ಪ್ರೈಮ್‌, ನೆಟ್‌ಫ್ಲಿಕ್ಸ್‌ಗೆ ಆಪಲ್ ಸೆಡ್ಡು..! ಹೊಸ ಆಪಲ್‌ ಟಿವಿ ಪ್ಲಸ್‌ ಬಿಡುಗಡೆ..!

By Gizbot Bureau
|

ನೆಟ್‌ಫ್ಲಿಕ್ಸ್‌, ಅಮೆಜಾನ್‌, ಹಾಟ್‌ಸ್ಟಾರ್‌ಗಳನ್ನೊಳಗೊಂಡ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಆಪಲ್‌ ಕಾಲಿಡುತ್ತಿದೆ, ಹೌದು, ತನ್ನದೇ ಆದ ಸ್ಟ್ರೀಮಿಂಗ್‌ ವೇದಿಕೆ ಆಪಲ್ ಟಿವಿ ಪ್ಲಸ್‌ ಅನ್ನು ನವೆಂಬರ್ 1 ರಂದು ಭಾರತ ಸೇರಿ 100ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಹೊಸ ಬೆಲೆ ತಂತ್ರಕ್ಕೆ ಅನುಗುಣವಾಗಿ, ಆಪಲ್ ಟಿವಿ ಪ್ಲಸ್ ಅನ್ನು ತಿಂಗಳಿಗೆ ಕೇವಲ 99 ರೂ.ಗಳಿಗೆ ನೀಡುತ್ತಿದ್ದು, ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್‌ಗಳಿಗಿಂತಲೂ ಅಗ್ಗವಾಗಿದ್ದು ಗ್ರಾಹಕರನ್ನು ಆಕರ್ಷಿಸುತ್ತಿದೆ.

ಒರಿಜಿನಲ್‌ ಕಂಟೆಂಟ್‌

ಒರಿಜಿನಲ್‌ ಕಂಟೆಂಟ್‌

ಆಪಲ್ ಟಿವಿ ಪ್ಲಸ್‌ ಎಲ್ಲಾ ಒರಿಜಿನಲ್‌ ವಿಡಿಯೋಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿದ್ದು, ಪ್ರಸ್ತುತ "ದಿ ಮಾರ್ನಿಂಗ್ ಶೋ," "ಡಿಕಿನ್ಸನ್," "ಸೀ," "ಫಾರ್‌ ಆಲ್‌ ಮ್ಯಾನ್‌ಕೈಂಡ್‌" ಮತ್ತು "ಎಲಿಫೆಂಟ್ ಕ್ವೀನ್" ನಂತಹ ವೆಬ್‌ ಸಿರೀಸ್‌ಗಳನ್ನು ನೀಡುತ್ತಿದೆ. ಹೊಸ ವೇದಿಕೆಯನ್ನು ಗ್ರಾಹಕರಿಗೆ ಹತ್ತಿರವಾಗಿಸಲು, ಆಪಲ್ ಒಂದು ವರ್ಷದ ಉಚಿತ ಚಂದಾದಾರಿಕೆ ಸೇರಿ ಅನೇಕ ಯೋಜನೆಗಳನ್ನು ಪರಿಚಯಿಸಿದೆ.

ಆಪಲ್ ಟಿವಿ ಪ್ಲಸ್‌ ಎಲ್ಲಿ ಲಭ್ಯ..?

ಆಪಲ್ ಟಿವಿ ಪ್ಲಸ್‌ ಎಲ್ಲಿ ಲಭ್ಯ..?

ಆಪಲ್‌ ಟಿವಿ ಪ್ಲಸ್‌ ಅನ್ನು ಐಫೋನ್, ಐಪ್ಯಾಡ್, ಆಪಲ್ ಟಿವಿ 4ಕೆ, ಆಪಲ್ ಟಿವಿ ಹೆಚ್‌ಡಿ, ಆಪಲ್ ಟಿವಿ (3ನೇ ತಲೆಮಾರು), ಐಪಾಡ್ ಟಚ್ ಮತ್ತು ಮ್ಯಾಕ್ ಸಾಧನಗಳಲ್ಲಿ ವೀಕ್ಷಿಸಬಹುದು. ಆಯ್ದ 2018, 2019 ಹಾಗೂ ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಮತ್ತು ಭವಿಷ್ಯದಲ್ಲಿ ಅಮೆಜಾನ್ ಫೈರ್ ಟಿವಿ, ಎಲ್‌ಜಿ, ರೋಕು, ಸೋನಿ ಮತ್ತು ವಿಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಆಪಲ್ ಟಿವಿ ಪ್ಲಸ್‌ ಲಭ್ಯವಿದೆ. ನೀವು ಬ್ರೌಸರ್‌ನಲ್ಲಿ tv.apple.comನಲ್ಲಿಯೂ ಕೂಡ ಸ್ಟ್ರೀಮ್‌ ಮಾಡಬಹುದಾಗಿದೆ.

ಯಾರಿಗೆ ಲಭ್ಯ..?

ಯಾರಿಗೆ ಲಭ್ಯ..?

ಆಪಲ್ ಟಿವಿ ಪ್ಲಸ್‌ಗೆ ಚಂದಾದಾರರಾಗಲು, ಗ್ರಾಹಕರು ಕನಿಷ್ಠ ಐಒಎಸ್ 12.3 ಅಥವಾ ನಂತರದ, ಟಿವಿಓಎಸ್ 12.3 ಅಥವಾ ಮ್ಯಾಕ್‌ಒಸ್ ಕ್ಯಾಟಲಿನಾ ನಂತರದ ಆವೃತ್ತಿಯನ್ನು ಬಳಸುತ್ತಿರಬೇಕು. ಆಪಲ್ ಎಲ್ಲಾ ಬಳಕೆದಾರರಿಗೆ ಏಳು ದಿನಗಳ ಉಚಿತ ಪ್ರಯೋಗವನ್ನು ನೀಡುತ್ತಿದೆ. ಆದರೆ, ಸೆಪ್ಟೆಂಬರ್ 10ರಿಂದ ಯಾವುದೇ ಹೊಸ ಐಫೋನ್, ಐಪ್ಯಾಡ್, ಆಪಲ್ ಟಿವಿ, ಮ್ಯಾಕ್ ಅಥವಾ ಐಪಾಡ್ ಟಚ್ ಖರೀದಿಸಿದ ಗ್ರಾಹಕರಿಗೆ ಒಂದು ವರ್ಷದ ಉಚಿತ ಸಬ್‌ಸ್ಕ್ರಿಪ್ಷನ್‌ ಲಭ್ಯವಿದೆ.

ಇತ್ತೀಚಿನ ಐಒಎಸ್‌

ಇತ್ತೀಚಿನ ಐಒಎಸ್‌

ನವೆಂಬರ್ 1ರಿಂದ ಹೊಸ ಆಪಲ್ ಗ್ರಾಹಕರು ಆಪಲ್ ಟಿವಿ ಆಪ್ ಮೂಲಕ ಉಚಿತ ಕೊಡುಗೆಯನ್ನು ಪ್ರಾರಂಭಿಸಬಹುದು. ನಿಮ್ಮ ಸಾಧನದಲ್ಲಿ ನೀವು ಇತ್ತೀಚಿನ ಐಒಎಸ್ ಆವೃತ್ತಿಯನ್ನು ಹೊಂದಿರಬೇಕು. ಗ್ರಾಹಕರು ಸಾಧನ ಸಕ್ರಿಯಗೊಳಿಸಿದ ಮೂರು ತಿಂಗಳ ನಂತರ ಆಫರ್‌ ಕ್ಲೈಮ್‌ ಮಾಡಬಹುದು. ಆಪಲ್ ಟಿವಿ ಪ್ಲಸ್‌ ಒಂದು ವರ್ಷದ ನಂತರ ಸ್ವಯಂಚಾಲಿತವಾಗಿ ತಿಂಗಳಿಗೆ 99 ರೂ.ಗಳಂತೆ ಶುಲ್ಕ ವಿಧಿಸುತ್ತದೆ. ಆದರೆ, ನವೀಕರಣ ದಿನಾಂಕಕ್ಕಿಂತ ಕನಿಷ್ಠ ಒಂದು ದಿನದ ಮೊದಲು ಗ್ರಾಹಕರು ಚಂದಾದಾರಿಕೆಯನ್ನು ರದ್ದುಗೊಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಆರು ಜನಕ್ಕೆ ಹಂಚಿಕೆ

ಆರು ಜನಕ್ಕೆ ಹಂಚಿಕೆ

ಒಂದು ಆಪಲ್ ಟಿವಿ ಪ್ಲಸ್‌ ಚಂದಾದಾರಿಕೆಯನ್ನು ಆರು ಕುಟುಂಬ ಸದಸ್ಯರು ಹಂಚಿಕೊಳ್ಳಬಹುದು ಮತ್ತು ಆಯಾ ಐಡಿಗಳು ಮತ್ತು ಪಾಸ್‌ವರ್ಡ್‌ಗಳನ್ನು ಬಳಸಿಕೊಂಡು ಕಂಟೆಂಟ್‌ ಪ್ರವೇಶಿಸಬಹುದು. ಕಂಪನಿಯ ಐಫೋನ್ ಅಪ್‌ಗ್ರೇಡ್ ಪ್ರೋಗ್ರಾಂ ಅಡಿಯಲ್ಲಿ ಖರೀದಿಸಿದ ಸಾಧನಗಳು ಸೇರಿ ಹೊಸ ಮತ್ತು ನವೀಕರಿಸಿದ ಎರಡೂ ಮಾದರಿಗಳಿಗೆ ಒಂದು ವರ್ಷದ ಉಚಿತ ಚಂದಾದಾರಿಕೆ ಲಭ್ಯವಿದೆ.

ಉಚಿತ ಸಬ್‌ಸ್ಕ್ರಿಪ್ಷನ್ ಹೇಗೆ..?

ಉಚಿತ ಸಬ್‌ಸ್ಕ್ರಿಪ್ಷನ್ ಹೇಗೆ..?

ನೀವು ಇತ್ತೀಚೆಗೆ ಹೊಸ ಐಫೋನ್ ಖರೀದಿಸಿದರೆ, ಈ ಕೆಳಗಿನ ಹಂತಗಳ ಮೂಲಕ ಉಚಿತ ಒಂದು ವರ್ಷದ ಕೊಡುಗೆಯನ್ನು ಸಕ್ರಿಯಗೊಳಿಸಬಹುದು.

ಹಂತ 1: ನಿಮ್ಮ ಹೊಸ ಐಫೋನ್ ಅಥವಾ ಇತರ ಅರ್ಹ ಆಪಲ್ ಸಾಧನವನ್ನು ಆನ್ ಮಾಡಿ.

ಹಂತ 2: ನಿಮ್ಮ ಆಪಲ್ ಐಡಿಯೊಂದಿಗೆ ಲಾಗಿನ್ ಮಾಡಿ.

ಹಂತ 3: ಆಪಲ್ ಟಿವಿ ಅಪ್ಲಿಕೇಶನ್ ಪ್ರಾರಂಭಿಸಿ.

ಹಂತ 4: ಹೋಮ್ ಸ್ಕ್ರೀನ್‌ನಲ್ಲಿ ಗೋಚರಿಸುವ ಆಫರ್ ಅಧಿಸೂಚನೆಯನ್ನು ಟ್ಯಾಪ್ ಮಾಡಿ.

ಹಂತ 5: "1 ವರ್ಷ ಉಚಿತ ಆನಂದಿಸಿ" ಪ್ರಾಂಪ್ಟ್‌ನಲ್ಲಿ ಟ್ಯಾಪ್ ಮಾಡಿ.

ಹಂತ 6: ಅರ್ಹತೆ ಪರಿಶೀಲಿಸಲು ನಿಮ್ಮ ಆಪಲ್ ಐಡಿ ಮತ್ತು ಪಾಸ್‌ವರ್ಡ್‌ನ್ನು ಮರು ನಮೂದಿಸಿ.

Most Read Articles
Best Mobiles in India

English summary
Apple TV+ Streaming App Launched; Get One Year Free Subscription

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X