ಫ್ರಿಚಾರ್ಜ್‌ ಮೂಲಕ ಆಕ್ಸಿಸ್ ಬ್ಯಾಂಕ್‌ ಸಾಧನೆಯ ಕಡೆಗೆ

By: Shwetha PS

ಭಾರತದ ಮೂರನೆಯ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಆಕ್ಸಿಸ್ ಬ್ಯಾಂಕ್, ಜಾಸ್ಪರ್ ಇನ್‌ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಂದು ಒಪ್ಪಂದಕ್ಕೆ ಬಂದಿದ್ದು ಇದಕ್ಕೆ ಅನುಸಾರವಾಗಿ $60 ಮಿಲಿಯನ್ (385 ಕೋಟಿ) ಗಾಗಿ 100 ಶೇಕಡಾ ಸ್ಟೇಕ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದು ಅದರ ಅಂಗಸಂಸ್ಥೆಗಳಲ್ಲಿ ಫ್ರೀಚಾರ್ಜ್ ಪೇಮೆಂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅಕ್ಲಿಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗಳು ಸೇರಿವೆ, ಇದು "ಫ್ರೀ ಚಾರ್ಜ್" ಬ್ರ್ಯಾಂಡ್ ಅಡಿಯಲ್ಲಿ ಡಿಜಿಟಲ್ ಪಾವತಿ ವ್ಯವಹಾರವನ್ನು ಒಳಗೊಂಡಿರುತ್ತದೆ.

ಫ್ರಿಚಾರ್ಜ್‌ ಮೂಲಕ ಆಕ್ಸಿಸ್ ಬ್ಯಾಂಕ್‌ ಸಾಧನೆಯ ಕಡೆಗೆ

ವಹಿವಾಟು ನಿಯಂತ್ರಣ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಮತ್ತು ಸೆಪ್ಟೆಂಬರ್ 2017 ರ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ, ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡುಗಳು, ಫಾರೆಕ್ಸ್ ಕಾರ್ಡುಗಳು, ಯುಪಿಐ ಪಾವತಿಗಳು ಮುಂತಾದ ಪ್ರಮುಖ ಪಾವತಿ ವಿಧಾನಗಳನ್ನು ನೀಡುತ್ತದೆ. ಬ್ಯಾಂಕ್ ಡಿಜಿಟಲ್ ಸ್ವೀಕಾರವನ್ನು ಚಾಲನೆ ಮಾಡುತ್ತಿದೆ ಮತ್ತು 4,33,000 ಪೋಸ್ (ಮಾರಾಟದ ಪಾಯಿಂಟ್) ಜೊತೆಗೆ ಎರಡನೇ ದೊಡ್ಡ ವ್ಯಾಪಾರಿ ಜಾಲವನ್ನು ಸ್ಥಾಪಿಸಿದೆ. ಆಕ್ಸಿಸ್ ಬ್ಯಾಂಕ್ ಸ್ಯಾಮ್‌ಸಂಗ್ ಪೇ, ಕೊಚ್ಚಿ ಮೆಟ್ರೋ, ಮತ್ತು ಬಿಎಂಟಿಸಿ ಜೊತೆಗಿನ ಪಾಲುದಾರಿಕೆಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಮುಖವಾದ ಹಣದ ನಾವೀನ್ಯತೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ.

ಆಕ್ಸಿಸ್ ಬ್ಯಾಂಕ್‌ನ ಸಿಇಒ ಶಿಖಾ ಶರ್ಮ್ ಹೇಳುವಂತೆ "ಫ್ರೀಚಾರ್ಜ್ ಅನ್ನು ಸ್ವಾಧೀನಪಡಿಸಿಕೊಳ್ಳುವುದು ಆಕ್ಸಿಸ್ ಬ್ಯಾಂಕ್‌ನ ಹಣಕಾಸಿನ ಸೇವೆಗಳ ಡಿಜಿಟೈಸೇಷನ್ ಪ್ರಯಾಣವನ್ನು ಮುನ್ನಡೆಸುವ ನಿರ್ಧಾರವನ್ನು ಪುನಃ ದೃಢೀಕರಿಸುತ್ತದೆ.ಭಾರತದ ಸ್ಥಳೀಯ ಮತ್ತು ಮೊಬೈಲ್-ಮೊದಲ ಯುವ ಗ್ರಾಹಕರನ್ನು ಪೂರೈಸಲು ಫ್ರೀ ಚಾರ್ಜ್ ಗಮನಾರ್ಹವಾಗಿ ಕೊಡುಗೆ ನೀಡಬೇಕೆಂದು ನಾವು ನಿರೀಕ್ಷಿಸುತ್ತೇವೆ."

ಸ್ನಾಪ್‌ಡೀಲ್ ಸಹ-ಸಂಸ್ಥಾಪಕ ಮತ್ತು CEO ಕುನಾಲ್ ಬಾಲ್ ಹೇಳುವಂತೆ, "ಆಕ್ಸಿಸ್ ಫ್ರೀಚಾರ್ಜ್ ಸಂಯೋಜನೆಯು ಡಿಜಿಟಲ್ ಪಾವತಿಗಳು ಮತ್ತು ಬ್ಯಾಂಕಿಂಗ್ ಸ್ಥಳಾವಕಾಶದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿರುವ ಪ್ರಬಲವಾದ ಒಂದು ಸಾಧನವಾಗಿದೆ.ಇದು ಗೆಲುವಿನ ಒಪ್ಪಂದವಾಗಿದೆ, ಇದು ಸ್ನಾಪ್‌ಡೀಲ್‌ಗೆ ಮತ್ತಷ್ಟು ಗಮನವನ್ನು ನೀಡುವಂತೆ ಸಹಕಾರವನ್ನು ನೀಡಲಿದ್ದು ನಮ್ಮ ಕೋರ್ ಇ-ವಾಣಿಜ್ಯ ವ್ಯವಹಾರದಲ್ಲಿ ಆಕ್ಸಿಸ್ ಭಾರತದಲ್ಲಿನ ಹಣಕಾಸು ಸೇವೆಗಳ ಸ್ಥಳದಲ್ಲಿ ಕೆಲವು ಅಜಿಲೆಸ್ಟ್ ಮತ್ತು ನವೀನ ತಂತ್ರಜ್ಞಾನದ ಸಾಮರ್ಥ್ಯವನ್ನು ನೀಡುತ್ತದೆ."

ಫ್ರಿಚಾರ್ಜ್ 50 ಮಿಲಿಯನ್ ನೋಂದಾಯಿತ ವಾಲೆಟ್ ಬಳಕೆದಾರರನ್ನು ಹೊಂದಿದ್ದು 2,00,000 ವ್ಯಾಪಾರಿಗಳನ್ನು ಹೊಂದಿದೆ ಮತ್ತು 30 ವರ್ಷಗಳಿಂದ 75 ಶೇಕಡಾ ಬಳಕೆದಾರರನ್ನು ಇದು ಪಡೆದುಕೊಂಡಿದೆ. ಶೇಕಡಾ 85 ರಷ್ಟು ಬಳಕೆದಾರರು ತಮ್ಮ ಮೊಬೈಲ್ ಸಾಧನದಿಂದಲೇ ಈ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಈ ಸ್ವಾಧೀನಪಡಿಸುವಿಕೆಯಿಂದ ಬ್ಯಾಂಕ್‌ಗೆ ಆರ್ಥಿಕ ಉತ್ಪನ್ನಗಳ ಡಿಜಿಟಲ್ ವಿತರಣೆಯಲ್ಲಿ ಗಮನಾರ್ಹ ಹೆಜ್ಜೆಯನ್ನು ಇಡಲು ಸಹಕಾರಿ ಎಂದೆನಿಸಿದ್ದು ಇದು ತಂತ್ರಜ್ಞಾನದ ಪೂರೈಕೆಯನ್ನು ಬಳಕೆದಾರರಿಗೆ ನೀಡಲಿದೆ. ಪ್ರಸ್ತುತ ಬ್ಯಾಂಕ್‌ನ ಬಳಕೆದಾರರಿಗೆ ಇನ್ನಷ್ಟು ಅತ್ಯುತ್ತಮ ಸೇವೆಯನ್ನು ಒದಗಿಸುವಲ್ಲಿ ಈ ಹೆಜ್ಜೆ ಸಹಕಾರಿ ಎಂದೆನಿಸಲಿದೆ.

Read more about:
English summary
Freecharge claims to be having 50 million registered wallet users and over 2,00,000 merchants.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot