ಜೀವ ಉಳಿಸಿದ ಆಪಲ್ ವಾಚ್: ತಂತ್ರಜ್ಞಾನಕ್ಕೆ ಮೆಚ್ಚುಗೆ..!

By Lekhaka
|

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಆಪಲ್ ಬಿಡುಗಡೆ ಮಾಡಿರುವ ಸ್ಮಾರ್ಟ್ ವಾಚ್ ಬಳಕೆದಾರರೊಬ್ಬರ ಜೀವವನ್ನು ಕಾಪಾಡಿರುವ ಘಟನೆಯೊಂದು ಹಾಂಕಾಂಗ್ ನಲ್ಲಿ ವರದಿಯಾಗಿದೆ. ಬಳಕೆದಾರರ ಹೃದಯ ಬಡಿತವನ್ನು ಲೆಕ್ಕಹಾಕುವ ಆಪಲ್ ವಾಚ್ 76 ವರ್ಷದ ಗ್ಯಾಸ್ಟನ್ ಎನ್ನುವವರ ಹೃದಯ ಬಡಿವು ಹೆಚ್ಚಾಗಿರುವ ಕುರಿತು ತಕ್ಷಣ ತಿಳಿಸಿ ಅವರ ಜೀವವನ್ನು ಉಳಿಸಿದೆ ಎನ್ನಲಾಗಿದೆ.

ಜೀವ ಉಳಿಸಿದ ಆಪಲ್ ವಾಚ್: ತಂತ್ರಜ್ಞಾನಕ್ಕೆ ಮೆಚ್ಚುಗೆ..!


ಏಪ್ರಿಲ್ 1 ರಂದು ಈ ಘಟನೆಯೂ ನಡೆದಿದ್ದು, ಗ್ಯಾಸ್ಟನ್ ತಮ್ಮ ಕುಟುಂಬದೊಂದಿಗೆ ಇದ್ದ ಸಂದರ್ಭದಲ್ಲಿ ಅವರ ಹೃದಯ ಬಡಿತವು ಸಾಮಾನ್ಯಕ್ಕಿಂತಲೂ ಹೆಚ್ಚಾಗಿದ್ದ ಕಾರಣದಿಂದಾಗಿ ಅವರಿಗೆ ಆಪಲ್ ವಾಚ್ ಈ ವಿಷಯವನ್ನು ತಿಳಿಸಿದೆ. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗವೂ ಶೀಘ್ರವೇ ಗ್ಯಾಸ್ಟನ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಅವರನ್ನು ಉಳಿಸಿಕೊಂಡಿದ್ದಾರೆ.

ಆಸ್ಪತ್ರಗೆ ಹೋದ ತಕ್ಷಣವೇ ವೈದ್ಯರಿಗೆ ಆಪಲ್ ವಾಚ್ ಹೃದಯ ಬಡಿತದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಿದೆ ಎಂದು ಹೇಳಿದ ಸಂದರ್ಭದಲ್ಲಿ ವೈದ್ಯರು ಸಾಮಾನ್ಯ ಪರೀಕ್ಷೆಯನ್ನು ಮಾಡಿದ ಸಂದರ್ಭದಲ್ಲಿ ಯಾವುದೇ ಏರು ಪೇರು ತಿಳಿಯಲಿಲ್ಲ ಎನ್ನಲಾಗಿದ್ದು, ಇದಾದ ನಂತರದಲ್ಲಿ ಹೆಚ್ಚಿನ ಪರೀಕ್ಷೆಗಾಗಿ ಕಾರ್ಡಿಯಾಲಿಜಿಸ್ಟ್ ಬಳಿ ಪರೀಕ್ಷೇ ಮಾಡಿದ ಸಂರ್ಭದಲ್ಲಿ ಸಮಸ್ಯೆಯ ಬಗ್ಗೆ ತಿಳಿದಿದೆ.

ಜೀವ ಉಳಿಸಿದ ಆಪಲ್ ವಾಚ್: ತಂತ್ರಜ್ಞಾನಕ್ಕೆ ಮೆಚ್ಚುಗೆ..!


ಕಾರ್ಡಿಯಲಾಜಿ ಪರೀಕ್ಷೆಯಲ್ಲಿ ಪ್ರಮುಖ ನಾಳವೊಂದು ಶೇ.90ರಷ್ಟು ಬ್ಲಾಕ್ ಆಗಿರುವುದು ತಿಳಿದಿಬಂದಿದ್ದು, ಈ ಬಗ್ಗೆ ಆಪಲ್ ವಾಚ್ ನಿಖರವಾದ ಮಾಹಿತಿಯನ್ನು ನೀಡಿದೆ ಎನ್ನಲಾಗಿದೆ. ಸದ್ಯ ಆಸ್ಪತ್ರಯಲ್ಲಿ ಚಿಕಿತ್ಸೆಯನ್ನು ಪಡೆದಿಕೊಂಡ ಗ್ಯಾಸ್ಟನ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಆಸ್ಪತ್ರಯಿಂದ ಹಿಂತಿರುಗಿ ಬಂದ ನಂತರದಲ್ಲಿ ಗ್ಯಾಸ್ಟನ್, ಆಪಲ್ ಸಿಇಓ ಟಿಕ್ ಕುಕ್ ಗೆ ಪತ್ರ ಬರೆದಿದ್ದು, ಆಪಲ್ ವಾಚ್ ತಮ್ಮ ಜೀವವನ್ನು ಉಳಿಸಿದ ಬಗ್ಗೆ ತಿಳಿಸಿದ್ದು, ತಂತ್ರಜ್ಞಾನದ ಅಭಿವೃದ್ಧಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆಪಲ್ ತನ್ನ ಗುಣಮಟ್ಟ ಮತ್ತು ವಿಶೇಷತೆಗಾಗಿಯೇ ಹೆಸರು ಮಾಡಿದ್ದು, ಹಲವರ ಜೀವವನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿದೆ.

Best Mobiles in India

English summary
Apple Watch saved a 76-year old man's life in Hong Kong. to know more visit kannada.gizbpot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X