ರೋಗಿಗಳ ಪಾಲಿನ ವರವಾಗಲಿದೆ ಈ ಆಪ್...!!!

Written By: Lekhaka

ರೋಗಿಗಳ ಪಾಲಿಗೆ ಹೊಸದೊಂದು ಆಪ್ ವರವಾಗಲಿದೆ. ಹೊಸದಾಗಿ ಲಾಂಚ್ ಆಗಿರುವ ಆಪ್ ವೊಂದು ಡಾಕ್ಟರ್ ಬಳಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಡಾಕ್ಟರ್ ಕನ್ಸಲ್ಟ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ರೋಗಿಗಳ ಪಾಲಿನ ವರವಾಗಲಿದೆ ಈ ಆಪ್...!!!

'IVH ಪೇಷೆಂಟ್ ಕೇರ್’ ಎಂಬ ಆಪ್ ರೋಗಿಗಳ ರೆಕಾರ್ಡ್ ಗಳನ್ನು ಜೋಪಾನವಾಗಿ ಕಾಪಾಡುವುದಲ್ಲದೇ ಡಾಕ್ಟರ್ ಗಳಿಗೂ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಸಹಾಯವಾಗಲಿದೆ.

ಈ ಆಪ್ ಸಹಾಯದಿಂದ ರೋಗಿಗಳು ಡಾಕ್ಟರ್ ಬಳಿಗೆ ಹೋಗುವ ಬದಲು ತಾವಿರುವ ಸ್ಥಳದಲ್ಲಿಯೇ ಆಪ್ ಮೂಲಕ ಡಾಕ್ಟರ್ ಭೇಟಿ ಮಾಡಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಡಾಕ್ಟರ್ ಗಳು ಸಹ ತಮ್ಮ ರೋಗಿಗಳ ಆಯೋಗ್ಯದ ಬಗ್ಗೆ ಆಪ್ ಮೂಲಕವೇ ಮಾಹಿತಿ ಪಡೆಯಬಹುದಾಗಿದೆ.

ರೋಗಿಗಳು ನಿಯಮಿತ ತಪಾಸಣೆಗೆ ಡಾಕ್ಟರ್ ಬಳಿಗೆ ಬಂದಾಗ ಹಳೇಯ ರೆಕಾರ್ಡ್ ಗಳನ್ನು ಹೊತ್ತು ತರುವ ಅವಶ್ಯಕತೆ ಇರುವುದೇ ಇಲ್ಲ. ಈ ಆಪ್ ಬಳಕೆಯನ್ನು ಶುರು ಮಾಡಿದರೆ. ಇದು ಡಾಕ್ಟರ್ ಮತ್ತು ರೋಗಿಯ ನಡುವೆ ಬಾಂಧವ್ಯ ಬೆಸೆಯಲು ಸಹಾಯಕವಾಗಿದೆ.

ಇದಲ್ಲದೇ ಈ ಆಪ್ ಸಹಾಯದಿಂದ ರೋಗಿಗೆ ಅಗತ್ಯವಿರುವ ಚಿಕಿತ್ಸೆಯ ಬಗ್ಗೆ ಡಾಕ್ಟರ್ ಮತ್ತು ಸ್ಪೆಷಲಿಸ್ಟ್ ಗಳು ಚರ್ಚೆ ನಡೆಸಲು ಇದರಲ್ಲಿರುವ ಮಾಹಿತಿಗಳು ಸಹಾಯಕ್ಕೆ ಬರಲಿದೆ. ಒಟ್ಟಿನಲ್ಲಿ ಟೆಕ್ನಾಲಜಿಯನ್ನು ಅಳವಡಿಸಲಿಕೊಳ್ಳಲು ಮುಂದಾಗಿರುವ ವೈದ್ಯಕೀಯ ಲೋಕಕ್ಕೆ ಇದು ಹೊಸ ದಾರಿಯನ್ನು ತೋರಿಸಲಿದೆ.

Read more about:
English summary
IVH patient care app was launched where a person can consult a doctor without having to travel to hospital.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot