Subscribe to Gizbot

ಐಪೋನ್ 8 ಮತ್ತು ಐಫೋನ್ 8 ಪ್ಲಸ್ ರೆಡ್ ಆವೃತ್ತಿ ಲಾಂಚ್..!

Posted By: Lekhaka

ಆಪಲ್ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಐಫೋನ್ ಗಳು ನಮ್ಮಲ್ಲಿಯೂ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ಲಿಮಿಟೆಡ್ ಅಡಿಷನ್ ಐಪೋನ್ 8 ಮತ್ತು ಐಫೋನ್ 8 ಪ್ಲಸ್ ರೆಡ್ ಆವೃತ್ತಿಯೂ ಭಾರತದಲ್ಲಿಯೂ ಮಾರಾಟವಾಗುತ್ತಿದೆ. ಕಳೆದ ವರ್ಷ ಇದೇ ಮಾದರಿಯಲ್ಲಿ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಗಳು ರೆಡ್ ಆವೃತ್ತಿಯಲ್ಲಿ ಲಾಂಚ್ ಆಗಿತ್ತು.

ಐಪೋನ್ 8 ಮತ್ತು ಐಫೋನ್ 8 ಪ್ಲಸ್ ರೆಡ್ ಆವೃತ್ತಿ ಲಾಂಚ್..!

ಈ ರೆಡ್ ಆವೃತ್ತಿಯಲ್ಲಿ ದೊರೆಯುವ ಲಾಭವು ಗ್ಲೋಬಲ್ ಫೌಂಡೇಷನ್ ಗೆ ಹೋಗಲಿದ್ದು, HIV/AIDS ನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ವಿನಿಯೋಗವಾಗಲಿದೆ. ಮೊದಲು ಆಪಲ್ ಮಾತ್ರವೇ ಈ ಮಾದರಿಯಲ್ಲಿ ರೆಡ್ ಆವೃತ್ತಿಯಲ್ಲಿ ಫೋನ್ ಅನ್ನು ಲಾಂಚ್ ಮಾಡುತ್ತಿತ್ತು, ಆದರೆ ಇಂದು ಎಲ್ಲಾ ಸ್ಮಾರ್ಟ್ ಫೋನ್ ತಯಾರಕರು ಕಾರ್ಪೋರೆಟ್ ಸೋಶಿಯಲ್ ರೆಸ್ಪಾಸಿಬಲಿಟಿ ಅಂಗವಾಗಿ ರೆಡ್ ಆವೃತ್ತಿ ಫೋನ್ ಗಳನ್ನು ಲಾಂಚ್ ಮಾಡುತ್ತಿದ್ದಾರೆ.

ಆಂಡ್ರಾಯ್ಡ್ ತಯಾರಕರಾದ ಒಪ್ಪೋ, ವಿವೋ, ಒನ್ ಪ್ಲಸ್ ಸ್ಮಾರ್ಟ್ ಫೋನ್ ಗಳು ಸಹ ರೆಡ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ ಎನ್ನಲಾಗಿದೆ. ಈ ಕಾರ್ಯದಲ್ಲಿ ಆಪಲ್ 11 ವರ್ಷಗಳಿಂದ ನಿರತವಾಗಿದೆ ಎನ್ನಲಾಗಿದೆ. ರೆಡ್ ಆವೃತ್ತಿಯಲ್ಲಿ ಬರುವ ಲಾಭದಲ್ಲಿ ಹೆಚ್ಚಿನ ಅಂಶ ಎನ್ ಜಿಓಗಳಿಗೆ ದೊರೆಯಲಿದೆ.

ಆಪಲ್ ಇದುವರೆಗೂ ರೆಡ್ ಆವೃತ್ತಿಯ ಮಾರಾಟದಲ್ಲಿ $ 160 ಮಿಲಿಯನ್ ಹಣವನ್ನು ಸಂಗ್ರಹಿಸಿದೆ ಎನ್ನಲಾಗಿದೆ. ಒಂದು ಆಪಲ್ ರೆಡ್ ಆವೃತ್ತಿಯೂ ಮಾರಾಟವಾದರೆ ಗ್ಲೋಬಲ್ ಫಂಡ್ ಗೆ ಆಪಲ್ ದೇಣಿಗೆಯನ್ನು ನೀಡಲಿದೆ ಎನ್ನಲಾಗಿದೆ. ಐಪೋನ್ 8 ಮತ್ತು ಐಫೋನ್ 8 ಪ್ಲಸ್ ರೆಡ್ ಆವೃತ್ತಿಯೂ ಈ ಹಿಂದಿನ ಆವೃತ್ತಿಗಿಂತಲೂ ಭಿನ್ನವಾಗಿದೆ ಎನ್ನೊಲಾಗಿದೆ.

How to Check Your Voter ID Card Status (KANNADA)
ಐಪೋನ್ 8 ಮತ್ತು ಐಫೋನ್ 8 ಪ್ಲಸ್ ರೆಡ್ ಆವೃತ್ತಿಯೂ ವೈರ್ ಲೈಸ್ ಚಾರ್ಜರ್ ಸಪೋರ್ಟ್ ಮಾಡಲಿದ್ದು, ಇದಕ್ಕಾಗಿ ಗ್ಲಾಷ್ ಫಿನಿಷಿಂಗ್ ನೀಡಲಾಗಿದೆ. ಮುಂಭಾಗದಿಂದ ನೋಡಲು ಸಾಮಾನ್ಯ ಫೋನ್ ನಂತೆ ಕಂಡರು ಸಹ ಹಿಂಭಾಗದಲ್ಲಿ ಮಾತ್ರವೇ ವಿಭಿನ್ನವಾಗಿದೆ. ಬಣ್ಣ ಬಿಟ್ಟರೆ ಇನ್ನೆಲ್ಲವೂ ಸಾಮಾನ್ಯವಾಗಿಯೇ ಇರಲಿದೆ.

English summary
Apple iPhone8 and 8 Plus (PRODUCT)RED Special Edition now available in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot