ಮತ್ತೊಂದು ಚೀನಾ ಆಪ್‌ ಬುಲೆಟ್‌ಗೆ ಆಪಲ್‌ನಿಂದ ಗೇಟ್ ಪಾಸ್..!

|

ತನ್ನ ಬಳಕೆದಾರರಿಗೆ ಅತ್ಯಂತ ಸುರಕ್ಷತೆಯ ಸೇವೆಯನ್ನು ನೀಡುತ್ತಿರುವ ಸ್ಮಾರ್ಟ್ಫೋನ್ ಮಾರುಕಟ್ಟೆಯ ದೈತ್ಯ ಆಪಲ್, ಸೆಕ್ಯೂರಿಟಿ ಸಲುವಾಗಿ ಚೀನಾದಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ವೀ ಚಾಟ್ ವಿರುದ್ಧವಾಗಿ ಕಾಣಿಸಿಕೊಂಡಿದ್ದ ಬುಲೆಟ್ ಮೆಸೆಂಜರ್ ಅನ್ನು ತನ್ನ ಆಪ್ ಸ್ಟೋರ್ ನಿಂದ ಕಿತ್ತುಹಾಕಿದೆ. ಈ ಆಪ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದ ಇದರಿಂದ ಬಳಕೆದಾರರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ ತನ್ನ ಆಪ್ ಸ್ಟೋರ್ ನಿಂದ ಬುಲೆಟ್ ಮೆಸೆಂಜರ್ ಆಪನ್ನು ಕಿತ್ತುಹಾಕಿದೆ.

ಮತ್ತೊಂದು ಚೀನಾ ಆಪ್‌ ಬುಲೆಟ್‌ಗೆ ಆಪಲ್‌ನಿಂದ ಗೇಟ್ ಪಾಸ್..!

ಈ ಹಿಂದೆಯೂ ಹಲವು ಆಪ್ ಗಳಿಗೆ ಗೇಟ್ ಪಾಸ್ ಅನ್ನು ನಡೆದಂತಹ ಆಪಲ್, ಮತ್ತೊಮ್ಮೆ ಸೆಕ್ಯೂರಿಟಿ ಸಲುವಾಗಿ ಚೀನಾ ಮೂಲದ ಪಂಥಕ್ಕೆ ಬಿಸಿ ಮುಟ್ಟಿಸಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಸುರಕ್ಷತೆಯನ್ನು ನೀಡುವ ಜವಾಬ್ದಾರಿಯನ್ನು ಪ್ರದರ್ಶಿಸಿದೆ. ಈಗಾಗಲೇ ಚೀನಾ ಮಾರುಕಟ್ಟೆಯನ್ನು ವ್ಯಾಪಿಸಿಕೊಂಡಿರುವ wechat ಮೆಸ್ಸೆಂಜರ್ ಆಪ್ ಕೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಅಂತಹ ಬುಲೆಟ್ ಮೆಸೆಂಜರ್ ಹೆಚ್ಚಿನ ಬಳಕೆದಾರರಿಗೆ ಯಶಸ್ವಿಯಾಗಿತ್ತು.

ಆದರೆ ಅಗತ್ಯವಿಲ್ಲದೆ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಕಾರಣಕ್ಕಾಗಿ apple ಸುರಕ್ಷತೆಯ ನೆಪವೊಡ್ಡಿ ಬುಲೆಟ್ ಮೆಸೆಂಜರ್ ಆಪನ್ನು ಆಪ್ ಸ್ಟೋರ್ ನಿಂದ ಹೊರಹಾಕಿದೆ. ಚೀನಾ ಆಪಲ್ ಆಪ್ ಸ್ಟೋರ್ನಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದ ಅಂತಹ ಈ ಹೊಸ ಮಾದರಿಯ ಬುಲೆಟ್ ಮೆಸೆಂಜರ್ ಬಿಡುಗಡೆಯಾದ 10 ದಿನದಲ್ಲಿ 5 ಕೋಟಿಗೂ ಅಧಿಕ ಮಂದಿ ಬಳಕೆದಾರರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ಹೆಚ್ಚಿನ ಪ್ರಾಬಲ್ಯತೆಯನ್ನು ಪಡೆದುಕೊಂಡಿದ್ದ ಅಂತಹ wechat app ನೇರ ಪ್ರತಿಸ್ಪರ್ಧೆಯನ್ನು ನೀಡಿತ್ತು.

ಈಗಾಗಲೇ ಹಲವು ಚೀನಾ ಮೂಲದ ಆಪ್ಗಳು ಬಳಕೆದಾರರ ಮಾಹಿತಿಯನ್ನು ಕದಿಯುತ್ತವೆ ಎಂಬ ಆರೋಪವನ್ನು ಹೊಂದಿವೆ ಗಳು ಇಂದು ಮಾರುಕಟ್ಟೆಯಿಂದ ಕಣ್ಮರೆಯಾಗಿದ್ದು, ಇದೇ ಸಾಲಿನಲ್ಲಿ ಕಾಣಿಸಿಕೊಂಡಿದೆ ಬುಲೆಟ್ ಮೆಸೆಂಜರ್ ಇದು ಬಳಕೆದಾರರ ಕಾಂಟಾಕ್ಟ್ ನಂಬರ್ ಸೇರಿದಂತೆ ಹಲವು ಮಾದರಿಯ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು ಬಳಕೆದಾರ ವಿವರಿಸುವ ಮೆಸೇಜ್ ಸೇರಿದಂತೆ ಇಮೇಜ್ ಗಳನ್ನು store ಮಾಡಿಕೊಳ್ಳುತ್ತಿದ್ದು ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ನಷ್ಟ ಉಂಟಾಗಬಹುದಾದ ಸಾಧ್ಯತೆಯಿಂದ ಆಪಲ್ ತನ್ನ ಪ್ಲೇ ಸ್ಟೋರ್ ನಿಂದ ಬುಲೆಟ್ ಮೆಸೆಂಜರ್ ಗೆ ಗೇಟ್ ಪಾಸ್ ನೀಡಿದೆ.

Best Mobiles in India

English summary
Apple removes WeChat rival 'Bullet' from App Store. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X