ವಾಟ್ಸ್‌ಆಪ್‌ನಲ್ಲಿ 40 ಸಾವಿರ ರೂ. ವಂಚನೆ..! ನಿವೃತ್ತ ಸೇನಾ ಅಧಿಕಾರಿ ಹೆಸರು ತಳಕು..!

By Gizbot Bureau
|

ಡಿಜಿಟಲ್‌ ಯುಗ ಬೆಳೆದಂತೆಲ್ಲಾ ಸೈಬರ್‌ ಅಪರಾಧ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದೆ. ವಾಟ್ಸ್‌ಆಪ್‌, ಫೇಸ್‌ಬುಕ್‌ನಂತಹ ಜನಪ್ರಿಯ ವೇದಿಕೆಗಳಲ್ಲಿ ಅಪರಾಧಗಳ ನಡೆಯುತ್ತಿವೆ. ಹೌದು, ಮಹಾರಾಷ್ಟ್ರದ ಥಾಣೆಯಲ್ಲಿ ಅಂತಹದ್ದೆ ಒಂದು ಪ್ರಕರಣ ನಡೆದಿದ್ದು, ವಾಟ್ಸ್‌ಆಪ್‌ ವಂಚನೆಯಲ್ಲಿ 53 ವರ್ಷದ ನಿವೃತ್ತ ಸೇನಾ ಅಧಿಕಾರಿಯೊಬ್ಬರು 40,000 ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ವಾಟ್ಸ್‌ಆಪ್‌ ಮಿಸ್ಡ್‌ಕಾಲ್‌

ವಾಟ್ಸ್‌ಆಪ್‌ ಮಿಸ್ಡ್‌ಕಾಲ್‌

ಡಿಸೆಂಬರ್ 6ಕ್ಕೆ ವಾಟ್ಸ್‌ಆಪ್ ಸಂಖ್ಯೆಗೆ ಮಿಸ್ಡ್ ಕಾಲ್ ಬಂದಿದೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಆದ್ದರಿಂದ, ಮೆಸೇಜ್‌ ಕಳುಹಿಸಿದ್ದಾರೆ. ವಂಚಕ ಸಂತ್ರಸ್ತೆಯ ಸ್ನೇಹಿತ ಮತ್ತು ತನ್ನನ್ನು ಕರ್ನಲ್ ಹರ್ಪಾಲ್ ಸಿಂಗ್ ಎಂದು ಹೇಳಿಕೊಂಡು ಮೆಸೇಜ್‌ ಮಾಡಿದ್ದಾನೆ ಎಂದು ಕಸರ್ವಾಡವ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂಬಿಸಿ ವಂಚನೆ

ನಂಬಿಸಿ ವಂಚನೆ

ತಾನು ಮತ್ತು ತನ್ನ ಹೆಂಡತಿ ಯುಎಸ್‌ನಲ್ಲಿದ್ದೇವೆ. ತಮ್ಮ ಅತ್ತಿಗೆಗೆ ಹೃದಯ ಕಾಯಿಲೆ ಇದ್ದು, ಸ್ವಲ್ಪ ಹಣದ ಅಗತ್ಯವಿದೆ ಎಂದು ವ್ಯಕ್ತಿಯು ತನ್ನ ಸಂದೇಶದಲ್ಲಿ ತಿಳಿಸಿದ್ದಾನೆ. ನಾವು ಯುಎಸ್‌ನಲ್ಲಿರುವ ಕಾರಣ ಸಹೋದರಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ. ಅದಕ್ಕಾಗಿ ಹಣ ವರ್ಗಾಯಿಸಲು ಸಂತ್ರಸ್ತೆಗೆ ಅಕೌಂಟ್‌ ನಂಬರ್‌ನ್ನು ನೀಡಿದ್ದಾರೆ. ಮೆಸೇಜ್‌ ತನ್ನ ಸ್ನೇಹಿತನಿಂದ ಬಂದಿದೆ ಎಂದು ನಂಬಿದ ಸಂತ್ರಸ್ತೆ, ತಕ್ಷಣವೇ 40,000 ರೂಗಳನ್ನು ನಿರ್ದಿಷ್ಟಪಡಿಸಿದ ಖಾತೆಗೆ ವರ್ಗಾಯಿಸಿದ್ದಾರೆ.

ಹೆಚ್ಚುವರಿ 20 ಸಾವಿರ ಡಿಮ್ಯಾಂಡ್‌

ಹೆಚ್ಚುವರಿ 20 ಸಾವಿರ ಡಿಮ್ಯಾಂಡ್‌

ಆದರೆ, ಅದೇ ಸಂಖ್ಯೆಯಿಂದ ಹೆಚ್ಚುವರಿಯಾಗಿ 20,000 ರೂ. ಕೇಳಿ ಹೆಚ್ಚಿನ ಸಂದೇಶಗಳು ಬಂದಾಗ, ಅನುಮಾನ ಬಂದು ತನ್ನ ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಆದರೆ, ಅವರ ಸ್ನೇಹಿತ ನಾನು ಯಾವತ್ತು ಹಣ ಕೇಳಿಲ್ಲ. ಹಾಗೂ ನಾನು ಅಮೆರಿಕದಲ್ಲಿಲ್ಲ, ಪಂಜಾಬ್‌ನ ಫರೀದ್‌ಕೋಟ್‌ಲ್ಲಿದ್ದೇನೆ ಎಂದು ಹೇಳಿದ್ದಾರೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

IPC 420 ಅಡಿಯಲ್ಲಿ ಪ್ರಕರಣ

IPC 420 ಅಡಿಯಲ್ಲಿ ಪ್ರಕರಣ

ಈ ವಂಚನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದ್ದು, ಇದುವರೆಗೂ ಯಾವುದೇ ವ್ಯಕ್ತಿಯನ್ನು ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Most Read Articles
Best Mobiles in India

Read more about:
English summary
Army Officer Becomes A WhatsApp Fraud Victim: Looses Rs. 40,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X