ಅಮೇಜಾನ್ ಭಾರತದಲ್ಲಿ ತಂದಿದೆ ಅಮೇಜಾನ್ ಪ್ರೈಮ್ ಮ್ಯೂಸಿಕ್ ಸೇವೆ..!

By Tejaswini P G
|

ಇ-ಕಾಮರ್ಸ್ ದಿಗ್ಗಜರಾದ ಅಮೇಜಾನ್ ತನ್ನ ಭಾರತದ ಗ್ರಾಹಕರಿಗೆ ತಂದಿದೆ ಅಮೇಜಾನ್ ಪ್ರೈಮ್ ಮ್ಯೂಸಿಕ್ ಸೇವೆ. ಭಾರತದ ಗ್ರಾಹಕರಿಗೆ ಈ ಅಮೇಜಾನ್ ಪ್ರೈಮ್ ಮ್ಯೂಸಿಕ್ ಸೇವೆಯನ್ನು 2017 ರಲ್ಲೇ ನೀಡಲು ಪ್ರಾರಂಭಿಸಿತ್ತಾದರೂ ಈ ಸೇವೆ ಕೇವಲ ಅಮೇಜಾನ್ ಇಖೋ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು.

ಈಗ ಫೊನ್ಅರೆನಾ ದ ವರದಿಗಳ ಅನುಸಾರ ಅಮೇಜಾನ್ ಪ್ರೈಮ್ ಮ್ಯೂಸಿಕ್ ಸೇವೆ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲೂ ಲಭ್ಯವಿದೆ. ಈ ಮ್ಯೂಸಿಕ್ ಸೇವೆ ವೆಬ್ ನಲ್ಲೂ ಲಭ್ಯವಿದ್ದು music.amazon.in ಭೇಟಿ ನೀಡುವ ಮೂಲಕ ಗ್ರಾಹಕರು ಅದನ್ನು ಪಡೆಯಬಹುದಾಗಿದೆ. ಅಮೇಜಾನ್ ಪ್ರೈಮ್ ಮ್ಯೂಸಿಕ್ ಸೇವೆ ಅಮೇಜಾನ್ ಪ್ರೈಮ್ ಸದಸ್ಯರಿಗೆ ಉಚಿತವಾಗಿದ್ದು ಯಾವುದೇ ಜಾಹೀರಾತುಗಳನ್ನು ಒಳಗೊಂಡಿರುವುದಿಲ್ಲ.

ಅಮೇಜಾನ್ ಪ್ರೈಮ್ ಮ್ಯೂಸಿಕ್ ಸೇವೆ ಯ ಗಾತ್ರ 17.10 MB ಇದ್ದು ಗ್ರಾಹಕರಿಗೆ ವಿವಿಧ ಭಾಷೆಗಳಲ್ಲಿ ಸಂಗೀತವನ್ನು ಆಯ್ಕೆ ಮಾಡುವ ಅವಕಾಶ ನೀಡುತ್ತದೆ.ಈ ಸೇವೆಯಲ್ಲಿ ಇಂಗ್ಲಿಷ್, ಹಿಂದಿ, ಪಂಜಾಬಿ, ಬೆಂಗಾಲಿ, ಕನ್ನಡ, ಮಲಯಾಳಂ, ರಾಜಸ್ಥಾನಿ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿ ವಿವಿಧ ಪ್ರಕಾರಗಳ ಸಂಗೀತ ನೀಡುತ್ತದೆ.

ಅಮೇಜಾನ್ ಪ್ರೈಮ್ ಆಫ್ಲೈನ್ ಮ್ಯೂಸಿಕ್ ಡೌನ್ಲೋಡ್ ನ ಸೌಲಭ್ಯ ನೀಡುತ್ತದಲ್ಲದೆ, ಅದರ ಅಲೆಕ್ಸಾ ವಾಯ್ಸ್ ಸಪೋರ್ಟ್ ತನ್ನ ಬಳಕೆದಾರರಿಗೆ ವಾಯ್ಸ್ ಕಮಾಂಡ್ ಮೂಲಕ ತನ್ನ ಆಯ್ಕೆಯ ಹಾಡು ಹುಡುಕುವ ಸೌಲಭ್ಯವನ್ನೂ ನೀಡುತ್ತದೆ. ತನ್ನ ಪ್ಲೇಲಿಸ್ಟ್ ನಲ್ಲಿ ಲಕ್ಷಾಂತರ ಹಾಡುಗಳಿರುವುದಾಗಿ ಅಮೇಜಾನ್ ತಿಳಿಸಿದೆ. ಅಮೇಜಾನ್ ತನ್ನ ಪ್ಲೇಲಿಸ್ಟ್ನಲ್ಲಿ ಹಾಡುಗಳನ್ನು ಅದರ ಪ್ರಕಾರಗಳಿಗೆ ಅನುಸಾರವಾಗಿ ಅಥವಾ ಬಳಕೆದಾರರ ಮೂಡ್ ಗೆ ಅನುಸಾರವಾಗಿ ಅಥವಾ ಅವರು ಮಾಡುತ್ತಿರುವ ಚಟುವಟಿಕೆಗಳಿಗೆ ಅನುಸಾರವಾಗಿ ಸಂಘಟಿಸಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಅಮೇಜಾನ್ ಮತ್ತು ಗ್ರೌಂಡ್ ಕಂಟ್ರೋಲ್ ಜೊತೆಯಾಗಿ ಗಾರ್ಡನ್ ರಾಮ್ಸೇ ಯನ್ನೊಳಗೊಂಡಿರುವ ಮತ್ತು ವ್ಯಕ್ತಿಯೊಬ್ಬರು ತಯಾರಿಸಿರುವ ಅಡುಗೆಯನ್ನು ವಿಶ್ಲೇಷಿಸುವ ಸಾಮರ್ಥ್ಯವುಳ್ಳ ಸ್ಕಿಲ್ ಒಂದನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದೆ ಎಂದು ವರದಿಗಳು ಕೇಳಿಬಂದಿತ್ತು. ಆಹಾರದ ಉದ್ಯಮದಲ್ಲಿ ಗಾರ್ಡನ್ ರಾಮ್ಸೇ ಬಹಳ ಪ್ರಸಿದ್ಧ ವ್ಯಕ್ತಿಯಾಗಿದ್ದು ಕಟುವಾದ ಟೀಕೆಗಳಿಗೆ ಪ್ರಸಿದ್ಧಿ ಪಡೆದ ಆಹಾರ ವಿಮರ್ಶಕರಾಗಿದ್ದಾರೆ.

ಈ ಹೊಸ ಸ್ಕಿಲ್ ಅನ್ನು ಬಳಸುವುದು ಬಹಳ ಸರಳ. "ಅಲೆಕ್ಸಾ.. ಆಸ್ಕ್ ಗಾರ್ಡನ್ ರಾಮ್ಸೇ ವಾಟ್ ಹಿ ಥಿಂಕ್ಸ್ ಅಬೌಟ್ ದಿ ಫುಡ್ ಐ ಹ್ಯಾವ್ ಕುಕ್ಡ್" ಎಂದು ಕೇಳಿದರಾಯ್ತು . ಆಗ ಅಮೇಜಾನ್ ಇಖೋ ಸ್ಪೀಕರ್ ನೀಡುವ ಪ್ರಶಂಸಾತ್ಮಕ ಅಥವಾ ನಿಂದಾತ್ಮಕ ಪ್ರತಿಕ್ರಿಯೆ ಹೀಗಿರಬಹುದು: 1.ದಿಸ್ ಡಿಶ್ ಶುಡ್ ಬಿ ಹಂಗ್ ಇನ್ ಅ ಮ್ಯೂಸಿಯಂ. ದಿ ಮ್ಯೂಸಿಯಂ ಆಫ್ ಫೇಯ್ಲ್ಯೂರ್. 2. ಲೀವ್ ದಿಸ್ ಡಿಶ್ ಔಟ್ ಓವರ್ನೈಟ್. ಇಟ್ ವಿಲ್ ಕೀಪ್ ದಿ ಫ್ಲೈಸ್ ಅವೇ. 3. ಇಫ್ ಐ ಮೇ ಗಿವ್ ಯೂ ಒನ್ ಸ್ಮಾಲ್ ಪೀಸ್ ಆಫ್ ಅಡ್ವೈಸ್, ಸ್ಟಿಕ್ ಟು ಟೇಕೌಟ್ಸ್.

ಅಮೇಜಾನ್ ಇತ್ತೀಚೆಗೆ ಬಹಳ ಕುತೂಹಲಕಾರಿ ಅಪ್ಡೇಟ್ಗಳನ್ನು ನೀಡುತ್ತಿದ್ದು ಭವಿಷ್ಯದಲ್ಲಿ ತನ್ನ ಗ್ರಾಹಕರಿಗೆ ಏನೇನು ಫೀಚರ್ಗಳನ್ನು ನೀಡಲಿದೆ ಎನ್ನುವ ಕುತೂಹಲ ನಮಗಿದೆ.

Best Mobiles in India

English summary
Amazon rolls out Amazon Prime Music service in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X