2017ರ ಟಾಪ್ ಆಪ್ ಗಳು ನಿಮ್ಮ ಆಂಡ್ರಾಯ್ಡ್ ಸಾಧನಕ್ಕಾಗಿ!
ನಿಮ್ಮ ಆಂಡ್ರಾಯ್ಡ್ ಮೊಬೈಲ್ನಲ್ಲಿ ಹೊಂದಿರಲೇಬೇಕಾದ ಕೆಲವು ಉಪಯುಕ್ತ ಆಪ್ಗಳನ್ನು ಇಲ್ಲಿ ಪಟ್ಟಿಮಾಡಲಾಗಿದ್ದು ಇವುಗಳನ್ನು ಖಂಡಿತವಾಗಿಯೂ ಉಪಯೋಗಿಸಬೇಕು.
ನೀವು ಇತ್ತೀಚೆಗಷ್ಟೇ ಆಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದೀರೆಂದಾದರೆ ಅದರಲ್ಲಿ ಕೆಲವು ಉಪಯುಕ್ತ ಆಪ್ಗಳನ್ನು ಇನ್ಸ್ಟಾಲ್ ಮಾಡುವ ಕುರಿತು ಖಂಡಿತ ಯೋಚಿಸಿರುತ್ತೀರಿ.

ಇಲ್ಲಿದೆ ನಿಮಗೊಂದು ಪುಟ್ಟ ಗೈಡ್. ನಿಮ್ಮ ಮೊಬೈಲ್ನಲ್ಲಿರಬೇಕಾದ ಟಾಪ್ ಆಪ್ ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ಬಳಕೆದಾರರ ಅಗತ್ಯಗಳು, ರೇಟಿಂಗ್ ಮತ್ತು ಕಮೆಂಟ್ಗಳ ಆಧಾರದ ಮೇಲೆ ಈ ಪಟ್ಟಿಯನ್ನು ತಯಾರಿಸಲಾಗಿದೆ. ಖಂಡಿತವಾಗಿಯೂ ಇದನ್ನೊಮ್ಮೆ ಓದಿ, ಮಿಸ್ ಮಾಡ್ಬೇಡಿ!

ಸ್ವಿಫ್ಟ್ ಕೀ
ಈ ಆಪ್ ಬಳಸಿ ನೀವು ಅತ್ಯಂತ ವೇಗವಾಗಿ ಟೈಪ್ ಮಾಡಬಹುದು. ಇದರಲ್ಲಿದೆ ಸ್ವೈಪ್ ಟು ರೈಟ್,ಪ್ರೆಡಿಕ್ಶನ್ ಮೊದಲಾದ ಆಕರ್ಷಕ ಫೀಚರ್ಗಳು ಮತ್ತು ಕೀಬೋರ್ಡ್ ಅನ್ನು ಚಂದಗಾಣಿಸಲು ವಿವಿಧ ಥೀಮ್ಗಳು.ಒಮ್ಮೆ ಬಳಸಿದರೆ ನಿಮಗೇ ತಿಳಿಯುತ್ತದೆ ಸ್ವಿಫ್ಟ್ ಕೀ ಬೆಸ್ಟ್ ಕೀಬೋರ್ಡ್ ಆಪ್ ಎಂದು.

ಎವರ್ನೋಟ್
ಎವರ್ನೋಟ್ ಒಂದು ವರ್ಚ್ಯುವಲ್ ನೋಟ್ಬುಕ್ ಆಪ್ ಆಗಿದ್ದು ನಿಮ್ಮ ಬಹಳಷ್ಟು ಅಗತ್ಯಗಳನ್ನು ಇದು ಪೂರೈಸುತ್ತದೆ. ಈ ಆಪ್ ನಲ್ಲಿ ನೀವು ನಿಮ್ಮ ಟಿಪ್ಪಣಿಗಳನ್ನು ಬರೆದಿಟ್ಟುಕೊಳ್ಳಬಹುದು, ವೆಬ್ನಿಂದ ಲೇಖನ ಅಥವ ಚಿತ್ರಗಳನ್ನು ಸೇವ್ ಮಾಡಬಹುದು, ರಿಮೈಂಡರ್ಗಳನ್ನು ಇಡಬಹುದು, ಆಡಿಯೋಗಳನ್ನು ಕೂಡ ಸೇವ್ ಮಾಡಬಹುದು. ಇದರಲ್ಲಿ ಸೇವ್ ಮಾಡಿದ್ದನ್ನು ಹುಡುಕುವುದು ಕೂಡ ಸುಲಭವಾಗಿದೆ.

ಹೋಟೇಲ್ ಟುನೈಟ್
ನಿಮ್ಮ ಸಮೀಪವಿರುವ ಹೋಟೇಲ್ಗಳನ್ನು ನಿಮಗಾಗಿ ಹುಡುಕುವುದಲ್ಲದೆ ರೂಮ್ಗಳನ್ನು ಕಾಯ್ದಿರಿಸುವ ಸಾಮರ್ಥ್ಯಹೊಂದಿದೆ ಹೋಟೇಲ್ ಟುನೈಟ್ ಆಪ್.ಉತ್ತಮ ಗುಣಮಟ್ಟದ ಹೋಟೇಲ್ಗಳನ್ನಷ್ಟೇ ಇದು ತೋರಿಸುತ್ತದಲ್ಲದೆ ನೀವು ಬಯಸುವ ಸೌಲಭ್ಯಗಳು ನಿಮಗೆ ದೊರಕುತ್ತದೆ.

ಊಬರ್ / ಓಲಾ
ನಗರದೊಳಗೆ ಪ್ರಯಾಣಿಸಲು ನೀವು ಕ್ಯಾಬ್ ಸೇವೆಗಾಗಿ ಹುಡುಕುತ್ತಿದ್ದರೆ ಡೌನ್ಲೋಡ್ ಮಾಡಿ ಊಬರ್ ಆಥವ ಓಲಾ ಆಪ್. ಹೆಚ್ಚಿನ ನಗರಗಳಲ್ಲಿ ಈ ಸೇವೆ ಲಭ್ಯವಿದ್ದು ನಿಮ್ಮ ಪ್ರಯಾಣದ ಅಂದಾಜು ವೆಚ್ಚವನ್ನೂ ಮುಂಚಿತವಾಗಿ ತಿಳಿದುಕೊಳ್ಳಬಹುದು.

ಪಿಕ್ಸಾರ್ಟ್
ಫೋಟೋ ಪರಿಷ್ಕರಿಸಲು ಫೋಟೋಶಾಪ್ ನಂತಹ ಫೀಚರ್ಗಳು ಬೇಕಿದ್ದರೆ ಕಂಪ್ಯೂಟರ್ ಬಳಸಬೇಕಾದ ಅನಿವಾರ್ಯತೆ ಮೊದಲಿತ್ತು. ಆದರೆ ಈಗ ಪಿಕ್ಸಾರ್ಟ್ ನೀಡುತ್ತದೆ ನಿಮ್ಮ ಮೊಬೈಲ್ಗೆ ಈ ಸಾಮರ್ಥ್ಯ. ಲಿಕ್ವಿಫೈ, ಲೈಟನ್, ಸ್ಮೂತ್, ಹೀಲ್, ಪೈಂಟ್ ಮೊದಲಾದ ಫೀಚರ್ಗಳು ಇಲ್ಲಿದ್ದು, ಕ್ಲೌಡ್ ಮೂಲಕ ಫೋಟೋಗಳನ್ನು ಕಂಪ್ಯೂಟರ್ ಗೆ ಕಳಿಸುವ ಸಾಮರ್ಥ್ಯವೂ ಇಲ್ಲಿದೆ.

ಇನ್ಬಾಕ್ಸ್ ಬೈ ಜಿಮೇಲ್
ನಿಮ್ಮ ಜಿಮೇಲ್ ಖಾತೆಯ ಮೇಲೆ ಹೆಚ್ಚಿನ ಹಿಡಿತವನ್ನು ಮೊಬೈಲ್ನಲ್ಲಿ ಸಾಧಿಸಲು ಇನ್ಸ್ಟಾಲ್ ಮಾಡಿ ಇನ್ಬಾಕ್ಸ್ ಆಪ್.ನಿಮ್ಮ ಮೇಲ್ಬಾಕ್ಸ್ನಲ್ಲಿ ಬರುವ ಮೇಲ್ಗಳನ್ನು ಆಯಾ ವರ್ಗಕ್ಕೆ ಸರಿಯಾಗಿ ವಿಂಗಡಿಸುವುದಲ್ಲದೆ ನಿಮಗೆ ಬೇಕಾದ ಮೇಲ್ ಅನ್ನು ಹುಡುಕಲು ಸುಲಭವಾಗಿಸುತ್ತದೆ. ಮೇಲ್ಗಳನ್ನು ನಂತರ ಓದಲು ನಿರ್ಧರಿಸಿದರೆ ಸ್ನೂಝ್ ಫೀಚರ್ ಬಳಸಿ ರಿಮೈಂಡರ್ ಸೆಟ್ ಮಾಡಬಹುದು.

ವೇಜ್
ಅಪರಿಚಿತ ಪ್ರದೇಶದಲ್ಲಿ ಲಾಂಗ್ ಡ್ರೈವ್ ಹೋಗುತ್ತಿದ್ದರೆ ವೇಜ್ ಆಪ್ ನಿಮಗೆ ತುಂಬ ಉಪಯುಕ್ತವಾಗಿರುತ್ತದೆ. ರಸ್ತೆಯಲ್ಲಿ ಉಳಿದ ಪ್ರಯಾಣಿಕರು ಎಷ್ಟುವೇಗವಾಗಿ ಚಲಿಸುತ್ತಿದ್ದಾರೆ, ಮುಂದೆ ರಸ್ತೆ ಹೇಗಿದೆ, ದುರಸ್ತಿ ಕಾಮಗಾರಿಯೇನಾದರೂ ನಡೆಯುತ್ತಿದೆಯೇ ಮುಂತಾದವುಗಳನ್ನು ತಿಳಿಸುತ್ತದೆಯಲ್ಲದೆ ದಾರಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬೇಕಾದ ಬದಲಾವಣೆಗಳನ್ನೂ ನಡೆಸುತ್ತದೆ. ಲಾಂಗ್ ಡ್ರೈವ್ ಹೋಗುತ್ತಿದ್ದರೆ ವೇಜ್ ನಿಮಗೆ ಸೂಕ್ತ ಸಂಗಾತಿ!

ಕ್ಯಾಶ್
ಸ್ಕ್ವೇರ್ ತಯಾರಿಸಿರುವ ಕ್ಯಾಶ್ ಆಪ್ ಬಳಸಿ ನೀವು ನಿಮ್ಮ ಗೆಳೆಯರೊಂದಿಗೆ ಅಥವಾ ಬ್ಯಾಂಕ್ಗಳಿಗೆ ಸುಲಭವಾಗಿ ಹಣ ವರ್ಗಾಯಿಸಬಹುದು. ಇದನ್ನು ಬಳಸಲು ನೀವು ನಿಮ್ಮ ಗೆಳೆಯರು ಇದಕ್ಕೆ ಸೈನ್-ಇನ್ ಮಾಡಿರಬೇಕು ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ನೋಂದಾಯಿಸಿರಬೇಕು.

ಅಮೇಜಾನ್ / ಫ್ಲಿಪ್ಕಾರ್ಟ್
ಕುಳಿತಲ್ಲೇ ಬೇಕಾದ್ದನ್ನು ಖರೀದಿಸಲು ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿ ಅಮೇಜಾನ್ ಅಥವಾ ಫ್ಲಿಪ್ಕಾರ್ಟ್ ಆಪ್. ಬೇಕಾದಷ್ಟು ಆಯ್ಕೆಗಳು, ವಿವಧ ಪಾವತಿಯ ಆಯ್ಕೆಗಳು ಮತ್ತು ಮನೆಗೇ ಡೆಲಿವರಿ ನೀಡುವ ಆಯ್ಕೆ ಇಲ್ಲಿದೆ. ಇನ್ಸ್ಟಾಲ್ ಮಾಡಿ, ಲಾಗ್-ಇನ್ ಮಾಡಿ ಮತ್ತು ಬೇಕಾದ್ದನ್ನು ಖರೀದಿಸಿ!

ಸ್ಪಾಟಿಫೈ
ಮ್ಯೂಸಿಕ್ ಪ್ರಿಯರು ಇನ್ಸ್ಟಾಲ್ ಮಾಡಲೇ ಬೇಕಾದ ಆಪ್ ಸ್ಪಾಟಿಫೈ!ಇದರ ಪ್ರೀಮಿಯಂ ಪ್ಲಾನ್ ಖರೀದಿಸಿದರೆ ನೀವು ಕೇಳಬಹುದು ನಿಮ್ಮ ಫೇವರೆಟ್ ಹಾಡು ನಿಮಗೆ ಬೇಕಾದಾಗಲೆಲ್ಲ. ರೇಡಿಯೋ ಮತ್ತು ಸಿಂಕ್ ಆಯ್ಕೆ ಕೂಡ ಇಲ್ಲಿದ್ದು ಆಫ್ಲೈನ್ ನಲ್ಲೂ ನಿಮ್ಮಿಷ್ಟದ ಹಾಡು ಕೇಳಿ ಆನಂದಿಸಿ.

ಗೂಗಲ್ ನ ಕ್ರೋಮ್ ಬ್ರೌಸರ್
ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ವೇಗವಾಗಿ ಬ್ರೌಸ್ ಮಾಡಲು ಇನ್ಸ್ಟಾಲ್ ಮಾಡಿ ಗೂಗಲ್ ಕ್ರೋಮ್ ಬ್ರೌಸರ್. ಟ್ಯಾಬ್ ಸಿಂಕ್, ಸರ್ಚ್ ಬೈ ವಾಯ್ಸ್ ಅಯ್ಕೆಗಳೂ ಇಲ್ಲದ್ದು ಬ್ರೌಸ್ ಮಾಡುವಾಗ 50% ರಷ್ಟು ಡೇಟಾ ಕೂಡ ಸೇವ್ ಮಾಡಬಹುದು.

ಕ್ಸೆಂಡರ್
ಒಂದು ಆಂಡ್ರಾಯ್ಡ್ ಫೋನ್ ನಿಂದ ಹಾಡು, ಫೋಟೋ ,ವೀಡಿಯೋ ಮೊದಲಾದ ಫೈಲ್ಗಳನ್ನು ಇನ್ನೊಂದು ಆಂಡ್ರಾಯ್ಡ್ ಫೋನ್ಗೆ ವೈರ್ಲೆಸ್ ಆಗಿ ವರ್ಗಾಯಿಸಲು ಬಳಸಿ ಕ್ಸೆಂಡರ್ ಆಪ್.

ಕ್ಲೀನ್ ಮಾಸ್ಟರ್(ಬೂಸ್ಟ್ & ಆಂಟಿ ವೈರಸ್)
740 ಮಿಲಿಯನ್ಗೂ ಅಧಿಕ ಮಂದಿ ಬಳಸುತ್ತಿರುವ ಆಂಡ್ರಾಯ್ಡ್ ಆಪ್ಟಿಮೈಝಿಂಗ್ ಟೂಲ್ ಕ್ಲೀನ್ ಮಾಸ್ಟರ್. ಫೋನ್ ವೇಗವಾಗಿ ಚಲಾಯಿಸಲು, ವೈರಸ್ಗಳಿಂದ ಕಾಪಾಡಲು, ಫೋನ್ ನಿಂದ ಜಂಕ್ ನಿರ್ಮೂಲನೆ ಮಾಡಲು ಸೂಕ್ತ ಆಪ್ ಇದು.

MX ಪ್ಲೇಯರ್
ಆಧುನಿಕ ಹಾರ್ಡ್ವೇರ್ ಆಕ್ಸಲರೇಶನ್ ಮತ್ತು ಸಬ್ಟೈಟಲ್ ಸಪೋರ್ಟ್ ಹೊಂದಿರುವ ಶಕ್ತಿಶಾಲಿ ವೀಡಿಯೋ ಪ್ಲೇಯರ್ MX ಪ್ಲೇಯರ್. ಬಹುತೇಕ ಎಲ್ಲಾ ವೀಡಿಯೋ ಫಾರ್ಮಾಟ್ಗಳಿಗೆ ಈ ಪ್ಲೇಯರ್ ಬೆಂಬಲ ನೀಡುತ್ತದೆ

ಸ್ಪೀಡ್ ಟೆಸ್ಟ್
ನಿಮ್ಮ ಮೊಬೈಲ್ನಲ್ಲಿ ಬಳಸುತ್ತಿರುವ ಇಂಟರ್ನೆಟ್ ನ ವೇಗವನ್ನು ಪರೀಕ್ಷಿಸಲು ಸೂಕ್ತ ಆಪ್ ಸ್ಪೀಡ್ ಟೆಸ್ಟ್.

ಜಿಬೋರ್ಡ್
ಗೂಗಲ್ ಪ್ಲೇಸ್ಟೋರ್ನಲ್ಲಿ ಬಹಳಷ್ಟು ಕೀಬೋರ್ಡ್ ಆಪ್ಗಳಿದ್ದರೂ, ಗೂಗಲ್ ನ ಜಿಬೋರ್ಡ್ ಎಲ್ಲಕ್ಕಿಂತ ಬೆಸ್ಟ್! ಜಿಬೋರ್ಡ್ ನಲ್ಲಿದೆ ಇಮೋಜಿ ಸರ್ಚ್, GIF ಸರ್ಚ್ ಮತ್ತು ವಿಭಿನ್ನ ಭಾಷೆಗಳಲ್ಲಿ ಟೈಪ್ ಮಾಡುವ ಸಾಮರ್ಥ್ಯ.

ಫೈಂಡ್ ಮೈ ಡಿವೈಸ್
ಹೊಸ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಆದ ಫೈಂಡ್ ಮೈ ಡಿವೈಸ್ ಬಳಸಿ ಕಳೆದು ಹೋದ ಆಂಡ್ರಾಯ್ಡ್ ಫೋನ್ ಅನ್ನು ಹುಡುಕಬಹುದಲ್ಲದೆ ಅದರಿಲ್ಲಿರುವ ನಿಮ್ಮ ಮಾಹಿತಿಯನ್ನು ರಕ್ಷಿಸಬಹುದು.

ES ಫೈಲ್ ಎಕ್ಸ್ಪ್ಲೋರರ್
ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿರುವ ಇಮೇಜ್,ಮ್ಯೂಸಿಕ್, ವೀಡಿಯೋ, ಡಾಕ್ಯುಮೆಂಟ್ ಮೊದಲಾದ ಫೈಲ್ಗಳನ್ನು ಮ್ಯಾನೇಜ್ ಮಾಡಲು ಸೂಕ್ತ ಆಪ್ ES ಫೈಲ್ ಎಕ್ಸ್ಪ್ಲೋರರ್.


Click it and Unblock the Notifications








