Home
Apps

ಪತಂಜಲಿಯಿಂದ ವಾಟ್ಸ್ಆಪ್‌ಗೆ ಬಿಗ್‌ಶಾಕ್!..'ಸ್ವದೇಶಿ' ಮೆಸೇಂಜಿಂಗ್ ಆಪ್ ರಿಲೀಸ್!..ಹೇಗಿದೆ ಗೊತ್ತಾ ಆಪ್?

By Bhaskar N J

ಕೇವಲ ಎರಡು ದಿನಗಳ ಹಿಂದಷ್ಟೆ ತನ್ನದೇ ಸಿಮ್ ಬಿಡುಗಡೆಮಾಡಿ ಆಶ್ಚರ್ಯಮೂಡಿಸಿದ್ದ ಬಾಬಾ ರಾಮ್‌ದೇವ್ ಒಡೆತನದ ಪತಂಜಲಿ ಸಂಸ್ಥೆ ಇದೀಗ ಇನ್‌ಸ್ಟಂಟ್ ಮೆಸೇಂಜಿಂಗ್ ಆಪ್ ಬಿಡುಗಡೆಗೊಳಿಸಿದೆ. ದೇಶದಲ್ಲಿ ಹೆಚ್ಚು ಬಳಕೆಯಲ್ಲಿರುವ ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯಲು ಇದೀಗ ದೇಶೀಯ ಪತಂಜಲಿ ಒಡೆತನದ ಮೆಸೇಂಜಿಂಗ್ ಆಪ್ ತಯಾರಾಗಿದೆ.!

ಹೌದು, ಭಾರತದ ಅತ್ಯಂತ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದ ಪತಂಜಲಿ ಕಂಪೆನಿ ಭಾರತದ ಟೆಲಿಕಾಂ ವಲಯದಲ್ಲಿ ಬಿಎಸ್‌ಎನ್‌ಎಲ್ ಜೊತೆಗೂಡಿ ಸಿಮ್ ಬಿಡುಗಡೆ ಮಾಡಿತ್ತು. ಇದೀಗ ಮೊಬೈಲ್ ಆಪ್ ಲೋಕಕ್ಕೂ ಕಾಲಿಟ್ಟಿರುವ ಪತಂಜಲಿ ತನ್ನದೇ ಮೆಸೇಂಜಿಂಗ್ ಆಪ್ ಅನ್ನು ನೆನ್ನೆ ಬಿಡುಗಡೆ ಮಾಡಿ ಬಿಗ್ ಶಾಕ್ ನೀಡಿದೆ.

ಪತಂಜಲಿಯಿಂದ ವಾಟ್ಸ್ಆಪ್‌ಗೆ ಬಿಗ್‌ಶಾಕ್!..'ಸ್ವದೇಶಿ' ಮೆಸೇಂಜಿಂಗ್ ಆಪ್ ರಿಲೀಸ್!!

ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿರುವ ಇನ್‌ಸ್ಟಂಟ್ ಮೆಸೇಂಝಿಂಗ್ ಆಪ್ ಕೇವಲ ಒಂದೇ ದಿನದಲ್ಲಿ 1000 ಕ್ಕಿಂತ ಹೆಚ್ಚು ಡೌನ್‌ಲೋಡ್ ಕಂಡಿದೆ.! ಹಾಗಾದರೆ, ಪತಂಜಲಿ ಸಂಸ್ಥೆಯ ಒಡೆತನದಲ್ಲಿ ಬಿಡುಗಡೆಯಾಗಿರುವ ಮೆಸೇಂಜಿಂಗ್ ಆಪ್ ಯಾವುದು? ಪತಂಜಲಿ ಮೆಸೇಂಜಿಂಗ್ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ಕಿಂಬೋ(kimbho) ಮೆಸೇಂಜಿಂಗ್ ಆಪ್!!

ಕಿಂಬೋ(kimbho) ಮೆಸೇಂಜಿಂಗ್ ಆಪ್!!

ಪತಂಜಲಿ-ಬಿಎಸ್ಎನ್ಎಲ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡುಗಳನ್ನು ಪ್ರಾರಂಭಿಸಿದ ನಂತರ, ಯೋಗ ಗುರು ರಾಮ್‌ದೇವ್ ಅವರು ಬುಧವಾರ ವಾಟ್ ಆಪ್‌ಗೆ ಸೆಡ್ಡು ಹೊಡೆಯಲು 'ದೇಸಿ' ಮೆಸೇಂಜಿಂಗ್ ಅಪ್ಲಿಕೇಶನ್ ಪ್ರಾರಂಭಿಸಿದರು. 'ಕಿಂಬೋ' ಎಂದು ಹೆಸರಿಸಲಾದ ಈ ಅಪ್ಲಿಕೇಶನ್ ರಾಮ್‌ದೇವ್ ಒಡೆತನದ ಪತಂಜಲಿ ಸಂಸ್ಥೆಯಡಿ ಬಿಡುಗಡೆಯಾಗಿದೆ.

ವಾಟ್ಸ್ಆಪ್‌ಗೆ ಸೆಡ್ಡು ಹೊಡೆದ ಪತಂಜಲಿ!

ವಾಟ್ಸ್ಆಪ್‌ಗೆ ಸೆಡ್ಡು ಹೊಡೆದ ಪತಂಜಲಿ!

"ಈಗ ಭಾರತ ಮಾತನಾಡುತ್ತದೆ. ಸಿಮ್ ಕಾರ್ಡುಗಳನ್ನು ಪ್ರಾರಂಭಿಸಿದ ಬಳಿಕ, ಬಾಬಾ ರಾಮ್‌ದೇವ್ ಅವರು ಕಿಂಬೋ ಮೆಸೇಂಜಿಂಗ್ ಆಪ್ ಅನ್ನು ಪ್ರಾರಂಭಿಸಿದ್ದಾರೆ. ಈಗ ವಾಟ್ಸ್‌ಆಪ್‌ಗೆ ಒಂದು ಸ್ಪರ್ಧೆ ನೀಡಲಾಗುವುದು. ಇದು ನಮ್ಮದೇ ಸ್ವಂತ" ಎಂದು ಪತಂಜಲಿ ಆಯುರ್ವೇದ ಕಂಪೆನಿಯ ವಕ್ತಾರ ಎಸ್.ಕೆ. ಟಿಜಾರಾವಾಲಾ ಅವರು ಹೇಳಿದ್ದಾರೆ.

ಹೇಗಿದೆ ಪತಂಜಲಿ ಮೆಸೇಂಜಿಂಗ್ ಆಪ್!!

ಹೇಗಿದೆ ಪತಂಜಲಿ ಮೆಸೇಂಜಿಂಗ್ ಆಪ್!!

ಈ ಬುಧವಾರವಷ್ಟೆ ಬಿಡುಗಡೆಯಾಗಿರುವ ಪತಂಜಲಿ ಒಡೆತನದ ಕಿಂಬೋ ಮೆಸೇಂಜಿಂಗ್ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿಮ ಈಗಾಗಲೇ ಬೀಡುಬಿಟ್ಟಿದೆ. "ಅಬ್ ಭಾರತ್ ಬೋಲೆಗಾ" ಟ್ಯಾಗ್‌ಲೈನ್ ಅಡಿಯಲ್ಲಿ ಬಿಡುಗಡೆಯಾಗಿರುವ ಕಿಂಬೋ ಮೆಸೇಂಜಿಂಗ್ ಆಪ್ ವಾಟ್ಸ್‌ಆಪ್ ಹೊಂದಿರುವ ಲೋಗೊದ ತದ್ರೂಪಿಯಂತಿದೆ. ಲೋಗೊ ಮಧ್ಯದಲ್ಲಿ ಶಂಖವನ್ನು ಚಿತ್ರಿಸಲಾಗಿದೆ.!

ಕಿಂಬೋ ಹೇಗೆ ಕಾರ್ಯನಿರ್ವಹಿಸುತ್ತದೆ!!

ಕಿಂಬೋ ಹೇಗೆ ಕಾರ್ಯನಿರ್ವಹಿಸುತ್ತದೆ!!

ಕಿಂಬೋ ಮೆಸೇಂಜಿಂಗ್ ಆಪ್ ಸ್ವದೇಶದ್ದು ಎನ್ನುವುದನದನ್ನು ಬಿಟ್ಟರೆ, ಈ ಮೆಸೇಂಜಿಂಗ್ ಆಪ್‌ನ ಎಲ್ಲಾ ಕಾರ್ಯಗಳೂ ಸಹ ವಾಟ್ಸ್‌ಆಪ್ ಅನ್ನೇ ಹೋಲುತ್ತವೆ. ಉಚಿತ ಫೋನ್ ಮತ್ತು ವೀಡಿಯೋ ಕರೆಯೊಂದಿಗೆ ಖಾಸಗಿ ಮತ್ತು ಗುಂಪು ಚಾಟ್ ಫೀಚರ್ಸ್‌ಗಳನ್ನು ಕಿಂಬೋ ಮೆಸೇಂಜಿಂಗ್ ಆಪ್ ಒದಗಿಸುತ್ತದೆ ಎಂದು ಪತಂಜಲಿ ಸಂಸ್ಥೆ ತಿಳಿಸಿದೆ.

ಇತರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಆಪ್?

ಇತರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಆಪ್?

ಪ್ಲೇಸ್ಟೋರ್‌ನಲ್ಲಿ ಉಲ್ಲೇಖಿಸಿರುವಂತೆ, ಕಿಂಬೋ ಅಪ್ಲಿಕೇಶನ್ ವೇಗವಾಗಿರುತ್ತದೆ. ನೈಜ-ಸಮಯದ ಸಂದೇಶವನ್ನು ಖಾತ್ರಿಪಡಿಸುವ ಮುಂಚಿತವಾಗಿ ಸಾಕೆಟ್ ತಂತ್ರಜ್ಞಾನದಿಂದ ಚಾಲಿತವಾಗಿದೆ. ಅಲ್ಲದೆ, ಕಳುಹಿಸಿದ ಪ್ರತಿ ಸಂದೇಶವೂ AES ನಿಂದ ಎನ್ಕ್ರಿಪ್ಟ್ ಆಗಿದೆ. ಸ್ವಯಂ ಚಾಟ್ಅಳಿಸುವಿಕೆ ಸಂದೇಶಗಳನ್ನು ಬೆಂಬಲಿಸುತ್ತದೆ.

ಟೆಲಿಕಾಂ ಕ್ಷೇತ್ರಕ್ಕೂ ಪತಂಜಲಿ ಲಗ್ಗೆ!.. 144 ರೂ.ಗೆ ಅನ್‌ಲಿಮಿಟೆಡ್ ಆಫರ್!!

ಟೆಲಿಕಾಂ ಕ್ಷೇತ್ರಕ್ಕೂ ಪತಂಜಲಿ ಲಗ್ಗೆ!.. 144 ರೂ.ಗೆ ಅನ್‌ಲಿಮಿಟೆಡ್ ಆಫರ್!!

ಭಾರತದ ಅತ್ಯಂತ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದ ಆದ ಕೆಲವೇ ದಿನಗಳಲ್ಲಿ ಪತಂಜಲಿ ಕಂಪೆನಿ ಭಾರತದ ಟೆಲಿಕಾಂ ವಲಯಕ್ಕೆ ಪ್ರವೇಶಿಸಿದೆ. ಹೌದು, ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಭಾನುವಾರ ಟೆಲಿಕಾಂ ವಲಯಕ್ಕೆ ಪ್ರವೇಶಿಸಿ ತನ್ನದೇ ಸಿಮ್ ಅನ್ನು ಬಿಡುಗಡೆ ಮಾಡಿದೆ.!!

ಉತ್ತರಾಖಂಡ್‌ನ ಹರಿದ್ವಾರದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಯೋಗಗುರು ರಾಮ್‌ದೇವ್‌ ಅವರು 'ಸ್ವದೇಶಿ ಸಮೃದ್ಧಿ' ಸಿಮ್‌ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದಾರೆ. 144 ರೂಪಾಯಿ ರಿಚಾರ್ಜ್ ಮಾಡಿಸಿದರೆ ಪ್ರತಿತಿಂಗಳು ಅನ್‌ಲಿಮಿಟೆಡ್ ಕರೆಗಳನ್ನು ಹೊಂದಿರುವ ಆಫರ್ ಮೂಲಕ ಪತಂಜಲಿ 'ಸ್ವದೇಶಿ ಸಮೃದ್ಧಿ' ಸಿಮ್ ಜಿಯೋಗೆ ಟಾಂಗ್ ನೀಡಿದೆ.

ವಿಶೇಷವೆಂದರೆ ಆರೋಗ್ಯ ಮತ್ತು ಅಪಘಾತ ಹಾಗೂ ಜೀವ ವಿಮೆ ಸಹ 'ಸ್ವದೇಶಿ ಸಮೃದ್ಧಿ' ಸಿಮ್ ಗ್ರಾಹಕರಿಗೆ ದೊರೆಯಲಿದೆ. ಹಾಗಾದರೆ, ಪತಂಜಲಿ ಕಂಪೆನಿ ಭಾರತದ ಟೆಲಿಕಾಂ ವಲಯಕ್ಕೆ ಪ್ರವೇಶಿಸಿರುವುದು ಹೇಗೆ? ಪತಂಜಲಿ 'ಸ್ವದೇಶಿ ಸಮೃದ್ಧಿ' ಸಿಮ್ ಹೇಗಿದೆ? ಸಿಮ್ ಖರೀದಿಸಿದರೆ ಸಿಗುವ ಆಫರ್‌ಗಳು ಯಾವುವು ಎಂಬುದೆಲ್ಲವನ್ನು ಮುಂದೆ ತಿಳಿಯಿರಿ.

'ಸ್ವದೇಶಿ ಸಮೃದ್ಧಿ' ಸಿಮ್!!

'ಸ್ವದೇಶಿ ಸಮೃದ್ಧಿ' ಸಿಮ್!!

ಸ್ವದೇಶಿ ಅಜೆಂಡಾವನ್ನು ಹಿಡಿದು ವ್ಯಾಪಾರವನ್ನು ಮಾಡುತ್ತಿರುವ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಪತಂಜಲಿ ಈಗ ದೇಶೀಯ ಮಾದರಿಯ 'ಸ್ವದೇಶಿ ಸಮೃದ್ಧಿ' ಸಿಮ್ ಅನ್ನು ಪರಿಚಯಿಸಿದೆ. ಪತಂಜಲಿ ಹೇಳಿರುವಂತೆ ಈ 'ಸ್ವದೇಶಿ ಸಮೃದ್ಧಿ' ಸಿಮ್ ಈ ದೇಶದ ಕಲ್ಯಾಣಕ್ಕಾಗಿ ಹೊರತಂದಿದೆಯಂತೆ.

ಸಿಮ್ ಜೊತೆ ಆರೋಗ್ಯ ವಿಮೆ!!

ಸಿಮ್ ಜೊತೆ ಆರೋಗ್ಯ ವಿಮೆ!!

'ಸ್ವದೇಶಿ ಸಮೃದ್ಧಿ' ಸಿಮ್‌ ಗ್ರಾಹಕರಿಗೆ ಆರೋಗ್ಯ ಮತ್ತು ಅಪಘಾತ ಹಾಗೂ ಜೀವ ವಿಮೆಯನ್ನು ಪತಂಜಲಿ ಒದಗಿಸಲು ಮುಂದಾಗಿದೆ. 'ಸ್ವದೇಶಿ ಸಮೃದ್ಧಿ' ಸಿಮ್ ಖರೀದಿಸಿದ ಗ್ರಾಹಕರಿಗೆ 2.5ಲಕ್ಷ ಮತ್ತು 5 ಲಕ್ಷ ರೂಪಾಯಿಗಳ ವೈದ್ಯಕೀಯಮತ್ತು ಜೀವ ವಿಮೆಯನ್ನು ಹೊಂದಿದೆ ಎಂದು ಯೋಗಗುರು ರಾಮ್‌ದೇವ್‌ ಅವರು ವಿವರಿಸಿದ್ದಾರೆ.

How to send WhatsApp Payments invitation to others - GIZBOT KANNADA
ಬಿಎಸ್‌ಎನ್‌ಎಲ್‌ ಜೊತೆಗೆ ಒಪ್ಪಂದ!!

ಬಿಎಸ್‌ಎನ್‌ಎಲ್‌ ಜೊತೆಗೆ ಒಪ್ಪಂದ!!

ಯೋಗಗುರು ಬಾಬಾ ರಾಮ್‌ದೇವ್‌ ಅವರ ಪತಂಜಲಿ ಸಂಸ್ಥೆಯು ಭಾರತೀಯ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ಜೊತೆಗೆ ಒಪ್ಪಂದ ಮಾಡಿಕೊಂಡು ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಬಿಎಸ್‌ಎನ್‌ಎಲ್‌ ಸ್ವದೇಶಿ ನೆಟ್‌‌ವರ್ಕ್ ಆಗಿದ್ದು, ಬಿಎಸ್‌ಎನ್‌ಎಲ್‌ ಮತ್ತು ಪತಂಜಲಿ ಎರಡೂ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿವೆ ಎಂದು ರಾಮ್‌ದೇವ್ ಹೇಳಿದ್ದಾರೆ.

144 ರೂ.ಗೆ ಅನ್‌ಲಿಮಿಟೆಡ್ ಆಫರ್!!

144 ರೂ.ಗೆ ಅನ್‌ಲಿಮಿಟೆಡ್ ಆಫರ್!!

ಯೋಗಗುರು ಬಾಬಾ ರಾಮ್‌ದೇವ್‌ ಅವರ ಪತಂಜಲಿ ಹಾಗೂ ಬಿಎಸ್‌ಎನ್‌ಎಲ್‌ ಸಂಸ್ಥೆಗಳು ಸೇರಿ 'ಸ್ವದೇಶಿ ಸಮೃದ್ಧಿ' ಸಿಮ್‌ ಬಳಕೆದಾರರಿಗೆ ಉತ್ತಮ ರೀಚಾರ್ಜ್ ಪ್ಲಾನ್ ಅನ್ನು ನೀಡಿವೆ. ಕೇವಲ 144 ರೂಪಾಯಿ ರಿಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು ದೇಶಾದ್ಯಂತ ಅನ್‌ಲಿಮಿಟೆಡ್ ಉಚಿತ ಕರೆಗಳು, 100 ಎಸ್‌‌ಎಮ್‌ಎಸ್‌ಗಳು ಮತ್ತು 2 ಜಿಬಿ ಡೇಟಾ ಪಡೆಯಬಹುದು.

'ಸ್ವದೇಶಿ ಸಮೃದ್ಧಿ' ಸಿಮ್ ಖರೀದಿ ಹೇಗೆ?

'ಸ್ವದೇಶಿ ಸಮೃದ್ಧಿ' ಸಿಮ್ ಖರೀದಿ ಹೇಗೆ?

'ಸ್ವದೇಶಿ ಸಮೃದ್ಧಿ' ಸದ್ಯ ಈ ಸಿಮ್ ಕಾರ್ಡ್‌ಗಳು ನೌಕರರು ಮತ್ತು ಕಚೇರಿ ಪದಾಧಿಕಾರಿಗಳಿಗೆ ಮಾತ್ರ ಲಭ್ಯವಾಗಲಿದೆ. ಶೀಘ್ರದಲ್ಲಿಯೇ ಬಿಎಸ್‌ಎನ್‌ಎಲ್‌ನ ಐದು ಲಕ್ಷ ಕೌಂಟರ್‌‌ಗಳಲ್ಲಿ 'ಸ್ವದೇಶಿ ಸಮೃದ್ಧಿ' ಸಿಮ್ ಅನ್ನು ಜನತೆ ಪಡೆಯಹುದು ಎಂದು ಬಿಎಸ್‌ಎನ್‌ಎಲ್‌ ಸಂಸ್ಥೆಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೇಶದ ಕಲ್ಯಾಣಕ್ಕಾಗಿ!

ದೇಶದ ಕಲ್ಯಾಣಕ್ಕಾಗಿ!

ಬಿಎಸ್‌ಎನ್‌ಎಲ್‌ ಸ್ವದೇಶಿ ನೆಟ್‌‌ವರ್ಕ್ ಆಗಿದ್ದು, ಬಿಎಸ್‌ಎನ್‌ಎಲ್‌ ಮತ್ತು ಪತಂಜಲಿ ಎರಡೂ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿವೆ ಎಂದು ಬಾಬಾ ರಾಮ್‌ದೇವ್‌ ಹೇಳಿದ್ದಾರೆ. ಮುಂದೆ ಪೂರ್ಣದಲ್ಲಿ ಸಿಮ್‌ ಕಾರ್ಡ್‌ಗಳ ಲಾಂಚ್‌ ಆದಲ್ಲಿ ಗ್ರಾಹಕರು ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರಷ್ಟು ವಿನಾಯಿತಿ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಓದಿರಿ: ಈಗ 'ಡಿಎಲ್' ಪಡೆಯವುದು ಎಷ್ಟು ಸುಲಭ ಗೊತ್ತಾ?..ಆನ್‌ಲೈನ್‌ಲ್ಲಿಯೇ ಅರ್ಜಿ..ಆನ್‌ಲೈನಿನಲ್ಲಿಯೇ ಪರೀಕ್ಷೆ!!

ಓದಿರಿ: 21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!

Best Mobiles in India

English summary
Baba Ramdev takes on Whatsapp! After Patanjali SIM, launches Kimbho – Desi messaging app
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+