ಅಮೆಜಾನ್ ನಿಂದ ಹೊಸ ಆಪ್ ‘ಎನಿಟೈಮ್’: ಏನಿದರ ವಿಶೇಷತೆ..!!

Written By: Lekhaka

ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ ಆಲೆಕ್ಸಾ ವಾಯ್ಸ್ ಆಸಿಸ್ಟೆಂಟ್ ಮತ್ತು ಇಕೋ ಸ್ಮಾರ್ಟ್ ಸ್ಪೀಕರ್ ಬಿಡುಗಡೆ ಮಾಡಿ ಯಶಸು ಗಳಿಸಿದ ನಂತರದಲ್ಲಿ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಅಮೆಜಾನ್ ನಿಂದ ಹೊಸ ಆಪ್ ‘ಎನಿಟೈಮ್’: ಏನಿದರ ವಿಶೇಷತೆ..!!

ಈ ಬಾರಿ ಅಮೆಜಾನ್ ಹೊಸದೊಂದು ಆಪ್ ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕೆ ಅಮೆಜಾನ್ ಎನಿಟೈಮ್ ಎನ್ನುವ ಮೇಸೆಂಜಿಗ್ ಆಪ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ.

ಈ ಆಪ್ ವಾಯ್ಸ್ ಮತ್ತು ವಿಡಿಯೋ ಕಾಲ್ ಗಳನ್ನು ಮಾಡುವುದರೊಂದಿಗೆ ಫೋಟೋ ಶೇರಿಂಗ್ ಮಾಡಬಹುದಾಗಿದೆ. ಇದಲ್ಲದೇ ಫೋಟೋಗಳನ್ನು ಕಳುಹಿಸುವ ಮುನ್ನ ಫಿಲ್ಟರ್, ಮಾಸ್ಕ್ ಮುಂತಾದವುಗಳನ್ನು ಆಡ್ ಮಾಡಿಕೊಳ್ಳಬಹುದಾಗಿದೆ,

ಅಲ್ಲದೇ ಈ ಆಪ್ ನಲ್ಲಿ ಫುಡ್ ಆರ್ಡರ್ ಮಾಡಬಹುದಾಗಿದೆ, ಗೇಮ್ ಗಳನ್ನು ಆಡಬಹುದಾಗಿದೆ, ಮತ್ತು ಗ್ರೂಪ್ ಗಳನ್ನು ಕ್ರಿಯೇಟ್ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಲಿದೆ.

ಇದಲ್ಲದೇ ಈ ಮೆಸೇಜಿಂಗ್ ಆಪ್ ಎಂಡ್ ಟು ಎಂಡ್ ಎನ್ ಸ್ಕ್ರಿಪ್ಷನ್ ಹೊಂದಿರಲಿದೆ. ಅಲ್ಲದೇ ಇದರಲ್ಲಿ ನಿಮ್ಮ ಬ್ಯಾಂಕ್ ಮಾಹಿತಿಗಳನ್ನು ಎನ್ ಸ್ಕ್ರಿಪ್ಷನ್ ಮಾಡುವ ಅವಕಾಶವನ್ನು ನೀಡಿದ್ದು, ಈ ಮೂಲಕ ಅಮೆಜಾನ್ ಶಾಪಿಂಗ್ ಸಹ ಮಾಡಬಹುದಾಗಿದೆ.

ಅಮೆಜಾನ್ ಎನಿಟೈಮ್ ಆಪ್ ಗೂಗಲ್ ಆಲೋ ಮತ್ತು ಗೂಗಲ್ ಡಿಯೋ ಆಪ್ ಮಾದರಿಯಲ್ಲಿ ಒಂದಾಗಿಯೇ ಇರುವಂತೆ ನಿರ್ಮಿಸಲಾಗಿದೆ. ಶೀಘ್ರವೇ ಇದು ಲಾಂಚ್ ಆಗುವ ಸಾಧ್ಯತೆ ಇದೆ.

Read more about:
English summary
Amazon is likely to launch a messaging app called Anytime soon.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot