Home
Apps

Apple Store: ಇನ್ಮುಂದೆ ನೇರವಾಗಿ ಶಾಪಿಂಗ್ ಮಾಡಬಹುದು! ಭಾರತದಲ್ಲಿ ಆಪಲ್ ಸ್ಟೋರ್ ಆಪ್‌ ಶುರು!

ಟೆಕ್ ದೈತ್ಯ ಆಪಲ್ (Apple) ಕಂಪನಿಯು ಭಾರತದಲ್ಲಿ ಆಪಲ್ ಸ್ಟೋರ್ ಅಪ್ಲಿಕೇಶನ್ (Apple Store) ಅನ್ನು ಬಿಡುಗಡೆ ಮಾಡಿದೆ. ಇದು ಗ್ರಾಹಕರಿಗೆ ಆಪಲ್‌ನ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ಸಹಾಯಕವಾಗಿದೆ. ದೇಶಾದ್ಯಂತದ ಗ್ರಾಹಕರು, ಆಪ್ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಈ ಮೂಲಕ ಇನ್ಮುಂದೆ ಆಪಲ್‌ನಿಂದ ನೇರವಾಗಿ ಶಾಪಿಂಗ್ ಮಾಡಬಹುದು. ಶೀಘ್ರದಲ್ಲೇ ಬೆಂಗಳೂರು, ಪುಣೆ, ದೆಹಲಿ ಎನ್‌ಸಿಆರ್ ಮತ್ತು ಮುಂಬೈನಲ್ಲಿ ಆಪಲ್‌ ಸ್ಟೋರ್ ತೆರೆಯಲಾಗುವುದು. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಆಪಲ್‌ನ ರಿಟೇಲ್ ಆನ್‌ಲೈನ್ ಮುಖ್ಯಸ್ಥ ಕರೆನ್ ರಾಸ್ಮುಸ್ಸೆನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಇನ್ನೂ ಹೆಚ್ಚಿನ ಬಳಕೆದಾರರನ್ನು ತಲುಪಲು ಆಪಲ್ ಸ್ಟೋರ್ ಅಪ್ಲಿಕೇಶನ್ ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ. ಗ್ರಾಹಕರು ಆಪಲ್ ಸ್ಟೋರ್ ಆಪ್‌ನೊಂದಿಗೆ ನಮ್ಮ ಎಲ್ಲಾ ಅದ್ಭುತ ಉತ್ಪನ್ನಗಳನ್ನು ಶಾಪಿಂಗ್ ಮಾಡಬಹುದು. ಗ್ರಾಹಕರಿಗೆ ಇನ್ನಷ್ಟು ಅನುಕೂಲಕರವಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ಆಪಲ್ ಉತ್ಪನ್ನಗಳು, ಪರಿಕರಗಳು ಮತ್ತು ಸೇವೆಗಳನ್ನು ಸುಲಭವಾಗಿ ಹುಡುಕಲು ಒಂದೇ ಸೈಟ್ ಲಭಿಸಿದಂತಾಗಿದೆ ಎಂದು ಸಹ ಹೇಳಿದ್ದಾರೆ.

ಇನ್ಮುಂದೆ ಶಾಪಿಂಗ್ ಮತ್ತಷ್ಟು ಸುಲಭ! ಭಾರತದಲ್ಲಿ ಆಪಲ್ ಸ್ಟೋರ್ ಆಪ್‌ ಶುರು

ಗ್ರಾಹಕರು ಹೆಚ್ಚು ಶಕ್ತಿಶಾಲಿ ಚಿಪ್, ಹೆಚ್ಚುವರಿ ಮೆಮೊರಿ ಅಥವಾ ಹೆಚ್ಚುವರಿ ಸ್ಟೋರೇಜ್‌ನೊಂದಿಗೆ ತಮ್ಮ ಮ್ಯಾಕ್ ಅನ್ನು ಕಸ್ಟಮೈಸ್ ಮಾಡಬಹುದು. ಇದರ ಜೊತೆಗೆ ಗ್ರಾಹಕರ ಏರ್‌ಪಾಡ್‌ಗಳು, ಐಪ್ಯಾಡ್, ಆಪಲ್ ಪೆನ್ಸಿಲ್ ಪ್ರೊ, ಎರಡನೇ ತಲೆಮಾರಿನ ಆಪಲ್ ಪೆನ್ಸಿಲ್ ಮತ್ತು ಏರ್ ಟ್ಯಾಗ್ ಅನ್ನು ಎಂಟು ಭಾಷೆಗಳ ಆಯ್ಕೆಯಲ್ಲಿ ಬರೆಸಬಹುದು. ನೀವು ಎಮೋಜಿ, ಹೆಸರುಗಳು, ಮೊದಲಕ್ಷರಗಳು ಮತ್ತು ಸಂಖ್ಯೆಗಳ ಮಿಶ್ರಣದೊಂದಿಗೆ ಉಚಿತವಾಗಿ ಬರೆಸಬಹುದು.

ಶೀಘ್ರದಲ್ಲೇ ಬೆಂಗಳೂರಿನಲ್ಲಿ ಆಪಲ್‌ ಸ್ಟೋರ್

ಭಾರತದಲ್ಲಿ ಆಪಲ್‌ನ ಮೊದಲ ಎರಡು ಮಳಿಗೆಗಳು ಏಪ್ರಿಲ್ 2023 ರಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಆರಂಭವಾಗಿವೆ. ಶೀಘ್ರದಲ್ಲೇ ಬೆಂಗಳೂರು, ಪುಣೆ, ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಲ್ಲಿ ಆಪಲ್‌ ಸ್ಟೋರ್ ತೆರೆಯಲಾಗುವುದು ಎಂದು ಆಪಲ್ ಕಂಪನಿ ತಿಳಿಸಿದೆ. ಆಪಲ್ ಸ್ಟೋರ್ ಆಪ್ ಸುಲಭ ವಿತರಣೆ ಮತ್ತು ಪಿಕಪ್‌ಗಾಗಿ ಆಯ್ಕೆಗಳನ್ನು ಒದಗಿಸುತ್ತದೆ. ಇದರಿಂದ ಗ್ರಾಹಕರು ತಮ್ಮ ಹೊಸ ಆಪಲ್ ಉತ್ಪನ್ನಗಳನ್ನು ಆದಷ್ಟು ಬೇಗ ಮತ್ತು ಅನುಕೂಲಕರವಾಗಿ ಪಡೆಯಬಹುದು.

ಎಐ ಜನರೇಟೆಡ್​ ಎರರ್ ​ಪ್ರೋನ್​ ಫೀಚರ್ಸ್ ಸ್ಥಗಿತ

ಆಪಲ್​ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಎಐ ಜನರೇಟೆಡ್​ ಎರರ್ ಪ್ರೋನ್​ ಫೀಚರ್ಸ್ ತೆಗೆದುಹಾಕಲು ಮುಂದಾಗಿದೆ. ಇದರ ವಿರದ್ಧ ಅನೇಕ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹೌದು, ಕೆಲ ಐಫೋನ್ ಗ್ರಾಹಕರು ಬೋಗಸ್​ ನ್ಯೂಸ್​ ಅಲರ್ಟ್ ಅನ್ನು ನೀಡುವ ಎಐ ಜನರೇಟೆಡ್​ ಎರರ್ ಪ್ರೋನ್​ ಫೀಚರ್ಸ್​ ಆಪಲ್ ತೆಗೆದುಹಾಕಲು ನಿರ್ಧರಿಸಿದೆ. ಪ್ರಸ್ತುತ, ಮುಂದಿನ ಸಾಫ್ಟ್‌ವೇರ್ ಐಓಎಸ್ 18.3 (iOS 18.3) ಅಪ್ಡೇಟ್ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ಕಂಪನಿಯು​ ಈ ಟೆಸ್ಟ್​ ವರ್ಶನ್ ಭಾಗವಾಗಿ ತನ್ನ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬೀಟಾ ವರ್ಶನ್ ​ ಐಫೋನ್ ಗ್ರಾಹಕರು ಮತ್ತು ಡೆವಲಪರ್‌ಗಳ ಗುಂಪಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಟೆಸ್ಟ್​ ವರ್ಸನ್​ ಅನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುತ್ತದೆ. ಬೀಟಾ ಅಪ್ಡೇಟ್‌ನಲ್ಲಿ ಟೆಕ್ನಾಲಾಜಿ ಇನ್ಫಾರೇಷನ್​ ಮಾಹಿತಿ ರೂಪಿಸಲು ಕಾರಣವಾಗುವ ದೋಷ ಸರಿಪಡಿಸಲು ಪ್ರಯತ್ನಿಸುತ್ತಿದೆ. ಈ ನಡುವೆ ನ್ಯೂಸ್​ ಮತ್ತು ಮನರಂಜನೆಗಾಗಿ ಎಐ ಜನರೇಟೆಡ್​ ಫೀಚರ್​ ಅನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿದೆ.

Best Mobiles in India

English summary
apple store app launched in india and available on app store: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+