Home
Apps

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸೇವೆ ಆರಂಭಿಸಿದ ಅಮೆಜಾನ್..!

By Srinidhi

ಮಾರುಕಟ್ಟೆಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ತೋರಿಸಿಕೊಡುತ್ತಿರುವ ಅಮೆರಿಕಾ ಮೂಲದ ಇ-ಕಾರ್ಮಸ್ ಸಂಸ್ಥೆ ಅಮೆಜಾನ್, ಈ ಹಿಂದೆ ಮಾರುಕಟ್ಟೆಗೆ ಇಕೋ ಸ್ಮಾರ್ಟ್‌ ಸ್ಪೀಕರ್ ಗಳನ್ನು ಪರಿಚಯಿಸಿದ್ದು, ಅಲ್ಲದೇ ಅಮೆಜಾನ್ ಪ್ರೈಮ್ ವಿಡಿಯೋ-ಆಡಿಯೋ ಆಪ್‌ಗಳನ್ನು ಬಿಡಗಡೆ ಮಾಡಿತ್ತು. ಇದು ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಇದೇ ಮಾದರಿಯಲ್ಲಿ ಅಮೆಜಾನ್ ಲೈಟ್ ಆವೃತ್ತಿಯ ವೆಬ್ ಬ್ರೌಸರ್ ಅನ್ನು ಲಾಂಚ್ ಮಾಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸೇವೆ ಆರಂಭಿಸಿದ ಅಮೆಜಾನ್..!

ಬಳಕೆದಾರರಿಗೆ ಹೊಸ ಸಾಧ್ಯತೆಯನ್ನು ನೀಡುವ ಸಲುವಾಗಿ ಅಮೆಜಾನ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಲೈಟ್ ಹೆಸರಿನಲ್ಲಿ ಆಪ್‌ವೊಂದನ್ನು ಲಾಂಚ್ ಮಾಡಿದ್ದು, ಮಾರುಕಟ್ಟೆಯಲ್ಲಿ ಲೈಟ್ ಆವೃತ್ತಿಯ ಆಪ್‌ಗಳು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಅಮೆಜಾನ್ ಈ ಹೊಸ ಆಪ್ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಈ ಆಪ್ ಮೂಲಕ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡಲಿದೆ. ಅಲ್ಲದೇ ಈ ಆಪ್ ಕಡಿಮೆ ಗಾತ್ರದಲ್ಲಿದ್ದು, ಕಡಿಮೆ ಜಾಗವನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಆಕ್ರಮಿಸಿಕೊಳ್ಳಲಿದೆ.

ಈಗಾಗಲೇ ಪ್ಲೇ ಸ್ಟೋರಿನಲ್ಲಿ ಬಳಕೆದಾರರಿಗೆ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಇದು ಗೂಗಲ್ ಕ್ರೋಮ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಹೊಸ ಮಾದರಿಯಲ್ಲಿ ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಸಫೋರ್ಟ್ ಮಾಡುವ ಈ ಆಪ್, ಪ್ರೈವೇಟ್ ವಿಂಡೋವನ್ನು ಹೊಂದಿದೆ ಎನ್ನಲಾಗಿದೆ. ಬಳಕೆದಾರರಿಗೆ ಹೊಸ ಸೇವೆಯನ್ನು ಇದು ಪರಿಚಯಿಸುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸೇವೆ ಆರಂಭಿಸಿದ ಅಮೆಜಾನ್..!

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಲೈಟ್ ಆಪ್‌ಗಳು ಕಾಣಿಸಿಕೊಂಡಿದ್ದು, ಇದೇ ಮಾದರಿಯಲ್ಲಿ ಆಮೆಜಾನ್ ಸಹ ಲೈಟ್ ಆಪ್‌ ಕಡೆಗೆ ಮುಖ ಮಾಡಿದೆ. ಬಳಕೆದಾರರಿಗೆ ಈ ವೆಬ್‌ ಬ್ರೌಸರ್ ಮೂಲಕ ಶಾಪಿಂಗ್ ಅನುಭವನ್ನು ನೀಡಲಿದೆ. ಕಡಿಮೆ ಡೇಟಾ ಬಳಕೆ ಮಾಡಿಕೊಂಡು ವೆಬ್ ಬ್ರೌಸ್ ಮಾಡುವುದು ಸಾಧ್ಯವಾಗಲಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಈಗಾಗಲೇ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪ್‌ಗಳಿಗೆ ಇದ್ದು, ಸೆಡ್ಡು ಹೊಡೆಯಲಿದ್ದು, ಲೈಟ್ ಬ್ರೌಸರ್ ಗಳು ಹೆಚ್ಚು ಹಿಟ್ ಆಗುತ್ತಿರುವ ಹಿನ್ನಲೆಯಲ್ಲಿ ಅಮೆಜಾನ್ ಲೈಟ್ ಸಹ ಬಳಕೆದಾರರಿಗೆ ಇಷ್ಟವಾಗಲಿದೆ.

Best Mobiles in India

English summary
Amazon Releases a 'Lite' Internet Browser for India. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+