ಕೆಲಸ ಹುಡುಕುತ್ತಿರುವವರು ಆಪಲ್ ವೆಬ್‌ಸೈಟ್ ನೋಡಿ!

|

ಹೊಸ ಕೆಲಸ ಹುಡುಕುತ್ತಿದ್ದೀರಾ? ಆಪಲ್ ನಿಮ್ಮ ಕನಸಿನ ಸಂಸ್ಥೆಯಾ? ಹಾಗಾದ್ರೆ ಇದು ಸುವರ್ಣ ಸಮಯ. ಯಾಕೆಂದರೆ ಆಪಲ್ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಹೊಸ ಕೆಲಸಗಾರರು ಬೇಕಾಗಿದ್ದಾರೆ ಎಂದು ಹೇಳಿಕೊಂಡಿದೆ. ವಿಭಿನ್ನ ವಿಭಾಗಗಳ ವಿವರಣೆ ಜೊತೆಗೆ ವೀಡಿಯೋವನ್ನು ಕೂಡ ಬಿಡುಗಡೆ ಮಾಡಿದೆ.

ಕನಸಿನ ಕೆಲಸದ ಪಟ್ಟಿಯಲ್ಲಿ ಕೆಲವು ಕಂಪೆನಿಗಳು ಬಹಳ ಉತ್ತುಂಗದಲ್ಲಿರುತ್ತದೆ. ಅದರಲ್ಲಿ ಕೆಲವು ಕಂಪೆನಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿವೆ. ಎಲ್ಲಾ ಕ್ಷೇತ್ರದವರಿಗೂ ಕೂಡ ಆಪಲ್ ನಲ್ಲಿ ಕೆಲವು ಅತ್ಯುದ್ಭುತ ಅವಕಾಶಗಳಿವೆ. ಕ್ಯೂಪರ್ಟಿನೋ ಮೂಲದ ಟೆಕ್ ಕಂಪೆನಿ ಇದೀಗ ತನ್ನ ಕಂಪೆನಿಗೆ ಎಂತಹ ಕೆಲಸಗಾರರು ಬೇಕಾಗಿದ್ದಾರೆ ಎಂಬುದನ್ನು ಹೇಳಿಕೊಂಡಿದೆ. ಆಪಲ್ ನ “About Apple” ಪೇಜಿನ ಜಾಬ್ ಸೆಕ್ಷನ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಕೆಲಸ ಹುಡುಕುತ್ತಿರುವವರು ಆಪಲ್ ವೆಬ್‌ಸೈಟ್ ನೋಡಿ!

ವಿಶ್ವವನ್ನು ಪ್ರತಿಬಿಂಬಿಸುವ ಕಂಪೆನಿ:
ವಿಶ್ವವನ್ನು ಪ್ರತಿಬಿಂಬಿಸುವ ಕಂಪೆನಿಯನ್ನು ಸೇರಿ ಎಂಬ ಟ್ಯಾಗ್ ಲೈನ್ ನ್ನು ನೀಡಿ ಹೊಸದಾಗಿ ಕೆಲಸಕ್ಕೆ ಸೇರುವವರನ್ನು ಆಪಲ್ ಸಂಸ್ಥೆ ಆಹ್ವಾನಿಸುತ್ತಿದೆ. ನೀವೂ ಅವರಲ್ಲೊಬ್ಬರಾಗಿದ್ದರೆ ಖಂಡಿತ ಆಪಲ್ ವೆಬ್ ಸೈಟ್ ಕಡೆ ಒಮ್ಮೆ ಕಣ್ಣಾಡಿಸಿ.

ವೆಬ್ ಪೇಜ್ ನಲ್ಲಿ ವೀಡಿಯೋ ವಿವರಣೆ:
ಅಷ್ಟೇ ಅಲ್ಲದೆ ವೀಡಿಯೋ ಒಂದನ್ನು ಆಪಲ್ ಸಂಸ್ಥೆ ಬಿಡುಗಡೆಗೊಳಿಸಿದ್ದು, ಆಪಲ್ ನಲ್ಲಿ ಕೆಲಸ ಮಾಡುವವರು ಹೇಗೆ ಕೆಲಸ ಮಾಡುತ್ತಾರೆ ಎಂಬ ಬಗ್ಗೆ ಮತ್ತು ಆಪಲ್ ಸಂಸ್ಥೆ ಹೇಗಿದೆ ಎಂಬ ಬಗ್ಗೆ ಇದರಲ್ಲಿ ಮಾಹಿತಿ ನೀಡಲಾಗಿದೆ.ಆಪಲ್ ನಲ್ಲಿ ಕೆಲಸ ಮಾಡುವ ಉದಾಹರಣೆಗೆ ಆಪಲ್ ವಾಚ್ ಅಥವಾ ಆಪಲ್ ಸ್ಟೋರ್ ಗಳಲ್ಲಿ ಕೆಲಸ ಮಾಡುವವರು ಆಪಲ್ ಸಂಸ್ಥೆ ಯಾಕೆ ವಿಶ್ವದ ಅತ್ಯುತ್ತಮ ಸಂಸ್ಥೆ ಮತ್ತು ಇಲ್ಲಿ ಕೆಲಸ ಮಾಡಲು ಯಾಕೆ ಆಪಲ್ ಗ್ರೇಟ್ ಅನ್ನಿಸುತ್ತದೆ ಎಂಬ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ.

ಕೆಲಸದ ಅವಕಾಶದ ಬಾಗಿಲು ತೆರೆದ ಆಪಲ್:
ಆಪಲ್ ನಲ್ಲಿ ಅವಕಾಶಗಳ ಬಾಗಿಲು ತೆರೆದಿದೆ. ನಾವು ಮಾನವೀಯತೆಯನ್ನು ಬಹುವಚನ ಎಂದು ಭಾವಿಸಿದ್ದೇವೆಯೇ ಹೊರತು ಏಕವಚನವಲ್ಲ. ಇಲ್ಲಿ ಯಾರೂ ಹೊರಹೋಗಲು ಇಚ್ಛಿಸುವುದಿಲ್ಲ ಬದಲಾಗಿ ವಿಶ್ವದ ಎಲ್ಲರೂ ಕೂಡ ಒಳಬರಲು ಆಸೆ ಪಡುತ್ತಾರೆ ಎಂದು ಆಪಲ್ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದೆ.

ವಿಭಿನ್ನ ಕೆಲಸಕ್ಕೆ ಹೇಳಿ ಮಾಡಿಸಿದ ಜಾಗ:
ಯಾವ ರೀತಿಯ ಕೆಲಸವನ್ನು ಆಪಲ್ ನ ವಿಭಿನ್ನ ವಿಭಾಗಗಳಲ್ಲಿ ಮಾಡಬೇಕಾಗುತ್ತದೆ ಮತ್ತು ಹೇಗೆ ಮಾಡಬೇಕಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಸಾಫ್ಟ್ ವೇರ್, ಮಾರ್ಕೆಟಿಂಗ್ ಅಥವಾ ರೀಟೇಲ್ ಇತ್ಯಾದಿ ವಿಭಾಗಗಳ ಬಗ್ಗೆ ವಿವರಣೆ ನೀಡಲಾಗಿದೆ. ವಿಭಿನ್ನ ಜಾಬ್ ಗಳ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಖಂಡಿತ ಆಪಲ್ ಸಂಸ್ಥೆ ಅತ್ಯುತ್ತಮ ಅವಕಾಶವನ್ನು ಮಾಡಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಅಕ್ಟೋಬರ್ 30 ರಂದು ಕಾರ್ಯಕ್ರಮ:
ಇತ್ತೀಚೆಗಷ್ಟೇ ಅಕ್ಟೋಬರ್ 30 ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಮೀಡಿಯಾ ಆಮಂತ್ರಣವನ್ನು ಕಳುಹಿಸಲಾಗಿದೆ.ಆದರೆ ಈ ಆಮಂತ್ರಣದಲ್ಲಿ ಕಂಪೆನಿಯು ಏನನ್ನು ಬಿಡುಗಡೆಗೊಳಿಸಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. “There’s more in the making.” ಎಂದು ಆಮಂತ್ರಣದಲ್ಲಿ ಬರೆಯಲಾಗಿದೆ ಅಂದರೆ ಇನ್ನೂ ಹೆಚ್ಚಿನದ್ದನ್ನು ತಯಾರಿಸಲಾಗಿದೆ ಎಂದಷ್ಟೇ ಬರೆಯಲಾಗಿದೆ.ಐ ಪ್ಯಾಡ್, ಮ್ಯಾಕ್ ಬುಕ್ ಡಿವೈಸ್ ಗಳನ್ನು ಡಿವೈಸ್ ಮತ್ತು ಮ್ಯಾಕ್ ಮಿನಿ ಯ ಹೊಸ ವರ್ಷನ್ ಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಗಾಳಿಸುದ್ದಿಯೂ ಕೂಡ ಕೇಳಿಬರುತ್ತಿದೆ.

Best Mobiles in India

English summary
There are certain companies that are always on top of the list of “dream jobs”. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X