ವಾಟ್ಸ್ಆಪ್ ಬಿಸ್ನೆಸ್ ಆಪ್ ಪ್ರತಿಸ್ಪರ್ಧಿಯಾಗಲಿದೆ ಆಪಲ್ ಬಿಸ್ನೆಸ್ ಚಾಟ್..!
ವಾಟ್ಸ್ಆಪ್ ಬಿಸ್ನೆಸ್ ಆಪ್ ಅನ್ನು ಲಾಂಚ್ ಮಾಡಿದ ಬೆನ್ನಲೇ ಪ್ರತಿ ಸ್ಪರ್ಧಿಯೊಂದು ಹುಟ್ಟಿಕೊಂಡಿದೆ. ವಾಟ್ಸ್ಆಪ್ ಬಿಸ್ನೆಸ್ ಆಪ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಆಪಲ್ ಬಿಸ್ನೆಸ್ ಚಾಟ್ ಆಪ್ ಬಿಡುಗಡೆ ಮುಂದಾಗಿದ್ದು, ಈ ಮೂಲಕ ತನ್ನ ಬಳಕೆದಾರರು ಬೇರೆ ಆಪ್ ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವ ಬದಲು ತನ್ನದೇ ಆಪ್ ಬಳಕೆಗೆ ಮುಂದಾಗಲಿ ಎನ್ನುವುದು ಆಪಲ್ ಉದ್ದೇಶವಾಗಿದೆ.

ಮೇಸೆಜ್ ಮೂಲಕವೇ ವ್ಯಾಪಾರವನ್ನು ಮಾಡುವಂತೆ ಆಯ್ಕೆಯನ್ನು ಆಪಲ್ ತನ್ನ ಬಿಸ್ನೆಸ್ ಚಾಟ್ ಆಪ್ ನಲ್ಲಿ ನೀಡಲಿದೆ. ಸದ್ಯ ಈ ಆಪ್ ಬಿಟಾ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದು ಶೀಘ್ರವೇ ಸಾಮಾನ್ಯ ಬಳಕೆದಾರರಿಗೂ ಈ ಆಪ್ ಬಳಕೆಗೆ ಮುಕ್ತವಾಗಲಿದೆ.
ಆಪಲ್ ಬಿಡುಗಡೆ ಮಾಡಿರುವ ಬಿಸ್ನೆಸ್ ಆಪ್ ನಲ್ಲಿ ಬಳಕೆದಾರರು ಆಪಲ್ ಪೇ ಮೂಲಕ ಖರೀದಿಸುವ ಅವಕಾಶವನ್ನು ಮಾಡಿಕೊಟ್ಟಿದ್ದು, ಇದರಿಂದಾಗಿ ಈ ಆಪ್ ಬಳಕೆದಾರರು ಹಣ ಪಾವತಿಗೆ ಬೇರೆ ಯಾವುದೇ ಮೂಲವನ್ನು ಅನುಸರಿಸುವ ಅಗತ್ಯತೆ ಇಲ್ಲ ಎನ್ನಲಾಗಿದೆ.

ಫೇಸ್ ಬುಕ್ ತನ್ನ ವಾಟ್ಸ್ಆಪ್ ಬಿಸ್ನೆಸ್ ಆಪ್ ವಿನ್ಯಾಸ ಮಾಡಿರುವ ರೀತಿಯಲ್ಲಿಯೇ ಆಪಲ್ ಸಹ ಬಿಸ್ನೆಸ್ ಆಪ್ ಅನ್ನು ಡಿಸೈನ್ ಮಾಡಿದೆ. ಇದರಲ್ಲಿ ಬಳಕೆದಾರರು ಮತ್ತು ಮಾರಾಟಗಾರರು ಒಬ್ಬರನ್ನೊಬ್ಬರು ಭೇಟಿಯಾಗಿ ವಸ್ತುವನ್ನು ಮಾರಾಟ ಮಾಡುವ ಮತ್ತು ಕೊಳ್ಳುವ ಕೆಲಸವನ್ನು ಮಾಡುತ್ತಾರೆ ಎನ್ನಲಾಗಿದೆ.
ಆಪಲ್ ತನ್ನ ಬಿಸ್ನೆಸ್ ಆಪ್ ಮೂಲಕ ಹೆಚ್ಚಿನ ಜನರನ್ನು ತಲುಪುವ ಕಾರ್ಯವನ್ನು ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲ ಅನೇಕ ಮೆಸೆಂಜಿಗ್ ತಾಣಗಳನ್ನು ಜನರು ತಮ್ಮ ವ್ಯಾಪಾರ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಈ ಬಿಸ್ನೆಸ್ ಆಪ್ ಗಳು ಅಂತಹವರಿಗೆ ಸಹಾಯ ಮಾಡಲಿದೆ.


Click it and Unblock the Notifications



