ಸಮಯದ ಸಮಸ್ಯೆ ನಿವಾರಣೆ,ಜಿಎಸ್ ಟಿ ಫ್ರೇಮ್ ವರ್ಕ್ ಗೆ ಎಲ್ಲಾ ಇಂಡಸ್ಟ್ರಿಯನ್ನು ಒಳಪಡಿಸುವ ಉದ್ದೇಶ ಹೊಂದಿದೆ.” ಎಂದು ತಿಳಿಸಿದ್ದಾರೆ.

ಈ-ರಾಹಿ ಗೆ ಸಹಕಾರವಾಗುವಂತೆ, ಅಲಾಂಕಿತ್, ಅಲಾಂಕಿತ್ ಚಾಟ್ ಬೂಟ್ ನ್ನು ಕೂಡ ತೆರೆದಿದ್ದು, ಇಲ್ಲಿ ಬಳಕೆದಾರನಿಗೆ ಅನುಮಾನ ಬರುವ ಸಮಸ್ಯೆಗಳ ಪ್ರಶ್ನೆಗಳನ್ನು ಕೇಳಬಹುದಾಗಿದ್ದು ಸಮಂಜಸ ಉತ್ತರವನ್ನು ನೀಡಲಾಗುತ್ತೆ.

Best Mobiles in India

English summary
Alankit launches e-Raahi app
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+