ಸ್ವಿಗ್ಗಿ, ಜೊಮ್ಯಾಟೋಗೆ ಭಾರೀ ಹೊಡೆತ ನೀಡಲು ಅಮೆಜಾನ್‌ ರೆಡಿ..!

By Gizbot Bureau
|

ಜಾಗತಿಕ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆಹಾರ ವಿತರಣಾ ಉದ್ಯಮ ಪ್ರವೇಶಿಸಲು ತಯಾರಿ ನಡೆಸಿದೆ. ಹೌದು, ಅಮೆಜಾನ್‌ನ ವಿತರಣಾ ವೇದಿಕೆ ಆಗಿರುವ ಪ್ರೈಮ್‌ ನೌ, ಭಾರತದಲ್ಲಿ ಆಹಾರ ವಿತರಣಾ ಉದ್ಯಮ ಪ್ರವೇಶಕ್ಕೆ ಪ್ರಾಥಮಿಕ ವೇದಿಕೆಯಾಗಬಹುದು ಎಂಬ ಮಾತುಗಳು ಉದ್ಯಮವಲಯದಲ್ಲಿ ಕೇಳಿಬರುತ್ತಿವೆ. ಇದಷ್ಟೇ ಅಲ್ಲದೇ, ಓಲಾದ ಆಹಾರ ವಿತರಣಾ ಘಟಕ ಫುಡ್‌ಪಾಂಡಾದೊಂದಿಗೆ ಅಮೆಜಾನ್‌ ಮಾತುಕತೆ ನಡೆಸಿದ್ದು, ಸಂಭಾವ್ಯ ಸಹಭಾಗಿತ್ವ ಹೊಂದುವ ಸಾಧ್ಯತೆಯಿದೆ. ಫುಡ್‌ಪಾಂಡಾ ಜೊತೆ ಊಬರ್ ಈಟ್ಸ್ ಕಂಪನಿಯ ಜೊತೆ ಕೂಡ ಅಮೆಜಾನ್‌ ಮಾತುಕತೆ ನಡೆರುವ ಬಗ್ಗೆ ವರದಿಯಾಗಿದೆ. ಇದರಿಂದ, ಸ್ವಿಗ್ಗಿ ಮತ್ತು ಜೊಮ್ಯಾಟೋ ನಷ್ಟ ಅನುಭವಿಸುವ ಸಾಧ್ಯತೆ ಇದೆ.

ಸಹಭಾಗಿತ್ವ, ಹೂಡಿಕೆ

ಸಹಭಾಗಿತ್ವ, ಹೂಡಿಕೆ

ಮೊದಲು ಅಮೆಜಾನ್ ನೌ ಎಂದು ಕರೆಯಲಾಗುತ್ತಿದ್ದ ಪ್ರೈಮ್ ನೌ, ಆಹಾರ ಮತ್ತು ಕಿರಾಣಿ ವಿತರಣೆಯಲ್ಲಿ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ, ಅಮೆಜಾನ್ ನಗರ ಪ್ರದೇಶದ ಗ್ರಾಹಕರಲ್ಲಿ ಹೆಚ್ಚಿನ ಜನರನ್ನು ಸೆಳೆಯಲು ಬಯಸುತ್ತದೆ. ಮೊದಲಿನಿಂದಲೂ ಆಹಾರ ವಿತರಣೆಯನ್ನು ತಾನೇ ಮಾಡಬೇಕೆ ಅಥವಾ ಪಾಲುದಾರಿಕೆ ಹಾಗೂ ಹೂಡಿಕೆಗಳಿಗೆ ತೆರೆದುಕೊಳ್ಳಬೇಕೆ ಎಂಬ ಚಿಂತನೆಯಲ್ಲಿ ಅಮೆಜಾನ್ ಇತ್ತು. ಈಗ ಅಮೆಜಾನ್‌ ಎರಡನೆಯದನ್ನು ಆರಿಸಿಕೊಂಡಿದ್ದು, ಇದಕ್ಕಾಗಿ ಉಬರ್ ಮತ್ತು ಓಲಾ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ. ಇನ್ನು, ಎಕ್ಸ್‌ಪ್ರೆಸ್ ವಿತರಣಾ ವೇದಿಕೆಗಾಗಿ ವಿತರಣಾ ಪಡೆಯ ಅಸಮರ್ಪಕ ಬಳಕೆಯನ್ನು ಲಾಜಿಸ್ಟಿಕ್ಸ್ ತಂಡ ಪ್ರಶ್ನಿಸಿರುವುದರಿಂದ ಕಿರಾಣಿ ವಿತರಣೆಯಲ್ಲಿ ಪ್ರೈಮ್ ನೌ ಅನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅಮೆಜಾನ್‌ನ ಹಿರಿಯ ಅಧಿಕಾರಿ ಹೇಳುತ್ತಾರೆ.

ಯಶಸ್ಸು ಕಾಣದ ಪ್ಯಾಂಟ್ರಿ

ಯಶಸ್ಸು ಕಾಣದ ಪ್ಯಾಂಟ್ರಿ

ಸಿಯಾಟಲ್ ಮೂಲದ ಆನ್‌ಲೈನ್ ಚಿಲ್ಲರೆ ವ್ಯಾಪಾರಿ ದೈತ್ಯ ಅಮೆಜಾನ್‌ ಪ್ಯಾಂಟ್ರಿ ವ್ಯಾಪಾರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಸಾಧ್ಯವಾಗಿಲ್ಲ. ಕಿರಾಣಿ ವಿಭಾಗದ ತ್ವರಿತ ವಿತರಣಾ ವಿಭಾಗದಲ್ಲಿ ಪ್ರೈಮ್ ನೌಗಿಂತ ಆನ್‌ಲೈನ್ ಕಿರಾಣಿ ಸ್ಟೋರ್‌ಗಳಾದ ಬಿಗ್‌ಬಾಸ್ಕೆಟ್ ಮತ್ತು ಗ್ರೋಫರ್ಸ್ ಹೆಚ್ಚು ಮುಂದಿದೆ. ಗ್ರೋಫರ್ಸ್ ಪ್ರತಿ ತಿಂಗಳು ಸುಮಾರು 1.5 ರಿಂದ 1.8 ಮಿಲಿಯನ್ ಆರ್ಡರ್‌ಗಳನ್ನು ಪಡೆಯುತ್ತಿದ್ದು, ಜನರನ್ನು ಆಕರ್ಷಿಸಿದೆ.

ಮುಂದಿನ ವರ್ಷಕ್ಕೆ ಸೇವೆ

ಮುಂದಿನ ವರ್ಷಕ್ಕೆ ಸೇವೆ

ಪ್ರೈಮ್ ನೌ ಇಂಡಿಯಾದ ಮುಖ್ಯಸ್ಥ ಸಿದ್ಧಾರ್ಥ್ ನಂಬಿಯಾರ್ ಮತ್ತು ಅಮೆಜಾನ್ ಇಂಡಿಯಾದ ನಿರ್ದೇಶಕ ಸಮೀರ್ ಖೇತಾರ್ಪಾಲ್ ಆಹಾರ ವಿತರಣಾ ವ್ಯವಹಾರವನ್ನು ಕಾರ್ಯನಿರ್ವಹಣೆಗೆ ತರಲು ಮಾತುಕತೆಗಳಿಗೆ ಮುಂದಾಗಿದ್ದಾರೆ. ಅಂತಿಮ ಟೈಮ್‌ಲೈನ್‌ನ್ನು ನಿರ್ಧರಿಸದಿದ್ದರೂ, ಮುಂದಿನ ವರ್ಷದಲ್ಲಿ ಈ ಸೇವೆಯನ್ನು ಪ್ರಾರಂಭಿಸುವ ಉದ್ದೇಶವನ್ನು ಅಮೆಜಾನ್ ಹೊಂದಿದೆ.

ಬ್ರಾಂಡ್‌ ಸೃಷ್ಟಿಗೆ ನಿರ್ಧಾರ

ಬ್ರಾಂಡ್‌ ಸೃಷ್ಟಿಗೆ ನಿರ್ಧಾರ

ರೆಬೆಲ್ ಫುಡ್ಸ್ (ಫ್ಯಾಸೋಸ್), ಈಟ್.ಫಿಟ್ (ಕ್ಯೂರ್.ಫಿಟ್‌ನ ಆಹಾರ ಉದ್ಯಮ), ಡೊಮಿನೋಸ್‌ ಮತ್ತು ಅದರ ಸ್ವಂತ ಖಾಸಗಿ ಬ್ರಾಂಡ್‌ಗಳಂತಹ ಆಹಾರ ವಿತರಣೆ ಉದ್ಯಮವನ್ನು ಪ್ರಾರಂಭಿಸುವುದು ಅಮೆಜಾನ್‌ನ ಮೂಲ ಯೋಜನೆಯಾಗಿದೆ ಎಂಬುದು ತಿಳಿದುಬಂದಿದೆ. ಇನ್ನು, ಫುಡ್‌ಪಾಂಡಾ ಕ್ಲೌಡ್ ಅಡುಗೆಮನೆಗಳ ಮೇಲೆ ಗಮನ ಕೇಂದ್ರೀಕರಿಸುವುದಾಗಿ ಹೇಳಿದ್ದು, ಇದು ಆನ್‌ಲೈನ್ ಫುಡ್-ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಸದ್ಯ ಫುಡ್‌ಪಾಂಡಾ ಸುಮಾರು 50 ಕ್ಲೌಡ್ ಅಡುಗೆಮನೆಗಳನ್ನು ಹೊಂದಿದೆ.

ಅಮೆಜಾನ್‌ ಪೇ ಯಶಸ್ಸು

ಅಮೆಜಾನ್‌ ಪೇ ಯಶಸ್ಸು

ಆಹಾರ ವಿತರಣೆಯಲ್ಲಿ ಅಮೆಜಾನ್‌ನ ಆಸಕ್ತಿಯ ಬಗ್ಗೆ ತಿಳಿದಿರುವ ಮತ್ತೊಬ್ಬರು ಹೇಳುವಂತೆ ಅಮೆಜಾನ್ ಪೇ ಬಳಕೆದಾರರನ್ನು ಉತ್ತಮವಾಗಿ ಆಕರ್ಷಿಸಿದೆ. ಗ್ರಾಹಕರು ಸ್ವಿಗ್ಗಿಯಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹಣ ಪಾವತಿಸಲು ಅಮೆಜಾನ್‌ ಪೇ ವೇದಿಕೆಯನ್ನು ಬಳಸುತ್ತಿದ್ದಾರೆ. ಅದಕ್ಕಾಗಿಯೇ ಅಮೆಜಾನ್‌ ತನ್ನದೇ ಆಹಾರ ವಿತರಣಾ ಉದ್ಯಮದಲ್ಲಿ ಅಮೆಜಾನ್‌ ಪೇ ವ್ಯವಹಾರ ಪುನರಾವರ್ತಿಸಬಹುದೆಂದು ಆಶಿಸುತ್ತಿದೆ ಎನ್ನುತ್ತಾರೆ. ಈ ಬಗ್ಗೆ ಕಂಪನಿಯನ್ನು ಸಂಪರ್ಕಿಸಿದಾಗ ಅಮೆಜಾನ್ ಇಂಡಿಯಾ ಮತ್ತು ಓಲಾ ವಕ್ತಾರರು ಸಂಭಾವ್ಯ ಒಪ್ಪಂದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

Best Mobiles in India

Read more about:
English summary
Amazon Plans To Compete Against Zomato And Swiggy In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X