ಇದೇ ಮೊದಲಸಾರಿ ಹಲವು ಆಪ್‌ಗಳನ್ನು ಉಚಿತವಾಗಿ ನೀಡಿದ ಆಪಲ್!!

Written By:

ಆಪಲ್ ಸ್ಮಾರ್ಟ್‌ಫೋನ್ ಎಂದರೆ ದುಬಾರಿ ಎನ್ನುವ ಕಲ್ಪನೆ ಪ್ರತಿಯೊಬ್ಬ ವ್ಯಕ್ತಿಗೂ ಮೂಡುತ್ತದೆ. ಆದರೆ, ಬರುಬರುತ್ತಾ ಆಪಲ್ ಬದಲಾಗುತ್ತಿದೆ.!! ಹೌದು, ಸ್ಮಾರ್ಟ್‌ಫೊನ್ ಪ್ರಪಂಚದಲ್ಲಿ ಉಳಿಯಲು ಆಪಲ್ ಹೊಸ ತಂತ್ರಗಳನ್ನು ಬಳಸುತ್ತಿದ್ದು, ಇದೀಗ ತನ್ನ ಹಲವು ಆಪ್‌ ಸೆವೆಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ.!!

ಇದೇ ಮೊದಲ ಸಾರಿ ಆಪಲ್ ಇಂತಹ ಆಫರ್ ನೀಡಿದ್ದು, ಆಪಲ್ ಬಳಕೆದಾರರು ಇನ್ನು ಆಪಲ್‌ನ ಹಲವು ಆಪ್‌ಗಳಿಗಳನ್ನು ಹಣ ನೀಡದೆ ಬಳಕೆ ಮಾಡಬಹುದಾಗಿದೆ. ಹಾಗಾದರೆ, ಆಪಲ್ ಉಚಿತವಾಗಿ ನೀಡುತ್ತಿರುವ ಆಪ್‌ಗಳು ಯಾವುವು? ಅವುಗಳ ಉಪಯೋಗವೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಮೂವಿ ಇನ್ನು ಉಚಿತವಾಗಲಿದೆ.!!

ಐಮೂವಿ ಇನ್ನು ಉಚಿತವಾಗಲಿದೆ.!!

ಆಪಲ್ ಕಂಪೆನಿಯ ಬಹ ಜನಪ್ರಿಯ ಆಪ್ ಐಮೂವಿ ಬಳಕೆಯನ್ನು ಉಚಿತವಾಗಿ ನೀಡಲು ಆಪಲ್ ಗ್ರಾಹಕರಿಂದ ಹೆಚ್ಚು ಒತ್ತಡ ಬಂದಿತ್ತು. ಹಾಗಾಗಿ, ಆಪಲ್ ಐಮೂವಿ ಆಪ್‌ ಅನ್ನು ಉಚಿತವಾಗಿ ನೀಡಲು ಮುಂದಾಗಿದೆ ಎನ್ನಲಾಗಿದೆ.!!

ಆಪಲ್ ಐವರ್ಕ್

ಆಪಲ್ ಐವರ್ಕ್

ಈಗ ಮ್ಯಾಕ್ ಮತ್ತು ಐಒಎಸ್‌ಗಳಲ್ಲಿಯೂ ಆಪಲ್ ಐವರ್ಕ್ ಆಪ್ ಉಚಿತವಾಗಿದ್ದು, ಇನ್ನು ಯಾವುದೇ ಶುಲ್ಕಪಾವತಿಸದೇ ಆಪಲ್‌ನ ಐವರ್ಕ್ ಆಪ್‌ ಉಪಯೋಗಿಸಬಹುದಾಗಿದೆ.!!

ಗ್ಯಾರೇಜ್ ಬ್ರಾಂಡ್ ಸಹ ಉಚಿತ!!

ಗ್ಯಾರೇಜ್ ಬ್ರಾಂಡ್ ಸಹ ಉಚಿತ!!

ಸಂಗೀತ ಲೋಕದ ಮತ್ತೊಂದು ಮಜಲು ಎನ್ನಬಹುದಾದ ಆಪಲ್ ಕಂಪೆನಿಯ ಗ್ಯಾರೇಜ್ ಬ್ರಾಂಡ್ ಆಪ್ ಬಳಕೆದಾರರಿಗೆ ಉಚಿತವಾಗಿ ಲಭ್ಯವಾಗುತ್ತಿದೆ. ಸಾಂಗ್ಸ್, ಮ್ಯೂಸಿಕ್ ಲೈಬ್ರೆರಿ ಅದ್ಬುತ ಲೋಕ ಗ್ಯಾರೇಜ್ ಬ್ರಾಂಡ್ ಉಚಿತವಾಗಿರುವುದು ಆಪಲ್ ಬಳಕೆದಾರರಿಗೆ ಸಂತೋಷ ಹೆಚ್ಚಿಸಿದೆ.!!

ಕೀನೋಟ್ ಆಪ್!!

ಕೀನೋಟ್ ಆಪ್!!

ಐಫೋನ್‌ನಿಂದ ಪೈಲ್‌ಗಳನ್ನು ರಚಿಸುವುದು ಮತ್ತು ಸಂಪಾದಿಸುವ ಆಯ್ಕೆಯನ್ನು ಕೀನೋಟ್ ಆಪ್ ಹೊಂದಿದೆ. ಇದಲ್ಲದೇ ವರ್ಡ್ ಪ್ರೊಸೆಸಿಂಗ್ ಮತ್ತು ಸಂಖ್ಯೆಗಳಿಗೆ ಸಂಬಂಧಿಸಿದಂತೆ ಕಂಪ್ಯಾನಿಯನ್ ಅಪ್ಲಿಕೇಶನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Apple today updated several of its Mac and iOS apps, making them available for all Mac and iOS users for free. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot