Home
Apps

ಅಲೆಕ್ಸಾದಲ್ಲಿ ಬರುತ್ತಿವೆ ಇನ್ನೂ ಹೆಚ್ಚಿನ ವಿನೂತನ ವಾಯ್ಸ್ ವಿಶೇಷತೆಗಳು!!

By Bhaskar N J

ವಾಯ್ಸ್ ಅಸಿಸ್ಟೆಂಟ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿರುವ ಅಲೆಕ್ಸಾದಲ್ಲಿ ಇನ್ನೂ ಹೆಚ್ಚಿನ ವಿನೂತನ ವಾಯ್ಸ್ ವಿಶೇಷತೆಗಳ ಬಿಡುಗಡೆಯನ್ನು ಅಮೆಜಾನ್ ಮ್ಯೂಸಿಕ್ ಪ್ರಕಟಿಸಿದೆ. ನೀವಿನ್ನು ಆಲಿಸಿ ಅರ್ಧಕ್ಕೆ ನಿಲ್ಲಿಸಿದ ಹಾಡನ್ನು ಮತ್ತೆ ಕೇಳಲು ಅಲೆಕ್ಸಾವನ್ನು ಕೇಳುವಂತೆ ಅಮೆಜಾನ್ ಮ್ಯೂಸಿಕ್ ಈಗ ಸುಲಭಗೊಳಿಸಿದ್ದು, ನಿರ್ದಿಷ್ಟ ಹಾಡಿನ ಟ್ರ್ಯಾಕ್ ನೆನಪಿಟ್ಟುಕೊಳ್ಳುವವುದು ತಪ್ಪುತ್ತದೆ.

ಈಗ ಅಮೆಜಾನ್ ಪ್ರೈಮ್ ಮ್ಯೂಸಿಕ್ ಆಲಿಸುವವರು ಕೆಲಕಾಲದಿಂದ ಆಲಿಸಿರದ ತಮ್ಮ ನೆಚ್ಚಿನ ಹಾಡುಗಳನ್ನು ಅಲೆಕ್ಸಾ ಮತ್ತೆ ಪ್ಲೇ ಮಾಡಲು ವಾಯ್ಸ್ ಬಳಸಬಹುದಾಗಿದ್ದು, ಬ್ರೌಸ್ ಮಾಡದೆ ಈಗಿರುವ ಪ್ಲೇ ಲಿಸ್ಟ್‌ಗೆ ನಿಮ್ಮ ನೆಚ್ಚಿನ ಹಾಡುಗಳನ್ನು ಸೇರಿಸುವಂತೆ ಕೇಳಿಕೊಳ್ಳಬಹುದಾಗಿದೆ. ಈ ಆಪ್ ಸೇವೆಗಳು ಅಮೆಜಾನ್ ಎಕೊ ಫ್ಯಾಮಿಲಿ ಡಿವೈಸ್‌ಗಳಲ್ಲಿ ಮಾತ್ರ ಲಭ್ಯವಿದೆ.

ಅಲೆಕ್ಸಾದಲ್ಲಿ ಬರುತ್ತಿವೆ ಇನ್ನೂ ಹೆಚ್ಚಿನ ವಿನೂತನ ವಾಯ್ಸ್ ವಿಶೇಷತೆಗಳು!!

ದಿನನಿತ್ಯದ ಸಂಗೀತ ಆಲಿಕೆ ಅನುಭವವನ್ನು ಮತ್ತಷ್ಟು ಹೆಚ್ಚಿಸಿ ಆನಂದಿಸಲು ಮತ್ತು ಟ್ರ್ಯಾಕ್ ಮಾಡಲು ಈಗ ಸುಲಭವಾಗಿದ್ದು, 'ಪ್ಲೇ ಮಿ ದಿ ಸಾಂಗ್ ___ ತ್ರೀ ವೀಕ್‌ಸ್ ಅಗೊ' ಎಂದು ಸಾಂಗ್ ಅನ್ನು ಕ್ಷಣಮಾತ್ರದಲ್ಲಿ ಸರ್ಚ್ ಮಾಡಬಹುದಾಗಿದೆ. ಪ್ಲೇ ಸರತಿಯಲ್ಲಿನ ಹಾಡೊಂದನ್ನು ಸೇರಿಸಲು ಪ್ಲೇ ಲಿಸ್ಟ್‌ಗೆ ಸೇರಿಸುವ ವಿಶೇಷ ಸೌಕರ್ಯವು ಇದರ ಮತ್ತೊಂದು ವಿಶೇಷತೆಯಾಗಿದೆ.

'ಅಲೆಕ್ಸಾ ಕ್ರಿಯೇಟ್ ಏ ನ್ಯೂ ಪ್ಲೇಲಿಸ್ಟ್', 'ಅಲೆಕ್ಸಾ ಕ್ರಿಯೇಟ್ ಅ ವರ್ಕ್ ಔಟ್', 'ಅಲೆಕ್ಸಾ ಕ್ರಿಯೇಟ್ ದಿ ಪ್ಲೇಲಿಸ್ಟ್ ಮೈ ಫವರಿಟ್ ಹಿಟ್ಸ್', 'ಅಲೆಕ್ಸಾ, ಪ್ಲೇ ಮೀ ಹಿಪ್ ಹಾಪ್ ಮ್ಯೂಸಿಕ್ ಐ ವಾಸ್ ಲಿಸನಿಂಗ್ ಟು ತ್ರೀ ವೀಕ್‌ಸ್ ಅಗೋ', 'ಅಲೆಕ್ಸಾ, ಪ್ಲೇ ಮೀ ಸಾಂಗ್‌ಸ್ ಐ ರೀಸೆಂಟ್ಲಿ ಪ್ಲೇಡ್' ಹೀಗೆ ಹತ್ತಾರು ರೀತಿಯಲ್ಲಿ ಅಲೆಕ್ಸಾ ವಾಯಿಸ್ ಅಸಿಸ್ಟೆಂಟ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಅಲೆಕ್ಸಾದಲ್ಲಿ ಬರುತ್ತಿವೆ ಇನ್ನೂ ಹೆಚ್ಚಿನ ವಿನೂತನ ವಾಯ್ಸ್ ವಿಶೇಷತೆಗಳು!!

ಇಂಗ್ಲಿಷ್, ಹಿಂದಿ, ತಮಿಳು, ಪಂಜಾಬಿ, ಬಂಗಾಲಿ, ಕನ್ನಡ, ತೆಲುಗು ಸೇರಿದಂತೆ 10 ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಕೋಟ್ಯಂತರ ಹಾಡುಗಳ ಹೊಂದಿದೆ ಅಮೆಜಾನ್ ಪ್ರೈಮ್ ಮ್ಯೂಸಿಕ್ ಅಮೆಜಾನ್ ಪ್ರೈಮ್ ಸೇವೆಯ ಜೊತೆಯಲ್ಲಿ ಉಚಿತವಾಗಿ ಸಿಗುತ್ತಿದೆ. ಅಮೆಜಾನ್ ಪ್ರೈಮ್‌ಗಾಗಿ, ವಾರ್ಷಿಕ ರೂ.999/-ರೂ. ಹಾಗೂ ಮಾಸಿಕ 129/- ರೂಪಾಯಿಗಳನ್ನು ಪಾವತಿಸಬೇಕಿದೆ.

Best Mobiles in India

English summary
Amazon Prime Music has launched innovative voice features on Alexa. The facility is available both in its mobile app as well as on Echo family. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+