Subscribe to Gizbot

ಇದೊಂದು ಆಪ್‌ ಇದ್ರೆ ಸಾಕು, ಪಾರ್ಟಿ ಸಖತ್ ಜೋರಾಗಲಿದೆ...!

Written By:

ಇಂದಿನ ದಿನದಲ್ಲಿ ಬ್ಲೂಟೂತ್ ಸ್ಪೀಕರ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಗೆಳೆಯರೆಲ್ಲರೂ ಸೇರಿ ಪಾರ್ಟಿ ಮಾಡಬೇಕಾದ ಸಂದರ್ಭದಲ್ಲಿ ಬ್ಲೂಟೂತ್ ಸ್ಪೀಕರ್ ಮೂಲಕ ಸಂಗೀತವನ್ನು ಆಲಿಸುವುದು ಹೆಚ್ಚಾಗುತ್ತಿದೆ. ಆದರೆ ಈ ಮಾದರಿಯಲ್ಲಿ ಬ್ಲೂಟೂತ್ ಸ್ಪೀಕರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಅವುಗಳನ್ನು ಕೊಳ್ಳದೆ ಹೆಚ್ಚಿನ ಸೌಂಡ್‌ನಲ್ಲಿ ಮ್ಯೂಸಿಕ್ ಕೇಳುವ ಹೊಸದೊಂದು ಆಯ್ಕೆಯೂ ಲಭ್ಯವಿದೆ.

 ಇದೊಂದು ಆಪ್‌ ಇದ್ರೆ ಸಾಕು, ಪಾರ್ಟಿ ಸಖತ್ ಜೋರಾಗಲಿದೆ...!

ಪ್ಲೇ ಸ್ಟೋರಿನಲ್ಲಿ AmpMe ಆಪ್ ವೊಂದು ಲಭ್ಯವಿದ್ದು, ಈ ಆಪ್ ಅನ್ನು ಹಲವು ಸ್ಮಾರ್ಟ್‌ ಫೋನ್‌ಗಳನ್ನು ಇನ್ ಸ್ಟಾಲ್ ಮಾಡಿಕೊಂಡರೆ ಒಂದೇ ಹಾಡನ್ನು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಒಟ್ಟಾಗಿ ಬರುವಂತೆ ಮಾಡಬಹುದಾಗಿದೆ. ಈ ಮೂಲಕ ಯಾವುದೇ ಹೆಚ್ಚುವರಿ ಸ್ಲೀಕರ್ ಇಲ್ಲದೇ ನಿಮ್ಮ ಪಾರ್ಟಿಯಲ್ಲಿ ಸ್ನೇಹಿತರ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಹಾಡುಗಳನ್ನು ದೊಡ್ಡ ಸೌಂಡ್‌ನಲ್ಲಿ ಆನಂದಿಸಬಹುದಾಗಿದೆ.

AmpMe ಆಪ್ ಸಂಖ್ಯೆಗಳ ಮಿತಿ ಇಲ್ಲದೇ ಸ್ಮಾರ್ಟ್‌ಫೋನ್‌ಗಳನ್ನು ಒಂದರೊಂದಗೆ ಒಂದನ್ನು ಕನೆಕ್ಟ್ ಮಾಡಿಕೊಳ್ಳಲು ಅನುವು ಮಾಡಿಕೊಳ್ಳಲಿದೆ. ಇದು ಮ್ಯೂಸಿಕ್ ಸಿಂಕ್‌ ಮಾಡಿ ಪ್ಲೇ ಮಾಡಲು ಶಕ್ತವಾಗಿದೆ. ಈ ಆಪ್ ಉಚಿತವಾಗಿ ಲಭ್ಯವಿದ್ದು, ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಲಭ್ಯವಿದೆ.

 ಇದೊಂದು ಆಪ್‌ ಇದ್ರೆ ಸಾಕು, ಪಾರ್ಟಿ ಸಖತ್ ಜೋರಾಗಲಿದೆ...!

ಇದಲ್ಲದೇ ಈ AmpMe ಆಪ್ ಸ್ಮಾರ್ಟ್‌ಫೋನ್‌ಗಳ ನಡುವೆ ಸಿಂಕ್ ಮಾಡಿಕೊಳ್ಳಲು ವೈಪೈ ಇಲ್ಲವೇ ಬ್ಲೂಟೂತ್ ಅನ್ನು ಬಳಕೆ ಮಾಡಿಕೊಳ್ಳುವುದಿಲ್ಲ ಎನ್ನಲಾಗಿದೆ. ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡ ನಂತರದಲ್ಲಿ ನೀವು ಹೊಸ್ಟ್‌ ಕೋಡ್ ಅನ್ನು ನಿಮ್ಮ ಸ್ನೇಹಿತರಿಗೆ ನೀಡಬೇಕಾಗಿದೆ. ಅವರು ಆಪ್‌ನಲ್ಲಿ ಆ ಕೋಡ್ ಅನ್ನು ಹಾಕಿದ ನಂತರದಲ್ಲಿ ಎಲ್ಲಾ ಸ್ಮಾರ್ಟ್‌ಫೋನಿನಲ್ಲಿಯೂ ಒಂದೇ ಮಾದರಿಯ ಸಾಂಗ್‌ಗಳು ಪ್ರಸಾರವಾಗಲಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಇದಲ್ಲದೇ ಈ ಆಪ್‌ ಮೂಲಕ ನೀವು ಸೌಂಡ್‌ ಕ್ಲೌಡ್ಸ್‌ನಿಂದಲೂ ಸಾಂಗ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಆಪಲ್ ಮ್ಯೂಸಿಕ್‌ನಿಂದಲೂ ಹಾಡುಗಳನ್ನು ನೀವು ಡೌನ್‌ಲೋಡ್‌ಗಳನ್ನು ಮಾಡಿಕೊಂಡು ಕೇಳಬಹುದಾಗಿದೆ.

English summary
Turn Your Friends Into A Portable Sound System. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot