Home
Apps

Apple Design Award 2024: 2024ರ ಆಪಲ್ ಡಿಸೈನ್ ಪ್ರಶಸ್ತಿ ಘೋಷಣೆ: ಯಾವುದಕ್ಕೆ ಗೊತ್ತಾ?

ಆಪಲ್ ಇಂದು 2024ರ ಆಪಲ್ ಡಿಸೈನ್ ಪ್ರಶಸ್ತಿ ವಿಜೇತರನ್ನು ಘೋಷಿಸಿದೆ. ಭಾರತದಲ್ಲಿ iPhone ಮತ್ತು iPad ಬಳಕೆದಾರರು ಬಳಸುವ ಜನಪ್ರಿಯ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷ, Apple ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ವರ್ಷದ ಅತ್ಯುತ್ತಮ ಅಪ್ಲಿಕೇಶನ್ ಮತ್ತು ಗೇಮ್‌‌ಗಳನ್ನು ಹೆಸರಿಸುತ್ತದೆ. ಅದರಂತೆ, ಈ ಬಾರಿಯೂ ಒಟ್ಟು 14 ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳು 2024ರ ಆಪಲ್ ಡಿಸೈನ್ ಅವಾರ್ಡ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.

ಪ್ರಶಸ್ತಿಯು, ಆಪ್ ಸ್ಟೋರ್‌ನಾದ್ಯಂತ ಅತ್ಯುತ್ತಮ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಗುರುತಿಸುತ್ತದೆ. ಅಪ್ಲಿಕೇಶನ್‌ನ ಅತ್ಯುತ್ತಮ ವಿನ್ಯಾಸ (ಡಿಸೈನ್), ಟೆಕ್ನಿಕಲ್ ಸ್ಕಿಲ್ ಮತ್ತು ಹೊಸತನ ಹೊಂದಿರುವ 14 ಆಪ್‌ಗಳು ಮತ್ತು ಗೇಮ್‌ಗಳಿಗೆ ಪ್ರಶಸ್ತಿ ನೀಡಿದೆ. ವಿಶ್ವಾದ್ಯಂತ ಪಾಲ್ಗೊಂಡಿದ್ದ 42 ಫೈನಲಿಸ್ಟ್‌ಗಳಿಂದ ಈ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಹಾಗಿದ್ರೆ, 2024ರ ಬೆಸ್ಟ್‌ ಆಪ್‌ ಮತ್ತು ಗೇಮ್‌ಗಳು ಯಾವುವು? ಯಾವುದಕ್ಕೆಲ್ಲಾ ಆಪಲ್ ಡಿಸೈನ್ ಪ್ರಶಸ್ತಿ ಮತ್ತು ಬಹುಮಾನ ಪಡೆದಿವೆ ಅನ್ನೋದನ್ನು ನೋಡೋಣ ಬನ್ನಿ.

2024ರ ಆಪಲ್ ಡಿಸೈನ್ ಪ್ರಶಸ್ತಿ ಘೋಷಣೆ: ಯಾವುದಕ್ಕೆ ಗೊತ್ತಾ?

ಅತ್ಯುತ್ತಮ ದೃಶ್ಯ ಮತ್ತು ಗ್ರಾಫಿಕ್ಸ್ ಅಪ್ಲಿಕೇಶನ್‌ಗಳು

  • ಆಪ್‌: Rooms: ಈ ಆಪ್ ನಮಗೆ ಕಾಲ್ಪನಿಕ ದೃಶ್ಯಗಳನ್ನು ನಿರ್ಮಿಸಲು ಮತ್ತು ಇತರರೊಂದಿಗೆ ಸಂವಹನ ನಡೆಸಲು ಅವಕಾಶ ನೀಡುತ್ತದೆ.
  • ಗೇಮ್: Lies of P: ಇದು ಕಸ್ಟಮೈಸ್ ಮಾಡಬಹುದಾದ ದೃಶ್ಯಗಳೊಂದಿಗೆ ನೋಡುಗರನ್ನು ಬೆರಗುಗೊಳಿಸುವ ಸಾಹಸಮಯ ಗೇಮ್.
  • ಫೈನಲಿಸ್ಟ್‌ಗಳು: ಈ ವಿಭಾಗದಲ್ಲಿ DEATH STRANDING DIRECTOR'S CUT, Honkai: Star Rail, Meditate, Sunlitt: Sun Position and Path ಅಂತಿಮ ಫೈನಲಿಸ್ಟ್‌ಗಳು.

ಅತ್ಯುತ್ತಮ ಪ್ರಾದೇಶಿಕ ಕಂಪ್ಯೂಟಿಂಗ್ ಅಪ್ಲಿಕೇಶನ್‌ಗಳು

  • ಆಪ್‌: djay pro - DJ App & AI Mixer: ಈ ಆಪ್‌ ವಿವಿಧ ಪರಿಸರಗಳಲ್ಲಿ ತಲ್ಲೀನಗೊಳಿಸುವ ಸಂಗೀತ ಮಿಶ್ರಣದ ಅನುಭವಗಳನ್ನು ನೀಡುತ್ತದೆ.
  • ಗೇಮ್: Blackbox: ಈ ಆಟವು ಸ್ಥಳೀಯ (ಪ್ರಾದೇಶಿಕ) ಒಗಟುಗಳು ಮತ್ತು ಆಕರ್ಷಕವಾದ ವಿವರಗಳೊಂದಿಗೆ ಆಟಗಾರರಿಗೆ (ಬಳಕೆದಾರರಿಗೆ) ಸವಾಲು ಹಾಕುತ್ತದೆ.
  • ಫೈನಲಿಸ್ಟ್‌ಗಳು: ಈ ವಿಭಾಗದಲ್ಲಿ Cozy Puzzle Games, NBA, Sky Guide, Synth Riders ಅಂತಿಮ ಫೈನಲಿಸ್ಟ್‌ಗಳಾಗಿದ್ದವು.

ಅತ್ಯುತ್ತಮ ಡಿಲೈಟ್ (Delight) ಮತ್ತು ಮೋಜಿನ ಅಪ್ಲಿಕೇಶನ್‌ಗಳು

  • ಆಪ್ : Bears Gratitude: ಇದು ದೈನಂದಿನ ಕೃತಜ್ಞತೆಯ ಅಭ್ಯಾಸಗಳನ್ನು ಆಕರ್ಷಕ ಪಾತ್ರಗಳೊಂದಿಗೆ ಪ್ರಚಾರ ಮಾಡುವ ಜರ್ನಲಿಂಗ್ ಅಪ್ಲಿಕೇಶನ್ ಆಗಿದೆ.
  • ಗೇಮ್: NYT Games: ಇದು ಸಂಪರ್ಕಗಳಂತಹ ತೊಡಗಿಸಿಕೊಳ್ಳುವ ಟೈಟಲ್‌ಗಳನ್ನು ನೀಡುವ ಗೇಮಿಂಗ್ ಕ್ಯಾಟಲಾಗ್ (gaming catalog) ಆಗಿದೆ.
  • ಫೈನಲಿಸ್ಟ್‌ಗಳು: ಈ ವಿಭಾಗದಲ್ಲಿ Dudel Draw, Hello Kitty Island Adventure, Rooms, WHAT THE CAR? ಅಂತಿಮ ಸ್ಪರ್ಧಿಗಳಾಗಿದ್ದವು.

ಅತ್ಯುತ್ತಮ Inclusivity (ಒಳಗೊಳ್ಳುವಿಕೆ) ಅಪ್ಲಿಕೇಶನ್‌ಗಳು

  • ಆಪ್: oko: ಈ ಅಪ್ಲಿಕೇಶನ್‌‌ ಸಿಗ್ನಲ್ ಲೈಟ್‌ಗಳ ಬಗ್ಗೆ ಪಾದಚಾರಿಗಳಿಗೆ ಎಚ್ಚರಿಕೆ ನೀಡುತ್ತದೆ, ದೃಷ್ಟಿಹೀನ ವ್ಯಕ್ತಿಗಳಿಗೆ (ಕುರುಡರಿಗೆ) ಸಹಾಯ ಮಾಡುತ್ತದೆ.
  • ಗೇಮ್: Crayola Adventures: ಇದು ವೈವಿಧ್ಯಮಯ ಪಾತ್ರದ ಆಯ್ಕೆಗಳು ಮತ್ತು ಅಂತರ್ಗತ ನಿರೂಪಣೆಯನ್ನು ಹೊಂದಿರುವ ವರ್ಣರಂಜಿತ ಗೇಮ್ ಆಗಿದೆ.
  • ಫೈನಲಿಸ್ಟ್‌ಗಳು: ಈ ವಿಭಾಗದಲ್ಲಿ Complete Anatomy 2024, quadline, Tiimo, Unpacking ಅಂತಿಮ ಸ್ಪರ್ಧಿಗಳಾಗಿದ್ದವು.

ಅತ್ಯುತ್ತಮ ಇನ್ನೋವೇಶನ್ ಅಪ್ಲಿಕೇಶ್‌ಗಳು

  • ಆಪ್‌: Procreate Dreams: ಈ ಆಪ್‌ ಅರ್ಥಗರ್ಭಿತ ನಿಯಂತ್ರಣಗಳೊಂದಿಗೆ 2D ಅನಿಮೇಷನ್‌ಗಳನ್ನು ಕ್ರಿಯೇಟ್‌ ಮಾಡಲು ಅನುಮತಿಸುತ್ತದೆ.
  • ಗೇಮ್: Lost in Play: ಇದು ಕೈಯಿಂದ ಎಳೆಯುವ ಗ್ರಾಫಿಕ್ಸ್ ಮತ್ತು ಒಗಟುಗಳೊಂದಿಗೆ ಆಕರ್ಷಕ ಸಾಹಸ ಗೇಮ್‌ ಆಗಿದೆ.
  • ಫೈನಲಿಸ್ಟ್‌ಗಳು: ಈ ವಿಭಾಗದಲ್ಲಿ Call of Duty: Warzone Mobile, Copilot Money, SmartGym, Wavelength ಅಂತಿಮ ಸ್ಪರ್ಧಿಗಳಾಗಿದ್ದವು.

ಅತ್ಯುತ್ತಮ ಸಂವಹನ (ಸಂವಾದ) ಅಪ್ಲಿಕೇಶನ್‌ಗಳು

  • ಆಪ್: Crouton: ಸರಳವಾಗಿ ಅಡಿಗೆ ಬಳಕೆಗಾಗಿ ಕ್ಲೀನ್ ಇಂಟರ್‌ಫೇಸ್‌ ಹೊಂದಿರುವ ಪಾಕವಿಧಾನ ಅಪ್ಲಿಕೇಶನ್.
  • ಗೇಮ್: Rytmos: ಸರಳ ಸನ್ನೆಗಳನ್ನು ಬಳಸಿಕೊಂಡು ಒಗಟುಗಳು ಮತ್ತು ವಿಕಸಿಸುತ್ತಿರುವ ಹಾಡುಗಳೊಂದಿಗೆ ಆಟಗಾರರಿಗೆ ಸವಾಲು ಹಾಕುವ ಗೇಮ್.
  • ಫೈನಲಿಸ್ಟ್‌ಗಳು: ಈ ವಿಭಾಗದಲ್ಲಿ Arc Search, finity, Little Nightmares, Procreate Dreams ಅಂತಿಮ ಸ್ಪರ್ಧಿಗಳಾಗಿದ್ದವು.

ಅತ್ಯುತ್ತಮ ಸಾಮಾಜಿಕ ಪ್ರಭಾವದ ಅಪ್ಲಿಕೇಶನ್‌ಗಳು

  • ಆಪ್‌: Gentler Streak Fitness Tracker: ಈ ಆಪ್ ಉತ್ತೇಜಿಸುವ ಜ್ಞಾಪನೆಗಳೊಂದಿಗೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಟ್ರ್ಯಾಕ್ ಮಾಡುತ್ತದೆ.
  • ಗೇಮ್: The Wreck: ಇದು ಆಳವಾದ ನಿರೂಪಣೆಗಳೊಂದಿಗೆ ಜೀವನವನ್ನು ಬದಲಾಯಿಸುವ ನಿರ್ಧಾರಗಳನ್ನು ತಿಳಿಸುವ ಒಂದು ದೃಶ್ಯ ಕಾದಂಬರಿ ಆಧಾರಿತ ಗೇಮ್‌.
  • ಫೈನಲಿಸ್ಟ್‌ಗಳು: ಈ ವಿಭಾಗದಲ್ಲಿ Ahead: Emotions Coach, Cityscapes: Sim Builder, How We Feel, The Bear ಅಂತಿಮ ಸ್ಪರ್ಧಿಗಳಾಗಿದ್ದವು.

ಇನ್ನೂ, 2024ರ ಆಪಲ್ ಡಿಸೈನ್ ಪ್ರಶಸ್ತಿ ಕುರಿತ ಸಂಪೂರ್ಣ ಮಾಹಿತಿಯನ್ನು ನೀವು developer.apple.com/design/awards ಅಥವಾ Apple Developer ಅಪ್ಲಿಕೇಶನ್‌ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

Best Mobiles in India

English summary
Apple announced the winners of its annual Apple Design Awards 2024. They honored 14 apps and games for their excellent design, technical skill, and innovation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+