2018 ರಲ್ಲಿ ಈ ಆಪ್ ಗಳನ್ನು ಭಾರತೀಯರು ಹೆಚ್ಚು ಇಷ್ಟಪಟ್ಟಿದ್ದಾರೆ
ಭಾರತವು ಮೊಬೈಲ್ ಆಪ್ ಮಾರುಕಟ್ಟೆಯಲ್ಲಿ ಡೌನ್ ಲೋಡ್ ಮಾಡುವಿಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನವನ್ನು ಹೊಂದಿದೆ. ಹಾಗಾಗಿ ಆಪ್ ತಯಾರಕರು ಭಾರತೀಯರ ಅಗತ್ಯತೆಯನ್ನು ಅರಿತು ಆಪ್ ನಲ್ಲಿ ಫೀಚರ್ ಗಳನ್ನು ಅಳವಡಿಸುತ್ತಾರೆ ಮತ್ತು ಸ್ಥಳೀಯ ಕಸ್ಟಮೈಸೇಷನ್ ಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

2017 ರಲ್ಲಿ ವಿಶ್ವದಾದ್ಯಂತ ಡೌನ್ ಲೋಡ್ ಆಗಿದ್ದ 175 ಬಿಲಿಯನ್ ಮೊಬೈಲ್ ಆಪ್ ಗಳಲ್ಲಿ 58 ಬಿಲಿಯನ್ ಮೊಬೈಲ್ ಆಪ್ ಗಳನ್ನು ಭಾರತೀಯರು ಡೌನ್ ಲೋಡ್ ಮಾಡಿದ್ದಾರೆ ಮತ್ತು ದ್ವಿತೀಯ ಸ್ಥಾನದಲ್ಲಿ ಚೀನಾ ಇದೆ. ಹಾಗಾಗಿ ಯುಸ್, ಯುಕೆ, ಜಪಾನ್ ಸೌತ್ ಕೊರಿಯಾ, ಬ್ರೆಜಿಲ್, ರಷ್ಯಾ, ಇಂಡೋನೇಷಿಯಾ ಇತ್ಯಾದಿ ದೇಶಗಳ ಇಂಟರ್ನೆಟ್ ಮಾರುಕಟ್ಟೆಯ ಪ್ರಮುಖ ಪ್ರದೇಶ ಭಾರತವೇ ಆಗಿದೆ.
ಅದರಲ್ಲೂ ಮೊಬೈಲ್ ಆಪ್ ಗಳನ್ನು ಡೌನ್ ಲೋಡ್ ಮಾಡುವಿಕೆಯು ಕಳೆದೆರಡು ವರ್ಷಗಳಲ್ಲಿ 215 ಶೇಕಡಾ ಹೆಚ್ಚಾಗಿದೆ ಎಂದು ಅಧ್ಯಯನದಿಂದ ತಿಳಿದಿದೆ.ಅದರಲ್ಲೂ 2016 ರಲ್ಲಿ ಜಿಯೋ ಬಿಡುಗಡೆಗೊಂಡ ಪರಿಣಾಮದಿಂದಾಗಿ ಇದು ಸಾಧ್ಯವಾಗಿದೆ ಎನ್ನಲಾಗಿದೆ. ಹಾಗಾದ್ರೆ ಭಾರತದಲ್ಲಿ ಹೆಚ್ಚು ಡೌನ್ ಲೋಡ್ ಆದ ಆಪ್ ಗಳು ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ ನೋಡಿ.

ಶೇರ್ ಇಟ್ (SHAREit)
ಶೇರ್ ಇಟ್ ಭಾರತದಲ್ಲಿ 5ನೇ ಅತೀ ಹೆಚ್ಚು ಡೌನ್ ಲೋಡ್ ಮಾಡಲಾದ ಮೊಬೈಲ್ ಅಪ್ಲಿಕೇಷನ್ ಆಗಿದೆ. ಸುಮಾರು 400 ಮಿಲಿಯನ್ ಪ್ರದೇಶವನ್ನು ಭಾರತದಲ್ಲಿ ಇದು ಕವರ್ ಮಾಡಿದೆ. 1.5 ಬಿಲಿಯನ್ ಬಳಕೆದಾರರು ವಿಶ್ವದಾದ್ಯಂತ ಈ ಆಪ್ ಗೆ ಇದ್ದಾರೆ. ಆರಂಭದಲ್ಲಿ ಉಚಿತವಾಗಿದ್ದ ಈ ಆಪ್ ಕಟೆಂಟ್ ಶೇರಿಂಗ್ ಗೆ ನೆರವಾಗುತ್ತದೆ. ಇದೀಗ ಅತೀ ದೊಡ್ಡ ಡಿಸ್ಟ್ರಿಬ್ಯೂಷನ್ ಫ್ಲ್ಯಾಟ್ ಫಾರ್ಮ್ ಆಗಿ ಗುರುತಿಸಿಕೊಂಡಿದೆ.

ಟಿಂಡರ್ (Tinder)
ಸೆಪ್ಟೆಂಬರ್ ನಲ್ಲಿ ಟಿಂಡರ್ ಆಪ್ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಆಂಡ್ರಾಯ್ಡ್ ಆಪ್ ಆಗಿ ಗುರುತಿಸಿಕೊಂಡಿದೆ. ಪಿಯುಬಿಜಿ, ಕ್ಯಾಂಡಿಕ್ರಷ್, ಕಾಯಿಲ್ ಮಾಸ್ಟರ್ ಇತ್ಯಾದಿಗಳ ಪ್ರಸಿದ್ಧತೆಯ ನಡುವೆಯೂ ಇದು ಸಾಧ್ಯವಾಗಿದೆ. ಇದರ ಚಂದಾದಾರಿಕೆಯು ಭಾರತೀಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಏಷಿಯಾದಲ್ಲಿ ಟಿಂಡರ್ ನ ಅತೀ ದೊಡ್ಡ ಮಾರುಕಟ್ಟೆ ಭಾರತವೇ ಆಗಿದೆ.
ಕಳೆದ ಒಂದು ವರ್ಷದಲ್ಲಿ ಸುಮಾರು 50 ಶೇಕಡಾದಷ್ಟು ಮಂದಿ ಸೇರ್ಪಡೆಗೊಂಡಿದ್ದಾರೆ. ಇದರ ಗೋಲ್ಡ್ ಚಂದಾದಾರಿಕೆಯಲ್ಲಿ ಸುಮಾರು 3 ಮಿಲಿಯನ್ ಮಂದಿ ಆಟವಾಡುತ್ತಾರೆ. ಭಾರತೀಯರಿಗಾಗಿ ಟಿಂಡರ್ ನಲ್ಲಿ ಹೊಸದಾಗಿ ಟಾಪ್ ಪಿಕ್ ಫೀಚರ್ ಕೂಡ ಬಿಡುಗಡೆಯಾಗಿದೆ.

ಟ್ರೂಕಾಲರ್
4ನೇ ಅತೀ ಹೆಚ್ಚು ಭಾರತೀಯರು ಡೌನ್ ಲೋಡ್ ಮಾಡಿರುವ ಆಪ್ ಎಂದರೆ ಅದು ಟ್ರೂಕಾಲರ್. ವಾಟ್ಸ್ ಆಪ್, ಫೇಸ್ ಬುಕ್, ಮೆಸೆಂಜರ್ ಗಳ ನಂತರ ಇದು ನಿಲ್ಲುತ್ತದೆ ಎಂದು ಮೇರಿ ಮೀಕೆರ್ ಇಂಟರ್ನೆಟ್ ಟ್ರೆಂಡ್ಸ್ ನ ವರದಿಯಾಗಿದೆ. 150 ಮಿಲಿಯನ್ ಬಳಕೆದಾರರನ್ನು ಇದು ಭಾರತದಲ್ಲೇ ಹೊಂದಿದ್ದು ಇದರ ದೊಡ್ಡ ಮಾರುಕಟ್ಟೆ ಭಾರತವೇ ಆಗಿದೆ.ಇತ್ತೀಚೆಗೆ ಇದರಲ್ಲಿ ಮೊಬೈಲ್ ಪೇಮೆಂಟ್ ಆಯ್ಕೆಯೂ ಆರಂಭವಾಗಿದ್ದು ಐಸಿಐಸಿಐ ಬ್ಯಾಂಕ್ ಜೊತೆಗೆ ಟ್ರೂಕಾಲರ್ ಕೈಜೋಡಿಸಿದೆ ಮತ್ತು ಯುಪಿಐ ಆಧಾರಿತ ಪೇಮೆಂಟ್ ಸೇವೆಯನ್ನೂ ಕೂಡ ಒದಗಿಸುತ್ತಿದೆ.

ಟಿಕ್ ಟಾಕ್
ಟಿಕ್ಟಾಕ್ ಭಾರತದಲ್ಲಿ ಬಿಡುಗಡೆಗೊಂಡ ವರ್ಷವೇ ಅಧ್ಬುತ ಯಶಸ್ಸು ಗಳಿಸಿದೆ. ದೈನಂದಿನ ಜೀವನದ ಸಣ್ಣ, ಫಿಲ್ಟರ್ ಮಾಡಿರದ ವೀಡಿಯೋಗಳನ್ನು ಪೋಸ್ಟ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಗಳಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆಗಿರುವ 10 ಪ್ರಮುಖ ಆಪ್ ಗಳಲ್ಲಿ ಟಿಕ್ ಟಾಕ್ ಕೂಡ ಸೇರಿದೆ ಎಂದು ಸಿಮಿಲರ್ ವೆಬ್ ವರದಿ ಮಾಡಿದೆ. 15 ಮಿಲಿಯನ್ ಬಳಕೆದಾರರು ಭಾರತೀಯರಾಗಿದ್ದಾರೆ ಮತ್ತು 250,000 ಶಾರ್ಟ್ ವೀಡಿಯೋಗಳನ್ನು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದೆ.ಇದು ಹಾಡು ಮತ್ತು ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡಿರುವ ವೀಡಿಯೋಗಳನ್ನು ಪೋಸ್ಟ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.

ಎಂಎಕ್ಸ್ ಪ್ಲೇಯರ್
ಕೊರಿಯಾದ ಇದು ಕೇವಲ ವೀಡಿಯೋ ಪ್ಲೇಬ್ಯಾಕ್ ಆಪ್. ಟಾಪ್ 10 ರಲ್ಲಿ ಇದಕ್ಕೂ ಕೂಡ ಸ್ಥಾನವಿದೆ. ಟೈಮ್ಸ್ ಇಂಟರ್ನೆಟ್ 1,000 ಕೋಟಿ ರುಪಾಯಿಗೆ ಇದನ್ನು ಖರೀದಿಸಿದೆ. ಇದೀಗ ಇದು ವೀಡಿಯೋ ಸ್ಟ್ರೀಮಿಂಗ್ ಫ್ಲ್ಯಾಟ್ ಫಾರ್ಮ್ ಆಗಿದೆ. ದೇಶದಲ್ಲಿ ಸುಮಾರು 175 ಮಿಲಿಯನ್ ಮಾಸಿಕ ಬಳಕೆದಾರರು ಇದ್ದರು.

ಯುಎಸ್ ಬ್ರೌಸರ್
ಅಲಿಬಾಬ ಭಾರತದ ಹೆಚ್ಚು ಪ್ರಸಿದ್ದ ಮೊಬೈಲ್ ಬ್ರೌಸರ್ ಆಪ್ .100 ಮಿಲಿಯನ್ ಭಾರತೀಯ ಬಳಕೆದಾರರು ಇದ್ದಾರೆ. ಸ್ಥಳೀಯ ಬ್ರೌಸರ್ ಮಾರುಕಟ್ಟೆಯ 44 ಶೇಕಡಾವನ್ನು ಇದು ಆಕ್ರಮಿಸಿದೆ.ಒಂದೇ ವರ್ಷದಲ್ಲಿ ಈ ಆಪ್ ಭಾರತದಲ್ಲಿ ಸುಮಾರು 130 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.


Click it and Unblock the Notifications








