ಅಮೆಜಾನ್ ಫ್ರೀಡಂ ಸೇಲ್: ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್..!
ಭಾರತೀಯ ಇ ಕಾರ್ಮಸ್ ಮಾರುಕಟ್ಟೆಯ ದೈತ್ಯ ಅಮೆಜಾನ್ ನಲ್ಲಿ ಫ್ರೀಡಮ್ ಸೇಲ್ ಶುರುವಾಗಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವರಿಗೆ ಹಬ್ಬ ಎನ್ನಬಹುದಾಗಿದೆ. ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಮತ್ತು ವಿವಿಧ ಆಪರ್ ಗಳಲ್ಲಿ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಲಾಗುತ್ತಿದೆ.

ಈ ಹಿನ್ನಲೆಯಲ್ಲಿ ನೀವು ಸ್ಮಾರ್ಟ್ ಫೋನ್ ಖರೀದಿ ಮಾಡುವ ಪ್ಲಾನ್ ಮಾಡುತ್ತಿದ್ದರೆ ನಿಮಗೆ ಸಹಾಯವಾಗು ನಿಟ್ಟಿನಲ್ಲಿ ಎಕ್ಸ್ ಚೇಂಜ್ ಆಫರ್ ನಲ್ಲಿ ಹೆಚ್ಚಿನ ಡಿಸ್ಕೌಂಟ್ ಇರುವ ಫೋನ್ ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

ಒನ್ ಪ್ಲಸ್ 6: ಎಕ್ಸ್ ಚೇಂಜ್ ಆಫರ್ ರೂ.9600
ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಒನ್ ಪ್ಲಸ್ 6 ಸ್ಮಾರ್ಟ್ ಫೋನಿನ ಮೇಲೆ ಬಳಕೆದಾರರಿಗೆ ಅಮೆಜಾನ್ ಫ್ರೀಡಮ್ ಸೇಲ್ ನಲ್ಲಿ ಎಕ್ಸ್ ಚೇಂಜ್ ಆಫರ್ ರೂ.9600ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ರೂ.2000ದ ವರೆಗೂ ಐಡಿಯಾದಿಂದ ಕ್ಯಾಷ್ ಬ್ಯಾಕ್ ಅನ್ನು ನೀಡಲಾಗುತ್ತಿದೆ. ಇದರಿಂದಾಗಿ ಒನ್ ಪ್ಲಸ್ ರೂ.25,399ಕ್ಕೆ ದೊರೆಯಲಿದೆ.

ರಿಯಲ್ ಮಿ 1: ಎಕ್ಸ್ ಚೇಂಜ್ ಆಫರ್ ರೂ.7,600
ಶಿಯೋಮಿಗೆ ಸೆಡ್ಡು ಹೊಡೆಯುತ್ತಿರುವ ಒಪ್ಪೋ ಕಂಪನಿಯ ರಿಯಲ್ ಮಿ 1 ಸ್ಮಾರ್ಟ್ ಫೋನಿನ ಮೇಲೆ ರೂ.7600ರ ವರೆಗೂ ಎಕ್ಸ್ ಚೇಂಜ್ ಆಫರ್ ಪಡೆಯಬಹುದಾಗಿದೆ. ಈ ಸ್ಮಾರ್ಟ್ ಫೋನ್ ರ . 10,999ಕ್ಕೆ ಮಾರಾಟವಾಗುತ್ತಿದೆ. ಇದಲ್ಲದೇ ಜಿಯೋ ದಿಂದ ರೂ.4850ರ ವರೆಗೂ ಲಾಭವನ್ನು ಪಡೆಯಬಹುದಾಗಿದೆ.

ಮೊಟೊ G6: ಎಕ್ಸ್ ಚೇಂಜ್ ಆಫರ್ ರೂ.9,600
ಮಾರುಕಟ್ಟೆಯಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಮೊಟೊ G6 ಸ್ಮಾರ್ಟ್ ಫೋನ್ ಮೇಲೆ ರೂ.9,600ರ ವರೆಗೂ ಎಕ್ಸ್ ಚೇಂಜ್ ಆಫರ್ ಪಡೆಯಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ರೂ.15999ಕ್ಕೆ ದೊರೆಯುತ್ತಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8: ಎಕ್ಸ್ ಚೇಂಜ್ ಆಫರ್ ರೂ.15,600
ಮಾರುಕಟ್ಟೆಯ್ಲಲಿ ಸದ್ದು ಮಾಡುತ್ತಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್ ಫೋನಿನ ಮೇಲೆ ರೂ.15,600ರವರೆಗೂ ಎಕ್ಸ್ ಚೇಂಚ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಬಳೆಕದಾರರು ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8 ಅನ್ನು ರೂ.40300ಕ್ಕೆ ಕೊಳ್ಳಬಹುದಾಗಿದೆ. ಇದಲ್ಲದೇ HDFC ಕಾರ್ಡು ದಾರರು ರೂ.4000 ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಮೊಟೊ E5 ಪ್ಲಸ್: ಎಕ್ಸ್ ಚೇಂಜ್ ಆಫರ್ ರೂ.9,600
ಮೊಟೊ E5 ಪ್ಲಸ್ ಸ್ಮಾರ್ಟ್ ಫೋನ್ ಮೇಲೆ ಎಕ್ಸ್ ಚೇಂಜ್ ಆಫರ್ ನಲ್ಲಿ ರೂ.9,600 ಕಡಿತವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ರೂ.2399ಕ್ಕೆ ಈ ಸ್ಮಾರ್ಟ್ ಪೋನ್ ಅನ್ನು ಖರೀದಿ ಮಾಡಬಹುದಾಗಿದೆ. ಇದಲ್ಲದೇ ಜಿಯೋ ಬಳಕೆದಾರರು 1.2TB ಡೇಟಾವನ್ನು ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ವಿವೋ NEX: ಎಕ್ಸ್ ಚೇಂಜ್ ಆಫರ್ ರೂ.19,675
ವಿಶ್ವದ ಮೊದಲ ಪಾಪ್ ಆಪ್ ಕ್ಯಾಮೆರಾವನ್ನು ಹೊಂದಿರುವ ವಿವೋ NEX ಸ್ಮಾರ್ಟ್ ಫೋನಿನ ಮೇಲೆ ರೂ,19675 ಗಳಷ್ಟು ಎಕ್ಸ್ ಚೇಂಜ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದು ರೂ.44990ಕ್ಕೆ ಮಾರಾಟವಾಗುತ್ತಿದೆ. ಈ ಆಫರ್ ನಿಂದಾಗಿ ರೂ.25315ಕ್ಕೆ ವಿವೋ NEX ಸ್ಮಾರ್ಟ್ ಪೋನ್ ಅನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








