ಇನ್ಮುಂದೆ ವಾಟ್ಸ್‌ಆಪ್ ಬಳಕೆದಾರರು ಎಚ್ಚರವಾಗಿರಿ!

|

ಅತ್ಯಂತ ಸುರಕ್ಷಿತ ಎನ್ಕ್ರಿಪ್ಶನ್ ಸೌಲಭ್ಯವನ್ನು ಹೊಂದಿರುವ ನಿಮ್ಮ ವಾಟ್ಸ್ಆಪ್ ಸಂದೇಶಗಳನ್ನು ಯಾರಿಂದಲೂ ಓದಲು ಸಾಧ್ಯವಾಗದು ಎಂಬ ನಂಬಿಕೆ ಇದ್ದರೆ ಅದನ್ನು ಕೂಡಲೇ ಬಿಟ್ಟುಬಿಡಿ. ಏಕೆಂದರೆ, ಇನ್ಮುಂದೆ ವಾಟ್ಸ್ಆಪ್ ಬಳಕೆದಾರರ ಎಲ್ಲಾ ಸಂದೇಶಗಳನ್ನು ಪೊಲೀಸರು ಜಾಲಾಡಬಹುದು ಎಂದು ಮಹತ್ವದ ಸುದ್ದಿಯೊಂದು ಆಸ್ಟ್ರೇಲಿಯಾ ಪೊಲೀಸರಿಂದ ಹೊರಬಿದ್ದಿದೆ.

ಹೌದು, ವಾಟ್ಸ್‌ಆಪ್ ಅತ್ಯಂತ ಸುರಕ್ಷಿತವಾಗಿರುವುದರಿಂದ ಕ್ರಿಮಿನಲ್​ಗಳು ತಮ್ಮ ಚಟುವಟಿಕೆಗಳನ್ನು ನಡೆಸಲು ವಾಟ್ಸ್​ಆಪ್​ ಅನ್ನು ಬಳಸಿಕೊಳ್ಳುತ್ತಿದ್ದರು. ಹಾಗಾಗಿ, ಇನ್ಮುಂದೆ ವಾಟ್ಸ್ಆಪ್ ಅನ್ನು ಪೋಲಿಸರು ಜಾಲಾಡಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಆಸ್ಟ್ರೇಲಿಯಾ ಪೊಲೀಸರು ವಾಟ್ಸ್​ಆಪ್​ ಮತ್ತು ಟೆಲಿಗ್ರಾಂ ಮೆಸೆಂಜರ್‌ಗಳ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ.

ಇನ್ಮುಂದೆ ವಾಟ್ಸ್‌ಆಪ್ ಬಳಕೆದಾರರು ಎಚ್ಚರವಾಗಿರಿ!

ಅಪರಾಧಿ ಚಟುವಟಿಕೆಗಳಲ್ಲಿ ವಾಟ್ಸ್​ಆಪ್​ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ಪೊಲೀಸರು ಸಮಾಜಿಕ ಜಾಲತಾಣದಲ್ಲಿ ಕಳುಹಿಸುವ ಸಂದೇಶಗಳ ಸಂಪೂರ್ಣ ಮೇಲ್ವಿಚಾರಣೆ ನಡೆಸಲು ಯೋಚಿಸಿದ್ದಾರೆ. ಇದಕ್ಕಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿರುವ ಆಸ್ಟ್ರೇಲಿಯಾ ಸರ್ಕಾರ, ವಾಟ್ಸ್​ಆಪ್​ ಬಳಕೆಯ ಎಲ್ಲ ಮಾಹಿತಿಗಳನ್ನು ಕಲೆಹಾಕಲಿದ್ದಾರೆ ಎನ್ನಲಾಗಿದೆ.

ಈ ಕುರಿತು ಗುಪ್ತಚರ ಮತ್ತು ಭದ್ರತಾ ಇಲಾಖೆ ಈಗಾಗಲೇ ಕಾರ್ಯಾಚರಿಸುತ್ತಿದ್ದು, ಶೀಘ್ರದಲ್ಲೇ ಆಸ್ಟ್ರೇಲಿಯಾ ಪೊಲೀಸರು ವಾಟ್ಸ್​ಆಪ್​ ಮೇಲೆ ನಿಯಂತ್ರಂಣ ಹೊಂದಲಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಹೊಸ ಬಿಲ್ ಪಾಸಾಗಿದ್ದು, ಸಂದೇಶಗಳ ಗೌಪ್ಯತೆಯನ್ನು ಪಡೆಯಲು ಸ್ಪೈವೇರ್​ನ್ನು ಸ್ಥಾಪಿಸಲು ಸರ್ಕಾರವು ಕಂಪೆನಿಗಳ ಮೇಲೆ ಒತ್ತಡ ಹೇರಲಿದೆ ಎನ್ನಲಾಗಿದೆ.

ಇನ್ಮುಂದೆ ವಾಟ್ಸ್‌ಆಪ್ ಬಳಕೆದಾರರು ಎಚ್ಚರವಾಗಿರಿ!

ಇನ್ನು ಭಾರತದಲ್ಲೂ ವಾಟ್ಸ್​ಆಪ್​ ಮೂಲಕ ಸುಳ್ಳು ಸುದ್ದಿಗಳು ಹರಿದಾಡಿ ಹಲವು ದಾಳಿ ಮತ್ತು ಕೊಲೆಗಳಿಗೆ ಇಂತಹ ವಂದತಿಗಳು ಕಾರಣವಾಗಿತ್ತು. ಹೀಗಾಗಿ ವಾಟ್ಸ್​ಆಪ್​ ಮೇಲೆ ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ಹಾಗಾಗಿ, ಭಾರತವೂ ಕೂಡ ಆಸ್ಟ್ರೇಲಿಯಾದಂತೆ ವಾಟ್ಸ್ಆಪ್ ಸಂದೇಶಗಳನ್ನು ಪರೀಶೀಲಿಸಲು ಮುಂದಾಗಬಹುದು.

Best Mobiles in India

English summary
Australia is mulling a strict law that gives enforcement agencies power to trackmessages on platforms like WhatsApp and Telegram that offer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X