Home
Apps

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಿಂತ ಆಪಲ್‌ ಐಫೋನ್‌ ಸೇಫ್‌..!

By Gizbot Bureau

ಲೋಕೇಷನ್ ಟ್ರ್ಯಾಕಿಂಗ್ ಹಗರಣದ ಸಮಸ್ಯೆಯನ್ನು ಇತ್ತೀಚೆಗೆ ಗೂಗಲ್ ಎದುರಿಸುತ್ತಾ ಇದೆ. ಈ ಸಮಸ್ಯೆಯೆಂಬ ಬೆಂಕಿಗೆ ತುಪ್ಪ ಸುರಿಯುವಂತೆ ಒಂದು ಸಂಶೋಧನಾ ಪತ್ರಿಕೆ ಆನ್ ಲೈನ್ ನಲ್ಲಿ ವರದಿಯನ್ನು ಪ್ರಕಟಿಸಿದ್ದು ಒಂದು ಸಾಮಾನ್ಯ ಆಂಡ್ರಾಯ್ಡ್ ಫೋನ್ ನ ಕ್ರೋಮ್ ಗೂಗಲ್ ಗೆ ಕಳುಹಿಸುವ ಡಾಟಾವು ಐಫೋನಿನಲ್ಲಿರುವ ಸಫಾರಿ ಕಳುಹಿಸುವ ಡಾಟಾಕ್ಕಿಂತ ಸುಮಾರು 50 ಪಟ್ಟುಗಳಷ್ಟಿರುತ್ತದೆಯಂತೆ.

ವ್ಯಾಂಡರ್ಬಿಲ್ಟ್ ಯುನಿವರ್ಸಿಟಿಯ ಪ್ರೊಫೆಸರ್ ಡೊಗ್ಲಾಸ್ ಷ್ಮಿಡ್ಟ್ ಅವರು ವ್ಯಾಪಾರ ಸಂಸ್ಥೆಯ ಡಿಜಿಟಲ್ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆಯೊಂದರ ಪ್ರಕಟಣೆಯಲ್ಲಿ ಬರೆದಿದ್ದಾರೆ. ಇವರು ತಮ್ಮ ಪೇಪರ್ ನಲ್ಲಿ ಹೇಳುವಂತೆ ಸಫಾರಿಯಲ್ಲಿ ಗೂಗಲ್ ಹೆಚ್ಚು ಡಾಟಾಗಳನ್ನು ಕಲೆಹಾಕಲು ಸಾಧ್ಯವಾಗುವುದಿಲ್ಲ ಅಥವಾ ಹೋಸ್ಟ್ ಡಿವೈಸ್ ನಲ್ಲಿ ವ್ಯಕ್ತಿವು ಕ್ರಿಯಾಶೀಲನಾಗಿಲ್ಲದೇ ಇದ್ದರೂ ಅದು ಸಾಧ್ಯವಾಗುವುದಿಲ್ಲ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಿಂತ ಆಪಲ್‌ ಐಫೋನ್‌ ಸೇಫ್‌..!

ಅವರು ಹೇಳುವಂತೆ ಆಂಡ್ರಾಯ್ಡ್ ಫೋನ್ ನಲ್ಲಿ ಒಂದು ವೇಳೆ ಫೋನ್ ಬಳಕೆಯಲ್ಲಿಲ್ಲದೆ ಬ್ಯಾಕ್ ಗ್ರೌಂಡ್ ನಲ್ಲಿ ಕ್ರೋಮ್ ರನ್ ಆಗುತ್ತಿದ್ದರೆ, 24 ಗಂಟೆಗಳಲ್ಲಿ ಇದು ಲೋಕೇಷನ್ ಡಾಟಾವನ್ನು ಗೂಗಲ್ ಗೆ ಸುಮಾರು 340 ಬಾರಿ ಕಳುಹಿಸುತ್ತದೆಯಂತೆ ಅಂದರೆ ಪ್ರತಿ ಘಂಟೆಗೆ 14 ಬಾರಿ ಸ್ಥಳದ ವಿವರವನ್ನು ಗೂಗಲ್ ಗೆ ಕಳುಹಿಸಿಕೊಡಲಾಗುತ್ತದೆಯಂತೆ.

ಹೆಚ್ಚಿನವರಿಗೆ ತಿಳಿಯದ ವಿಷಯವು ಈ ಮಾಧ್ಯಮ ತನಿಖೆಯಿಂದ ಬಯಲಾಗಿದ್ದು, ಆಂಡ್ರಾಯ್ಡ್ ಡಿವೈಸ್ ಗಳಲ್ಲಿನ ಗೂಗಲ್ ಸೇವೆಯು ಮತ್ತು ಐಫೋನ್ ಗಳು ನಿಮ್ಮ ಲೊಕೇಷನ್ ಮಾಹಿತಿಯನ್ನು ನೀವು ಪ್ರೈವೆಸಿ ಸೆಟ್ಟಿಂಗ್ ಮಾಡಿದ್ದರೂ ಕೂಡ ಸೇವ್ ಮಾಡಿರುತ್ತವೆ ಮತ್ತು ನಿಮ್ಮ ಬಳಿ ಸೇವ್ ಮಾಡಿಲ್ಲ ಎಂದು ತಿಳಿಸಿರುತ್ತದೆ.

ಪ್ರಿನ್ಸೆಟಾನ್ ಕಂಪ್ಯೂಟರ್-ಸೈನ್ಸ್ ಸಂಶೋಧಕರು ಈ ಆವಿಷ್ಕಾರಗಳನ್ನು AP's ಕೋರಿಕೆಯ ಮೇರೆಗೆ ದೃಢಪಡಿಸಿದರು. ಅದರ ನಂತರ, ಫಾರ್ಮಲ್ ಮೊಕದ್ದಮೆ ಕೂಡ ಸಲ್ಲಿಸಲಾಯಿತು.

ಈ ದೂರಿನ ಅನ್ವಯ, ಒಂದು ವೇಳೆ ಬಳಕೆದಾರರು ತಮ್ಮ ಲೊಕೇಷನ್ ಹಿಸ್ಟರಿ ವೈಶಿಷ್ಟ್ಯತೆಯನ್ನು ಆಫ್ ಮಾಡಿಕೊಂಡಿದ್ದಾಗಲೂ ಕೂಡ ಗೂಗಲ್ ತಪ್ಪಾಗಿ ಜನರಿಗೆ ಸಂದೇಶ ನೀಡುತ್ತದೆ ಮತ್ತು ಅವರನ್ನು ಟ್ರ್ಯಾಕ್ ಮಾಡಲಾಗುತ್ತಿಲ್ಲ ಎಂದು ತಿಳಿಸಲಾಗುತ್ತದೆ ಅಂದರೆ ತಪ್ಪು ಸಂದೇಶ ರವಾನಿಸಿ ಅವರ ಚಲನವಲನಗಳನ್ನು ಮಾನಿಟರ್ ಮಾಡಲಾಗುತ್ತದೆ ಹಾಗೂ ಗ್ರಾಹಕರ ವಯಕ್ತಿಕ ಗೌಪ್ಯತೆಯನ್ನು ಕಾಯ್ದುಕೊಳ್ಳದೇ ನಿಯಮವನ್ನು ಗಾಳಿಗೆ ತೂರಲಾಗುತ್ತದೆ ಎಂದು ಹೇಳಲಾಗಿದೆ.

ಅಂದರೆ ಗೂಗಲ್ ಬಳಕೆದಾರರಿಗೆ ಯಾವುದೇ ಸಂದರ್ಬದಲ್ಲಿ ಬೇಕಿದ್ದರೂ ಲೊಕೇಷನ್ ಹಿಸ್ಟರಿಯನ್ನು ಆಫ್ ಮಾಡಲು ಅವಕಾಶ ನೀಡುತ್ತದೆ. ಮತ್ತು ಆಫ್ ಮಾಡಿದಾಗ ಇನ್ನು ನಿಮ್ಮ ಸ್ಥಳವನ್ನು ನಾವು ಸಂಗ್ರಹಿಸುವುದಿಲ್ಲ ಎಂದು ತಿಳಿಸುತ್ತದೆ. ಆದರೆ ಇದು ಸುಳ್ಳಾಗಿದ್ದು ನೀವು ಲೊಕೇಷನ್ ಹಿಸ್ಟರಿಯನ್ನು ಆಫ್ ಮಾಡಿದ್ದಾಗ ಕೂಡ ಅದು ನಿಮ್ಮ ಮಾಹಿತಿಯನ್ನು ಕಲೆಹಾಕುತ್ತದೆ ಎಂದು ಸ್ಯಾನ್ ಪ್ರ್ಯಾನ್ಸಿಸ್ಕೋ ಕೋರ್ಟ್ ನಲ್ಲೂ ಕೂಡ ದಾವೆ ಹೂಡಲಾಗಿದೆ.

ಅಂದರೆ ಈ ದೂರಿನ ಪ್ರಕಾರ ಗೂಗಲ್ ಕಾನೂನುಬಾಹಿರವಾಗಿ ಅವಳ/ಅವನ ಚಲನವಲನದ ಮೇಲೆ ಆಂಡ್ರಾಯ್ಡ್ ಫೋನ್ ಅಥವಾ ಐಫೋನ್ ಮೂಲಕ ಯಾವಾಗಲೂ ಕಣ್ಣಿಟ್ಟಿರುತ್ತದೆ.

Best Mobiles in India

English summary
'Bad news' for Android users, good news for iPhone users. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+