ಈ ಆಪ್‌ ಇದ್ದರೆ ಒಂದು ಸುಂದರ ಸೆಲ್ಫಿಗಾಗಿ ನೂರು ಸೆಲ್ಫಿ ತೆಗೆಯಬೇಕಿಲ್ಲ!!

Written By:

ಪ್ರತಿದಿನವೂ ಸೆಲ್ಫಿ ತೆಗೆಯದೇಹೋದರೆ ಎಷ್ಟೋ ಜನರ ದಿನವೇ ಮುಗಿಯುವುದಿಲ್ಲ. ಅದರಲ್ಲಿಯೂ ಒಂದು ಸುಂದರ ಸೆಲ್ಫಿಗೋಸ್ಕರ ನೂರಾರು ಸೆಲ್ಫಿ ತೆಗೆದು ಡಿಲೀಟ್ ಮಾಡುವವರ ಸಂಖ್ಯೇಯೇ ಜಾಸ್ತಿ ಎನ್ನಬಹುದು.! ಹಾಗಾಗಿಯೇ, ನಿಖರ ಸೆಲ್ಫಿ ತೆಗೆಯಲು ಆಪ್‌ ಒಂದು ಬಿಡುಗಡೆಯಾಗಿದೆ.!!

ಕೆನಡಾದ ವಾಟರ್ಲೂ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಹೊಸ ಸೆಲ್ಫಿ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಹೊಸ ಸೆಲ್ಫಿ ಆಪ್ ಮೂಲಕ ಆಟೋ ಸೆಟ್ಟಿಂಗ್ಸ್ ಮೂಲಕ ಅತ್ಯುತ್ತಮ ಸೆಲ್ಫಿ ತೆಗೆಯಬಹುದಾಗಿದೆ.! 360 ಡಿಗ್ರಿ ಆಂಗಲ್‌ನಿಂದಲೂ ಈ ಆಪ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ಫೀಚರ್ ಇದರಲ್ಲಿದ್ದು, ಆಪ್‌ ಯಾವುದು? ಏನೆಲ್ಲಾ ಫೀಚರ್ಸ್ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪರ್ಫೆಕ್ಟ್ ಸೆಲ್ಫೀ ಆಪ್.!!

ಪರ್ಫೆಕ್ಟ್ ಸೆಲ್ಫೀ ಆಪ್.!!

ಸೆಲ್ಫಿ ತೆಗೆಯಲೆಂದೇ ವಿಶೇಷವಾಗಿ ಅಭಿವೃಧ್ದಿಯಾಗಿರುವ ನೂತನ ಆಪ್‌ಗೆ ಪರ್ಫೆಕ್ಟ್ ಸೆಲ್ಫಿ ಆಪ್ ಎಂದೇ ಹೆಸರಿಡಲಾಗಿದೆ.! ಕ್ಯಾಮೆರಾ ಆನ್ ಮಾಡಿದಾಗ ಆಟೋ ಸೆಟ್ಟಿಂಗ್ಸ್ ಮೂಲಕ ಅತ್ಯುತ್ತಮ ಸೆಲ್ಫಿ ತೆಗೆಯುವ ಆಪ್ ಇದಾಗಿದೆ ಎಂದು ವಿನ್ಯಾಸಕ ಡ್ಯಾನ್ ವೋಗಲ್ ಹೇಳುತ್ತಾರೆ.

ಆಟೋ ಸೆಟ್ಟಿಂಗ್ಸ್ ಹೇಗೆ?!!

ಆಟೋ ಸೆಟ್ಟಿಂಗ್ಸ್ ಹೇಗೆ?!!

ಕೆಲವರಿಗೆ ಈ ಕ್ಯಾಮೆರಾ ಸೆಟ್ಟಿಂಗ್ಸ್ ಬಗ್ಗೆಯೂ ಗೊತ್ತಿರುವುದಿಲ್ಲ.ಕ್ಯಾಮೆರಾದ ದಿಕ್ಕು, ಕ್ಯಾಮೆರಾ ಮೋಡ್ ಹಾಗೂ ಬೆಳಕು ಸರಿ ಇಲ್ಲದಿದ್ದರೆ ಸೆಲ್ಫಿ ಚೆನ್ನಾಗಿ ಬರುವುದಿಲ್ಲ! ಹಾಗಾಗಿ, ಈ ಆಪ್ ಆಟೋ ಸೆಟ್ಟಿಂಗ್ಸ್ ಹೊಂದಿದ್ದು, ಎಲ್ಲವನ್ನು ತಾನೇ ಸರಿಪಡಿಸಿಕೊಳ್ಳುತ್ತದೆ.!!

360 ಡಿಗ್ರಿ ಆಂಗಲ್ ಮತ್ತು 3ಡಿ ಫೀಚರ್ಸ್.!!

360 ಡಿಗ್ರಿ ಆಂಗಲ್ ಮತ್ತು 3ಡಿ ಫೀಚರ್ಸ್.!!

ಸೆಲ್ಫಿ ಆಪ್ ಆಟೋ ಸೆಟ್ಟಿಂಗ್ಸ್ ಹೊಂರುವುದಲ್ಲದೇ 360 ಡಿಗ್ರಿ ಆಂಗಲ್ನಲ್ಲಿ ಫೋಟೊ ತೆಗೆಯುವ ಆಯ್ಕೆ ಇದರಲ್ಲಿದೆ.! ಇಷ್ಟೇ ಅಲ್ಲದೇ 3ಡಿ ಫೀಚರ್ಸ್ ಹಾಗೂ ಸುಮಾರು ಹತ್ತು ಅಡಿ ದೂರದವರೆಗಿನ ಜೂಂ ತಂತ್ರಜ್ಞಾನವನ್ನು ಈ ಆಪ್‌ನಲ್ಲಿ ಅಳವಡಿಸಲಾಗಿದೆ.ಅಂದರೆ ಪ್ರಸ್ತುತ ಕ್ಯಾಮೆರಾ ಹೊಂದಿರಬಹುದಾದ ಎಲ್ಲಾ ಫೀಚರ್ಸ್ಗಳೂ ಈ ಆಪ್‌ನಲ್ಲಿಯೇ ಸೇರಿಕೊಂಡಿವೆ.!!

ಬ್ಯಾಗ್ರೌಂಡ್ ಮಾತ್ರ ಜೂಮ್ ಆಗುತ್ತೆ.!!

ಬ್ಯಾಗ್ರೌಂಡ್ ಮಾತ್ರ ಜೂಮ್ ಆಗುತ್ತೆ.!!

ಸುಮಾರು ಹತ್ತು ಅಡಿ ದೂರದವರೆಗಿನ ಜೂಂ ತಂತ್ರಜ್ಞಾನವನ್ನು ಈ ಆಪ್‌ನಲ್ಲಿ ಅಳವಡಿಸಲಾಗಿದ್ದು, ಆಪ್‌ನಲ್ಲಿನ ಬ್ಯಾಗ್ರೌಂಡ್ ಮಾತ್ರ ಜೂಮ್ ಆಗುತ್ತದೆ.! ಹಾಗಾಗಿ, ಕಡಿದಾದ ಪ್ರದೇಶಗಳಲ್ಲಿ ಸೆಸೆಲ್ಫಿ ತೆಗೆಯುವ ಹಾಗೆ ದೂರದಿಂದಲೂ ಅದೇ ರೀತಿಯ ಸೆಲ್ಫಿ ತೆಗೆಯಬಹುದು.!!

ಓದಿರಿ:ಅತಿ ಹೆಚ್ಚು ವೇಗದ ಡೇಟಾ ನೀಡುವ ದೇಶ ಯಾವುದು?..ಭಾರತಕ್ಕೆ ಎಷ್ಟನೇ ಸ್ಥಾನ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Computer scientists at the University of Waterloo have developed a smartphone app that helps people learn the art of taking great selfies.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot