Subscribe to Gizbot

ಸದ್ದಿಲ್ಲದೇ ಮತ್ತೊಂದು ದೀರ್ಘಾವಧಿಯ ತಂತ್ರಜ್ಞಾನವನ್ನು ಸಜ್ಜು ಮಾಡುತ್ತಿದೆ ಆಪಲ್!!

Posted By: KIRAN KUMAR KH

ದುಬಾರಿ ವೆಚ್ಚದ ಮೊಬೈಲ್ ಗಳ ರಾಜನ ಸ್ಥಾನದಲ್ಲಿ ನಿಲ್ಲುವ ಆಪಲ್ ಮೊಬೈಲ್ ಸಂಸ್ಥೆ ತನ್ನ ಹೊಸ ಆವೃತ್ತಿಯ ಮೊಬೈಲ್ ಗಳಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸುವವಾಗ ಅಥವಾ ಇಷ್ಟವಾಗದ ಹಳೆಯ ಫೀಚರ್ ಗಳನ್ನು ತೆಗೆದುಹಾಕಲು ಯಾವುದೇ ಹಿಂದೇಟು ಹಾಕುತ್ತಿಲ್ಲ. ಸದಾ ಬಳಕೆದಾರರಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದ ಆಪಲ್, ಹೆಡ್‌ಫೋನ್ ನ ಜ್ಯಾಕ್ ತೆಗೆದುಹಾಕುವಾಗ ಅಥವಾ ಟಚ್ ಐಡಿಯ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುವಾಗ ಸಾಧನದ ಭವಿಷ್ಯದ ಬಗ್ಗೆ ಯೋಚಿಸಿದೆ. ಹಾಗೆಯೇ ಆಪಲ್ ಸಂಸ್ಥೆ ಮಾರುಕಟ್ಟೆಯ ಎದುರಾಳಿಗಳನ್ನು ಸಡ್ಡು ಹೊಡೆಯಲು ಸದ್ದಿಲ್ಲದೇ ಮತ್ತೊಂದು ದೀರ್ಘಾವಧಿಯ ತಂತ್ರಜ್ಞಾನವನ್ನು ಸಜ್ಜು ಮಾಡುತ್ತಿದೆ. ಏನಿದು ಹೊಸ ತಂತ್ರಜ್ಞಾನ ?

ಸದ್ದಿಲ್ಲದೇ ಮತ್ತೊಂದು ದೀರ್ಘಾವಧಿಯ ತಂತ್ರಜ್ಞಾನವನ್ನು ಸಜ್ಜು ಮಾಡುತ್ತಿದೆ ಆಪಲ್!!

ಹೊಸ ಮಾದರಿಯ ಲೈಟಿನಿಂಗ್ ಪೋರ್ಟ್ಸ್

ಆಪಲ್ ಪೇಟೆಂಟ್ ವರದಿಯ ಪ್ರಕಾರ, ಯುಎಸ್ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ಸ್ ಸಂಸ್ಥೆ ಹೊಸ ಆಪಲ್ ಪೇಟೆಂಟ್ ಅವತರಣಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಲೈಟಿನಿಂಗ್ ಕನೆಕ್ಟರ್ ನ ಬದಲಾವಣೆಯನ್ನು ಪ್ರಸ್ತಾಪಿಸಿದೆ. 2012ರಿಂದ ಆಪಲ್ ತನ್ನ ಲೈಟಿನಿಂಗ್ ಕನೆಕ್ಟರ್ ನಲ್ಲಿ ಬದಲಾವಣೆ ತಂದಿರಲಿಲ್ಲ.

ನೀರಿನ ಅಂಶ ಆಪಲ್ ಫೋನ್ ಒಳ ಹೋಗುವುದನ್ನು ತಡೆಯುವುದೇ ಕನೆಕ್ಟರ್ ಆಕಾರವನ್ನು ಬದಲಾಯಿಸುವ ಹಿಂದಿರುವ ದೊಡ್ಡ ಪರಿಕಲ್ಪನೆ. ಚಾರ್ಜಿಂಗ್ ಮಾಡುವ ಸಮಯದಲ್ಲಿ ತೇವಾಂಶ ರೂಪದಲ್ಲಿ ನೀರು ಫೋನ್ ನ ಒಳ ಹೋಗುವ ಸಂಭವ ಅಧಿಕ. ಕನೆಕ್ಟರ್ ನಲ್ಲಿ ತಂದಿರುವ ಹೊಸ ಬದಲಾವಣೆಯು ಚಾರ್ಜಿಂಗ್ ಸಮಯದಲ್ಲಿ ಯಾವುದೇ ಕಾರಣಕ್ಕೂ ನೀರಿನ ತೇವಾಂಶ ಐಫೋನ್ ನ ಒಳಪ್ರವೇಶಿಸದಂತೆ ತಡೆಯುತ್ತದೆ.

ಸದ್ದಿಲ್ಲದೇ ಮತ್ತೊಂದು ದೀರ್ಘಾವಧಿಯ ತಂತ್ರಜ್ಞಾನವನ್ನು ಸಜ್ಜು ಮಾಡುತ್ತಿದೆ ಆಪಲ್!!

ತಾಂತ್ರಿಕ ನಿರ್ಭಂಧಗಳು

ಕನೆಕ್ಟರ್ ನ ಹೊಸ ವಿನ್ಯಾಸದಿಂದ ಐಫೋನ್ ನ ಚಾರ್ಜ್ ಮಾಡುವುದು ಒಂದು ದೊಡ್ಡ ಪ್ರಕ್ರಿಯೆಯಾಗಬಹುದು. ಏಕೆಂದರೆ ಚಾರ್ಜರ್ ಹೊರ ಪಡೆಯಲು ವ್ಯಾಕ್ಯುಂ ಸೀಲನ್ನು ಮುರಿಯುವ ಅಗತ್ಯವಾಗಿರುತ್ತದೆ. ಕೆಲವು ವರದಿಗಳ ಪ್ರಕಾರ, ಈ ಸಮಸ್ಯೆಯನ್ನು ತಪ್ಪಿಸಲು ಸಾಫ್ಟ್ವೇರ್ ಇಂಟರ್ಫೇಸ್ ನ ಮೂಲಕ ಹೊಸ ಬದಲಾವಣೆಯನ್ನು ತರಲಿದೆ.

ಹೆಡ್ಫೋನ್ ಜ್ಯಾಕ್ ತೆಗೆದುಹಾಕುವ ಸಮಯದಲ್ಲಿ, ವೈರ್ಲೆಸ್ ಹೆಡ್‌ಫೋನ್ ಗಳು ಆಡಿಯೋ ಲೋಕದಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದು ಆಪಲ್ ಪ್ರತಿಪಾದಿಸಿತ್ತು. ವೈರ್ಲೆಸ್ ಹೆಡ್‌ಫೋನ್ ಕಲ್ಪನೆಯೂ ವೇಗವಾಗಿ ಬೆಳೆಯುತ್ತಿದ್ದರೂ, ಕನೆಕ್ಟರ್ ಪೋರ್ಟ್ ನ ತೆಗೆದುಹಾಕುವಷ್ಟು ಪ್ರಬುದ್ಧವಾಗಿಲ್ಲ. 2017ರ ಮೊದಲ ತ್ರೈಮಾಸಿಕದಿಂದ ವಿನ್ಯಾಸದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಹಾಗೂ ಪೇಟೆಂಟ್ ನಲ್ಲಿ ಉಲ್ಲೇಖಿಸಿರುವುದಕ್ಕಿಂತಲೂ ಹೆಚ್ಚಿನ ಅಭಿವೃದ್ದಿಯನ್ನು ನೀರೀಕ್ಷಿಸಬಹುದು.

How To Link Aadhaar With EPF Account Without Login (KANNADA)
ಕೊರಿಯಾದ ಒಂದು ಸಂಸ್ಥೆ ನೀಡಿರುವ ವರದಿಯಂತೆ, ಕಂಪೆನಿಯು 2019ರ ನಂತರ ತನ್ನ OLED ದರ್ಜೆಯ ಐಫೋನ್ ಗಳಲ್ಲಿ ಈ ವಿನ್ಯಾಸವನ್ನು ಪರಿಚಯಿಸಲಿದೆ. ಆಪಲ್ ಸಂಸ್ಥೆಯು ಈ ವಿನ್ಯಾಸದ ಬಗ್ಗೆ ವೇಗವಾಗಿ ಕೆಲಸ ಮಾಡುತ್ತಿದ್ದು, ಮುಂದಿನ ವರ್ಷದಿಂದ ಬರುವ ಹೊಸ ಐಫೋನ್ ಗಳಲ್ಲಿ ಈ ವಿನ್ಯಾಸವನ್ನು ಕಾಣಬಹುದು.
ಸದ್ದಿಲ್ಲದೇ ಮತ್ತೊಂದು ದೀರ್ಘಾವಧಿಯ ತಂತ್ರಜ್ಞಾನವನ್ನು ಸಜ್ಜು ಮಾಡುತ್ತಿದೆ ಆಪಲ್!!

ದಿನದಿಂದ ದಿನಕ್ಕೆ ಹೊಸ ಹೊಸ ಫೀಚರ್ ನ ಪರಿಚಯಿಸುತ್ತಿರುವ ಐಫೋನ್, ಸೆನ್ಸಾರ್ ವಿಭಾಗದ ಸವಾಲನ್ನು ಸ್ವೀಕರಿಸಲಿದೆ ಎನ್ನುವುದೇ ದೊಡ್ಡ ಪ್ರಶ್ನೆ. ಯಾಕೆಂದರೆ ಕಳೆದ ಬಾರಿ ಬಿಡುಗಡೆ ಮಾಡಿರುವ ಐಫೋನ್ X ನಲ್ಲಿ ಸೆನ್ಸಾರ್ ಬೆಂಬಲಿತ ಮುಂಭಾಗದ ಕ್ಯಾಮರಾ, ಮುಖದ ಚಹರೆ ಪತ್ತೆಮಾಡುವ ಪ್ರತ್ಯೇಕ ಕ್ಯಾಮರಾ, ಮೈಕ್ರೊಫೋನ್, ಸ್ಪೀಕರ್, ಸಾಮೀಪ್ಯವನ್ನು ಪತ್ತೆಮಾಡುವ ಸೆನ್ಸಾರ್, ಫ್ಲಡ್ ಇಲ್ಯುಮಿನೆಟರ್ ಮತ್ತು ಡಿಸ್ಪ್ಲೇ ಬೆಳಕಿನ ಸೆನ್ಸಾರ್ ಹೀಗೆ ಅನೇಕ ಫೀಚರ್ ಗಳು ಸೆನ್ಸಾರ್ ಬೆಂಬಲಿತವಾಗಿದೆ.

2019ರಿಂದ ಬರುವ ಹೊಸ ಮಾದರಿಯ ಐಫೋನ್ ಗಳಲ್ಲಿ ನೋಚ್ ವಿನ್ಯಾಸವನ್ನು ತೆಗೆದು ಹಾಕಲು ನಿರ್ಧರಿಸಿದೆ ಮತ್ತು ಸಂಬಂಧಿತ ಕಂಪೆನಿಗಳೊಂದಿಗೆ ಚರ್ಚೆ ನಡೆಸಿದೆ. ಹಾಗೂ ತಾನು ಮುಂದೆ ಉತ್ಪಾದಿಸಲಿರುವ ಎಲ್ಲಾ ಫೋನ್ ಗಳು ಫುಲ್ ಡಿಸ್ಪ್ಲೇ ಹೊಂದಿರಲಿದೆ ಎಂದು ಅಂಗ್ಲ ಮಾಧ್ಯಮ ET ನ್ಯೂಸ್ ವರದಿ ಮಾಡಿದೆ.

English summary
Apple never any discomfort in moving on to a new technology and parting ways with the older ones. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot