Subscribe to Gizbot

ನಿಮ್ಮಲ್ಲಿ ಫಾಲೋಅಪ್ ಪ್ರಶ್ನೆಗಳಿಗೆ ಉತ್ತರ ನೀಡಲು ಬರುತ್ತಿದೆ ಅಮೆಜಾನ್ ಅಲೆಕ್ಸಾ.!

Posted By: KIRAN KUMAR KH

ಆನ್ಲೈನ್ ಶಾಪಿಂಗ್ ನ ದೈತ್ಯ ಅಮೆಜಾನ್ ತನ್ನ ಗ್ರಾಹಕರ ಯಾವುದೇ ರೀತಿಯ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಮತ್ತು ಎಲ್ಲಾ ಗೊಂದಲಗಳನ್ನು ನಿವಾರಿಸಬಲ್ಲ ಅಮೆಜಾನ್ ಅಲೆಕ್ಷಾ ಸಾಧನವನ್ನು ಪರಿಚಯಿಸುತ್ತಿದೆ. ಅಮೆಜಾನ್ ಲ್ಯಾಬ್ 126 ವಿಭಾಗ ಅಭಿವೃದ್ಧಿಪಡಿಸಿರುವ ವೈಯಕ್ತಿಕ ಸಲಹಾ ಸಾಧನ ಅಲೆಕ್ಷಾ ಅಪ್ಲಿಕೇಶನ್ ನನ್ನು ಪರೀಕ್ಷಾರ್ಥವಾಗಿ ಅಮೆಜಾನ್ ಎಕೋ ಮತ್ತು ಅಮೆಜಾನ್ ಎಕೋ ಡಾಟ್ ಸಾಧನಗಳಲ್ಲಿ ಬಳಸಲಾಗಿದೆ. ಬೀಬೊಮ್ ಸಂಸ್ಥೆಯ ವರದಿಯ ಪ್ರಕಾರ, ಬಳಕೆದಾರ ಯಾವುದೇ ಆಜ್ಞೆ ನೀಡದೆಯೂ ಅಮೆಜಾನ್ ನ ಅಲೆಕ್ಷಾ ಸಾಧನ ಬಳಕೆದಾರನಿಗೆ ಮುಂದಿನ ಟಾಸ್ಕ್ ನ ಕುರಿತು ಸಲಹೆ ನೀಡಲಿದೆ.

ನಿಮ್ಮಲ್ಲಿ ಫಾಲೋಅಪ್ ಪ್ರಶ್ನೆಗಳಿಗೆ ಉತ್ತರ ನೀಡಲು ಬರುತ್ತಿದೆ ಅಮೆಜಾನ್ ಅಲೆಕ್ಸಾ.!

ಈ ವರದಿಯ ಪ್ರಾಕಾರ, ಅಮೆಜಾನ್ ಅಲೆಕ್ಷಾ ಸಾಧನದ ಹೊಸ ಫೀಚರ್ ಬಳಕೆದಾರ ನೀಡಿದ ಮೊದಲ ಆಜ್ಞೆಗೆ ಉತ್ತರ ನೀಡಿದ ನಂತರ 5 ಸೆಕೆಂಡುಗಳ ಕಾಲಾವಕಾಶ ತೆಗೆದುಕೊಂಡು ಆಜ್ಞೆಯ ಫಾಲೋ ಅಪ್ ಉತ್ತರವನ್ನು ತಾನಾಗಿಯೇ ನೀಡುತ್ತದೆ. ಹಾಗೂ ಉತ್ತರ ನೀಡಿದ 5 ಸೆಕೆಂಡ್ ನಲ್ಲಿ ಅಮೆಜಾನ್ ಅಲೆಕ್ಷಾ ಸಾಧನದೊಂದಿಗೆ ಸಪೋರ್ಟ್ ಮಾಡುವ ಉಪಕರಣಗಳಲ್ಲಿ ನೀಲಿ ಬೆಳಕಿನ ಬಲ್ಬ್ ಆನ್ ಆಗುತ್ತದೆ. ಉದಾಹರಣೆಗೆ ಯಾವುದೇ ಇತರ ಉಪಕರಣಗಳನ್ನು ಅಲೆಕ್ಷಾದೊಂದಿಗೆ ಕನೆಕ್ಟ್ ಮಾಡಿದ್ರೆ ನೀವು ಕೊಡುವ ಆಜ್ಞೆಗೆ ಆ ಉಪಕರಣ ಕೆಲಸ ಮಾಡಲಿದೆ. ಆನ್ ಮಾಡುವುದು ಆಫ್ ಮಾಡುವುದು ಹಾಗೂ ಅನೇಕ ಆಯ್ಕೆಗಳು ಕೆಲಸ ಮಾಡಲಿದೆ. ಅಲೆಕ್ಷಾ ಅಪ್ಲಿಕೇಶನ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ಫಾಲೋ ಅಪ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು. ಪ್ರಸ್ತುತ ಅಮೆಜಾನ್ ಎಕೋ ಸಾಧನಗಳಲ್ಲಿ ಮತ್ತು ಕೆಲವು ಬೆರಳೆಣಿಕೆಯ ಥರ್ಡ್ ಪಾರ್ಟಿ ಸಾಧನಗಳಲ್ಲಿ ಅಲೆಕ್ಷಾ ಅಪ್ಲಿಕೇಶನ್ ಲಭ್ಯವಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಅಮೆಜಾನ್ ಮತ್ತು ಗ್ರೌಂಡ್ ಕಂಟ್ರೋಲ್ ವಿಭಾಗ ಅಭಿವೃದ್ದಿಪಡಿಸಿದ ಹೊಸ ತಂತ್ರಜ್ಞಾನ, ಬಳಕೆದಾರರು ತಯಾರಿಸಿದ ಆಹಾರ ಖಾದ್ಯದ ಬಗ್ಗೆ ಹೆಸರಾಂತ ಅಂತಾರಾಷ್ಟ್ರೀಯ ಬಾಣಸಿಗ ಗೋರ್ಡಾನ್ ರಾಮ್ಸೇ ಅಭಿಪ್ರಾಯ ನೀಡುವುದನ್ನು ನಮ್ಮ ಹಿಂದಿನ ಲೇಖನದಲ್ಲಿ ತಿಳಿಸಿದ್ದೆವು. ಗೋರ್ಡಾನ್ ರಾಮ್ಸೇ ಆಹಾರ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ಮತ್ತು ಖಾದ್ಯಗಳ ಬಗ್ಗೆ ವಿಮರ್ಶೆ ಮಾಡುವುದರಲ್ಲಿ ಎತ್ತಿದ ಕೈ. ಅಲೆಕ್ಷಾ ಬಳಕೆದಾರರು ಮಾಡಿದ ಆಹಾರ ಖಾದ್ಯಗಳಿಗೆ ಗೋರ್ಡಾನ್ ರಾಮ್ಸೇ ಮತ್ತು ಅಮೆಜಾನ್ ಅಲೆಕ್ಸ್ ಜಂಟಿಯಾಗಿ ಅಭಿಪ್ರಾಯ ತಿಳಿಸುವುದು ಅದ್ಭುತವಾಗಿದೆ.

ಈ ಹೊಸ ತಂತ್ರಜ್ಞಾನವನ್ನು ಬಳಸಬೇಕೆಂದರೆ ನೀವು ಅಲೆಕ್ಷಾದ ಬಳಿ "ನಾನು ತಯಾರಿಸಿದ ಖಾದ್ಯ ಹೇಗಿದೆ ಎಂದು ಗೋರ್ಡಾನ್ ರಾಮ್ಸೆ ಬಳಿ ಕೇಳು" ಎಂದು ಆಜ್ಞೆ ನೀಡಬೇಕು. ನಂತರ ಈ ಖಾದ್ಯ ಪ್ರಶಂಶನೀಯವಾ ? ಅಥವಾ ಇನ್ನು ಉತ್ತಮವಾಗಿ ಮಾಡಬಹುದಿತ್ತು ಎಂದು ಅಮೆಜಾನ್ ಎಕೋ ಸ್ಪೀಕರ್ ತನ್ನ ಅಭಿಪ್ರಾಯ ತಿಳಿಸುತ್ತದೆ.

English summary
The blue ring on the devices supporting Amazon Alexa will light up during follow up, and a user can give a command like "Thank You" or "Stop" to stop the assistant waiting for a follow-up command. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot