Subscribe to Gizbot

ಈಗಲೇ ಡೌನ್‌ಲೋಡ್ ಮಾಡಿ: ಪ್ರತಿ ತಿಂಗಳು ರೂ.750 ಕ್ಯಾಷ್ ಬ್ಯಾಕ್ ನೀಡುವ ಪೇಮೆಂಟ್ ಆಪ್..!

Written By:

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಮಾಲೀಕತ್ವದ, ಜನಪ್ರಿಯ ಮೇಸೆಂಜಿಗ್ ಆಪ್ ವಾಟ್ಸ್‌ಆಪ್ ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್ ಪೇಮೆಂಟ್ ಸೇವೆಯನ್ನು ಆರಂಭಿಸಿದ್ದು, ಸದ್ಯ ಕೆಲವೇ ಬಿಟಾ ಬಳಕೆದಾರರಿಗೆ ಇದು ಲಭ್ಯವಿದೆ. ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಆರಂಭಿಸುವ ಸಾಧ್ಯತೆ ಇದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭ ಮಾಡಿಕೊಡುವ ಹಲವು ಪೇಮೆಂಟ್ ಆಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಪ್ರತಿ ತಿಂಗಳು ರೂ.750 ಕ್ಯಾಷ್ ಬ್ಯಾಕ್ ನೀಡುವ ಪೇಮೆಂಟ್ ಆಪ್..!

ಆದರೆ ಇದರಲ್ಲಿ ಹೆಚ್ಚು ಸದ್ದು ಮಾಡಿದ್ದು ಗೂಗಲ್ ಒಡೆತನದ ತೇಜ್ ಆಪ್. ಇದರಲ್ಲಿ ಹಣ ಕಳುಹಿಸಿದ ಪ್ರತಿ ಬಾರಿಯೂ ಕ್ಯಾಚ್ ಬ್ಯಾಕ್ ದೊರೆಯುತ್ತಿತ್ತು. ಇದಕ್ಕಾಗಿ ಹೆಚ್ಚಿನ ಜನರು ಬಳಕೆ ಮಾಡಲು ಮುಂದಾಗಿದ್ದರು. ಈ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ ಮೊಬೈಲ್ ಪೇಮೆಂಟ್ ಆಪ್ ಭೀಮ್ ಖ್ಯಾತಿಯನ್ನು ಕಳೆದುಕೊಂಡಿತ್ತು. ಈಗ ಮತ್ತೆ ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸಲು ಭೀಮ್ ಆಪ್ ಹೊಸದೊಂದು ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಪ್ರತಿ ತಿಂಗಳು ರೂ,750 ಕ್ಯಾಷ್ ಬ್ಯಾಕ್:

ಭೀಮ್ ಆಪ್ ನಲ್ಲಿ ಹಣ ಕಳುಹಿಸುವವರಿಗೆ ಪ್ರತಿ ತಿಂಗಳು ರೂ.750 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದಲ್ಲದೇ ಭೀಮ್ ಆಪ್ ಬಳಕೆ ಮಾಡುವ ವ್ಯಾಪಾರಿಗಳಿಗೆ ರೂ.1000 ಕ್ಯಾಷ್ ಬ್ಯಾಕ್ ಅನ್ನು ಪ್ರತಿ ತಿಂಗಳು ನೀಡಲಿದೆ ಎನ್ನಲಾಗಿದೆ.

ರೂ.51 ಕ್ಯಾಷ್ ಬ್ಯಾಕ್:

ರೂ.51 ಕ್ಯಾಷ್ ಬ್ಯಾಕ್:

ಭೀಮ್ ಆಪ್ ನಲ್ಲಿ ಮೊದಲ ಬಾರಿಗೆ ಹಣ ಕಳುಹಿಸುವವರಿಗೆ ಖಚಿತವಾಗಿ ರೂ.51 ಅನ್ನು ಕ್ಯಾಷ್ ಬ್ಯಾಕ್ ರೂಪದಲ್ಲಿ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಾಗಿದೆ. ರೂ.1 ಕಳುಹಿಸಿದರು ರೂ.51 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ತಿಂಗಳಿಗೆ 25 ಟ್ರಾನ್ಸಾಕ್ಶನ್:

ತಿಂಗಳಿಗೆ 25 ಟ್ರಾನ್ಸಾಕ್ಶನ್:

ಭೀಮ್ ಆಪ್ ನಲ್ಲಿ ತಿಂಗಳಲ್ಲಿ 25ಕ್ಕೆ ಹೆಚ್ಚು ಬಾರಿ ಮತ್ತು 50 ಕ್ಕಿಂತ ಕಡಿಮೆ ಬಾರಿ ಹಣವನ್ನು ವರ್ಗಾವಣೆ ಮಾಡಿರೆ ರೂ.100 ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ. ಅಲ್ಲದೇ 100ಕ್ಕಿಂತ ಹೆಚ್ಚು ಬಾರಿ ವರ್ಗಾವಣೆ ಮಾಡುವವರಿಗೆ ರೂ.250 ಕ್ಯಾಷ್ ಬ್ಯಾಕ್ ದೊರೆಯಲಿದೆ.

How to view all photos, pages, comments and posts you liked on Facebook (KANNADA)
ವಿವಿಧ ಆಯ್ಕೆಗಳು:

ವಿವಿಧ ಆಯ್ಕೆಗಳು:

ಭೀಮ್ ಆಪ್ ಬಳಕೆದಾರರಿಗೆ ವಿವಿಧ ಮಾದರಿಯಲ್ಲಿ ಪೇಮೆಂಟ್ ಮಾಡಲು ಅವಕಾಶವನ್ನು ಮಾಡಿಕೊಡುತ್ತಿದೆ. IFSE, MMID ಮತ್ತು UPI ಇಲ್ಲದ ಬ್ಯಾಂಕ್ ಗಳಿಗೂ ಹಣವನ್ನು ಕಳುಹಿಸಲು ಅವಕಾಶ ಮಾಡಿಕೊಡಲಿದೆ. ಇದರಿಂದಾಗಿ ಬ್ಯಾಂಕ್ ಕಾರ್ಯವನ್ನು ಇದೊಂದೇ ಆಪ್‌ ನಲ್ಲಿ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
App Will Give Rs 750 Cashback Every Month. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot